Railway:- ರೈಲ್ವೇ ನೇಮಕಾತಿ, PUC ಪಾಸ್ ಆಗಿದ್ದರೆ ಸಾಕು ಅರ್ಜಿ ಹಾಕಿ.! 1,12,400 ಮಾಸಿಕ ವೇತನ/-

Railway

ಪ್ರತಿ ವರ್ಷವೂ ರೈಲ್ವೆ ಇಲಾಖೆ ವತಿಯಿಂದ ಸಾವಿರಾರು ಹುದ್ದೆಗಳಿಗೆ ನೇಮಕಾತಿ ಕಾರ್ಯ ನಡೆಯುತ್ತದೆ. RRB ಜವಾಬ್ದಾರಿಯುತವಾಗಿ ತೆರವಾಗುವ ಹುದ್ದೆಗಳಿಗೆ ನೇಮಕಾತಿ ಮಾಡುವ ಪ್ರಕ್ರಿಯೆ ನಡೆಸುತ್ತಿದ್ದು, ಈ ವರ್ಷದಲ್ಲಿ ಮತ್ತೊಂದು ನೋಟಿಫಿಕೇಶನ್ ಹೊರಟಿಸಿದೆ.

ಈ ಬಾರಿ ಅಂಡರ್‌ ಗ್ರಾಜುಯೇಟ್‌ ಅರ್ಹತೆಯ ನಾನ್‌ ಟೆಕ್ನಿಕಲ್ ಪಾಪ್ಯುಲರ್ ಕೆಟಗರಿಯ (NTPC) ಹುದ್ದೆಗಳಿಗೆ ನೇಮಕಾತಿ ಮಾಡಿಕೊಳ್ಳುತ್ತಿದ್ದು ಈ ಕುರಿತು ಇದೀಗ ನೋಟಿಫಿಕೇಶನ್‌ ಕೂಡ ಬಿಡುಗಡೆ ಮಾಡಿದೆ.

WhatsApp Group Join Now
Telegram Group Join Now

ಕೇಂದ್ರ ಸರ್ಕಾರದ ಹುದ್ದೆ ಪಡೆಯಲು ಆಸಕ್ತಿ ಹೊಂದಿರುವ ಮಹಿಳಾ ಮತ್ತು ಪುರುಷ ಅಭ್ಯರ್ಥಿಗಳು ಈ ಹುದ್ದೆ ಪಡೆಯಲು ಪ್ರಯತ್ನಿಸಬಹುದು, ಕರ್ನಾಟಕದಲ್ಲಿ ಕೂಡ ಸಾಕಷ್ಟು ಪೋಸ್ಟ್ ಗಳು ಇವೆ. ನೋಟಿಫಿಕೇಶನ್ ಕುರಿತಾದ ಪ್ರಮುಖ ಮಾಹಿತಿ ಹೀಗಿದೆ ನೋಡಿ.

ನೇಮಕಾತಿ ಸಂಸ್ಥೆ:- ರೈಲ್ವೆ ನೇಮಕಾತಿ ಮಂಡಳಿ (RRB)
ಉದ್ಯೋಗ ಸಂಸ್ಥೆ:- ಭಾರತೀಯ ರೈಲ್ವೆ ಇಲಾಖೆ
ಹುದ್ದೆ ಹೆಸರು:- ಅಂಡರ್ ಗ್ರಾಜುಯೇಟ್ ಕೆಟಗರಿ ಹುದ್ದೆಗಳು (NTPC)

ಒಟ್ಟು ಹುದ್ದೆಗಳ ಸಂಖ್ಯೆ:-
* ಭಾರತದಾದ್ಯಂತ 3445 ಹುದ್ದೆಗಳು
* ಕರ್ನಾಟಕದಲ್ಲಿ 60 ಹುದ್ದೆಗಳು

ಹುದ್ದೆಗಳ ವಿವರ:-

1. ಭಾರತದಾದ್ಯಂತ ಒಟ್ಟಾರೆಯಾಗಿ
* ಕಮರ್ಷಿಯಲ್ ಕಮ್ ಟಿಕೆಟ್‌ ಕ್ಲರ್ಕ್‌ – 2022
* ಜೂನಿಯರ್ ಕ್ಲರ್ಕ್‌ ಕಮ್ ಟೈಪಿಸ್ಟ್‌ – 990
* ಅಕೌಂಟ್ಸ್‌ ಕ್ಲರ್ಕ್‌ ಕಮ್ ಟೈಪಿಸ್ಟ್‌ – 361
* ಟ್ರೈನ್ ಕ್ಲರ್ಕ್‌ – 72

