Vehicle Subsidy: ಆಟೋ ಮತ್ತು ಕಾರು ಖರೀದಿಗೆ 1 ಲಕ್ಷ ಸಹಾಯಧನ.! ಆಸಕ್ತರು ಅರ್ಜಿ ಸಲ್ಲಿಸಿ.!

Vehicle Subsidy

ಸಾಮಾನ್ಯವಾಗಿ ಈಗಿನ ಜನರೇಶನ್ ನವರಿಗೆ ಉದ್ಯೋಗಿ ಆಗುವುದಕ್ಕಿಂತ ಉದ್ಯಮಿ ಆಗುವುದಕ್ಕೆ ಆಸಕ್ತಿ ಹೆಚ್ಚು. ಯಾರ ಹಂಗೂ ಇಲ್ಲದೆ, ಸ್ವತಂತ್ರವಾಗಿ ತನ್ನದೇ ಒಂದು ವ್ಯಾಪಾರ ಅಥವಾ ಉದ್ಯಮ ಮಾಡಿಕೊಂಡು ಒತ್ತಡ ರಹಿತ ಜೀವನ ಮತ್ತು ಹೆಚ್ಚು ಆದಾಯ ಹೊಂದಬೇಕು ಎನ್ನುವುದು ಇವರ ಗುರಿ. ನೀವು ಕೂಡ ಇದೇ ರೀತಿ ಯೋಚಿಸುತ್ತಿದ್ದರೆ ನಿಮ್ಮ ಬಳಿ ಬಂಡವಾಳ ಇಲ್ಲದೆ ಇದ್ದರೆ ನಿಮ್ಮ ಕನಸನ್ನು ನನಸು ಮಾಡಲು ಸರ್ಕಾರದಿಂದ ಅನೇಕ ಯೋಜನೆಗಳ ಪ್ರಯೋಜನ ಸಿಗುತ್ತಿದೆ ಇವುಗಳನ್ನು ಪಡೆಯಬಹುದು.

ಈ ಸುದ್ದಿ ಓದಿ:-Land Surveyor Recruitment: ಭೂ ಮಾಪನ ಇಲಾಖೆ ನೇಮಕಾತಿ, ವೇತನ 50,000/- SSLC ಪಾಸ್ ಆದವರು ಅರ್ಜಿ ಸಲ್ಲಿಸಿ.!

ಸರ್ಕಾರದ ಹಲವು ನಿಗಯಗಳು ವಿಶೇಷ ಯೋಜನೆಗಳನ್ನು ರೂಪಿಸಿ ತಮ್ಮ ಸಮುದಾಯದವರನ್ನು ಸ್ವಾವಲಂಬಿಗಳಾಗಿಸಲು ಕಾರ್ಯಕ್ರಮ ಹಮ್ಮಿಕೊಳ್ಳುತ್ತವೆ. ಸದ್ಯಕ್ಕೆ ಈಗ ಇಂತಹದೇ ಒಂದು ವಿಶೇಷ ಯೋಜನೆ ಪ್ರಯೋಜನದ ಬಗ್ಗೆ ಈ ಲೇಖನದಲ್ಲಿ ವಿವರಿಸುತ್ತಿದ್ದೇವೆ. ಹೆಚ್ಚಿನ ಮಾಹಿತಿಗಾಗಿ ಅಂಕಣವನ್ನು ಕೊನೆಯವರೆಗೂ ಓದಿ.

WhatsApp Group Join Now
Telegram Group Join Now

ಯೋಜನೆಯ ಹೆಸರು:- ಆಹಾರ ವಾಹಿನಿ ಯೋಜನೆ / ಆರ್ಯ-ವೈಶ್ಯ ವಾಹಿನಿ ಯೋಜನೆ

ನೆರವು ನೀಡುತ್ತಿರುವ ಸಂಸ್ಥೆಯ ಹೆಸರು:-
ಕರ್ನಾಟಕ ಆರ್ಯ-ವೈಶ್ಯ ಸಮುದಾಯ ಅಭಿವೃದ್ಧಿ ನಿಗಮ (ನಿ)

ಸಿಗುವ ನೆರವು:-

* ಅಭ್ಯರ್ಥಿಯು ಈ ಯೋಜನೆಗೆ ಅರ್ಜಿ ಸಲ್ಲಿಸುವ ಮೂಲಕ ಹಳದಿ ಬೋರ್ಡ್ ಎಲೆಕ್ಟ್ರಿಕ್ / CNG ತ್ರಿಚಕ್ರ ಅಥವಾ ನಾಲ್ಕು ಚಕ್ರದ ವಾಹನವನ್ನು ಖರೀದಿಸಲು ನಿಗಮದಿಂದ ರೂ.1.00ಲಕ್ಷದವರೆಗೆ ಸಬ್ಸಿಡಿ ನೆರವು ಪಡೆಯಬಹುದು
* ಉಳಿಕೆ ಮೊತ್ತವನ್ನು ಯಾವುದಾದರು ಬ್ಯಾಂಕ್‍ಗಳಿಂದ ಸಾಲ ಪಡೆಯಬೇಕಾಗಿರುತ್ತದೆ.

