Pension
ರೈತರ (for farmers) ಶ್ರೇಯೋಭಿವೃದ್ಧಿಗಾಗಿ ಸರ್ಕಾರಗಳು ಅನೇಕ ಯೋಜನೆಗಳ ಮೂಲಕ ನೆರವಾಗುತ್ತಿವೆ. ಇಂತಹ ಯೋಜನೆಗಳ ಪೈಕಿ ಕಿಸಾನ್ ಮಂದನ್ ಯೋಜನೆ (Kisan Mandan Scheme) ಕೂಡ ಒಂದು. ಕಿಸಾನ್ ಮಂದನ್ ಯೋಜನೆಯುಶರೈತನಿಗೆ ಪಿಂಚಣಿ ಸೌಲಭ್ಯವನ್ನು (Pension Facility) ಒದಗಿಸುತ್ತದೆ.
ಯಾಕೆಂದರೆ ರೈತನಿಗೆ ಆತನ ಕೃಷಿ ಮೂಲದಿಂದ ಬರುವ ಆದಾಯ ನಿಶ್ಚಿತವಾದದ್ದಲ್ಲ ಹೇಗಿದ್ದ ಮೇಲೆ ವಯಸ್ಸಾದ ಬಳಿಕ ಆತನ ದೇಹದ ಶಕ್ತಿಯು ಕೂಡ ಕಡಿಮೆಯಾದ ಮೇಲೆ ಇನ್ನು ಹೆಚ್ಚಿನ ಆರ್ಥಿಕ ಅಭದ್ರತೆಯನ್ನು ಹೊಂದುತ್ತಾನೆ. ಇಂತಹ ಸಂದರ್ಭಗಳಲ್ಲಿ ರೈತನಿಗೆ ಆತನ ಹಣಕಾಸಿನ ಅಗತ್ಯತೆಗಳಿಗೆ ಅನುಕೂಲವಾಗಬೇಕು ಎಂದು ಕೇಂದ್ರ ಸರ್ಕಾರ ಈ ಯೋಜನೆ ರೂಪಿಸಿದೆ.
ಈ ಯೋಜನೆಯ ವಿಶೇಷತೆ ಏನೆಂದರೆ ಕಿಸಾನ್ ಮಂದನ್ ಯೋಜನೆಯಲ್ಲಿ ಖಾತೆ ತೆರೆದು ಸಣ್ಣ ಮೊತ್ತದ ಹಣವನ್ನು ಉಳಿತಾಯ ಮಾಡುವ ಮೂಲಕ ರೈತ ತನಗೆ ಖಾತೆಯನ್ನು ನಿರ್ವಹಿಸಿದರೆ ಆತನಿಗೆ 60 ವರ್ಷ ಆದ ಬಳಿಕ ಪ್ರತಿ ತಿಂಗಳು ಆತ ಉಳಿತಾಯ ಮಾಡಿದ್ದ ಹಣಕ್ಕೆ ಅನುಗುಣವಾಗಿ ಮೂರರಿಂದ ಐದು ಸಾವಿರದವರೆಗೆ ಪಿಂಚಣಿ ದೊರೆಯುತ್ತದೆ.
ಈ ಸುದ್ದಿ ಓದಿ:- ಈ ರೀತಿ ವ್ಯವಸಾಯ ಮಾಡಿದರೆ ಬೇಡ ಅಂದ್ರು ತಿಂಗಳಿಗೆ 1 ಲಕ್ಷ ಆದಾಯ ಗ್ಯಾರಂಟಿ.!
ರೈತ ಅಕಾಲಿಕ ಮ’ರ’ಣ ಹೊಂದಿದ್ದರೆ ರೈತನ ಪತ್ನಿಗೂ ಕೂಡ ಇದರ ಪ್ರಯೋಜನ ಮುಂದುವರೆಯುತ್ತದೆ. ರೈತನು ಕೂಡ ಒಂದು ರೀತಿಯಲ್ಲಿ ಅಸಂಘಟಿತ ವಲಯದಲ್ಲಿ ದುಡಿಯುವ ಕಾರ್ಮಿಕನಿದ್ದಂತೆ ಎನ್ನುವುದನ್ನು ಪರಿಗಣಿಸಿ ಪ್ರಧಾನಮಂತ್ರಿ ನರೇಂದ್ರ ಮೋದಿಯವರು 2019 ಯೋಜನೆಯನ್ನು ಲಾಂಚ್ ಮಾಡಿದರು.
ಈ ಯೋಜನೆ ಬಗ್ಗೆ ನೀವು ಆಸಕ್ತರಾಗಿದ್ದರೆ ಇದರ ಪ್ರಯೋಜನವನ್ನು ಪಡೆಯಲು ಇಚ್ಚಿಸಿದ್ದರೆ ಇದಕ್ಕಿರುವ ಇನ್ನಿತರ ಅರ್ಹತಾ ಮಾನದಂಡೆಗಳೇನು? ಅರ್ಜಿ ಸಲ್ಲಿಸುವುದು ಹೇಗೆ? ಏನೆಲ್ಲ ದಾಖಲೆಗಳನ್ನು ನೀಡಬೇಕು ಮತ್ತು ಎಲ್ಲಿ ಅರ್ಜಿ ಸಲ್ಲಿಸಬೇಕು? ಎನ್ನುವುದರ ಪೂರ್ತಿ ಮಾಹಿತಿಗಾಗಿ ಈ ಅಂಕಣವನ್ನು ಕೊನೆಯವರೆಗೂ ಓದಿ.
