5 ಗ್ಯಾರೆಂಟಿ ಸ್ಕೀಮ್ ಗಳು ಬಂದ್.? ಮಹತ್ವದ ನಿರ್ಧಾರ ತೆಗೆದುಕೊಂಡ C.M

 

ಕಳೆದೊಂದು ವರ್ಷದಿಂದ ರಾಜ್ಯ ರಾಜಕಾರಣದಲ್ಲಿ ಅತೀ ಹೆಚ್ಚು ಚರ್ಚೆಯಾಗಿರುವ ವಿಚಾರಗಳಲ್ಲಿ ಗ್ಯಾರೆಂಟಿ ಯೋಜನೆಗಳದ್ದೇ (Gyaranty Scheme) ಮೇಲುಗೈ ಎಂದರೆ ತಪ್ಪಾಗಲಾರದು. ಕಳೆದ ವರ್ಷ ಕರ್ನಾಟಕ ವಿಧಾನಸಭಾ ಚುನಾವಣೆ-2023ರ(Karnataka Assembly Election-2023) ಪ್ರಚಾರ ಸಮಯದಿಂದ ಆರಂಭಗೊಂಡ ಕಾಂಗ್ರೆಸ್ ಪಕ್ಷದ ಆಶ್ವಾಸನೆಗಳಾಗಿದ್ದ 5 ಗ್ಯಾರಂಟಿ ಯೋಜನೆಗಳು ಇನ್ನು ಸಹ ಭಾರಿ ಸದ್ದು ಮಾಡುತ್ತಿವೆ.

WhatsApp Group Join Now
Telegram Group Join Now

ಕಳೆದ ಬಾರಿಯ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷವು (Congress Party) ಬಹುಮತ ಬೆಂಬಲದೊಂದಿಗೆ ಅಧಿಕಾರದ ಚುಕ್ಕಾಣಿ ಹಿಡಿಯಲು ಈ ಪಂಚ ಖಾತ್ರಿ ಯೋಜನೆಗಳು ಕಾರಣವಾಯಿತು ಎನ್ನುವುದು ಜನಜನಿತವಾಗಿರುವ ಮಾತು. ಕೊಟ್ಟ ಮಾತಿನಂತೆ ಐದಕ್ಕೆ ಐದು ಗ್ಯಾರಂಟಿ ಯೋಜನೆಗಳನ್ನು ಜಾರಿಗೆ ತಂದು ತಾವು ನುಡಿದಂತೆ ನಡೆಯುವವರು ಎಂದು ಹೇಳಿಕೊಂಡಿರುವ ಸಿದ್ದರಾಮಯ್ಯ ನೇತತ್ವದ ಕಾಂಗ್ರೆಸ್ ಸರ್ಕಾರದ ಗ್ಯಾರೆಂಟಿ ಯೋಜನೆಗಳನ್ನು ಪಕ್ಷವು ಮಾದರಿ ಯೋಜನೆಗಳು (Model Schemes) ಎಂದೇ ಕರೆದುಕೊಂಡಿತ್ತು.

ಈ ಗ್ಯಾರಂಟಿ ಯೋಜನೆಗಳು ಮತ ಓಲೈಕೆಗೆ ಸೂತ್ರ ಎನ್ನುವುದನ್ನು ಭಾವಿಸಿ ಈ ಬಾರಿಯ ಲೋಕಸಭಾ ಚುನಾವಣೆ- 2024 (Parliment Election) ರಲ್ಲಿ ಕೂಡ ಇವುಗಳನ್ನೇ ಹೊಲುವ ಮತ್ತೈದು ಖಾತರಿ ನ್ಯಾಯ ಯೋಜನೆಗಳನ್ನು ಕಾಂಗ್ರೆಸ್ ಒಳಗೊಂಡ ಇಂಡಿಯಾ ಒಕ್ಕೂಟವು (I.N.D.I.A) ಘೋಷಿಸಿತ್ತು.

