Home
900Sq.ft ಮನೆಗೆ ಈಗಿನ ಬಜೆಟ್ ನಲ್ಲಿ ಏನಿಲ್ಲಾ ಎಂದರು 20-25 ಲಕ್ಷ ಹಣ ಇಟ್ಟುಕೊಂಡೇಷಕೆಲಸಕ್ಕೆ ಕೈ ಹಾಕಬೇಕು. ಆದರೆ ಇಲ್ಲೊಂದು ಮನೆಯನ್ನು 5-6 ಲಕ್ಷದಲ್ಲಿ ಅಚ್ಚುಕಟ್ಟಾಗಿ ಮಾಡಲಾಗಿದೆ. ಅದು ಕೂಡ 3BHK. ಇದು ಬಹಳ ಆಶ್ಚರ್ಯ ಎನಿಸಬಹುದು ನಿಮಗೂ ಕೂಡ ಈ ರೀತಿ ಮನೆ ಮಾಡಿಕೊಳ್ಳುವುದು ಸಾಧ್ಯವಿದೆ ಆದರೆ ವಿವರ ತಿಳಿದುಕೊಳ್ಳಬೇಕು ಎಂದರೆ ಲೇಖನವನ್ನು ಪೂರ್ತಿಯಾಗಿ ಓದಬೇಕು.
ಬೆಳಗಾವಿ ಬಳಿಯ ಮನಗೂಳಿ ಎನ್ನುವ ಗ್ರಾಮವಿದೆ ಈ ಭಾಗದಲ್ಲಿ ಮಲ್ಲಯ್ಯನ ದೇವಸ್ಥಾನ ಬಹಳ ಫೇಮಸ್ ಈ ಭಾಗದ ಎಲ್ಲರಿಗೂ ಕೂಡ ಚಿರಪರಿಚಿತ ಜಾಗ ಅದು ಅಲ್ಲಿ ಬಂದು ಮಾಯ ಆರ್ಗನಿಕ್ ಫಾರ್ಮ್ ಎಂದು ಕೇಳಿದರೆ ಯಾರು ಬೇಕಾದರೂ ಅಡ್ರೆಸ್ ಹೇಳುತ್ತಾರೆ ಈ ಫಾರ್ಮ್ ನಲ್ಲಿ ರೆಡಿಯಾಗಿದೆ 5-6 ಲಕ್ಷದ ಇಕೋ ಫ್ರೆಂಡ್ಲಿ ಫಾರ್ಮ್ ಹೌಸ್.
ಸುತ್ತ ಮುತ್ತ ಇವರದೇ ಜಮೀನು, ಜಮೀನಿನ ಮಧ್ಯೆ ಈ ಮನೆ ಇದೆ. ಮನೆಯನ್ನು ರಿಸೈಕಲ್ ಹೆಂಚಿನಿಂದ ಮಾಡಲಾಗಿದೆ. ಇದರಿಂದ ಬಹಳಷ್ಟು ಖರ್ಚು ಉಳಿತಾಯವಾಗಿದೆ. ಯಾಕೆಂದರೆ ಈಗ ಎಲ್ಲರೂ ಕೂಡ ಹಳ್ಳಿಗಳಲ್ಲೂ RCC ಮನೆಗಳನ್ನು ಕಟ್ಟಿಸಿಕೊಳ್ಳುತ್ತಿದ್ದಾರೆ ಈ ಹೆಂಚುಗಳನ್ನು ಬಿಸಾಕುತ್ತಿದ್ದಾರೆ.
ಅವುಗಳನ್ನೇ ಬಹಳ ಕಡಿಮೆ ಬೆಲೆಗೆ ತೆಗೆದುಕೊಂಡು ಹೆಂಚಿನ ಮನೆ ಮಾಡಲಾಗಿದೆ. 11*11 ಅಳತೆಯ ಬೆಡ್ರೂಮ್ ಗಳು, 8*10 ಅಳತೆಯ ಕಿಚನ್, ವಿಶಾಲವಾದ ಹಾಲ್ ಮನೆ ಮುಂದೆ ಅಷ್ಟೇ ವಿಶಾಲವಾದ ಜಗಲಿ ಒಂದು ಸಪರೇಟ್ ಅಟ್ಯಾಚ್ ಬಾತ್ ರೂಮ್ ಒಂದು ಮಾಸ್ಟರ್ ಬೆಡ್ರೂಮ್ ರೀತಿ ಬೆಡ್ರೂಮ್ ನಲ್ಲಿಯೇ ಅಟ್ಯಾಚ್ ಬಾತ್ ರೂಮ್ ಇರುವ ಮನೆಯಾಗಿದೆ.