2. ಕರ್ನಾಟಕದಲ್ಲಿ
* ಕಮರ್ಷಿಯಲ್ ಕಮ್ ಟಿಕೆಟ್ ಕ್ಲರ್ಕ್ – 48 ಹುದ್ದೆಗಳು
* ಅಕೌಂಟ್ಸ್‌ ಕ್ಲರ್ಕ್‌ ಕಮ್ ಟೈಪಿಸ್ಟ್‌ – 05 ಹುದ್ದೆಗಳು
* ಜೂನಿಯರ್ ಕ್ಲರ್ಕ್‌ ಕಮ್ – 07 ಹುದ್ದೆಗಳು

ವೇತನ ಶ್ರೇಣಿ:-
* ಆಯಾ ಹುದ್ದೆಗಳಿಗೆ ಅನುಗುಣವಾಗಿ ರೂ.19,900 ರಿಂದ ರೂ.1,12,400 ಮಾಸಿಕ ವೇತನ ಇರುತ್ತದೆ
* ಇದರೊಂದಿಗೆ ಇನ್ನಿತರ ಸರ್ಕಾರಿ ಸವಲತ್ತುಗಳು ಕೂಡ ಸಿಗುತ್ತದೆ.

ಉದ್ಯೋಗ ಸ್ಥಳ:-

* ಈ ಹುದ್ದೆಗಳಿಗೆ ಆಯ್ಕೆ ಆಗುವ ಅಭ್ಯರ್ಥಿಗಳು ಭಾರತದ ಯಾವುದೇ ರೈಲ್ವೆ ವಲಯದಲ್ಲಿ ಹುದ್ದೆ ಮಾಡಲು ತಯಾರಾಗಿರಬೇಕು.

ಶೈಕ್ಷಣಿಕ ವಿದ್ಯಾರ್ಹತೆ:-

ಈ ಮೇಲ್ಕಂಡ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಬಯಸುವ ಅಭ್ಯರ್ಥಿಗಳು ದ್ವಿತೀಯ PUC (ಯಾವುದೇ ವಿಭಾಗದಲ್ಲಿ) ಅಥವಾ ತತ್ಸಮಾನ ವಿದ್ಯಾರ್ಹತೆಯನ್ನು ಪಡೆದಿರಬೇಕು

ವಯೋಮಿತಿ:-

* ಅರ್ಜಿ ಸಲ್ಲಿಸಲು ಕನಿಷ್ಠ ವಯೋಮಿತಿ 18 ವರ್ಷಗಳು
* ಅರ್ಜಿ ಸಲ್ಲಿಸಲು ಗರಿಷ್ಠ ವಯೋಮಿತಿ0ಸಾಮಾನ್ಯ ವರ್ಗದವರಿಗೆ 33 ವರ್ಷಗಳು
* OBC ವರ್ಗದ ಅಭ್ಯರ್ಥಿಗಳಿಗೆ 3 ವರ್ಷಗಳ ವಯೋಮಿತಿ ಸಡಿಲಿಕೆ ಇರುತ್ತದೆ
* SC/ST ಪ್ರವರ್ಗ-1 ರೈ ಅಭ್ಯರ್ಥಿಗಳಿಗೆ 5 ವರ್ಷಗಳ ವಯೋಮಿತಿ ಸಡಿಲಿಕೆ ಇರುತ್ತದೆ

ಅರ್ಜಿ ಸಲ್ಲಿಸುವ ವಿಧಾನ:-

* ಕರ್ನಾಟಕದ ಅಭ್ಯರ್ಥಿಗಳು RRB ಕರ್ನಾಟಕ ಪ್ರಾದೇಶಿಕ ವೆಬ್‌ಸೈಟ್‌ https://www.rrbbnc.gov.in/ ಗೆ ಭೇಟಿ ನೀಡಿ.
* ಮುಖಪುಟದಲ್ಲಿ – Click Here To Apply For CEN 06/2024‌ ಲಿಂಕ್ ಹುಡುಕಿ ಕ್ಲಿಕ್ ಮಾಡಿ.
* RRB ನೇಮಕಾತಿಯ ಹೊಸ ಪೋರ್ಟಲ್‌ ಓಪನ್‌ ಆಗುತ್ತದೆ, Apply ಮೇಲೆ ಕ್ಲಿಕ್ ಮಾಡಿ, 2 ಆಯ್ಕೆಗಳು ಕಾಣುತ್ತದೆ,

