Medicines
ನಮ್ಮ ದೇಶದಲ್ಲಿ(country) ಈಗಾಗಲೇ ಹಲವು ಅಗತ್ಯ ವಸ್ತುಗಳ(Essential object) ಬೆಲೆ ಏರಿಕೆ(Price rise)ಯಾಗಿದೆ. ಇದರಿಂದ ಜನ ಸಂಕಷ್ಟದಲ್ಲಿ ಇದ್ದಾರೆ. ಆದರೆ, ಇದರ ಬೆನ್ನಲ್ಲೇ ಜನ ಸಾಮಾನ್ಯರು ನಿತ್ಯ ಬಳಸುವ ಹಲವು ಅಗತ್ಯ ಮೆಡಿಸನ್ ಅಥವಾ ಔಷಧಿ (Medison) ಬೆಲೆಯನ್ನು ಹಲವು ಪಟ್ಟು ಹೆಚ್ಚಳ ಮಾಡಲಾಗಿದ್ದು, ಔಷಧಿ ಬಳಕೆ ಮಾಡುವವರ ಜೇಬಿಗೆ ಕತ್ತರಿ ಬಿದ್ದಂತಾಗಿದೆ.
ಈ ಕ್ರಮಕ್ಕೆ ಸಾರ್ವಜನಿಕ ವಲಯ(Public sector)ದಿಂದ ಆಕ್ಷೇಪ ವ್ಯಕ್ತವಾಗಿದೆ. ಈ ಔಷಧಿಗಳಲ್ಲಿ ಆಸ್ತಮಾ(Asthma), ಕ್ಷಯ(Cadrous) ಹಾಗೂ ಮಾನಸಿಕ ಆರೋಗ್ಯ(Mental health) ಸೇರಿದಂತೆ ಹಲವು ರೋಗಗಳಿಗೆ ಚಿಕಿತ್ಸೆ(Treatment) ನೀಡುವ ಔಷಧಿಗಳು ಸೇರಿವೆ.
ದೇಶದಲ್ಲಿ ದಿನನಿತ್ಯ ಬಳಸುವ ವಸ್ತುಗಳಿಂದ ಹಲವು ವಸ್ತುಗಳ ಬೆಲೆ ಈಗಾಗಲೇ ಹಲವು ಪಟ್ಟು ಹೆಚ್ಚಳವಾಗಿದೆ. ಇದರಿಂದ ಜೀವನ ನಡೆಸುವುದು ಸವಾಲಿನ ಕೆಲಸವಾಗಿದೆ. ಇದೀಗ ಅನಾರೋಗ್ಯ ಸಂದರ್ಭದಲ್ಲಿ ಜೀವರಕ್ಷಕವಾಗಿರುವ ಔಷಧಿ ಬೆಲೆಗಳನ್ನು ಹೆಚ್ಚಳ ಮಾಡುವ ಮೂಲಕ, ಅನಾರೋಗ್ಯ ಸಮಸ್ಯೆಯನ್ನು ಎದುರಿಸುವುದಕ್ಕಿಂತ, ಆಸ್ಪತ್ರೆ ಹಾಗೂ ಔಷಧಿಗಳಿಗೆ ಖರ್ಚು ಮಾಡುವ ವೆಚ್ಚವನ್ನು ನೋಡಿ ಭಯ ಬೀಳುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ.
ಔಷಧಿ ಬೆಲೆಗಳ ಏರಿಕೆಯಿಂದಾಗಿ ಬಡ ಹಾಗೂ ಮಧ್ಯಮ ವರ್ಗದವರು ಸಂಕಷ್ಟಕ್ಕೆ ಸಿಲುಕಲಿದ್ದಾರೆ. ದೇಶದಲ್ಲಿ ಆಸ್ತಮಾ, ಗ್ಲುಕೋಮಾ (ಕಣ್ಣಿನ ಭಾಗ), ಥಲಸ್ಸೆಮಿಯಾ, ಕ್ಷಯ ಮತ್ತು ಮಾನಸಿಕ ಆರೋಗ್ಯ ಸಮಸ್ಯೆಗಳಿಗೆ ನೀಡುವ ಔಷಧಿ ಬೆಲೆಯನ್ನು ಬರೋಬ್ಬರಿ ಶೇಕಡ 50 ರಷ್ಟು ಹೆಚ್ಚಳ ಮಾಡುವುದಕ್ಕೆ ಅನುಮತಿ ನೀಡಲಾಗಿದೆ.
