Jobs
ಬೆಂಗಳೂರಿನಲ್ಲಿ ಒಂದೊಳ್ಳೆ ಉದ್ಯೋಗ ಹೊಂದಬೇಕು ಎಂದು ಬಯಸಿದ್ದೀರಾ? ಹಾಗಾದರೆ, ನಿಮಗಾಗಿ ಇಲ್ಲಿದೆ ಗುಡ್ ನ್ಯೂಸ್. ಬೆಂಗಳೂರಿನಲ್ಲಿರುವ ಹಿಂದೂಸ್ತಾನ್ ಏರೋನಾಟಿಕ್ಸ್ ಲಿಮಿಟೆಡ್ (Hindustan Aeronautics Limited)ನಲ್ಲಿ ಖಾಲಿ ಇರುವ ವಿವಿಧ ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನಿಸಲಾಗಿದೆ (HAL India Recruitment 2024). ಆಸಕ್ತ ಅಭ್ಯರ್ಥಿಗಳು ತಮ್ಮ ವಿದ್ಯಾರ್ಹತೆಗೆ ತಕ್ಕಂತೆ ಹುದ್ದೆಗಳಿಗೆ ಅರ್ಜಿ ಸಲ್ಲಿಸಬಹುದಾಗಿದೆ.
ಈ ಸುದ್ದಿ ಓದಿ:- One Nation One Rate: ಆಭರಣಪ್ರಿಯರಿಗೆ ಗುಡ್ ನ್ಯೂಸ್ ದೇಶಾದ್ಯಂತ ಚಿನ್ನಕ್ಕೆ ಒಂದೇ ದರ ನಿಗದಿ ಹೊಸ ನಿಯಮ ಜಾರಿ.!
ಟೆಕ್ನಿಷಿಯನ್, ಅಸಿಸ್ಟಂಟ್, ಫಿಟ್ಟರ್ ಸೇರಿ 28 ಹುದ್ದೆಗಳನ್ನು ಭರ್ತಿ ಮಾಡಲಾಗುತ್ತಿದ್ದು, ಡಿಪ್ಲೋಮಾ, ಐಟಿಐ ಪಾಸಾದವರು ಅರ್ಜಿ ಸಲ್ಲಿಸಬಹುದು. ಆಸಕ್ತರು ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಬೇಕಿದ್ದು, ಕೊನೆಯ ದಿನ ಜುಲೈ 18 ಆಗಿದೆ. ಇಲ್ಲಿ ಎಷ್ಟು ಹುದ್ದೆಗಳು ಖಾಲಿ ಇವೆ, ವಿದ್ಯಾರ್ಹತೆ ಏನು? ವಯೋಮಿತಿ, ವೇತನದ ಬಗ್ಗೆ ಈ ಲೇಖನದಲ್ಲಿ ಸಂಪೂರ್ಣವಾಗಿ ತಿಳಿಸಿಕೊಡಲಾಗಿದೆ. ಕೊನೆವರೆಗೂ ಸಂಪೂರ್ಣವಾಗಿ ಈ ಲೇಖನವನ್ನು ಓದಿ ಅರ್ಜಿ ಸಲ್ಲಿಸಿ…
ಹುದ್ದೆಗಳ ವಿವರ ಮತ್ತು ವಿದ್ಯಾರ್ಹತೆ
– ಡಿಪ್ಲೊಮಾ ಟೆಕ್ನಿಷಿಯನ್ (ಮೆಕ್ಯಾನಿಕಲ್) – 9 ಹುದ್ದೆ, ವಿದ್ಯಾರ್ಹತೆ: ಡಿಪ್ಲೋಮಾ ಇನ್ ಮೆಕ್ಯಾನಿಕಲ್ ಎಂಜಿನಿಯರಿಂಗ್
– ಡಿಪ್ಲೊಮಾ ಟೆಕ್ನಿಷಿಯನ್ (ಎಲೆಕ್ಟ್ರಿಕಲ್)- 2 ಹುದ್ದೆ, ವಿದ್ಯಾರ್ಹತೆ: ಡಿಪ್ಲೋಮಾ ಇನ್ ಎಲೆಕ್ಟ್ರಿಕಲ್ ಎಂಜಿನಿಯರಿಂಗ್
– ಅಸಿಸ್ಟೆಂಟ್ (ಸಿವಿಲ್)- 1 ಹುದ್ದೆ, ವಿದ್ಯಾರ್ಹತೆ: ಡಿಪ್ಲೋಮಾ ಇನ್ ಸಿವಿಲ್ ಎಂಜಿನಿಯರಿಂಗ್
– ಟೆಕ್ನಿಷಿಯನ್ (ಫಿಟ್ಟರ್) – 7 ಹುದ್ದೆ, ವಿದ್ಯಾರ್ಹತೆ: ಐಟಿಐ
– ಟೆಕ್ನಿಷಿಯನ್ (ಎಲೆಕ್ಟ್ರಿಕಲ್) – 5 ಹುದ್ದೆ, ವಿದ್ಯಾರ್ಹತೆ: ಐಟಿಐ ಇನ್ ಎಲೆಕ್ಟ್ರಿಷಿಯನ್