1. Create An Account ಆಯ್ಕೆ ಮಾಡಿ ಕ್ಲಿಕ್ ಮಾಡಿ.
* ಆನ್‌ಲೈನ್‌ ರಿಜಿಸ್ಟ್ರೇಷನ್‌ ಫಾರ್ಮ್‌ ತೆರೆಯುತ್ತದೆ.
* ಕೇಳಲಾಗುವ ವೈಯಕ್ತಿಕ ವಿವರಗಳನ್ನು ಸರಿಯಾಗಿ ಭರ್ತಿ ಮಾಡಿ ರಿಜಿಸ್ಟ್ರೇಷನ್‌ ಮಾಡಿಕೊಳ್ಳಿ.
* ಈ ಮೊದಲೇ ಪಡೆದ ರಿಜಿಸ್ಟ್ರೇಷನ್‌ ನಂಬರ್, ಪಾಸ್‌ವರ್ಡ್‌ ನೀಡಿ ಲಾಗಿನ್‌ ಆಗುವ ಮೂಲಕ ಅಪ್ಲಿಕೇಶನ್ ಸಲ್ಲಿಸಿ.
* ಅರ್ಜಿ ಸಲ್ಲಿಸುವಾಗ ಮೊದಲು ಹುದ್ದೆಯನ್ನು ಆಯ್ಕೆ ಮಾಡಿಕೊಳ್ಳಬೇಕು.

2. ಮೊದಲೇ RRB ವೆಬ್‌ಸೈಟ್‌ನಲ್ಲಿ ರಿಜಿಸ್ಟ್ರೇಷನ್‌ ಪಡೆದಿದ್ದಲ್ಲಿ Already Have An Account ಎಂದಿರುವಲ್ಲಿ ಕ್ಲಿಕ್ ಮಾಡಿ.
* ರಿಜಿಸ್ಟ್ರೇಷನ್‌ ನಂಬರ್, ಪಾಸ್‌ವರ್ಡ್‌ ನೀಡಿ ಲಾಗಿನ್‌ ಆಗುವ ಮೂಲಕ ಅರ್ಜಿ ಸಲ್ಲಿಸಿ.

ಅರ್ಜಿ ಶುಲ್ಕ:-
* ಸಾಮಾನ್ಯ ಹಾಗೂ OBC ವರ್ಗದ ಅಭ್ಯರ್ಥಿಗಳಿಗೆ ರೂ.500.
* SC / ST / ಮಾಜಿ ಸೈನಿಕ / PWD / ಮಹಿಳಾ / ಟ್ರಾನ್ಸ್‌ಜೆಂಡರ್ / EWS ವರ್ಗದ ಅಭ್ಯರ್ಥಿಗಳಿಗೆ ರೂ.250.

ಆಯ್ಕೆ ವಿಧಾನ:-
* ಸ್ಪರ್ಧಾತ್ಮಕ ಪರೀಕ್ಷೆ
* ದಾಖಲೆಗಳ ಪರಿಶೀಲನೆ
* ನೇರ ಸಂದರ್ಶನ

ಪ್ರಮುಖ ದಿನಾಂಕಗಳು:-
* ಅರ್ಜಿ ಸಲ್ಲಿಸಲು ಪ್ರಾರಂಭ ದಿನಾಂಕ – 21-09-2024
* ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ – 20-10-2024

ಸರ್ಕಾರಿ ಯೋಜನೆ, ಸರ್ಕಾರಿ ಉದ್ಯೋಗಗಳು,ಮತ್ತು ಖಾಸಗಿ ಕಂಪನಿ ಉದ್ಯೋಗದ ಬಗ್ಗೆ ದೈನಂದಿನ ಮಾಹಿತಿಯನ್ನು ಪಡೆಯಲು ನಮ್ಮ needs of ಕನ್ನಡ WhatsApp ಗ್ರೂಪ್ ಮತ್ತು ಟೆಲಿಗ್ರಾಮ್ ಚಾನಲ್‌ಗೆ ಜಾಯಿನ್ ಆಗಿರಿ
WhatsApp Group Join Now
Telegram Group Join Now

Leave a Comment