* ಸಾಲ ಪಡೆದಂತಹ ರಾಷ್ಟ್ರೀಕೃತ ಬ್ಯಾಂಕ್‌ಗಳ / ಸಹಕಾರ ಸಂಘಗಳ/ ಸಹಕಾರ ಬ್ಯಾಂಕ್‌ಗಳ/ ಪ್ರಾದೇಶಿಕ ಗ್ರಾಮೀಣ ಬ್ಯಾಂಕ್‌ಗಳ/ ಅಂಗೀಕೃತ ಸರ್ಕಾರೇತರ ಹಣಕಾಸು ಸಂಸ್ಥೆಗಳಿಗೆ ಅಥವಾ ಸಂಬಂಧಪಟ್ಟ ವಾಹನ ಡೀಲರ್ (Authorized Dealers) ಗಳಿಗೆ ಸಬ್ಸಿಡಿ ಹಣಬಿಡುಗಡೆ ಮಾಡಲಾಗುವುದು.
* ವಾಹನವನ್ನು ಆಹಾರ ವಾಹಿನಿಯನ್ನಾಗಿ ಪರಿವರ್ತಿಸಿದ್ದಲ್ಲಿ ಎರಡನೇ ಕಂತಿನಲ್ಲಿ ರೂ.1,00,000‌ಗಳ ಹೆಚ್ಚುವರಿ ಸಬ್ಸಿಡಿ ಪಡೆಯಬಹುದು. ಈ ಹಣವು ನೇರವಾಗಿ ಫಲಾನುಭವಿಗಳ ಖಾತೆಗೆ DBT ಮೂಲಕ ಜಮೆ ಆಗುತ್ತದೆ.

ಅರ್ಜಿ ಸಲ್ಲಿಸಲು ಕಂಡಿಷನ್ ಗಳು:-

* ಸಾಮಾನ್ಯ ವರ್ಗದ ಆರ್ಯ-ವೈಶ್ಯ ಸಮುದಾಯಕ್ಕೆ ಸೇರಿದವರಿಗೆ ಮಾತ್ರ ಅರ್ಜಿ ಸಲ್ಲಿಸಲು ಅವಕಾಶ, ಅರ್ಹರು
ನಮೂನೆ-ಜಿಯಲ್ಲಿ ಜಾತಿ ಮತ್ತು ಆದಾಯ ಪ್ರಮಾಣ ಪತ್ರ ಪಡೆದಿರಬೇಕು
* ಅರ್ಜಿದಾರರು ಕರ್ನಾಟಕ ರಾಜ್ಯದವರಾಗಿರಬೇಕು ಹಾಗೂ ಅವರ ಖಾಯಂ ವಿಳಾಸವು ಕರ್ನಾಟಕ ರಾಜ್ಯದಲ್ಲಿರಬೇಕು.
* ಅರ್ಜಿದಾರರ ಮೊಬೈಲ್ ಸಂಖ್ಯೆಯು ಆಧಾರ್‌ ಸಂಖ್ಯೆಗೆ ಜೋಡಣೆಯಾಗಿರಬೇಕು ಮತ್ತು ಬ್ಯಾಂಕ್ ಖಾತೆಗೆ ಆಧಾರ್ ಸೀಡಿಂಗ್, NPCI ಮ್ಯಾಪಿಂಗ್ ಆಗಿರಬೇಕು.

* ಅರ್ಜಿದಾರರ ಕುಟುಂಬದ ವಾರ್ಷಿಕ ವರಮಾನ ರೂ.6,00,000/- ಒಳಗಿರಬೇಕು.
* ಅರ್ಜಿದಾರರು 21 ವರ್ಷ ಮೇಲ್ಪಟ್ಟು 55 ವರ್ಷ ಒಳಗಿನವರಾಗಿರಬೇಕು.
* ಮಹಿಳೆಯರಿಗೆ 33%, ವಿಶೇಷಚೇತನರಿಗೆ 5% ಮತ್ತು ತೃತೀಯಲಿಂಗಿಗಳಿಗೆ 5% ಮೀಸಲಾತಿ ಇರುತ್ತದೆ.
* ಒಂದು ಕುಟುಂಬದಲ್ಲಿ ಒಂದು ಅಭ್ಯರ್ಥಿಗೆ ಮಾತ್ರ ಅವಕಾಶವಿರುತ್ತದೆ.

