Jan aushadi Kendra
- ನಮ್ಮ ದೇಶವು ರಫ್ತು ಮಾಡುವಂತ ವಸ್ತುಗಳಲ್ಲಿ ಔಷಧಗಳು ಕೂಡ ಸೇರಿದೆ. ಜನರಿಕ್ ಔಷಧಗಳನ್ನು ರಫ್ತು ಮಾಡುವ ಕೆಲವೇ ದೇಶಗಳ ಪೈಕಿ ಭಾರತವು ಕೂಡ ಹೆಸರು ಮಾಡಿದ್ದು ಹೊರದೇಶಗಳಿಗೆ ಮಾತ್ರವಲ್ಲದೆ ದೇಶದ ಜನರಿಗೂ ಇದರ ಅನುಕೂಲತೆ ಸಿಗಬೇಕು ಎಂದು ಕಡಿಮೆ ಬೆಲೆಗೆ ನಮ್ಮ ದೇಶದ ಜನರಿಗೆ ಜನರಿಕ್ ಔಷಧಿಗಳನ್ನು ನೀಡಲು ಪ್ರಧಾನಮಂತ್ರಿ ನರೇಂದ್ರ ಮೋದಿ (PM Narendra Modi) ಅವರು ಪ್ರಧಾನಮಂತ್ರಿ ಭಾರತೀಯ ಜನೌಷಧಿ ಕೇಂದ್ರ (Pradhanamantri Bharathiya Jan aushadi Kendra) ಎನ್ನುವ ಯೋಜನೆಯನ್ನು ಪರಿಚಯಿಸಿದ್ದಾರೆ.
ಈ ಮೂಲಕ ಜನೌಷಧಿ ಕೇಂದ್ರಗಳಲ್ಲಿ ಅತಿ ಕಡಿಮೆ ಬೆಲೆಗೆ ಔಷಧಿಗಳನ್ನು ನಾವು ಖರೀದಿಸಬಹುದಾಗಿದೆ. ಈ ಯೋಜನೆಗೆ ದೇಶದಾದ್ಯಂತ ಕಂಡುಬಂದಿರುವ ಉತ್ತಮ ಪ್ರತಿಕ್ರಿಯೆಯನ್ನು ಪರಿಗಣಿಸಿ ಈ ವರ್ಷದಲ್ಲಿ ಜನೌಷಧಿ ಕೇಂದ್ರಗಳ ಸಂಖ್ಯೆಯನ್ನು 25,000 ಕ್ಕೆ ಏರಿಸಲು ಸರ್ಕಾರವು ತೀರ್ಮಾನ ತೆಗೆದುಕೊಂಡಿದೆ.
4000 ಉಚಿತ ಬೈಕ್ ವಿತರಿಸಲು ಮುಂದಾದ ಸರ್ಕಾರ, ಆಸಕ್ತರು ಅರ್ಜಿ ಸಲ್ಲಿಸಿ.!
ಈ ನಿಟ್ಟಿನಲ್ಲಿ ಮಹತ್ವದ ಹೆಜ್ಜೆ ಇಟ್ಟಿದ್ದು ಜನೌಷಧಿ ಕೇಂದ್ರ ತೆರೆಯಲು ಆಸಕ್ತಿ ಇರುವರಿಂದ ಅರ್ಜಿ ಆಹ್ವಾನ ಮಾಡಿದೆ ಪ್ರಧಾನಮಂತ್ರಿ ಭಾರತೀಯ ಜನೌಷಧಿ ಕೇಂದ್ರಗಳಲ್ಲಿ ಮಾರುವ ಮೆಡಿಸನ್ ಮೇಲೆ ಮಾಲೀಕರು 20 % ಲಾಭ ಹೊಂದಿರುತ್ತಾರೆ ಹಾಗಾಗಿ ಇದು ಉದ್ಯೋಗ ಸೃಷ್ಟಿ ಜೊತೆಗೆ ಲಾಭ ಕೊಡುವ ಉದ್ಯಮವೂ ಆಗಿದೆ.
ಈ ಮೂಲಕ ದೇಶದಲ್ಲಿ ಯುವಕರನ್ನು ಸ್ವಯಂ ಉದ್ಯಮಿಗಳನ್ನಾಗಿ ಮಾಡಲು ಪ್ರೇರೇಪಿಸುವ ಸಲುವಾಗಿ ಸರ್ಕಾರವೇ ಜನೌಷಧಿ ಕೇಂದ್ರ ತೆರೆಯಲು ಆಸಕ್ತಿ ಇರುವವರಿಗೆ 5 ಲಕ್ಷದವರೆಗೆ ಆರ್ಥಿಕ ಸಹಾಯ ಕೂಡ ನೀಡುತ್ತಿದೆ. ಈ ಪ್ರಯೋಜನ ಪಡೆಯಲು ಯಾರು ಅರ್ಹರಿರುತ್ತಾರೆ ಅರ್ಜಿ ಹೇಗೆ ಸಲ್ಲಿಸಬೇಕು ಎನ್ನುವ ವಿಚಾರವನ್ನು ತಿಳಿದುಕೊಳ್ಳಲು ಈ ಅಂಕಣವನ್ನು ಪೂರ್ತಿಯಾಗಿ ಓದಿ ಮತ್ತು ಈ ಉಪಯುಕ್ತ ಮಾಹಿತಿಯನ್ನು ತಪ್ಪದೆ ನಿಮ್ಮ ಕುಟುಂಬದವರು ಹಾಗೂ ಸ್ನೇಹಿತರ ಜೊತೆಗೂ ಹಂಚಿಕೊಳ್ಳಿ.