ಆದರೆ ಕಾಂಗ್ರೆಸ್ ಸರ್ಕಾರದ ಈ ಟ್ರಿಕ್ ಪಾರ್ಲಿಮೆಂಟ್ ಎಲೆಕ್ಷನ್ ನಲ್ಲಿ ವರ್ಕ್ ಆಗಿಲ್ಲ ಇದರಿಂದ ಪಕ್ಷದಲ್ಲಿ ಅಸಮಾಧಾನಗಳು ಎದುರಾಗಿದ್ದು ಗ್ಯಾರಂಟಿ ಯೋಜನೆಗಳಿಂದ ಜನರ ಮನಸ್ಸನ್ನು ಗೆಲ್ಲಲಾಗುತ್ತಿಲ್ಲ ಅಲ್ಲದೆ ಈ ಗ್ಯಾರಂಟಿ ಯೋಜನೆಗಳಿಗೆ ರಾಜ್ಯದ ಎಲ್ಲಾ ಆದಾಯವನ್ನು ವಿನಿಯೋಗಿಸಲಾಗುತ್ತಿದೆ, ಶಾಸಕರ ಅನುದಾನವನ್ನು ಕೂಡ ಕಡಿತಗೊಳಿಸಲಾಗುತ್ತಿದೆ ಮಾತ್ರವಲ್ಲದೆ ಇನ್ನಿತರ ಅಭಿವೃದ್ಧಿ ಯೋಜನೆಗಳನ್ನು ತಡೆಹಿಡಿಯಲಾಗಿದೆ.

ಹೀಗಾಗಿ ಗ್ಯಾರಂಟಿ ಯೋಜನೆಗಳನ್ನು ಮರು ಪರೀಕ್ಷೆಗೆ ಒಳಪಡಿಸುವುದು ಸೂಕ್ತ ಎನ್ನುವ ಸಲಹೆಯನ್ನು ಲೋಕಸಭಾ ಚುನಾವಣೆ ಫಲಿತಾಂಶದ ನಂತರ ಕಾಂಗ್ರೆಸ್ ಶಾಸಕರು ನೀಡುತ್ತಿದ್ದರಂತೆ, ಈ ಬಗ್ಗೆ ವಿಪಕ್ಷಗಳು ಮಾತನಾಡುತ್ತಿವೆ ಆದರೆ ಈ ವದಂತಿ ಬಗ್ಗೆ ಮುಖ್ಯಮಂತ್ರಿಗಳು ಹೇಳಿದ್ದೇನು ಗೊತ್ತಾ?

ಎಲ್ಲರಿಗೂ ತಿಳಿದಿರುವಂತೆ ರಾಜ್ಯದಲ್ಲಿ ಈಗ 200 ಯೂನಿಟ್ ವರೆಗೆ ಉಚಿತ ವಿದ್ಯುತ್ ನೀಡುವ ಗೃಹ ಜ್ಯೋತಿ(Gruhajyothi) , ಕುಟುಂಬದ ಯಜಮಾನನಿಗೆ ರೂ.2000 ಸಹಾಯಧನ ನೀಡುವ ಗೃಹಲಕ್ಷ್ಮಿ (Gruhalakshmi), ಅನ್ನ ಭಾಗ್ಯ ಯೋಜನೆಯಡಿ (AnnaBhagya) ಪ್ರತಿ ಸದಸ್ಯರಿಗೆ 10KG ಅಕ್ಕಿ, ಮಹಿಳೆಯರಿಗೆ ರಾಜ್ಯದ ಗಡಿ ಒಳಗೆ ಎಲ್ಲ ಸರ್ಕಾರಿ ಬಸ್ಸುಗಳಲ್ಲಿ ಉಚಿತ ಪ್ರಯಾಣ ಸೌಕರ್ಯ ನೀಡಿರುವ ಶಕ್ತಿ ಯೋಜನೆ (Shakthi Yojane) ಮತ್ತು ಪದವಿ ಪೂರ್ತಿಗೊಳಿಸಿ ನಿರುದ್ಯೋಗಿಗಳಾಗಿರುವವರಿಗೆ ರೂ.3000 ಮಾಸಾಶನ ನೀಡುವ ಯುವನಿಧಿ ಯೋಜನೆಗಳು (Yuvanidhi Scheme) ಜಾರಿಯಲ್ಲಿವೆ.

