Atal pension ಅಟಲ್ ಪೆನ್ಷನ್ ಯೋಜನೆಯಿಂದ ಸಿಗಲಿದೆ 5000 ಪಿಂಚಣಿ, ಇಲ್ಲಿದೆ ನೋಡಿ ಕಂಪ್ಲೀಟ್ ಡೀಟೇಲ್ಸ್.!

Atal pension

ಸರ್ಕಾರಿ ಉದ್ಯೋಗದಲ್ಲಿ ಇರುವವರಿಗೆ ರಿಟೈರ್ ಆದಮೇಲೆ ಪೆನ್ಷನ್ ಬರುತ್ತದೆ. ಸಂಘಟಿತ ವಲಯದಲ್ಲಿ ದುಡಿಯುವ ಕಾರ್ಮಿಕರಿಗೆ PF ಪಡೆಯುವ ಕಾರ್ಮಿಕರು ಕೂಡ ತಮ್ಮ PF ನಲ್ಲಿ ಅಲ್ಪ ಭಾಗವನ್ನು ಪಿಂಚಣಿಗಾಗಿ ಉಳಿಸಬಹುದು. ಆದರೆ ಅಸಂಘಟಿತ ವಲಯದಲ್ಲಿ ದುಡಿಯುವ ಕಾರ್ಮಿಕರಿಗೆ ಈ ರೀತಿ ಯಾವುದೇ ಹಣಕಾಸಿನ ಭದ್ರತೆ ಇರುವುದಿಲ್ಲ.

ಹಾಗಾಗಿ ಕೇಂದ್ರ ಸರ್ಕಾರವು ಇಂತಹ ಅಸಂಘಟಿತ ವಲಯದಲ್ಲಿ ದುಡಿಯುವವರನ್ನು ಗಮನದಲ್ಲಿಟ್ಟುಕೊಂಡು 2005ರಲ್ಲಿ ಅಟಲ್ ಪೆನ್ಷನ್ ಯೋಜನೆ (Atal Pension Scheme) ಎನ್ನುವ ಹೊಸ ಯೋಜನೆಯನ್ನು ಜಾರಿಗೆ ತಂದಿದೆ. ಈ ವೃದ್ಧಾಪ್ಯ ಪಿಂಚಣಿ ಯೋಜನೆಯಲ್ಲಿ ಹೂಡಿಕೆ ಮಾಡುವ ಮೂಲಕ 60 ವರ್ಷ ವಯಸ್ಸಾದ ಬಳಿಕ ಗರಿಷ್ಠ ರೂ.5000 ವರೆಗೆ ಕೂಡ ಮಾಸಿಕ ಪಿಂಚಣಿ ಪಡೆಯಬಹುದಾಗಿದೆ. ಈ ಯೋಜನೆ ಕುರಿತಾದ ಇನ್ನಷ್ಟು ವಿವರ ಹೀಗಿದೆ ನೋಡಿ.

WhatsApp Group Join Now
Telegram Group Join Now
ಈ ಸುದ್ದಿ ಓದಿ:- ಕೇವಲ 399 ರೂಪಾಯಿಗೆ ಸಿಗಲಿದೆ 10 ಲಕ್ಷ ಇನ್ಸೂರೆನ್ಸ್, ಇದು ಅಂಚೆ ಕಚೇರಿಯ ಬಂಪರ್ ಆಫರ್.!

ಯೋಜನೆಯ ಹೆಸರು:- ಅಟಲ್ ಪೆನ್ಷನ್ ಯೋಜನೆ

ಯೋಜನೆ ಕುರಿತ ಪ್ರಮುಖ ಅಂಶಗಳು:-

* 18 ವರ್ಷ ಮೇಲ್ಪಟ್ಟ 40ರ ವಯಸ್ಸಿನ ಒಳಗಿನ ಭಾರತೀಯ ಪ್ರಜೆ ಈ ಯೋಜನೆ ಖಾತೆ ತೆರೆಯಬಹುದು.
* ಮುಖ್ಯವಾದ ವಿಷಯವೇನೆಂದರೆ, ಅಸಂಘಟಿತ ವಲಯದಲ್ಲಿ ದುಡಿಯುವ ಕಾರ್ಮಿಕರಿಗೆ ಮಾತ್ರ ಈ ಯೋಜನೆ ಅನ್ವಯವಾಗುವುದು.
* ಪ್ರೀಮಿಯಂಗಳನ್ನು ಮಾಸಿಕವಾಗಿ ತ್ರೈಮಾಸಿಕವಾಗಿ ಅಥವಾ ಅರ್ಧ ವಾರ್ಷಿಕವಾಗಿ ಹೂಡಿಕೆ ಮಾಡಬಹುದು.

