Pension:‌ ಪಿಂಚಣಿದಾರರಿಗೆ ಕೇಂದ್ರ ಸರ್ಕಾರದಿಂದ ಗುಡ್ ನ್ಯೂಸ್ ಇನ್ಮುಂದೆ ಮಾಸಿಕ 7,500 ಪೆನ್ಷನ್ ಲಭ್ಯ.!

‌Pension

ನಿವೃತ್ತಿಯ ಯೋಜನೆ(Retirement Planning) ಪ್ರತಿಯೊಬ್ಬರ ಜೀವನದಲ್ಲಿ ನಿರ್ಣಾಯಕ ಅಂಶವಾಗಿದೆ. ಏರುತ್ತಿರುವ ಹಣದುಬ್ಬರ ಮಟ್ಟ ಮತ್ತು ಹಿರಿಯ ನಾಗರಿಕರಿಗೆ(Senior citizens) ಸೀಮಿತ ಸಾಮಾಜಿಕ ಭದ್ರತಾ ಉಪಕ್ರಮಗಳನ್ನು ಪರಿಗಣಿಸಿ, ನಿಮ್ಮ ನಿವೃತ್ತಿಯನ್ನು ಮೊದಲೇ ಯೋಜಿಸಲು ಪ್ರಾರಂಭಿಸುವುದು ಅತ್ಯಗತ್ಯ ಇಂದು ಎಲ್ಲರೂ ತಮ್ಮ ನಿವೃತ್ತಿಯ ಜೀವನ(Retirement life)ಕ್ಕೆ ಹಲವಾರು ದಾರಿಗಳನ್ನು ಕಂಡು ಕೊಂಡಿದ್ದಾರೆ.

ಈ ಸುದ್ದಿ ಓದಿ:- Ration card‌ Update: ರೇಷನ್ ಕಾರ್ಡ್‌ ತಿದ್ದುಪಡಿ ಆರಂಭ.!

ಬಹುತೇಕ ಜನರು ತಮ್ಮ ನಿವೃತ್ತಿಯ ಜೀವನ ಸುಖಕರವಾಗಿರಲು ತಮ್ಮ ಉದ್ಯೋಗ(employment)ದ ಸಮಯದಲ್ಲಿ ಹಲವಾರು ಯೋಜನೆಗಳಲ್ಲಿ ಹೂಡಿಕೆ (Investment) ಮಾಡಿರುತ್ತಾರೆ. ಹಾಗೆಯೇ, ಅವುಗಳು ತಮ್ಮ ವೃದ್ಧಾಪ್ಯ(old age) ಸಮಯದಲ್ಲಿ ಉಪಯೋಗಕ್ಕೆ ಬರುತ್ತವೆ. ಹಾಗೆಯೇ, ಇನ್ನು ಕೆಲವರಿಗೆ ತಮ್ಮ ಉದ್ಯೋಗದ ಪೆನ್ಷನ್ (Employment Pension) ದೊರೆಯುತ್ತದೆ.

WhatsApp Group Join Now
Telegram Group Join Now

ಅಲ್ಪ ಮಟ್ಟಿಗೆ ತಮಗೆ ದೊರೆಯುವ ಪೆನ್ಷನ್ ಪಡೆದು ತಮ್ಮ ಜೀವನ ನಡೆಸುತ್ತಾರೆ ಹಾಗೆಯೇ, ಇದೀಗ ಕೇಂದ್ರ ಸರ್ಕಾರ(Central Govt)ದ ವತಿಯಿಂದ ಪಿಂಚಣಿ ದಾರರಿಗೆ ಕನಿಷ್ಠ 7,500 ರೂ. ದೊರೆಯುತ್ತದೆ. ಅದರ ಬಗ್ಗೆ ಸಂಪೂರ್ಣ ಮಾಹಿತಿಯನ್ನು ಇಂದಿನ ಈ ಲೇಖನದಲ್ಲಿ ತಿಳಿದುಕೊಳ್ಳೋಣ ಬನ್ನಿ.!