ಭಾರತದ ಔಷಧಿ ಬೆಲೆ ಪ್ರಾಧಿಕಾರವು ಕೆಲವು ಅಗತ್ಯ ಔಷಧಿಗಳ ಬೆಲೆಯನ್ನು ಶೇ 50% ರಷ್ಟು ಹೆಚ್ಚಿಸಿದೆ. ಈ ಔಷಧಿಗಳಲ್ಲಿ ಹೆಚ್ಚಿನವು ಕಡಿಮೆ ಬೆಲೆಗೆ ಸಿಗುತ್ತಿತ್ತು. ಜನ ಸ್ನೇಹಿ ಬೆಲೆಯಲ್ಲಿಯೇ ಇದ್ದವು. ಆದರೆ, ಇದೀಗ ಔಷಧಿ ಕಂಪನಿಗಳ ಮನವಿಯ ಆಧಾರದ ಮೇಲೆ ಬೆಲೆ ಏರಿಕೆ ಮಾಡಲಾಗಿದೆ.
ಕೆಲವು ಔಷಧಿಗಳ ಬೆಲೆಯನ್ನು ಹೆಚ್ಚಿಸುವಂತೆ ಔಷಧಿ ತಯಾರಿಕೆ ಕಂಪನಿಗಳು ರಾಷ್ಟ್ರೀಯ ಔಷಧೀಯ ಬೆಲೆ ಪ್ರಾಧಿಕಾರಕ್ಕೆ (NPPA) ಮನವಿ ಸಲ್ಲಿಸಿದ್ದವು. ಈ ಮನವಿಯನ್ನು ಪರಿಗಣಿಸಿ ಬೆಲೆ ಏರಿಕೆ ಮಾಡಿರುವುದಾಗಿ ಹೇಳಲಾಗಿದೆ.
ಬೆಲೆ ಏರಿಕೆಗೆ ಕಾರಣ ಏನು?
ವಿವಿಧ ಆರೋಗ್ಯ ಸಮಸ್ಯೆಗೆ ನೀಡುವ ಔಷಧಿ ಬೆಲೆಗಳನ್ನು ಶೇಕಡ 50ರಷ್ಟು ಹೆಚ್ಚಳ ಮಾಡಲಾಗಿದೆ. ಇದಕ್ಕೆ ಔಷಧಿ ಕಂಪನಿಗಳು ನೀಡಿರುವ ಕಾರಣ ಔಷಧಿ ತಯಾರಿಕೆಯಲ್ಲಿ ಬಳಸುವ ಪ್ರಮುಖ ಪದಾರ್ಥಗಳ ಬೆಲೆ ಹೆಚ್ಚಳವಾಗಿದೆ ಎಂದು. ಅಲ್ಲದೇ ಉತ್ಪಾದನೆ ವೆಚ್ಚವೂ ಹೆಚ್ಚಾಗಿದೆ. ಕೆಲವು ಔಷಧಿಗಳನ್ನು ಈಗ ಇರುವ ಬೆಲೆಯಲ್ಲಿ ಉತ್ಪಾದನೆ ಮಾಡುವುದು ಸವಾಲಾಗಿದೆ ಎಂದೂ ಕಂಪನಿಗಳು ಹೇಳಿರುವುದು ವರದಿಯಾಗಿದೆ.
ಕೆಲವು ನಿರ್ದಿಷ್ಟ ಕಂಪನಿಗಳು ಕೆಲವು ಔಷಧಿಗಳ ತಯಾರಿಕೆಯನ್ನು ನಿಲ್ಲಿಸುವುದಾಗಿಯೂ ಹೇಳಿದ್ದವು ಎನ್ನಲಾಗಿದೆ. ಈಗ ಇರುವ ಬೆಲೆಯಲ್ಲಿ ಕೆಲವು ಔಷಧಿಗಳನ್ನು ತಯಾರಿಸಲು ಸಾಧ್ಯವಿಲ್ಲ. ಹೀಗಾಗಿ, ಅವುಗಳ ಬೆಲೆ ಹೆಚ್ಚಳಕ್ಕೆ ಮನವಿ ಮಾಡಿದ್ದವು ಎನ್ನಲಾಗಿದೆ.
ಇನ್ನು ದೇಶದಲ್ಲಿ ಸಾರ್ವಜನಿಕರ ಆರೋಗ್ಯ ದೃಷ್ಟಿಯಿಂದ ಈ ಔಷಧಿಗಳ ನಿರಂತರ ಲಭ್ಯತೆಯನ್ನು ಖಚಿತಪಡಿಸಿಕೊಳ್ಳಲು ಕೆಲವು ನಿರ್ದಿಷ್ಟ ಔಷಧಿಗಳ ಬೆಲೆಯನ್ನು ಶೇಕಡ 50ರಷ್ಟು ಹೆಚ್ಚಳಕ್ಕೆ ಅನುಮೋದನೆ ನೀಡುರುವುದಾಗಿ ಔಷಧೀಯ ಪ್ರಾಧಿಕಾರ ತಿಳಿಸಿದೆ.
