Post office
ಪೋಸ್ಟ್ ಆಫೀಸ್‌ನ (Post Office) ಹಲವಾರು ಯೋಜನೆಗಳು ಒಂದಲ್ಲಾ ಒಂದು ಪ್ರಯೋಜನವನ್ನೊಳಗೊಂಡಿದ್ದು, ಹೂಡಿಕೆದಾರರಿಗೆ ಸುರಕ್ಷತೆಯನ್ನೊದಗಿಸುತ್ತದೆ. ಹಿರಿಯ ನಾಗರಿಕರಿಗೆ (Senior Citizen) ಕೂಡ ಪೋಸ್ಟ್ ಆಫೀಸ್ ಆಕರ್ಷಕ ಯೋಜನೆಯನ್ನೊಂದು ಪ್ರಸ್ತುತಪಡಿಸಿದ್ದು, ಹೂಡಿಕೆದಾರರು ಇದರಲ್ಲಿ 8% ಬಡ್ಡಿಯನ್ನು ಪಡೆಯುತ್ತಾರೆ ಹಾಗೂ ಪ್ರತಿ ತಿಂಗಳು ನಿಯಮಿತ ಆದಾಯ ಕೂಡ ದೊರೆಯುತ್ತದೆ. ಹೂಡಿಕೆಯ (Investment) ಮೇಲೆ ಸರಕಾರವೇ ಭದ್ರತೆಯನ್ನು ನೀಡುವುದರಿಂದ ಆರ್ಥಿಕ ನಷ್ಟವೊದಗುವ ಭೀತಿ ಕೂಡ ಇರುವುದಿಲ್ಲ.
ಹಿರಿಯ ನಾಗರಿಕರ ಉಳಿತಾಯ ಯೋಜನೆ (Savings Plan)
ತಾವು ಕಷ್ಟಪಟ್ಟು ದುಡಿದ ಹಣ ಉಳಿತಾಯವಾಗಬೇಕು ಹಾಗೂ ಉತ್ತಮ ಆದಾಯವನ್ನು ತಮಗೆ ಒದಗಿಸಬೇಕೆಂದು ಪ್ರತಿಯೊಬ್ಬರೂ ಬಯಸುತ್ತಾರೆ. ವೃದ್ಧಾಪ್ಯದ ಸಮಯದಲ್ಲಿ ಹೀಗೆ ಉಳಿಸಿದ ಹಣ ಒಂದಲ್ಲಾ ಒಂದು ರೀತಿಯಲ್ಲಿ ನೆರವಿಗೆ ಬರುತ್ತದೆ. ಪೋಸ್ಟ್ ಆಫೀಸ್‌ನ ಉಳಿತಾಯ ಯೋಜನೆ ಕೂಡ ಇದೇ ರೀತಿ ಹಿರಿಯ ನಾಗರಿಕರಿಗೆ ಆಧಾರವಾಗಿದ್ದು, ನಿಯಮಿತ ಆದಾಯವನ್ನು ಖಾತ್ರಿಪಡಿಸುತ್ತದೆ. ಪೋಸ್ಟ್ ಆಫೀಸ್ ಹಿರಿಯ ನಾಗರಿಕ ಉಳಿತಾಯ ಯೋಜನೆ ವಿಶೇಷವಾಗಿ ಹಿರಿಯ ನಾಗರಿಕರಿಗಾಗಿಯೇ ಯೋಜಿಸಲಾಗಿದ್ದು 8% ಕ್ಕಿಂತ ಹೆಚ್ಚು ವಾರ್ಷಿಕ ಬಡ್ಡಿಯನ್ನು ನೀಡಲಾಗುತ್ತದೆ. ಒಂದು ರೀತಿ ಇದು ಬ್ಯಾಂಕ್ ಎಫ್‌ಡಿಗಿಂತಲೂ ಹೆಚ್ಚಿನ ಬಡ್ಡಿಯನ್ನು ಈ ಯೋಜನೆಯಲ್ಲಿ ಗಳಿಸಬಹುದು.
8.2 % ದ ಆಕರ್ಷಕ ಬಡ್ಡಿ
ಅಂಚೆ ಕಚೇರಿಯಲ್ಲಿ ಪ್ರತಿಯೊಂದು ವಯೋಮಾನದವರು ಹೂಡಿಕೆಯನ್ನು ಮಾಡಬಹುದಾಗಿದೆ. ಸರಕಾರ ಕೂಡ ಈ ಹೂಡಿಕೆಗೆ ಸಹಕಾರ ಹಾಗೂ ಬೆಂಬಲ ನೀಡುವುದರಿಂದ ಆರ್ಥಿಕ ನಷ್ಟವಾಗುವ ಭಯವಿರುವುದಿಲ್ಲ. ಪೋಸ್ಟ್ ಆಫೀಸ್ ಸೀನಿಯರ್ ಸಿಟಿಜನ್ ಸೇವಿಂಗ್ಸ್ ಸ್ಕೀಮ್ ಅಥವಾ ಹಿರಿಯ ನಾಗರಿಕರ ಉಳಿತಾಯ ಯೋಜನೆಯು ಇತರ ಬ್ಯಾಂಕ್‌ಗಳಲ್ಲಿರುವ ಎಫ್‌ಡಿಗೆ ಹೋಲಿಸಿದರೆ, ಹೆಚ್ಚಿನ ಬಡ್ಡಿಯನ್ನು ನೀಡುತ್ತದೆ.