– ಟೆಕ್ನಿಷಿಯನ್ (ಮೆಷಿನಿಸ್ಟ್) -2 ಹುದ್ದೆ, ವಿದ್ಯಾರ್ಹತೆ: ಐಟಿಐ ಇನ್ ಮೆಷಿನಿಸ್ಟ್
– ಟರ್ನರ್‌ನಲ್ಲಿ ಟೆಕ್ನಿಷಿಯನ್ (ಫಿಟ್ಟರ್) -1 ಹುದ್ದೆ, ವಿದ್ಯಾರ್ಹತೆ: ಐಟಿಐ
– ಟೆಕ್ನಿಷಿಯನ್ (ಎಲೆಕ್ಟ್ರಾನಿಕ್ಸ್-ಮೆಕ್ಯಾನಿಕ್ಸ್) -1 ಹುದ್ದೆ, ವಿದ್ಯಾರ್ಹತೆ: ಐಟಿಐ ಇನ್ ಎಲೆಕ್ಟ್ರಾನಿಕ್ಸ್-ಮೆಕ್ಯಾನಿಕ್ಸ್
ವಯೋಮಿತಿ
ಅಭ್ಯರ್ಥಿಗಳ ಗರಿಷ್ಠ ವಯೋಮಿತಿ 28 ವರ್ಷ. ಮೀಸಲಾತಿಗೆ ಅನುಗುಣವಾಗಿ ವಯೋಮಿತಿಯಲ್ಲಿ ಸಡಿಲಿಕೆ ಲಭ್ಯ. ಒಬಿಸಿ-ಎನ್‌ಸಿಎಲ್ ಅಭ್ಯರ್ಥಿಗಳಿಗೆ 3 ವರ್ಷ, ಎಸ್‌ಸಿ/ಎಸ್‌ಟಿ ಅಭ್ಯರ್ಥಿಗಳಿಗೆ 5 ವರ್ಷ, ಪಿಡಬ್ಲ್ಯುಬಿಡಿ (ಸಾಮಾನ್ಯ)-10 ವರ್ಷ, ಪಿಡಬ್ಲ್ಯುಬಿಡಿ (ಒಬಿಸಿ)-13 ವರ್ಷ, ಪಿಡಬ್ಲ್ಯುಬಿಡಿ (ಎಸ್‌ಸಿ/ಎಸ್‌ಟಿ)-15 ವರ್ಷಗಳ ರಿಯಾಯಿತಿ ಇದೆ.
ಅರ್ಜಿ ಶುಲ್ಕ, ಆಯ್ಕೆ ವಿಧಾನ ಮತ್ತು ಮಾಸಿಕ ವೇತನ
ಯಾವುದೇ ಅಭ್ಯರ್ಥಿಗಳು ಅರ್ಜಿ ಶುಲ್ಕ ಪಾವತಿಸಬೇಕಾಗಿಲ್ಲ. ಲಿಖಿತ ಪರೀಕ್ಷೆ, ಸಂದರ್ಶನದ ಮೂಲಕ ಅಭ್ಯರ್ಥಿಗಳ ಆಯ್ಕೆ ನಡೆಯಲಿದೆ. ವಿವಿಧ ಹುದ್ದೆಗಳಿಗೆ ಅನುಗುಣವಾಗಿ 22,000 ರೂ.-46,511 ರೂ. ಮಾಸಿಕ ವೇತನವಿದೆ. ಆಯ್ಕೆಯಾದವರಿಗೆ 1 ವರ್ಷ ಅವಧಿಯ ತರಬೇತಿ ನೀಡಲಾಗುತ್ತದೆ. ಉದ್ಯೋಗದ ಸ್ಥಳ: ಬೆಂಗಳೂರು.
ಅರ್ಜಿ ಸಲ್ಲಿಕೆ ವಿಧಾನ:-
– HAL India Recruitment 2024 ಅಧಿಸೂಚನೆಗಾಗಿ ಈ ಕೆಳಗೆ ಕೊಟ್ಟಿರುವ ಲಿಂಕ್ ಕ್ಲಿಕ್ ಮಾಡಿ.
– ಅರ್ಜಿ ಸಲ್ಲಿಸಲು ಇಲ್ಲಿ ಕ್ಲಿಕ್ ಮಾಡಿ (https://halardc.formflix.com/apply-online)
ಅಗತ್ಯ ಮಾಹಿತಿ, ಇಮೇಲ್ ವಿಳಾಸ ನಮೂದಿಸಿ ಹೆಸರು ನೋಂದಾಯಿಸಿ.
– ಪಾಸ್‌ವರ್ಡ್ ಬಳಸಿ ಲಾಗಿನ್ ಆಗಿ.
– ಹೆಸರು, ವಿಳಾಸ, ಶೈಕ್ಷಣಿಕ ಮಾಹಿಸಿ ನೀಡಿ ಅಪ್ಲಿಕೇಷನ್ ಫಾರಂ ಭರ್ತಿ ಮಾಡಿ.
– ಅಗತ್ಯ ಡಾಕ್ಯುಮೆಂಟ್, ಫೋಟೊ ಅಪ್‌ಲೋಡ್ ಮಾಡಿ.
– ವಿವರಗಳನ್ನು ಮತ್ತೊಮ್ಮೆ ಪರಿಶೀಲಿಸಿ ಎಲ್ಲವೂ ಸರಿ ಇದ್ದರೆ Submit ಬಟನ್ ಕ್ಲಿಕ್ ಮಾಡಿ.
– ಅಪ್ಲಿಕೇಷನ್ ಫಾರಂನ ಪ್ರಿಂಟ್‌ಔಟ್ ತೆಗೆದಿಡಿ.
– ಹೆಚ್ಚಿನ ವಿವರಗಳಿಗೆ ಅಧಿಕೃತ ವೆಬ್‌ಸೈಟ್ ವಿಳಾಸ: https://www.hal-india.co.in/ಗೆ ಭೇಟಿ ನೀಡಿ.