ಬೆಲೆ ಹೆಚ್ಚಳವಾಗಿರುವ (ಪರಿಷ್ಕರಣೆ) ಮಾಡಲಾಗಿರುವ ಔಷಧಿಗಳ ಲಿಸ್ಟ್ ಇಂತಿವೆ
– ಬೆಂಜೈಲ್ ಪೆನ್ಸಿಲಿನ್ 10 ಲಕ್ಷ IU ಇಂಜೆಕ್ಷನ್ (ಈ ಮೆಡಿಸನ್ ಅನ್ನು ವಿವಿಧ ಬ್ಯಾಕ್ಟೀರಿಯಾದ ಸೋಂಕುಗಳನ್ನು ತಡೆಯಲು ನೀಡುವ ಚಿಕಿತ್ಸೆಯಲ್ಲಿ ಬಳಸಲಾಗುತ್ತದೆ).
– ಅಟ್ರೋಪಿನ್ ಇಂಜೆಕ್ಷನ್ 06.mg/ml (ಹೃದಯ ಸಂಬಂಧಿತ ಚಿಕಿತ್ಸೆ)
– ಸ್ಟ್ರೆಪ್ಟೊಮೈಸಿನ್ ದ್ರಾವಣ ಹಾಗೂ 750 ಮಿ.ಗ್ರಾಂ ಮತ್ತು 1000 ಮಿ.ಗ್ರಾಂ ಇಂಜೆಕ್ಷನ್‌ಗಾಗಿ (ಕ್ಷಯರೋಗ ಮತ್ತು ಇತರ ಬ್ಯಾಕ್ಟೀರಿಯಾ ಸೋಂಕುಗಳಿಗೆ ಚಿಕಿತ್ಸೆ ನೀಡುವ ಸಂದರ್ಭದಲ್ಲಿ ಬಳಸಲಾಗುತ್ತದೆ).
– ಸಾಲ್ಬುಟಮಾಲ್ ಮಾತ್ರೆ ಮತ್ತು ದ್ರಾವಣ (ಆಸ್ತಮಾ ಮತ್ತು ಇತರ ಉಸಿರಾಟದ ಸಮಸ್ಯೆಗೆ ಚಿಕಿತ್ಸೆ ನೀಡುವಾಗ ಬಳಸಲಾಗುತ್ತದೆ).
– ಪೈಲೊಕಾರ್ಪೈನ್ (ಗ್ಲುಕೋಮಾ ಚಿಕಿತ್ಸೆಗೆ)
– ಸೆಫಾಡ್ರೊಕ್ಸಿಲ್ ಮಾತ್ರೆ (ಕೆಲವು ಬ್ಯಾಕ್ಟೀರಿಯಾದ ಸೋಂಕುಗಳಿಗೆ ಚಿಕಿತ್ಸೆ)
– ಡೆಸ್ಫೆರಿಯೊಕ್ಸಮೈನ್ ಇಂಜೆಕ್ಷನ್ (ರಕ್ತಹೀನತೆ ಮತ್ತು ಥಲಸ್ಸೆಮಿಯಾ ಚಿಕಿತ್ಸೆಗೆ)
– ಲಿಥಿಯಂ ಮಾತ್ರೆಗಳು (ಮಾನಸಿಕ ಆರೋಗ್ಯ ಚಿಕಿತ್ಸೆಯಲ್ಲಿ ಬಳಸಲಾಗುತ್ತದೆ).
ಇನ್ನು ಔಷಧೀಯ ಪ್ರಾಧಿಕಾರವು (NPPA) ತನ್ನ ಅಧಿಕಾರವನ್ನು ಅಧಿಕಾರ ಬಳಸಿಕೊಂಡು ಮೂರನೇ ಬಾರಿ ಬೆಲೆ ನಿಯಂತ್ರಣಕ್ಕೆ ಮುಂದಾಗಿದೆ. 2019 ಹಾಗೂ 2021 ಬೆಲೆ ಏರಿಕೆ ಮಾಡಿತ್ತು. ಆಗಲೂ ಶೇ 50ರಷ್ಟು ಔಷಧಿ ಬೆಲೆಗಳನ್ನು ಏರಿಕೆ ಮಾಡಲಾಗಿತ್ತು. ಇದೀಗ ಎರಡೇ ವರ್ಷದ ಅವಧಿಯಲ್ಲಿ ಮತ್ತಷ್ಟು ಔಷಧಿಗಳ ಬೆಲೆ ಏರಿಕೆಯಾಗಿದೆ.