ISRO Recruitment
ಎಸ್‌ಎಸ್‌ಎಲ್‌ಸಿ, ಐಟಿಐ, ಡಿಪ್ಲೊಮ, ಎಂಬಿಬಿಎಸ್, ಬಿಎಸ್ಸಿ, ಬಿಇ, ಬಿ.ಟೆಕ್ ಪಾಸಾದವರು ಸರ್ಕಾರಿ ಉದ್ಯೋಗಕ್ಕಾಗಿ ಮುನ್ನೋಡುತ್ತಿದ್ದಲ್ಲಿ, ಇಲ್ಲಿದೆ ಭರ್ಜರಿ ಜಾಬ್ ಆಫರ್. ಭಾರತ ಸರ್ಕಾರದ ಬಾಹ್ಯಾಕಾಶ ಇಲಾಖೆಯ ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ ಮಾನವ ಬಾಹ್ಯಾಕಾಶ ಉಡ್ಡಯನ ಕೇಂದ್ರವು ಈ ಕೆಳಕಾಣಿಸುವ ವಿವಿಧ ಹುದ್ದೆಗಳಿಗೆ ಆನ್‌ಲೈನ್ ಅರ್ಜಿಗಳನ್ನು ಆಹ್ವಾನಿಸಲಾಗಿದೆ.
ಹುದ್ದೆಗಳ ವಿವರ, ಇತರೆ ಮಾಹಿತಿಗಳನ್ನು ಕೆಳಗಿನಂತೆ ತಿಳಿದು ಅರ್ಜಿ ಸಲ್ಲಿಸಿ. ಒಟ್ಟಾರೆ 103 ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ. ಅನೇಕ ಜನರು ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಯಲ್ಲಿ (ISRO) ನಲ್ಲಿ ಕೆಲಸ ಮಾಡುವ ಕನಸು ಕಾಣುತ್ತಿರುತ್ತಾರೆ. ಅಂತಹವರಿಗೆ ಇದು ಶುಭ ಸುದ್ದಿಯಾಗಿದೆ.
ಹೌದು, ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಯಲ್ಲಿ (ISRO) 103 ಹುದ್ದೆಗಳ ನೇಮಕಾತಿ ಪ್ರಕ್ರಿಯೆ ನಡೆಸುತ್ತಿದೆ. ಇದು ಭಾರತದ ಪ್ರಮುಖ ಬಾಹ್ಯಾಕಾಶ ಸಂಸ್ಥೆಯೊಂದಿಗೆ ಕೆಲಸ ಮಾಡಲು ಆಸಕ್ತಿ ಹೊಂದಿರುವವರಿಗೆ ಅನನ್ಯ ಅವಕಾಶವನ್ನು ಒದಗಿಸುತ್ತದೆ. ವೈದ್ಯಕೀಯ ಅಧಿಕಾರಿ-SD, ವಿಜ್ಞಾನಿ/ ಇಂಜಿನಿಯರ್-SC, ತಾಂತ್ರಿಕ ಸಹಾಯಕ, ವಿಜ್ಞಾನಿ ಸಹಾಯಕ ಮತ್ತು ಇತರ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ.
ಆಸಕ್ತ ಅಭ್ಯರ್ಥಿಗಳು ಇಸ್ರೋದ ಅಧಿಕೃತ ವೆಬ್‌ಸೈಟ್ isro.gov.inಗೆ ಭೇಟಿ ನೀಡುವ ಮೂಲಕ ಅರ್ಜಿ ಸಲ್ಲಿಸಬಹುದು. ಅರ್ಜಿ ಸಲ್ಲಿಸಲು ಅಕ್ಟೋಬರ್ 9 ಕೊನೆಯ ದಿನಾಂಕವಾಗಿದು, ಕೂಡಲೇ ಅರ್ಜಿ ಸಲ್ಲಿಸಿ..
ಈ ಸುದ್ದಿ ಓದಿ:- NABARD Recruitment: ನಬಾರ್ಡ್ ಬ್ಯಾಂಕ್ ಆಫೀಸ್ ಅಟೆಂಡೆಂಟ್ ಹುದ್ದೆಗಳಿಗೆ ಅರ್ಜಿ ಆಹ್ವಾನ.! ವೇತನ 35,000/-
ಪ್ರತಿ ಹುದ್ದೆಗೆ ವಿಭಿನ್ನ ಶೈಕ್ಷಣಿಕ ಅರ್ಹತೆ ಇದೆ. ಆದ್ದರಿಂದ, ಅಭ್ಯರ್ಥಿಗಳು ಅರ್ಜಿ ಸಲ್ಲಿಸುವ ಮೊದಲು ಅಧಿಕೃತ ಅಧಿಸೂಚನೆಯನ್ನು ಒಮ್ಮೆ ಓದಬೇಕು. ಒಬಿಸಿ ವರ್ಗದ ಅಭ್ಯರ್ಥಿಗಳಿಗೆ ಗರಿಷ್ಠ ವಯೋಮಿತಿಯಲ್ಲಿ 3 ವರ್ಷ ಮತ್ತು ಎಸ್‌ಸಿ/ಎಸ್‌ಟಿ ಅಭ್ಯರ್ಥಿಗಳಿಗೆ 5 ವರ್ಷ ಸಡಿಲಿಕೆ ನೀಡಲಾಗುತ್ತದೆ.