ಅರ್ಹತಾ ಮಾನದಂಡಗಳು:-
* ವೈಯಕ್ತಿಕ ಅರ್ಜಿದಾರರು B.Pharm / D.Pharm ಪದವಿ ಹೊಂದಿರಬೇಕು.
* ಖಾಸಗಿ ಸಂಸ್ಥೆಗಳು, NGOಗಳು, ವೈದ್ಯಕೀಯ ಕಾಲೇಜು, ಸರ್ಕಾರಿ ಆಸ್ಪತ್ರೆಗಳು, ಸಹಕಾರಿ ಸಂಸ್ಥೆಗಳು ಕೂಡ ಅರ್ಜಿ ಸಲ್ಲಿಸಲು ಅರ್ಹರಿರುತ್ತಾರೆ.
* ನೀವು ಔಷಧಿ ಕೇಂದ್ರವನ್ನು ತೆರೆಯಬೇಕು ಎಂದು ಬಯಸುವ ಸುತ್ತ 1km ಅಂತರದಲ್ಲಿ ಮತ್ತೊಂದು ಜನ ಔಷಧಿ ಕೇಂದ್ರ ಇರಬಾರದು.
* 120 ಚದರ ಅಡಿ ವ್ಯಾಪ್ತಿಯ ಮಳಿಗೆಯನ್ನು ನೀವು ಹೊಂದಿರಬೇಕು ಅಥವಾ ಬಾಡಿಗೆಗೆ ಪಡೆದಿರಬೇಕು.
ಸಿಗುವ ಸಹಾಯಧನ:-
* ಅರ್ಹರಿಗೆ ಸರ್ಕಾರವೇ ನಿಮಗೆ ರೂ.5ಲಕ್ಷ ಗಳ ಆರ್ಥಿಕ ಸಹಾಯ ನೀಡುತ್ತವೆ.
* ಮಹಿಳೆಯರು, ವಿಶೇಷ ಚೇತನರು ಪರಿಶಿಷ್ಟ ಜಾತಿ ಪರಿಶಿಷ್ಟ ಪಂಗಡ ಈಶಾನ್ಯ ದೇಶದವರು ಹಿಮಾಲಯದ ಗುಡ್ಡಗಾಡು ಪ್ರದೇಶದವರು ದೀಪಗಳು ಮತ್ತು 112 ಮಹಾತ್ವಾಕಾಂಕ್ಷೆ ಜಿಲ್ಲೆಯವರಿಗೆ ಹೆಚ್ಚುವರಿಯಾಗಿ 2 ಲಕ್ಷ ಸಹಾಯ ಸಿಗುತ್ತದೆ.
ಅರ್ಜಿ ಸಲ್ಲಿಸುವ ವಿಧಾನ:-
* Government of India, Ministry of Chemicals and
Fertilizers Department of Pharmaceuticals ಹೊರಡಿಸಿರುವ ಪ್ರಕಟಣೆಯಲ್ಲಿ ಈ ವಿಷಯದ ಕುರಿತು ಪೂರ್ತಿ ವಿವರ ತಿಳಿಸಲಾಗಿದೆ, ಸಂಪೂರ್ಣವಾಗಿ ಓದಿ ಅರ್ಥೈಸಿಕೊಳ್ಳಿ
* ನಂತರ onlineapp.pmbi.co.in ವೆಬ್ಸೈಟ್ ಗೆ ಭೇಟಿ ನೀಡುವ ಮೂಲಕ ನಿಮ್ಮ ವೈಯುಕ್ತಿಕ ವಿವರಗಳನ್ನು ಸಲ್ಲಿಸಿ, ಪೂರಕ ದಾಖಲೆಗಳನ್ನು ಸ್ಕ್ಯಾನ್ ಮಾಡಿ ಅಪ್ಲೋಡ್ ಮಾಡಿ ಅರ್ಜಿ ಹಾಕಿ ನೋಂದಾಯಿಸಿಕೊಳ್ಳಿ.
* ಅರ್ಜಿ ಶುಲ್ಕ ರೂ.5000 ಪಾವತಿ ಮಾಡಬೇಕು
* ಮಹಿಳೆಯರು, ವಿಶೇಷ ಚೇತನರು, ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ, ಈಶಾನ್ಯ ದೇಶದವರು, ಹಿಮಾಲಯದ ಗುಡ್ಡಗಾಡು ಪ್ರದೇಶದವರು, ದೀಪಗಳು ಮತ್ತು 112 ಮಹಾತ್ವಾಕಾಂಕ್ಷೆ ಜಿಲ್ಲೆಯವರಿಗೆ ಶುಲ್ಕ ವಿನಾಯಿತಿ ಇರುತ್ತದೆ.