PM Modi: ದೇಶದ ಎಲ್ಲಾ ರೈತರಿಗೆ ಮೋದಿ ಕಡೆಯಿಂದ ಗುಡ್ ನ್ಯೂಸ್, ಸಹಿ ಮಾಡಿದ ನರೇಂದ್ರ ಮೋದಿ.
ದೇಶದ ಎಲ್ಲಾ ರೈತರಿಗೆ ಮೋದಿ ಕಡೆಯಿಂದ ಗುಡ್ ನ್ಯೂಸ್
PM Kisan 17th Installment Update: ಕೇಂದ್ರದ ಮೋದಿ ಸರ್ಕಾರ ದೇಶದ ರೈತರಿಗಾಗಿ PM Kisan ಯೋಜನೆಯನ್ನು ಪರಿಚಯಿಸಿರುವ ಬಗ್ಗೆ ಎಲ್ಲರಿಗು ತಿಳಿದೇ ಇದೆ. ದೇಶದ ಕೋಟ್ಯಾಂತರ ರೈತರು PM Kisan ಯೋಜನೆಯಡಿ ಹಣವನ್ನು ಪಡೆಯುತ್ತಿದ್ದಾರೆ. ಮೋದಿ ಸರ್ಕರ ಈವರೆಗೆ 16 ಕಂತುಗಳ ಹಣವನ್ನು ರೈತರ ಖಾತೆಗೆ ಜಮಾ ಮಾಡಿದೆ. ರೈತರು ಈ ಹಣವನ್ನು ತಮ್ಮ ಕೃಷಿಗಾಗಿ ಬಳಸಿಕೊಂಡಿದ್ದಾರೆ.
ಸದ್ಯ ಸರ್ಕಾರ 17 ನೇ ಕಂತಿನ ಹಣವನ್ನು ಬಿಡುಗಡೆ ಮಾಡಬೇಕಿದೆ. ಕಿಸಾನ್ ಫಲಾನುಭವಿಗಳು 17 ನೇ ಕಂತಿನ ಬರುವಿಕೆಗಾಗಿ ಕಾಯುತ್ತಿದ್ದಾರೆ. ಲೋಕಸಭಾ ಚುನಾವಣೆಯ ಬಳಿಕ 17 ನೇ ಕಂತಿನ ಹಣ ಬಿಡುಗಡೆ ಆಗುತ್ತದೆ ಎಂದು ರೈತರು ಕಾಯುತ್ತಿದ್ದರು. ಸದ್ಯ ಲೋಕಸಭಾ ಚುನಾವಣೆ ಮುಗಿದಿದ್ದು, ಇದೀಗ ದೇಶದ ಎಲ್ಲಾ ರೈತರಿಗೆ ಮೋದಿ ಸಿಹಿ ಸುದ್ದಿ ನೀಡಿದ್ದಾರೆ.
ದೇಶದ ಎಲ್ಲಾ ರೈತರಿಗೆ ಮೋದಿ ಕಡೆಯಿಂದ ಗುಡ್ ನ್ಯೂಸ್
ಲೋಕಸಭಾ ಚುನಾವಣೆಯಲ್ಲಿ BJP ಸರ್ಕಾರ ಹೆಚ್ಚು ಸ್ಥಾನವನ್ನು ಗೆಲ್ಲುವ ಮೂಲಕ ಈ ಬಾರಿ ಕೇಂದ್ರದಲ್ಲಿ ಅಧಿಕಾರವನ್ನು ಪಡೆಯಲು ಅರ್ಹತೆಯನ್ನು ಪಡೆದುಕೊಂಡಿದೆ. NDA ಸಹಭಾಗಿತ್ವದೊಂದಿಗೆ BJP ಸರ್ಕಾರ ರಚನೆಗೊಂಡಿದೆ. ಜೂನ್ 9 ರಂದು ಸತತ ಮೂರನೇ ಬಾರಿಗೆ ದೇಶದ ಪ್ರಧಾನಿಯಾಗಿ ನರೇಂದ್ರ ಮೋದಿ ಅವರು ಪ್ರಮಾಣವಚನ ಸ್ವೀಕರಿಸಿದ್ದಾರೆ. ಮೋದಿ ಪ್ರಮಾಣವಚನ ಸ್ವೀಕರಿಸಿ ಮೂರನೇ ಬಾರಿಗೆ ಪ್ರಧಾನಿ ಸ್ಥಾನವನ್ನು ಪಡೆದ ಬೆನ್ನಲ್ಲೇ ದೇಶದ ರೈತರಿಗೆ ಸಿಹಿ ಸುದ್ದಿ ನೀಡಿದ್ದಾರೆ. 17 ನೇ ಕಂತಿನ ಕಿಸಾನ್ ಹಣಕ್ಕಾಗಿ ಕಾಯುತ್ತಿದ್ದವರಿಗೆ ಮೋದಿ ಸರ್ಕಾರದಿಂದ ಬಿಗ್ ಅಪ್ಡೇಟ್ ಹೊರಬಿದ್ದಿದೆ.
ಸಹಿ ಮಾಡಿದ ನರೇಂದ್ರ ಮೋದಿ
ಸದ್ಯ ನರೇಂದ್ರ ಮೋದಿ ಅವರು PM Kisan ಯೋಜನೆಯ 17 ನೇ ಕಂತಿನ ಹಣದ ಬಿಡುಗಡೆಗೆ ಸಹಿ ಮಾಡಿದ್ದಾರೆ. ಈ ಮೂಲಕ ದೇಶದ ಕಿಸಾನ್ ಫಲಾನುಭವಿಗಳಿಗೆ ಸಿಹಿ ಸುದ್ದಿ ನೀಡಿದ್ದಾರೆ. ಪ್ರಧಾನಮಂತ್ರಿ ಕಿಸಾನ್ ನಿಧಿಯ 17ನೇ ಕಂತಿನ ಬಿಡುಗಡೆಗೆ ಅಧಿಕಾರ ನೀಡುವ ಮೊದಲ ಕಡತಕ್ಕೆ ಪ್ರಧಾನಿ ನರೇಂದ್ರ ಮೋದಿ ಸಹಿ ಹಾಕಿದ್ದಾರೆ. ಇದರಿಂದ 9.3 ಕೋಟಿ ರೈತರಿಗೆ ಅನುಕೂಲವಾಗಲಿದೆ. ಪ್ರಧಾನ ಮಂತ್ರಿ ಕಿಸಾನ್ ನಿಧಿಯ 17ನೇ ಕಂತಿಗಾಗಿ ಸುಮಾರು 20,000 ಕೋಟಿ ರೂ. ಹಣವನ್ನು ಬಿಡುಗಡೆ ಮಾಡಲಾಗಿದೆ. ಶೀಘ್ರದಲ್ಲೇ ಕಿಸಾನ್ ಫಲಾನುಭವಿಗಳು 17 ನೇ ಕಂತಿನ 2000 ಹಣವನ್ನು ಪಡೆಯಬಹುದು. ಜೂನ್- ಜುಲೈ ನಲ್ಲಿ 17 ನೇ ಕಂತಿನ ಹಣ ರೈತರ ಖಾತೆಗೆ ಜಮಾ ಆಗಲಿದೆ.