* ಯೋಜನೆಯಲ್ಲಿ ಅಭ್ಯರ್ಥಿಯು ಕಡ್ಡಾಯವಾಗಿ ನೂತನ ವಾಹನವನ್ನು ಖರೀದಿಸಿ ಸಂಬಂಧಪಟ್ಟ RTO ಕಛೇರಿಯಲ್ಲಿ ನೋಂದಾಯಿಸಬೇಕು.
* ಬ್ಯಾಂಕ್ / ಹಣಕಾಸು ಸಂಸ್ಥೆಗಳಿಂದ ಪಡೆದ ಸಾಲಗಳನ್ನು ಅವರ ಷರತ್ತಿನನ್ವಯ ನಿಗಧಿಪಡಿಸಿದ ಕಂತುಗಳಲ್ಲಿ ಅಸಲು ಮತ್ತು ಬಡ್ಡಿಯನ್ನು ಮರುಪಾವತಿಸಬೇಕು.
* ಈ ಯೋಜನೆಯಲ್ಲಿ ಸಹಾಯಧನವನ್ನು ಪಡೆದ ಅಭ್ಯರ್ಥಿಯು ಆಹಾರ ವಾಹಿನಿಯನ್ನು 5 ವರ್ಷಗಳ ಅವಧಿಯೊಳಗೆ ಮಾರಾಟ ಮಾಡಬಾರದು.

*2019-20 ಮತ್ತು 2020-21ನೇ ಸಾಲಿನ ಸ್ವಯಂ-ಉದ್ಯೋಗ ನೇರಸಾಲ ಯೋಜನೆಯಡಿ ಸಾಲ ಪಡೆದ ಫಲಾನುಭವಿಗಳು ಸಾಲವನ್ನು ಅವಧಿಯೊಳಗೆ ಸಂಪೂರ್ಣವಾಗಿ ಮರುಪಾವತಿಸಿದ್ದಲ್ಲಿ, ಪುನಃ ಈ ಯೋಜನೆಯಡಿಯಲ್ಲಿ ಅರ್ಜಿ ಸಲ್ಲಿಸಲು ಅವಕಾಶವಿರುತ್ತದೆ.
* ಸಲ್ಲಿಕೆಯಾದ ಅರ್ಜಿಗಳ ಪೈಕಿ ಅರ್ಹ ಅರ್ಜಿದಾರರುಗಳನ್ನು ಮುಖ್ಯಕಾರ್ಯನಿರ್ವಹಣಾಧಿಕಾರಿಗಳ ಅಧ್ಯಕ್ಷತೆಯಲ್ಲಿ ರಚಿಸಿರುವ ಜಿಲ್ಲಾ ಮಟ್ಟದ ಆಯ್ಕೆ ಸಮಿತಿಯ ಮೂಲಕ ಆಯ್ಕೆ ಮಾಡಲಾಗುವುದು.

ಈ ಸುದ್ದಿ ಓದಿ:-7th Pay Commission: ಸರ್ಕಾರಿ ನೌಕರರಿಗೆ ‘7ನೇ ವೇತನ ಆಯೋಗದ ಶಿಫಾರಸ್ಸು ಜಾರಿಗೆ ಅಧಿಕೃತ ಆದೇಶ.!

ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ:-
https://aryavysya.karnataka.gov.in

ಸರ್ಕಾರಿ ಯೋಜನೆ, ಸರ್ಕಾರಿ ಉದ್ಯೋಗಗಳು,ಮತ್ತು ಖಾಸಗಿ ಕಂಪನಿ ಉದ್ಯೋಗದ ಬಗ್ಗೆ ದೈನಂದಿನ ಮಾಹಿತಿಯನ್ನು ಪಡೆಯಲು ನಮ್ಮ Kannada Trend News WhatsApp ಗ್ರೂಪ್ ಮತ್ತು ಟೆಲಿಗ್ರಾಮ್ ಚಾನಲ್‌ಗೆ ಜಾಯಿನ್ ಆಗಿರಿ
WhatsApp Group Join Now
Telegram Group Join Now

Leave a Comment