ಯೋಜನೆ ಹೆಸರು:- ಪ್ರಧಾನ ಮಂತ್ರಿ ಕಿಸಾನ್ ಮನ್ ಧನ್ ಯೋಜನೆ (PM Kisan Mandan Scheme)
ಅರ್ಹತೆಗಳು ಮತ್ತು ಯೋಜನೆಯ ವೈಶಿಷ್ಟತೆಗಳು:-
* 18 ವರ್ಷ ಮೇಲ್ಪಟ್ಟ 40 ವರ್ಷ ವಯಸ್ಸಿನ ಒಳಗಿನ ಕೃಷಿ ಕಾರ್ಯದಲ್ಲಿ ತೊಡಗಿಕೊಂಡಿರುವ ರೈತನು ಈ ಯೋಜನೆಗೆ ಅರ್ಹನಾಗಿರುತ್ತಾನೆ
* ಈ ಯೋಜನೆಗೆ ನೋಂದಾಯಿಸಿಕೊಂಡ ನಂತರ ವಯಸ್ಸಿಗೆ ಅನುಗುಣವಾಗಿ ರೂ.50-ರೂ.200 ರವರೆಗೆ ಪ್ರತಿ ತಿಂಗಳು ಪ್ರೀಮಿಯಂ ಪಾವತಿಸಬೇಕು.
ಈ ಸುದ್ದಿ ಓದಿ:- ಸರ್ಕಾರದಿಂದ ಒಂದು ವರ್ಷ ಉಚಿತ ಕೌಶಲ್ಯಾಭಿವೃದ್ಧಿ ತರಬೇತಿ.! ಆಸಕ್ತರು ತಪ್ಪದೆ ಅರ್ಜಿ ಸಲ್ಲಿಸಿ ಪ್ರಯೋಜನ ಪಡೆದುಕೊಳ್ಳಿ.
* 60 ವರ್ಷ ತುಂಬಿದ ಬಳಿಕ ಪ್ರತಿ ತಿಂಗಳು ರೈತ ಮಾಡಿದ್ದ ಉಳಿತಾಯಕ್ಕೆ ಅನುಗುಣವಾಗಿ ಪೆನ್ಷನ್ ಬರುತ್ತದೆ ರೂ.3000 ದಿಂದ ರೂ.5,000 ದವರೆಗೂ ಕೂಡ ಈ ಪೆನ್ಷನ್ ಸಿಗುತ್ತದೆ
* ಒಂದು ವೇಳೆ ಹತ್ತು ವರ್ಷಕ್ಕಿಂತ ಮುಂಚೆ ರೈತನು ತನ್ನ ಖಾತೆ ಮುಚ್ಚುವುದಾದರೆ ಆತ ಇದುವರೆಗೆ ಉಳಿತಾಯ ಮಾಡಿದ ಹಣಕ್ಕೆ ಉಳಿತಾಯ ಖಾತೆ ಹಣಕ್ಕೆ ನೀಡಲಾಗುವ ಬಡ್ಡಿದರದಲ್ಲಿ ಹಣ ವಾಪಸ್ಸು ನೀಡಲಾಗುತ್ತದೆ.
* 10 ವರ್ಷಗಳಿಗಿಂತ ಹೆಚ್ಚಿನ ಕಾಲ ಪ್ರೀಮಿಯಂ ಪಾವತಿಸಿ 60 ವರ್ಷ ಪೂರೈಸುವ ಮುನ್ನ ಸ್ಥಗಿತಗೊಳಿಸಿದರೆ ಪಿಂಚಣಿ ನಿಧಿಯಲ್ಲಿ ಠೇವಣಿ ಮಾಡಿದ ಮೊತ್ತ ಅಥವಾ ಉಳಿತಾಯ ಖಾತೆ ಮೇಲಿನ ಬಡ್ಡಿ ಯಾವುದು ಹೆಚ್ಚಿದೆಯೋ ಆ ಪ್ರಕಾರವಾಗಿ ಹಣ ಹಿಂತಿರುಗಿಸಲಾಗುತ್ತದೆ
* ಒಂದು ವೇಳೆ ಯೋಜನೆ ಮದ್ಯದಲ್ಲಿ ರೈತ ಮೃ’ತಪಟ್ಟರೆ ಆತನ ಪತ್ನಿಗೆ 50% ಪಿಂಚಣಿ ಸಿಗುತ್ತದೆ.
ಬೇಕಾಗುವ ದಾಖಲೆಗಳು:-
* ರೈತನ ಆಧಾರ್ ಕಾರ್ಡ್
* ಪ್ಯಾನ್ ಕಾರ್ಡ್
* ಬ್ಯಾಂಕ್ ಪಾಸ್ ಬುಕ್ ವಿವರ
* ಚಾಲ್ತಿಯಲ್ಲಿರುವ ಮೊಬೈಲ್ ಸಂಖ್ಯೆ
* ಇತ್ತೀಚಿನ ಭಾವಚಿತ್ರ
* ಇನ್ನಿತರ ಪ್ರಮುಖ ದಾಖಲೆಗಳು
ಈ ಸುದ್ದಿ ಓದಿ:- ಅಂಚೆ ಕಚೇರಿಯ ಈ ಯೋಜನೆಯಲ್ಲಿ ಕೇವಲ 95 ಹೂಡಿಕೆ ಮಾಡಿ ಸಾಕು, 14 ಲಕ್ಷ ಸಿಗುತ್ತೆ.!
ಅರ್ಜಿ ಸಲ್ಲಿಸುವ ವಿಧಾನ:-
* https://pmkmy.gov.in/ ವೆಬ್ ಸೈಟ್ ಗೆ ಭೇಟಿ ಕೊಟ್ಟು ಅರ್ಜಿ ಸಲ್ಲಿಸಬಹುದು