ಈ ಸುದ್ದಿ ಓದಿ:- Jio sim: ಜಿಯೋ ಸಿಮ್ ಗ್ರಾಹಕರಿಗೆ ಗುಡ್‌‌ ನ್ಯೂಸ್

ಪಿಂಚಣಿ ಅಥವಾ ನಿವೃತ್ತಿ ಯೋಜನೆಗಳು ಹೂಡಿಕೆ ಮತ್ತು ವಿಮಾ ರಕ್ಷಣೆಯ ಎರಡು ಪ್ರಯೋಜನಗಳನ್ನು ನೀಡುತ್ತವೆ. ನಿಮ್ಮ ಪಿಂಚಣಿ ಯೋಜನೆಗೆ ನಿಯಮಿತವಾಗಿ ನಿರ್ದಿಷ್ಟ ಮೊತ್ತವನ್ನು ಹೂಡಿಕೆ ಮಾಡುವ ಮೂಲಕ, ನೀವು ಹಂತ-ಹಂತದ ರೀತಿಯಲ್ಲಿ ಗಣನೀಯ ಮೊತ್ತವನ್ನು ಸಂಗ್ರಹಿಸುತ್ತೀರಿ. ನೀವು ನಿವೃತ್ತರಾದ ನಂತರ, ಇದು ಹಣವನ್ನು ಖಚಿತಪಡಿಸುತ್ತದೆ.

ಪಿಂಚಣಿ ಮುಖ್ಯ ಉದ್ದೇಶ.?

ಪಿಂಚಣಿ ಮೊತ್ತ(Pension amount)ವು ವೃದ್ಧ ದಂಪತಿಗಳು ಬದುಕುವುದು ಕಷ್ಟಕರವಾಗಿದೆ. ಪಿಂಚಣಿದಾರರ ಸಂಗಾತಿಗೆ ತುಟ್ಟಿಭತ್ಯೆ(Tuttibhaty) ಮತ್ತು ಉಚಿತ ಆರೋಗ್ಯ ಸೌಲಭ್ಯ(Free health facility)ಗಳೊಂದಿಗೆ ಈ ಪಿಂಚಣಿ ದೊರಕಬೇಕು.

ಪ್ರಸ್ತುತ ಪಿಂಚಣಿದಾರರಿಗೆ ಮಾಸಿಕ ಸರಾಸರಿ 1450 ರೂ. ಪಿಂಚಣಿ ನೀಡಲಾಗುತ್ತಿದೆ. 36 ಲಕ್ಷ ಪಿಂಚಣಿದಾರರಿಗೆ ಮಾಸಿಕ ಒಂದು ಸಾವಿರಕ್ಕಿಂತಲೂ ಕಡಿಮೆ ಪಿಂಚಣಿ ಸಿಗುತ್ತಿದ್ದು, ಇದನ್ನು 7500 ರೂ.ಗೆ ಹೆಚ್ಚಳ ಮಾಡಿದಲ್ಲಿ ಜೀವನ ಭದ್ರತೆಗೆ ಅನುಕೂಲವಾಗುತ್ತದೆ. ಎಂಬುದು ಈ ಪಿಂಚಣಿಯ ಮುಖ್ಯ ಉದ್ದೇಶವಾಗಿದೆ.

78 ಲಕ್ಷ ಪಿಂಚಣಿದಾರರಿಗೆ ಮಾಸಿಕ 7500 ರೂ. ಪಿಂಚಣಿ

ಕೈಗಾರಿಕೆ, ಸಾರ್ವಜನಿಕ, ಸಹಕಾರ, ಖಾಸಗಿ ವಲಯದಲ್ಲಿರುವ ಒಟ್ಟು 78 ಲಕ್ಷ ಪಿಂಚಣಿದಾರರಿಗೆ (pensioners) ಕನಿಷ್ಠ ಮಾಸಿಕ 7500 ರೂ. ಪಿಂಚಣಿ ನೀಡುವ ಬಗ್ಗೆ ಪರಿಶೀಲನೆ ನಡೆಸಿ ಅದರ ಬಗ್ಗೆ ಸಂಪೂರ್ಣ ಜವಾಬ್ದಾರಿಯನ್ನು ಕೇಂದ್ರ ಸರ್ಕಾರ (central government) ವಹಿಸಿಕೊಂಡಿದೆ. ಅಷ್ಟೇ ಅಲ್ಲದೆ ಇಪಿಎಸ್ -95 ರಾಷ್ಟ್ರೀಯ ಆಂದೋಲನ ಸಮಿತಿ ಇದರ ಬಗ್ಗೆ ಮಾಹಿತಿ ನೀಡಿದೆ.