ಇದರಿಂದ ಪ್ರತಿ ಕುಟುಂಬಕ್ಕೂ ಕನಿಷ್ಠ 6000 ವರೆಗೆ ಉಳಿತಾಯವಾಗುತ್ತಿದೆ ಎನ್ನುವುದನ್ನು ಪಕ್ಷದ ವರಿಷ್ಠರುಗಳ ಘಂಟಾ ಘೋಷವಾಗಿ ಯೋಜನೆ ಜಾರಿಯಾದ ಸಂದರ್ಭದಲ್ಲಿ ಹೇಳಿದ್ದರು. ಆದರೆ ಈಗ ಇದ್ದಕ್ಕಿದ್ದಂತೆ ಲೋಕಸಭಾ ಚುನಾವಣೆಯಲ್ಲಿ ನಿರೀಕ್ಷಿತ ಫಲಿತಾಂಶ ಸಿಗದ ಕಾರಣ ಯೋಜನೆ ಸ್ಥಗಿತಗೊಳಿಸುವ ಬಗ್ಗೆ ಚರ್ಚೆ ನಡೆಯುತ್ತಿದೆ ಎನ್ನುವ ಗಾಳಿಮಾತುಗಳು ಹರಿದಾಡುತ್ತಿವೆ.

ಕರ್ನಾಟಕದಲ್ಲಿ ಆಡಳಿತ ರೂಢವಾದ ಕಾಂಗ್ರೆಸ್ ಪಕ್ಷವು ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ 9 ಸ್ಥಾನಕ್ಕೆ ಸಮಾಧಾನ ಪಟ್ಟುಕೊಳ್ಳಬೇಕಾಗಿದೆ. ಆದರೆ ಕಳೆದ ಬಾರಿಯ ಚುನಾವಣೆಗೆ ಹೋಲಿಸಿದರೆ ಒಂದರಿಂದ ಒಂಬತ್ತಕ್ಕೆ ಏರಿರುವುದು ಸಮಾಧಾನಕರ ಎನ್ನುವುದನ್ನು ಮುಖ್ಯಮಂತ್ರಿಗಳು ಒಪ್ಪಿಕೊಂಡಿದ್ದಾರೆ.

ಇನ್ನು ಇಂಡಿಯಾ ಒಕ್ಕೂಟದ ಬಗ್ಗೆ ಮಾತನಾಡುವುದಾದರೂ ಕೂಡ ಗ್ಯಾರೆಂಟಿ ಖಾತರಿ ಯೋಜನೆಗಳ ಮೂಲಕ ದೇಶದ ಮಹಿಳೆಯರ ಮನ ಓಲೈಕೆ ನಿರೀಕ್ಷಿತ ಪ್ರಮಾಣದಲ್ಲಿ ಸಾಧ್ಯವಾಗದೆ ಹೋದರು ಕಳೆದ ಬಾರಿಯ ಚುನಾವಣೆಗಿಂತ ದೇಶದ ಮಟ್ಟದಲ್ಲೂ ಕಾಂಗ್ರೆಸ್ ಚಿಗುರಿಕೊಂಡಿರುವುದು BJP ಗೆ ಬೆಚ್ಚಿ ಬೀಳುವಂಥಾಗಿದೆ.

ಇದರ ನಡುವೆ ಕಾಂಗ್ರೆಸ್ ರಾಜ್ಯದಲ್ಲಿ ನೀಡಿರುವ ಗ್ಯಾರಂಟಿ ಯೋಜನೆ ಗಳಿಗೆ ಲೋಕಸಭಾ ಚುನಾವಣೆಯಲ್ಲಿ 20ಕ್ಕೆ 20 ಸ್ಥಾನವನ್ನು ಅಥವಾ ಅದರ ಅರ್ಧಕ್ಕಿಂತ ಹೆಚ್ಚು ಸ್ಥಾನವನ್ನು ಗೆಲ್ಲಿಸಿ ಕೊಡಲು ಸಾಧ್ಯವಾಗದೇ ಹೋದ್ದರಿಂದ ಕೈ ಶಾಸಕರಲ್ಲಿಯೇ ಗ್ಯಾರಂಟಿ ಯೋಜನೆಗಳ ಬಗ್ಗೆ ಅಸಮಾಧಾನ ಮತ್ತು ಈ ಯೋಜನೆಗಳಿಂದ ಜನಸಾಮಾನ್ಯರಿಗೆ ತೃಪ್ತಿಯಾಗಿಲ್ಲ ಎನ್ನುವ ಅನುಮಾನ ಕಾಡುತ್ತಿದೆ ಮತ್ತು ಇವುಗಳನ್ನು ಪರಿಷ್ಕರಿಸುವುದಕ್ಕೆ ಮುಖ್ಯಮಂತ್ರಿಗಳಿಗೆ ಸಲಹೆ ನೀಡಿದ್ದಾರೆ ಎಂದು ಕೂಡ ತಿಳಿದು ಬಂದಿದೆ.

