Shed
ಕೃಷಿ ಜೊತೆಗೆ ಕೃಷಿಗೆ ಹೊಂದಿಕೊಂಡ ಪೂರಕ ಕಸಬುಗಳಾದ ಪಶುಸಂಗೋಪನೆ, ಹೈನುಗಾರಿಕೆ, ಕೋಳಿ ಸಾಕಾಣಿಕೆ, ಕುರಿ ಸಾಕಾಣಿಕೆ, ಮೀನುಗಾರಿಕೆ, ಜೇನು ಸಾಕಾಣಿಕೆ, ರೇಷ್ಮೆ ಸಾಕಾಣಿಕೆ ಇವುಗಳಿಂದ ಕೂಡ ರೈತನ ಕುಟುಂಬದ ನಿತ್ಯ ಜೀವನ ಸಾಗುತ್ತದೆ. ಹಾಗಾಗಿ ಕೃಷಿ ಚಟುವಟಿಕೆಯಂತೆ ಈ ಕಸುಬುಗಳಿಗೂ ಕೂಡ ಅಷ್ಟೇ ಪ್ರಾಮುಖ್ಯತೆಯನ್ನು ರೈತ ನೀಡುತ್ತಾನೆ.
ಸರ್ಕಾರಗಳು ಕೂಡ ಇವುಗಳಿಂದ ಆಹಾರ ಕೊರತೆ ನೀಗುವುದರ ಜೊತೆಗೆ ರೈತನ ಆದಾಯ ಕೂಡ ಹೆಚ್ಚಾಗುತ್ತಿರುವುದರಿಂದ ಈ ಚಟುವಟಿಕೆಗಳಿಗೆ ಪ್ರೋತ್ಸಾಹ ನೀಡುತ್ತಲೇ ಬಂದಿದೆ. ಇದಕ್ಕಾಗಿ ಹಲವಾರು ವಿಶೇಷ ಯೋಜನೆಗಳನ್ನು ಕೂಡ ಜಾರಿಗೆ ತಂದಿದೆ ಇಂತಹದ್ದೇ ಒಂದು ವಿಶೇಷ ಯೋಜನೆಯಲ್ಲಿ ಕೆಲವು ಮಾರ್ಪಾಟುಗಳನ್ನು ಮಾಡಿ ರೈತರಿಗೆ ಗುಡ್ ನ್ಯೂಸ್ ನೀಡಲಾಗಿದೆ.
ಅದೇನೆಂದರೆ, ಇನ್ನು ಮುಂದೆ ಎಲ್ಲ ವರ್ಗದ ರೈತರಿಗೂ ಕೂಡ ಕುರಿ, ಕೋಳಿ, ದನ ಸಾಕಾಣಿಕೆಗೆ ಶೆಡ್ ನಿರ್ಮಿಕೊಳ್ಳಲು ಸಮಾನ ಸಹಾಯಧನ ಸಿಗಲಿದೆ. ಇದರ ಕುರಿತಾದ ವಿವರ ಹೀಗಿದೆ ನೋಡಿ ಮಹಾತ್ಮ ಗಾಂಧಿ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯಡಿ (NREGA) ಜಾಬ್ ಕಾರ್ಡ್ ಹೊಂದಿರುವ ಪ್ರತಿ ವ್ಯಕ್ತಿಗೂ ವಾರ್ಷಿಕವಾಗಿ 100 ದಿನಗಳ ಉದ್ಯೋಗ ಖಾತರಿ ನೀಡಲಾಗುತ್ತಿದೆ.
ಈ ಸುದ್ದಿ ಓದಿ:-Unemployed: ಕೆಲಸ ಬಿಟ್ಟವರಿಗೆ ಗುಡ್ ನ್ಯೂಸ್: ಸರ್ಕಾರ ನಿಮಗೆ ತಿಂಗಳಿಗೆ ನೀಡಲಿದೆ 25,000 ರೂಪಾಯಿ.!
ಗ್ರಾಮೀಣ ಭಾಗದ ಎಲ್ಲಾ ಜನರಿಗೂ ಈ ಅವಕಾಶವನ್ನು ನೀಡಲಾಗಿದೆ ಮತ್ತು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ವತಿಯಿಂದ ಆಯಾ ಗ್ರಾಮ ಪಂಚಾಯಿತಿಯಲ್ಲಿ ರೈತರಿಗಾಗಿ ನೀಡಲಾಗುವ ವಿಶೇಷ ಯೋಜನೆಗಳ ಮೂಲಕ ಈ ಉದ್ಯೋಗ ಸೃಷ್ಟಿಸಲಾಗುತ್ತಿದೆ. ಆದರೆ ಇಂತಹ ಯೋಜನೆಗಳ ಅನುದಾನ ಪಡೆದುಕೊಳ್ಳುವ ರೈತರಿಗೆ ವರ್ಗಾವಾರು ಸಹಾಯಧನ ಸೀಮಿತವಾಗುತ್ತಿತ್ತು.