ಹಾಗೂ ಪಿಂಚಣಿ ಹೆಚ್ಚಳಕ್ಕೆ ಒತ್ತಾಯಿಸಿ ನವದೆಹಲಿಯಲ್ಲಿ ಕಳೆದ ಶುಕ್ರವಾರ ಹೋರಾಟ ಕೈಗೊಳ್ಳಲಾಗಿತ್ತು. ಸಮಿತಿಯ ಪ್ರತಿನಿಧಿಗಳು ಕೇಂದ್ರ ಕಾರ್ಮಿಕ ಮತ್ತು ಉದ್ಯೋಗ ಸಚಿವರಾದ ಮನ್ ಸುಖ್ ಮಾಂಡವೀಯಾ ಅವರನ್ನು ಭೇಟಿಯಾಗಿ ಸಮಾಲೋಚನೆ ನಡೆಸಿದ್ದಾರೆ. ಹಾಗೆಯೇ, ಪಿಂಚಣಿ ಹೆಚ್ಚಳದ ಬಗ್ಗೆ ಪ್ರಧಾನಿ ನರೇಂದ್ರ ಮೋದಿಯವರೊಂದಿಗೆ (PM Narendra Modi) ಚರ್ಚೆ ನಡೆಸಿದ ನಂತರ ಅಗತ್ಯ ಕ್ರಮ ಕೈಗೊಳ್ಳಲಾಗುವುದು ಎಂದು ಸಚಿವರು ತಿಳಿಸಿದ್ದಾರೆ.

ಪಿಂಚಣಿ ಹೆಚ್ಚಳಕ್ಕಾಗಿ ಪ್ರತಿಭಟನೆಗೆ ಕರೆ

ಇಪಿಎಸ್-95 ವ್ಯಾಪ್ತಿಗೆ ಒಳಪಡುವ ಪಿಂಚಣಿದಾರರು ಮತ್ತು ಉದ್ಯೋಗಿಗಳು ತಿಂಗಳಿಗೆ ಕನಿಷ್ಠ ಮಾಸಿಕ 7500 ರೂ. ಪಿಂಚಣಿದಾರರ ಸಂಸ್ಥೆ ಇಪಿಎಸ್-95 ರಾಷ್ಟ್ರೀಯ ಆಂದೋಲನ ಸಮಿತಿಯು ರಾಷ್ಟ್ರ ರಾಜಧಾನಿಯ ಜಂತರ್ ಮಂತರ್‌ನಲ್ಲಿ ಪ್ರತಿಭಟನೆಗೆ ಕರೆ ನೀಡಿದೆ. ಮಾರು 7.8 ಮಿಲಿಯನ್ ಪಿಂಚಣಿದಾರರು ಹಲವು ವರ್ಷಗಳಿಂದ ಕನಿಷ್ಠ ಪಿಂಚಣಿಯನ್ನು ಹೆಚ್ಚಿಸಲು ಇಪಿಎಫ್‌ಒ ಬಾಗಿಲು ತಟ್ಟುತ್ತಿದ್ದಾರೆ. ಆದರೆ, ಸರ್ಕಾರವು ಅವರ ಬೇಡಿಕೆಗಳನ್ನು ಪರಿಹರಿಸಿಲ್ಲ ಎಂದು ಸಮಿತಿಯು ಹೇಳಿಕೆಯಲ್ಲಿ ತಿಳಿಸಿದೆ.

ಸರ್ಕಾರಿ ಯೋಜನೆ, ಸರ್ಕಾರಿ ಉದ್ಯೋಗಗಳು,ಮತ್ತು ಖಾಸಗಿ ಕಂಪನಿ ಉದ್ಯೋಗದ ಬಗ್ಗೆ ದೈನಂದಿನ ಮಾಹಿತಿಯನ್ನು ಪಡೆಯಲು ನಮ್ಮ Kannada Trend News WhatsApp ಗ್ರೂಪ್ ಮತ್ತು ಟೆಲಿಗ್ರಾಮ್ ಚಾನಲ್‌ಗೆ ಜಾಯಿನ್ ಆಗಿರಿ
WhatsApp Group Join Now
Telegram Group Join Now

Leave a Comment