ವಯಸ್ಸಿನ ಮಿತಿ :
ಹುದ್ದೆ ಹೆಸರು ಮತ್ತು ಹುದ್ದೆಗಳ ಸಂಖ್ಯೆ ಇಂತಿವೆ
– ವೈದ್ಯಕೀಯ ಅಧಿಕಾರಿ – ಎಸ್‌ಡಿ : 2
– ವೈದ್ಯಕೀಯ ಅಧಿಕಾರಿ – ಎಸ್‌ಸಿ : 1
– ವಿಜ್ಞಾನಿ/ ಇಂಜಿನಿಯರ್ – ಎಸ್‌ಸಿ : 10
– ತಾಂತ್ರಿಕ ಸಹಾಯಕ : 28
– ವೈಜ್ಞಾನಿಕ ಸಹಾಯಕ : 1
– ತಂತ್ರಜ್ಞ – ಬಿ : 43
– ಡ್ರಾಫ್ಟ್ ಮನ್ ಬಿ : 13
– ಸಹಾಯಕ (ರಾಜ್‌ಭಾಷಾ) : 5
ಹುದ್ದೆವಾರು ವಯಸ್ಸಿನ ಅರ್ಹತೆ ಹಾಗೂ ವೇತನ ಶ್ರೇಣಿ ವಿವರ
– ವೈದ್ಯಕೀಯ ಅಧಿಕಾರಿ – ಎಸ್‌ಡಿ : ಎಂಬಿಬಿಎಸ್ ಪಾಸ್ ಜತೆಗೆ, 18-35 ವರ್ಷ ವಯೋಮಾನದವರಾಗಿರಬೇಕು. ಪೇ ಲೆವೆಲ್ 11 ವೇತನ ಶ್ರೇಣಿ ಇರುತ್ತದೆ.
– ವೈದ್ಯಕೀಯ ಅಧಿಕಾರಿ – ಎಸ್‌ಸಿ: ಎಂಬಿಬಿಎಸ್ ಪಾಸ್ ಮತ್ತು 2 ವರ್ಷಗಳ ಅನುಭವದ ಜತೆಗೆ, 18-35 ವರ್ಷ ವಯೋಮಾನದವರಾಗಿರಬೇಕು. ಪೇ ಲೆವೆಲ್ 10 ವೇತನ ಶ್ರೇಣಿ ಇರುತ್ತದೆ.
– ವಿಜ್ಞಾನಿ/ ಇಂಜಿನಿಯರ್ – ಎಸ್‌ಸಿ: ಬಿಇ ಅಥವಾ ಬಿ.ಟೆಕ್ ವಿದ್ಯಾರ್ಹತೆಗೆ ಜತೆಗೆ, 18-30 ವರ್ಷ ವಯೋಮಾನದವರಾಗಿರಬೇಕು. ಪೇ ಲೆವೆಲ್ 10 ವೇತನ ಶ್ರೇಣಿ ಇರುತ್ತದೆ.
– ತಾಂತ್ರಿಕ ಸಹಾಯಕ : ಸಂಬಂಧಪಟ್ಟ ಶಿಸ್ತೀಯ ವಿಷಯದಲ್ಲಿ ಡಿಪ್ಲೊಮ ಪಾಸ್ ಜತೆಗೆ, 18-35 ವರ್ಷ ವಯೋಮಾನದವರಾಗಿರಬೇಕು. ಪೇ ಲೆವೆಲ್ 7 ವೇತನ ಶ್ರೇಣಿ ಇರುತ್ತದೆ.
ಈ ಸುದ್ದಿ ಓದಿ:- Labor Card ಕಾರ್ಮಿಕ ಕಾರ್ಡ್ ಹೊಂದಿದವರಿಗೆ ಗುಡ್ ನ್ಯೂಸ್: ನಿಮಗೆ ಸಿಗಲಿದೆ 60,000 ಸಹಾಯಧನ.!
– ವೈಜ್ಞಾನಿಕ ಸಹಾಯಕ: ಬಿಎಸ್‌ಸಿ ಪದವಿ ಜತೆಗೆ, 18-35 ವರ್ಷ ವಯೋಮಾನದವರಾಗಿರಬೇಕು. ಪೇ ಲೆವೆಲ್ 7 ವೇತನ ಶ್ರೇಣಿ ಇರುತ್ತದೆ.
– ತಂತ್ರಜ್ಞ – ಬಿ : ಎಸ್‌ಎಸ್‌ಎಲ್‌ಸಿ ಜತೆಗೆ ಐಟಿಐ ಶಿಕ್ಷಣವನ್ನು ಪಡೆದಿರಬೇಕು. ಜತೆಗೆ 18-35 ವರ್ಷ ವಯೋಮಾನದವರಾಗಿರಬೇಕು. ಪೇ ಲೆವೆಲ್ 3 ವೇತನ ಶ್ರೇಣಿ ಇರುತ್ತದೆ.