ಆದರೆ ಈಗ ರಾಜ್ಯದಲ್ಲಿ ದನದ ಶೆಡ್, ಕುರಿ ಕೋಳಿ ಶೆಡ್ ನಿರ್ಮಾಣ ಮಾಡಿಕೊಳ್ಳುವ ರೈತರೆಲ್ಲರಿಗೂ ಒಂದೇ ರೀತಿಯ ಸಹಾಯಧನವನ್ನು ನೀಡಲಾಗುತ್ತಿದೆ. ಒಟ್ಟಾರೆಯಾಗಿ ಈ ಯೋಜನೆಗಳಿಗೆ ಅರ್ಜಿ ಸಲ್ಲಿಸಿ ಪೂರಕ ದಾಖಲೆಗಳೊಂದಿಗೆ ಅರ್ಹನೆಂದು ಅನುಮೋದನೆಗೊಳ್ಳುವ ಪ್ರತಿ ರೈತನಿಗೂ ಶೆಡ್ ನಿರ್ಮಾಣಕ್ಕೆ ರೂ.57,000 ಸಹಾಯಧನವನ್ನು ಸರ್ಕಾರದಿಂದ ನೀಡಲಾಗುತ್ತಿದೆ. ಇದಕ್ಕಿರುವ ಕಂಡೀಷನ್ ಏನು? ಅರ್ಜಿ ಸಲ್ಲಿಸುವುದು ಹೇಗೆ? ಏನೆಲ್ಲಾ ದಾಖಲೆಗಳನ್ನು ನೀಡಬೇಕು? ಎಲ್ಲಿ ಅರ್ಜಿ ಸಲ್ಲಿಸಬೇಕು? ಇತ್ಯಾದಿ ವಿವರ ಹೀಗಿದೆ.
ಅರ್ಜಿ ಸಲ್ಲಿಸಲು ಕಂಡಿಷನ್ ಗಳು:-
* ಕರ್ನಾಟಕದ ರೈತರು ಮಾತ್ರ ಈ ಯೋಜನೆಗೆ ಅರ್ಹರಾಗಿರುತ್ತಾರೆ.
* ಈ ಯೋಜನೆಯಲ್ಲಿ ಶೆಡ್ ನಿರ್ಮಾಣ ಮಾಡಲು ರೈತನು ತನ್ನ ಹೆಸರಿನಲ್ಲಿ ಸ್ವಂತ ಜಮೀನು ಹೊಂದಿರಬೇಕು.
* ಕುರಿ, ಕೋಳಿ, ಮೇಕೆ ಸಾಕಾಣಿಕೆ ಹಾಗೂ ಹೈನುಗಾರಿಕೆ ಮತ್ತು ಮೀನುಗಾರಿಕೆಯಲ್ಲಿ ತೊಡಗಿರಬೇಕು, ಇದಕ್ಕೆ ಕೇಳಲಾಗುವ ಪೂರಕ ದಾಖಲೆಗಳನ್ನೆಲ್ಲ ಒದಗಿಸಬೇಕು.
* ನಾಲ್ಕು ಜಾನುವಾರಿಗಳಿಗಿಂತ ಹೆಚ್ಚಿನ ಸಂಖ್ಯೆಯ ಜಾನುವಾರುಗಳನ್ನು ಹೊಂದಿರುವ ರೈತರು ಮಾತ್ರ ಈ ಅರ್ಜಿಯನ್ನು ಸಲ್ಲಿಸಬಹುದು.
* ಪಶು ವೈದ್ಯಾಧಿಕಾರಿಗಳಿಂದ ದೃಡೀಕರಣ ಪತ್ರವನ್ನು ಪಡೆಯಬೇಕು.
* ಈ ಯೋಜನೆಯಡಿ ಸೂಚಿಸಿರುವ ಅಳತೆ ಅನುಸಾರವಾಗಿ ಮತ್ತು ಸೂಚಿಸಿರುವ ಮಾದರಿಯಲ್ಲಿಯೇ ಶೆಡ್ ನಿರ್ಮಾಣ ಆಗಬೇಕು. ಮುಖ್ಯವಾಗಿ ದನದ ಶೆಡ್ ನಿರ್ಮಾಣ ಮಾಡುವಾಗ 5 ಅಡಿ ಎತ್ತರ, 10 ಅಡಿಯ ಅಗಲ ಮತ್ತು 18 ಅಡಿಗಳ ಗೋಡೆಯನ್ನು ಹೊಂದಿರಬೇಕು. ಗೋಡೆಯ ಜೊತೆಯೇ ಗೋದಲಿ ಮೇವು ತೊಟ್ಟಿ ಕೂಡ ಇರಬೇಕು.
ಅರ್ಜಿ ಸಲ್ಲಿಸಲು ಬೇಕಾಗುವ ದಾಖಲೆಗಳು:-
* ರೈತನ ಆಧಾರ್ ಕಾರ್ಡ್
* ಬ್ಯಾಂಕ್ ಪಾಸ್ ಬುಕ್ ನ ವಿವರ
* ಜಾನುವಾರುಗಳಿಗೆ ಪಡೆದಂತ ವೈದ್ಯಕೀಯ ದೃಡೀಕರಣ ಪತ್ರ
* ಮೀಸಲಾತಿ ವ್ಯಾಪ್ತಿಗೆ ಬರುವ ರೈತರಿಗೆ ಜಾತಿ ಮತ್ತು ಆದಾಯ ಪ್ರಮಾಣ ಪತ್ರ
* ನಿಗದಿತ ಅರ್ಜಿಯ ಫಾರಂ
* ಇನ್ನಿತರ ಪ್ರಮುಖ ದಾಖಲೆಗಳು
ಅರ್ಜಿ ಸಲ್ಲಿಸುವ ವಿಧಾನ:-
* ನಿಮ್ಮ ಗ್ರಾಮ ಪಂಚಾಯಿತಿ ಕಚೇರಿಗೆ ಭೇಟಿಕೊಟ್ಟು ಅರ್ಜಿ ಸಲ್ಲಿಸಬಹುದು ಅಥವಾ ಆನ್ಲೈನ್ ನಲ್ಲಿ ಕೂಡ ಅಪ್ಲೈ ಮಾಡಬಹುದು