ಈ ಬಗ್ಗೆ ಕೊನೆಗೂ ಮುಖ್ಯಮಂತ್ರಿಗಳು ಮೌನ ಮುರಿದಿದ್ದಾರೆ. ನೇರವಾಗಿ ತಮ್ಮೊಳಗಾದ ಚರ್ಚೆಯ ಬಗ್ಗೆ ವ್ಯಕ್ತಪಡಿಸದೆ ಇದ್ದರೂ ಪರೋಕ್ಷವಾಗಿ ಹರಿದಾಡುತ್ತಿರುವ ವದಂತಿಗಳ ಬಗ್ಗೆ ಸ್ಪಷ್ಟೀಕರಣ ನೀಡುವುದಕ್ಕಾಗಿ ಲೋಕಸಭಾ ಚುನಾವಣೆ ಫಲಿತಾಂಶದಿಂದ ನಮ್ಮ ಪಕ್ಷಕ್ಕೆ ಸಮಾಧಾನಕರ ಉತ್ತರವೇ ಸಿಕ್ಕಿದೆ ಮತ್ತು ರಾಜ್ಯದಲ್ಲಿ 9 ಸ್ಥಾನ ಪಡೆದಿದ್ದೇವೆ ಇದಕ್ಕೆ ಗ್ಯಾರಂಟಿ ಯೋಜನೆಗಳು ಕೂಡ ಕಾರಣವಾಗಿರಬಹುದು.

ಹಾಗಾಗಿ ಯಾವುದೇ ಕಾರಣಕ್ಕೂ ಇವುಗಳನ್ನು ಸ್ಥಗಿತಗೊಳಿಸುವುದಿಲ್ಲ ವಿಧಾನಸಭಾ ಚುನಾವಣೆಯಲ್ಲಿ ನಾವು ನೀಡಿದ್ದ ಭರವಸೆಯಂತೆ ನಮ್ಮ ರಾಜ್ಯದಲ್ಲಿ ಐದು ವರ್ಷಗಳವರೆಗೆ ನಮ್ಮ ಪಕ್ಷವೇ ಅಧಿಕಾರದಲ್ಲಿದ್ದು ಅಲ್ಲಿಯವರೆಗೂ ಈ ಮೇಲೆ ತಿಳಿಸಿದ ಎಲ್ಲಾ ಗ್ಯಾರಂಟಿ ಯೋಜನೆಗಳು ಜಾರಿಯಲ್ಲಿ ಇರುತ್ತವೆ ಎನ್ನುವ ಸ್ಪಷ್ಟತೆಯನ್ನು ಕೊಟ್ಟಿದ್ದಾರೆ.

ಸರ್ಕಾರಿ ಯೋಜನೆ, ಸರ್ಕಾರಿ ಉದ್ಯೋಗಗಳು,ಮತ್ತು ಖಾಸಗಿ ಕಂಪನಿ ಉದ್ಯೋಗದ ಬಗ್ಗೆ ದೈನಂದಿನ ಮಾಹಿತಿಯನ್ನು ಪಡೆಯಲು ನಮ್ಮ needs of ಕನ್ನಡ WhatsApp ಗ್ರೂಪ್ ಮತ್ತು ಟೆಲಿಗ್ರಾಮ್ ಚಾನಲ್‌ಗೆ ಜಾಯಿನ್ ಆಗಿರಿ
WhatsApp Group Join Now
Telegram Group Join Now

Leave a Comment