ಆದರೆ, ಇದರಲ್ಲಿ ನಿಯಮಿತ ಆದಾಯ ಗಳಿಸಬಹುದು. ಅಲ್ಲದೆ, ಹೂಡಿಕೆ ಮಾಡುವ ಮೂಲಕ ಪ್ರತಿ ತಿಂಗಳು ರೂ 20,000 ಗಳಿಸಬಹುದು. ಇದರಲ್ಲಿರುವ ಬಡ್ಡಿದರದ ಬಗ್ಗೆ ಹೇಳುವುದಾದರೆ, ಸರ್ಕಾರವು ಜನವರಿ 1, 2024 ರಿಂದ ಹೂಡಿಕೆ ಮಾಡುವವರಿಗೆ ಅತ್ಯುತ್ತಮವಾದ 8.2 ಶೇಕಡಾ ಬಡ್ಡಿ ದರವನ್ನು ನೀಡುತ್ತಿದೆ.
ಕನಿಷ್ಠ ಮೊತ್ತ 1000 ರೂ.ದಿಂದ ಆರಂಭಿಸಬಹುದು
ನಿಯಮಿತ ಆದಾಯ, ಸುರಕ್ಷಿತ ಹೂಡಿಕೆ ಮತ್ತು ತೆರಿಗೆ ಪ್ರಯೋಜನಗಳ ವಿಷಯದಲ್ಲಿ, ಪೋಸ್ಟ್ ಆಫೀಸ್ ಹಿರಿಯ ನಾಗರಿಕ ಉಳಿತಾಯ ಯೋಜನೆಯನ್ನು ಪೋಸ್ಟ್ ಆಫೀಸ್‌ನ ಅತ್ಯಂತ ನೆಚ್ಚಿನ ಯೋಜನೆಗಳ ಪಟ್ಟಿಯಲ್ಲಿ ಸೇರಿಸಲಾಗಿದೆ. ಹೂಡಿಕೆದಾರರು ಕನಿಷ್ಠ ಮೊತ್ತ ರೂ 1,000 ದಿಂದ ಯೋಜನೆಯಲ್ಲಿ ಹೂಡಿಕೆ ಮಾಡಬಹುದು. ಇದರಲ್ಲಿರುವ ಗರಿಷ್ಠ ಹೂಡಿಕೆ ಎಂದರೆ ರೂ 30 ಲಕ್ಷವಾಗಿದೆ. ನಿವೃತ್ತಿಯ ನಂತರ ಆರ್ಥಿಕ ಸಬಲತೆಗಾಗಿ ಈ ಯೋಜನೆ ಹೆಚ್ಚು ಪ್ರಯೋಜನಕಾರಿಯಾಗಿದೆ. 60 ವರ್ಷ ಅಥವಾ ಅದಕ್ಕಿಂತ ಹೆಚ್ಚಿನ ವಯಸ್ಸಿನವರು ಏಕ ಇಲ್ಲವೇ ಜಂಟಿ ಖಾತೆ ತೆರೆಯಬಹುದು.
ಯೋಜನೆಯ ಮೆಚ್ಯುರಿಟಿ ಅವಧಿ ಐದು ವರ್ಷಗಳು
ಪೋಸ್ಟ್ ಆಫೀಸ್ ಸೀನಿಯರ್ ಸಿಟಿಜನ್ ಯೋಜನೆಯಲ್ಲಿ ಹೂಡಿಕೆ ಮಾಡುವ ವ್ಯಕ್ತಿ 5 ವರ್ಷಗಳವರೆಗೆ ಹೂಡಿಕೆ ಮಾಡಬೇಕು. ಅವಧಿಯ ಮೊದಲು ಖಾತೆ ಮುಚ್ಚಿದ್ದಲ್ಲಿ, ನಿಯಮಗಳ ಪ್ರಕಾರ ಖಾತೆದಾರರು ದಂಡವನ್ನು ಪಾವತಿಸಬೇಕಾಗುತ್ತದೆ. ಸಮೀಪದ ಅಂಚೆ ಕಚೇರಿಯಲ್ಲಿ ಯೋಜನೆಯನ್ನು ಆರಂಭಿಸಬಹುದು.