* ಕನಿಷ್ಠ ಹೂಡಿಕೆ ಅವಧಿ 20 ವರ್ಷಗಳು. ಕಡಿಮೆ ವಯಸ್ಸಿಗೆ ಯೋಜನೆ ಆರಂಭಿಸಿದರೆ ಕಡಿಮೆ ಮೊತ್ತದ ಪ್ರೀಮಿಯಂ ಗಳನ್ನು ಪಾವತಿಸಬಹುದು. ನೀವು ಪಾವತಿಸುವ ಪ್ರೀಮಿಯಂ ಆಧಾರದ ಮೇಲೆ 60 ವರ್ಷ ತುಂಬಿದ ಬಳಿಕ ರೂ.1000 ದಿಂದ ರೂ.5000 ದವರೆಗೆ ಪ್ರತಿ ತಿಂಗಳ ನಿಶ್ಚಿತ ಮಾಸಿಕ ಪಿಂಚಣಿ ಸಿಗುತ್ತದೆ.

ಈ ಸುದ್ದಿ ಓದಿ:- ಈ ತಳಿ ಹಸು ಸಾಕಿದರೆ ದಿನಕ್ಕೆ 10 ಲೀಟರ್ ಹಾಲು ಪಕ್ಕಾ, ನಿಮ್ಮ ಆದಾಯ ಡಬಲ್ ಆಗುವುದು ಗ್ಯಾರಂಟಿ.!

* 18ನೇ ವಯಸ್ಸಿನಲ್ಲಿ ಈ ಸ್ಕೀಮ್ ಪಡೆದರೆ ಒಟ್ಟು 42 ವರ್ಷಗಳ ಕಾಲ ಹೂಡಿಕೆ ಮಾಡಲು ಗರಿಷ್ಠ ಅವಕಾಶ ಸಿಗುತ್ತದೆ, ನಿಮ್ಮ ವಯಸ್ಸು 30 ವರ್ಷವಾಗಿದ್ದರೂ 30 ವರ್ಷ ಹೂಡಿಕೆಗೆ ಅವಕಾಶ ಇರುತ್ತದೆ.
* 18ನೇ ವಯಸ್ಸಿಗೆ ಹೂಡಿಕೆ ಮಾಡುವವರಿಗೆ ನಿಮ್ಮ ಕೊಡುಗೆಯ 50% ಸರ್ಕಾರ ಕೂಡ ನಿಮ್ಮ ಖಾತೆಗೆ ಜಮೆ ಮಾಡುತ್ತದೆ. 30 ವರ್ಷ ಮೇಲ್ಪಟ್ಟ ಮೇಲೆ ಖಾತೆ ತೆರೆದರೆ ರೂ.1000 ದಿಂದ ನಿಮ್ಮ ಪ್ರೀಮಿಯಂ ಆಧಾರದ ಮೇಲೆ ಸರ್ಕಾರದ ಕಡೆಯಿಂದ ಕೊಡುಗೆ ಇರುತ್ತದೆ.

* ನಿವೃತ್ತಿ ಬಳಿಕ ನೀವು ರೂ.1,000 ಪಿಂಚಣಿ ಪಡೆಯ ಬಯಸಿದರೆ 30ನೇ ವಯಸ್ಸಿಗೆ ಆರಂಭಿಸಿದರೆ ಪ್ರತೀ ತಿಂಗಳು ರೂ.116 ಪ್ರೀಮಿಯಂ 40ನೇ ವಯಸ್ಸಿನಲ್ಲಿ ಈ ಯೋಜನೆ ಖರೀದಿಸಿದರೆ ರೂ.1,000 ಪಿಂಚಣಿ ಪಡೆಯಲು 20 ವರ್ಷ ಕಾಲ ತಿಂಗಳಿಗೆ ರೂ.264 ಕಟ್ಟಬೇಕು.