ಮನೆ ಮುಂದಿನ ಕಲ್ಲು ಚಪ್ಪಡಿ ಯನ್ನೇ ಪಾರ್ಕಿಂಗ್ ಟೈಲ್ಸ್ ರೀತಿ ಮಾಡಲಾಗಿದೆ ಅಲ್ಲಿ ಸ್ಥಳದಲ್ಲೇ ಸಿಗುವ ಕಲ್ಲುಗಳನ್ನು ಬಳಸುವುದರಿಂದ ಖರ್ಚು ಉಳಿದಿದೆ ಮನೆ ಮುಂದೆ ಲ್ಯಾಟಿನ್ ದೀಪಗಳು, ಹಕ್ಕಿ ಗೂಡು, ಮನೆ ಒಳಗೆ ಬುಟ್ಟಿಯಲ್ಲಿ ಹಾಕಿದ ದೀಪಗಳು ಯಾವುದೇ ಇಂಟೀರಿಯರ್ ಗಿಂತ ಕಡಿಮೆ ಇಲ್ಲ ಬಹಳ ಸಿಂಪಲ್ ಆದ ಡೋರ್ ಹಾಗೂ ವಿಂಡೋಗಳನ್ನು ಬಳಸಲಾಗಿದೆ.
ಲಿವಿಂಗ್ ಏರಿಯಾದಲ್ಲಿ ಮಾತ್ರ ಫುಲ್ ಟ್ರಾನ್ಸ್ಪರೆಂಟ್ ಆಗಿರುವ ರೀತಿ ಗಾಜಿನ ಕಿಟಕಿಗಳನ್ನು ಹಾಕಲಾಗಿದ್ದು ಸ್ಕ್ರೀನ್ ಎಳೆದರೆ ಕನ್ನಳತೆ ದೂರವಾದವರೆಗೂ ವಿಶಾಲವಾದ ಗುಡ್ಡ ಪ್ರದೇಶ ಜಮೀನು ಹಸಿರು ಎಲ್ಲವನ್ನು ಆರಾಮಾಗಿ ಕೂತು ನೋಡಬಹುದು. ಮನೆ ಮುಂಭಾಗದಲ್ಲಿ ಒಂದು ಹಟ್ ನಿರ್ಮಿಸಲಾಗಿದೆ ಅದು ಹಳ್ಳಿ ಮನೆ ಅಂದವನ್ನು ಇನ್ನಷ್ಟು ಹೆಚ್ಚಿಸುವಂತಿದೆ.
ಮನೆ ಮುಂದೆ ಫ್ರೆಂಡ್ಸ್ ಬಂದು ಕೂದ್ದಾಗ ಫೈಯರ್ ಕ್ಯಾಂಪ್ ಹಾಕುವದಕ್ಕೆ ಕೂಡ ವ್ಯವಸ್ಥೆ ಮಾಡಿಕೊಳ್ಳಲಾಗಿದೆ ಎಲ್ಲೆಲ್ಲಿ ಸಾಧ್ಯ ಅಲ್ಲೆಲ್ಲ ಹಣ ಉಳಿಸಲಾಗಿದೆ ಬ್ಲಾಕ್ ಗಳನ್ನು ಬಳಸಿ ಬೆಡ್ರೂಮ್ ಗಳಲ್ಲಿ ಕಾಟ್ ಮಾಡಲಾಗಿದೆ. ಅಡುಗೆ ಮನೆಯಲ್ಲಿ ಕೂಡ ಯಾವುದೇ ಇಂಟೀರಿಯರ್ ಇಲ್ಲ ಪಾತ್ರೆಗಳನ್ನು ಇಡುವುದಕ್ಕೆ ಬೇಕಾದ ವ್ಯವಸ್ಥೆ ಎಲ್ಲವನ್ನು ಕೂಡ ಸಿಮೆಂಟ್ ನಿಂದ ಕಟ್ಟಿಕೊಳ್ಳಲಾಗಿದೆ.
ಮನೆ ಹೊರಗೆ ಮಣ್ಣನ್ನುಶಮಿಶ್ರಣ ಮಾಡಿ ಪ್ಲಾಸ್ಟಿಂಗ್ ಮಾಡಿ ಬಿಡಲಾಗಿದೆ ಇದು ಕೂಡ ನೋಡುಗರಿಗೆ ಆಕರ್ಷಕವಾಗಿದೆ ನಿಮಗೂ ಕೂಡ ಈ ರೀತಿ ಮನೆ ಬೇಕು ಎನಿಸಿದರೆ ಇದರ ಬಗ್ಗೆ ಇನ್ನಷ್ಟು ಮಾಹಿತಿಯನ್ನು ತಿಳಿದುಕೊಳ್ಳಲು ಈ ವಿಡಿಯೋವನ್ನು ಪೂರ್ತಿಯಾಗಿ ನೋಡಿ.