ಬ್ಯಾಂಕ್ ಎಫ್‌ಡಿಗಿಂತ ಹೆಚ್ಚಿನ ಆದಾಯ
ಪೋಸ್ಟ್ ಆಫೀಸ್ ಸೀನಿಯರ್ ಸಿಟಿಜನ್ ಸೇವಿಂಗ್ ಸ್ಕೀಮ್‌ನಲ್ಲಿ ಶೇಕಡಾ 8.2 ರಷ್ಟು ಬಡ್ಡಿಯನ್ನು ನೀಡಲಾಗುತ್ತಿದೆ, ಇನ್ನೊಂದೆಡೆ ದೇಶದ ಎಲ್ಲಾ ಬ್ಯಾಂಕ್‌ಗಳು ಇದೇ ಅವಧಿಯಲ್ಲಿ ಎಫ್‌ಡಿಗಾಗಿ 7% ದಿಂದ 7.5% ದಷ್ಟು ಬಡ್ಡಿಯನ್ನೊದಗಿಸುತ್ತಿವೆ.
ಎಸ್‌ಬಿಐ ಐದು ವರ್ಷಗಳ ಎಫ್‌ಡಿಯಲ್ಲಿ ಹಿರಿಯ ನಾಗರಿಕರಿಗೆ ಶೇಕಡಾ 7.50, ಐಸಿಐಸಿಐ ಬ್ಯಾಂಕ್ ಶೇಕಡಾ 7.50, ಪಂಜಾಬ್ ನ್ಯಾಷನಲ್ ಬ್ಯಾಂಕ್ (ಪಿಎನ್‌ಬಿ) ಶೇಕಡಾ 7 ಮತ್ತು ಎಚ್‌ಡಿಎಫ್‌ಸಿ ಬ್ಯಾಂಕ್ (ಎಚ್‌ಡಿಎಫ್‌ಸಿ ಬ್ಯಾಂಕ್) ವಾರ್ಷಿಕ 7.50 ರಷ್ಟು ಬಡ್ಡಿಯನ್ನು ನೀಡುತ್ತಿದೆ.
1.5 ಲಕ್ಷದವರೆಗೆ ತೆರಿಗೆ ಪ್ರಯೋಜನಗಳು
ಪೋಸ್ಟ್ ಆಫೀಸ್‌ನ ಈ ಯೋಜನೆಯಲ್ಲಿ, ಖಾತೆದಾರರು ತೆರಿಗೆ ವಿನಾಯಿತಿಯ ಪ್ರಯೋಜನವನ್ನು ಸಹ ಪಡೆಯುತ್ತಾರೆ. ಸೀನಿಯರ್ ಸಿಟಿಜನ್ ಸೇವಿಂಗ್ಸ್ ಸ್ಕೀಮ್‌ನಲ್ಲಿ ಹೂಡಿಕೆ ಮಾಡುವ ವ್ಯಕ್ತಿಗೆ ಆದಾಯ ತೆರಿಗೆ ಕಾಯಿದೆಯ ಸೆಕ್ಷನ್ 80C ಅಡಿಯಲ್ಲಿ ವಾರ್ಷಿಕ 1.5 ಲಕ್ಷದವರೆಗೆ ತೆರಿಗೆ ವಿನಾಯಿತಿ ನೀಡಲಾಗುತ್ತದೆ. ಈ ಯೋಜನೆಯಲ್ಲಿ, ಪ್ರತಿ ಮೂರು ತಿಂಗಳಿಗೊಮ್ಮೆ ಬಡ್ಡಿ ಮೊತ್ತವನ್ನು ಪಾವತಿಸಲು ಅವಕಾಶವಿದೆ.
ಮಾಸಿಕ ಆದಾಯ ರೂ 20,000 ಗಳಿಸುವ ಅವಕಾಶ
ಈ ಯೋಜನೆಯ ಹೂಡಿಕೆಯ ಕನಿಷ್ಟ ಮೊತ್ತ ರೂ 1,000 ಅಂತೆಯೇ ಗರಿಷ್ಟ ಮೊತ್ತ ರೂ 30 ಲಕ್ಷವಾಗಿದೆ. ಯೋಜನೆಯಿಂದ ತಿಂಗಳಿಗೆ ರೂ 20,000 ನಿಯಮಿತ ಆದಾಯ ಪಡೆಯಬೇಕಾದರೆ 8.2% ಬಡ್ಡಿದರದಲ್ಲಿ ಒಬ್ಬ ವ್ಯಕ್ತಿ ರೂ 30 ಲಕ್ಷ ಹೂಡಿಕೆ ಮಾಡಿದಲ್ಲಿ ವಾರ್ಷಿಕವಾಗಿ ಆತನಿಗೆ ರೂ 2.46 ಲಕ್ಷ ಬಡ್ಡಿಯನ್ನು ಪಡೆಯುತ್ತಾನೆ. ಇದನ್ನು ಮಾಸಿಕ ಆಧಾರದ ಮೇಲೆ ಪರಿಗಣಿಸಿದಾಗ ಮಾಸಿಕ ರೂ 20,000 ಆದಾಯ ಗಳಿಸಿದಂತಾಗುತ್ತದೆ.