BPL Ration Card
ಇಂದು ರೇಷನ್ ಕಾರ್ಡ್ (Ration Card) ಎಷ್ಟು ಪ್ರಮುಖ ದಾಖಲೆ ಆಗಿದೆ ಎನ್ನುವುದು ಎಲ್ಲರಿಗೂ ತಿಳಿದೇ ಇದೆ. ಕರ್ನಾಟಕದ ಮಟ್ಟಿಗೆ ಹೇಳುವುದಾದರೆ ಕಾಂಗ್ರೆಸ್ ನೇತೃತ್ವದ ಸರ್ಕಾರವು ಜಾರಿಗೆ ತಂದಿರುವ ಗ್ಯಾರಂಟಿ ಯೋಜನೆಗಳಲ್ಲಿ (Guarantee Scheme) ಗೃಹಲಕ್ಷ್ಮಿ ಯೋಜನೆ ಮತ್ತು ಅನ್ನ ಭಾಗ್ಯ ಯೋಜನೆಯ ಪ್ರಯೋಜನ ಪಡೆಯಲು ರೇಷನ್ ಕಾರ್ಡ್ ಬೇಕೇ ಬೇಕು.
ಇದನ್ನು ಹೊರತುಪಡಿಸಿ ಅನೇಕ ಸಂದರ್ಭಗಳಲ್ಲಿ ರೇಷನ್ ಕಾರ್ಡ್ ಬೇಕಾಗುತ್ತದೆ. ಅದರಲ್ಲೂ APL ರೇಷನ್ ಕಾರ್ಡ್ ಗಿಂತ BPL ಹಾಗೂ ಅಂತ್ಯೋದಯ ರೇಷನ್ ಕಾರ್ಡ್ ಹೊಂದಿದವರಿಗೆ ಶೈಕ್ಷಣಿಕ ಶುಲ್ಕ ಹಾಗೂ ವೈದ್ಯಕೀಯ ಖರ್ಚು ವೆಚ್ಚಗಳಲ್ಲಿ ಹೆಚ್ಚಿನ ರಿಯಾಯಿತಿ ಜೊತೆಗೆ ಇನ್ನಿತರ ಹೆಚ್ಚು ಸರ್ಕಾರದ ಅನುಕೂಲತೆ ಸಿಗುತ್ತದೆ.
ಈ ಕಾರಣದಿಂದಾಗಿ ಪ್ರತಿ ವರ್ಷ BPL ರೇಷನ್ ಕಾರ್ಡ್ ಗಾಗಿ ಅರ್ಜಿ ಸಲ್ಲಿಸುವವರ ಸಂಖ್ಯೆ ಹೆಚ್ಚುತ್ತಲೇ ಇದೆ ಆದರೆ ಇದುವರೆಗೆ ತಿಳಿದು ಬಂದಿರುವ ಮಾಹಿತಿಯ ಪ್ರಕಾರವಾಗಿ ರಾಜ್ಯದಲ್ಲಿ ಈಗಾಗಲೇ BPL ರೇಷನ್ ಕಾರ್ಡ್ ಮಿತಿ ಭರ್ತಿಯಾಗಿದೆ.
ಇದಕ್ಕೆ ಕಾರಣ ಅನರ್ಹರು ಕೂಡ ಸುಳ್ಳು ದಾಖಲೆಗಳನ್ನು ಸೃಷ್ಟಿಸಿ ಸರ್ಕಾರ ನೀಡುತ್ತಿರುವ ಸೌಲಭ್ಯಗಳನ್ನು ಪಡೆಯುವುದಕ್ಕಾಗಿ BPL ಹಾಗೂ ಅಂತ್ಯೋದಯ ರೇಷನ್ ಕಾರ್ಡ್ ಗಳನ್ನು ಹೊಂದಿರುವುದು. ಈ ಬಗ್ಗೆ ಆರ್ಥಿಕ ಇಲಾಖೆಯು ಆಹಾರ ಇಲಾಖೆಗೆ ಸೂಚನೆ ಕೂಡ ನೀಡಿದೆ. ಇದನ್ನು ಸರ್ಕಾರಕ್ಕೆ ಮಾಡುತ್ತಿರುವ ವಂ’ಚ’ನೆ ಎಂದೇ ಪರಿಗಣಿಸಲಾಗಿದೆ.
ಹೀಗಾಗಿ ಯಾರೇ ಅನರ್ಹರು 2016ರ ಮಾನದಂಡಗಳನ್ನು ಮೀರಿ ಬಡತನ ರೇಖೆಗಿಂತ ಕೆಳಗಿರುವ ಕುಟುಂಬಗಳಿಗೆ ನೀಡುವ ರೇಷನ್ ಕಾರ್ಡ್ ಹೊಂದಿದ್ದರೆ ಈ ಕೂಡಲೇ ಹತ್ತಿರದ ತಾಲೂಕು ಕಚೇರಿಯ ಆಹಾರ ವಿಭಾಗಕ್ಕೆ ಹಿಂದಿರುಗಿಸುವಂತೆ, ಇಲ್ಲವಾದಲ್ಲಿ ಅಗತ್ಯ ವಸ್ತುಗಳ ಕಾಯ್ದೆ 1955 IPC ಸೆಕ್ಷನ್ ಅಡಿ ದೊಡ್ಡ ಮೊತ್ತದ ದಂಡದ ಜೊತೆಗೆ ಕ್ರಮ ಕೂಡ ಕೈಗೊಳ್ಳಲಾಗುವುದು ಎಂದು ಸರ್ಕಾರ ಎಚ್ಚರಿಸಿದೆ.