ಈ ಸುದ್ದಿ ಓದಿ:- ಬಂಧನ್ ಬ್ಯಾಂಕ್ ನಲ್ಲಿ ಉದ್ಯೋಗವಕಾಶ, PUC ಆಗಿದ್ದರೆ ಸಾಕು, ಆಸಕ್ತರು ಅರ್ಜಿ ಸಲ್ಲಿಸಿ.!

* ರೂ.5,000 ಮಾಸಿಕ ಪಿಂಚಣಿ ಪಡೆಯಬೇಕಾದರೆ 30ನೇ ವಯಸ್ಸಿನಿಂದ 30 ವರ್ಷ ಕಾಲ ತಿಂಗಳಿಗೆ ರೂ.577 ಪ್ರೀಮಿಯಂ ಕಟ್ಟಬೇಕು, 40ನೇ ವಯಸ್ಸಿನಲ್ಲಿ ಸ್ಕೀಮ್ ಆರಂಭಿಸಿದರೆ ತಿಂಗಳಿಗೆ ರೂ.1,318 ಕಟ್ಟಬೇಕು.

* ಒಂದು ವೇಳೆ ಸದಸ್ಯನು ಮೃ’ತಪಟ್ಟರೆ ನಾಮಿನಿಗೆ ಪರಿಹಾರ ಸಿಗುತ್ತದೆ. 1,000 ರೂ ಮಾಸಿಕ ಪಿಂಚಣಿ ಪಡೆಯುತ್ತಿರುವವರು ಮೃತಪಟ್ಟರೆ ನಾಮಿನಿಗೆ ರೂ.1.7 ಲಕ್ಷ, ರೂ.5,000 ಪೆನ್ಷನ್ ಪಡೆಯುತ್ತಿರುವವರು ಮೃ’ತಪಟ್ಟರೆ ಅವರ ವಾರಸುದಾರರಿಗೆ ರೂ.8.5 ಲಕ್ಷ ಸಿಗುತ್ತದೆ.

* ಯಾವುದೇ ರಾಷ್ಟ್ರೀಕೃತ ಬ್ಯಾಂಕ್​ ನಲ್ಲಿ ಈ ಸ್ಕೀಮ್ ಆರಂಭಿಸಬಹುದು. ಆನ್ಲೈನಲ್ಲಿ ಮತ್ತು ಆಫ್ಲೈನ್ ಅಲ್ಲಿ ಎರಡು ವಿಧಾನದಲ್ಲೂ ಕೂಡ ಯೋಜನೆಯ ಖಾತೆ ತೆರೆಯುವುದಕ್ಕೆ ಅವಕಾಶವಿದೆ. ಹೆಚ್ಚಿನ ಮಾಹಿತಿಗಾಗಿ ಹತ್ತಿರದಲ್ಲಿರುವ ಯಾವುದೇ ಬ್ಯಾಂಕ್ ಶಾಖೆಗೆ ಅಥವಾ ಅಂಚೆಕಛೇರಿಗೆ ಭೇಟಿ ನೀಡಿ.

ಸರ್ಕಾರಿ ಯೋಜನೆ, ಸರ್ಕಾರಿ ಉದ್ಯೋಗಗಳು,ಮತ್ತು ಖಾಸಗಿ ಕಂಪನಿ ಉದ್ಯೋಗದ ಬಗ್ಗೆ ದೈನಂದಿನ ಮಾಹಿತಿಯನ್ನು ಪಡೆಯಲು ನಮ್ಮ needs of ಕನ್ನಡ WhatsApp ಗ್ರೂಪ್ ಮತ್ತು ಟೆಲಿಗ್ರಾಮ್ ಚಾನಲ್‌ಗೆ ಜಾಯಿನ್ ಆಗಿರಿ
WhatsApp Group Join Now
Telegram Group Join Now

Leave a Comment