– ಡ್ರಾಫ್ಟ್ ಮನ್ ಬಿ: ಎಸ್‌ಎಸ್‌ಎಲ್‌ಸಿ ಜತೆಗೆ ಐಟಿಐ ಶಿಕ್ಷಣವನ್ನು ಪಡೆದಿರಬೇಕು. ಜತೆಗೆ 18-35 ವರ್ಷ ವಯೋಮಾನದವರಾಗಿರಬೇಕು. ಪೇ ಲೆವೆಲ್ 3 ವೇತನ ಶ್ರೇಣಿ ಇರುತ್ತದೆ.
– ಸಹಾಯಕ (ರಾಜಭಾಷಾ) : ಪದವಿ ಪಾಸ್ ಜತೆಗೆ 18-28 ವರ್ಷ ವಯೋಮಾನದವರಾಗಿರಬೇಕು. ಪೇ ಲೆವೆಲ್ 4 ವೇತನ ಶ್ರೇಣಿ ಇರುತ್ತದೆ.
ವೇತನ
ಆಯ್ಕೆಯಾದ ಅಭ್ಯರ್ಥಿಗಳು ತಮ್ಮ ಹುದ್ದೆಯ ಆಧಾರದ ಮೇಲೆ 21,700 ರೂ.ನಿಂದ 2,08,700 ರೂ.ವರೆಗೆ ವೇತನವನ್ನು ಪಡೆಯಬಹುದು.ಇಸ್ರೋಗೆ ಸೇರಲು ಮತ್ತು ಭಾರತದ ಬಾಹ್ಯಾಕಾಶ ಕಾರ್ಯಾಚರಣೆಯಲ್ಲಿ ಕೊಡುಗೆ ನೀಡಲು ಇದೊಂದು ಸುವರ್ಣಾವಕಾಶವಾಗಿದೆ.
ವಯಸ್ಸಿನ ಮಿತಿ
ವಯೋಮಿತಿ ಸಡಿಲಿಕೆ ಅನ್ವಯಿಸುತ್ತದೆ.ಎಸ್‌ಸಿ/ಎಸ್‌ಟಿ ಅಭ್ಯರ್ಥಿಗಳಿಗೆ 5 ವರ್ಷ ಮತ್ತು ಒಬಿಸಿ ಅಭ್ಯರ್ಥಿಗಳಿಗೆ 3 ವರ್ಷಗಳ ವಯೋಮಿತಿ ಸಡಿಲಿಕೆ ನೀಡಲಾಗುವುದು.
ಅರ್ಹತೆಯ ಮಾನದಂಡಗಳು
ಅರ್ಜಿದಾರರು ಅಧಿಕೃತ ಅಧಿಸೂಚನೆಯಲ್ಲಿ ನಮೂದಿಸಲಾದ ನಿರ್ದಿಷ್ಟ ಅರ್ಹತೆಗಳನ್ನು ಪೂರೈಸಬೇಕು.ಪ್ರತಿ ಪೋಸ್ಟ್‌ಗೆ ಇರುವ ಅರ್ಹತೆಯನ್ನು ಪರಿಶೀಲಿಸಲು ISRO ವೆಬ್‌ಸೈಟ್‌ಗೆ ಭೇಟಿ ನೀಡಬಹುದು. ಅರ್ಜಿ ಸಲ್ಲಿಸಲು ಹಾಗೂ ಇತರೆ ವಿಸ್ತೃತ ವಿವರಗಳಿಗೆ ದಯವಿಟ್ಟು www.isro.gov.in ಅಥವಾ www.hsfc.gov.in ಗೆ ಭೇಟಿ ನೀಡಿ.
ಆಯ್ಕೆ ವಿಧಾನ
ಅರ್ಜಿ ಸಲ್ಲಿಸಿದ ಅಭ್ಯರ್ಥಿಗಳನ್ನು ವಿದ್ಯಾರ್ಹತೆ ಅಂಕಗಳು, ಅನುಭವದ ಆಧಾರದಲ್ಲಿ ಶಾರ್ಟ್ ಲಿಸ್ಟ್ ಮಾಡಿ, ಸಂದರ್ಶನ ನಡೆಸಿ ಆಯ್ಕೆ ಮಾಡಲಾಗುತ್ತದೆ.
ಅರ್ಜಿ ಸಲ್ಲಿಸಲು ಆನ್‌ಲೈನ್ ಮೂಲಕ ಮಾತ್ರ ಅವಕಾಶ ನೀಡಲಾಗಿದೆ. ಆದ್ದರಿಂದ ಅರ್ಹತೆಗಳಿಗೆ ಸಂಬಂಧಿತ ಪೂರಕ ದಾಖಲೆಗಳನ್ನು ಸಿದ್ಧಪಡಿಸಿಕೊಂಡು ಅರ್ಜಿ ಹಾಕಿರಿ.