ಕಳೆದ ಹಲವು ದಿನಗಳಿಂದ ಆಹಾರ ಇಲಾಖೆ ಅಧಿಕಾರಿಗಳು ರೇಷನ್ ಕಾರ್ಡ್ ಪರಿಶೀಲನೆ ಮಾಡುತ್ತಿದ್ದಾರೆ, ಈ ವೇಳೆ ತಿಳಿದು ಬಂದಿರುವ ಪ್ರಕಾರ ಚಿಕ್ಕಮಗಳೂರು ಜಿಲ್ಲೆ ಒಂದರಲ್ಲೇ 52,200 ರೇಷನ್ ಕಾರ್ಡ್ ಗಳು ಅನರ್ಹವಾಗಿವೆ ಎಂದು ತಿಳಿದು ಬಂದಿದೆ ಮತ್ತು ಇವು ರದ್ದಾಗಿವೆ. ನೀವು ಕೂಡ ನಿಮ್ಮ ಜಿಲ್ಲೆಯ ಪಟ್ಟಿಯಲ್ಲಿ ಸೇರಿದ್ದೀರೇ ಎಂದು ತಿಳಿದುಕೊಳ್ಳಲು BPL ರೇಷನ್ ಕಾರ್ಡ್ ಮಾನದಂಡಗಳನ್ನು ತಿಳಿದುಕೊಳ್ಳುವುದು ಉತ್ತಮ, ಅದರ ವಿವರ ಇಂತಿದೆ ನೋಡಿ.
* ಕುಟುಂಬದಲ್ಲಿ ಯಾವುದೇ ಸದಸ್ಯನು ಸರ್ಕಾರ ಅಥವಾ ಸರ್ಕಾರದಿಂದ ಅನುದಾನ ಪಡೆಯುತ್ತಿರುವ ಸಂಸ್ಥೆಗಳು ಅಥವಾ ಸರ್ಕಾರಿ ಸಂಸ್ಥೆಗಳಿಂದ ವೇತನ ಪಡೆಯುತ್ತಿಬಾರದು
* ಆದಾಯ ತೆರಿಗೆ / ಸೇವಾ ತೆರಿಗೆ / ವೃತ್ತಿ ತೆರಿಗೆ ಪಾವತಿಸುತ್ತಿರುವವರು ಕೂಡ BPL ರೇಷನ್ ಕಾರ್ಡ್ ಪಡೆಯಲು ಅರ್ಹರಾಗಿರುವುದಿಲ್ಲ.
* ನಗರ ಪ್ರದೇಶದಲ್ಲಿ ವಾಸಿಸುವ ಜನರು 1000 sq.ft ಗಿಂತ ಹೆಚ್ಚಿನ ವಿಸ್ತೀರ್ಣದ ಸ್ವಂತ ಮನೆ ಹೊಂದಿದ್ದರೆ ಹಾಗೂ ಗ್ರಾಮೀಣ ಪ್ರದೇಶದಲ್ಲಿ ವಾಸಿಸುತ್ತಿರುವವರು 3 ಹೆಕ್ಟರಿಗಿಂತ ಹೆಚ್ಚಿನ ಕೃಷಿ ಭೂಮಿ ಹೊಂದಿದ್ದರೆ ಅವರು ಕೂಡ BPL ಕಾರ್ಡಿಗೆ ಅರ್ಹರಾಗಿರುವುದಿಲ್ಲ
* ಎಲ್ಲ ಮೂಲಗಳಿಂದ ಕುಟುಂಬದ ವಾರ್ಷಿಕ ಆದಾಯವು 1.20 ಲಕ್ಷಕ್ಕಿಂತ ಕಡಿಮೆ ಇರಬೇಕು
* ನಾಲ್ಕು ಚಕ್ರದ ವೈಟ್ ಬೋರ್ಡ್ ವಾಹನಗಳನ್ನು ಹೊಂದಿರುವವರು ಕೂಡ BPL ರೇಷನ್ ಕಾರ್ಡಿಗೆ ಅರ್ಹರಾಗಿರುವುದಿಲ್ಲ (ಇದು ಅನೇಕರ ಆತಂಕಕ್ಕೆ ಕಾರಣವಾಗಿತ್ತು)
ಆದರೆ ಸರ್ಕಾರವು ಕೆಲವರು ಜೀವನೋಪಾಯಕ್ಕಾಗಿ ನಾಲ್ಕು ಚಕ್ರದ ವಾಹನಗಳನ್ನು ಖರೀದಿಸುತ್ತಾರೆ. ಹೀಗಾಗಿ ಟ್ಯಾಕ್ಟರ್, ಮ್ಯಾಕ್ಸಿ ಕ್ಯಾಬ್ ಅಥವಾ ಟ್ಯಾಕ್ಸಿಗಳನ್ನು ವಾಣಿಜ್ಯ ಉದ್ದೇಶದಿಂದ ಹೊಂದಿದ್ದರೆ ಇವರಿಗೆ ಅನುಮತಿ ಇದೆ ಎಂದು ಸ್ಪಷ್ಟೀಕರಣ ನೀಡಿದೆ. ಇವರನ್ನು ಹೊರತುಪಡಿಸಿ ಇನ್ಯಾವುದೇ ನಾಲ್ಕು ಚಕ್ರದ ವಾಹನಗಳನ್ನು ಹೊಂದಿದ್ದರೂ ಆ ಕುಟುಂಬವು ಬಿಪಿಎಲ್ ಕಾರ್ಡಿಗೆ ಅರ್ಹರಾಗಿರುವುದಿಲ್ಲ ಎಂದು ತಿಳಿಸಿದೆ.