e-KYC
ಕೇಂದ್ರ ಸರ್ಕಾರವು ಗ್ಯಾಸ್ ಬಳಕೆದಾರರಿಗೆ ಪ್ರತಿ ಬುಕ್ಕಿಂಗ್ ಮೇಲೆ ರೂ.200 ಸಬ್ಸಿಡಿ (Subsidy) ಘೋಷಿಸಿದೆ ಮತ್ತು ಈಗಾಗಲೇ ಪ್ರಧಾನಮಂತ್ರಿ ಉಜ್ವಲ್ ಯೋಜನೆಯಲ್ಲಿ (Pradhana Mantri Ujwal Yojane) ಗ್ಯಾಸ್ ಸಿಲಿಂಡರ್ ಕನೆಕ್ಷನ್ ಪಡೆದವರು 200 ರುಪಾಯಿ ಸಬ್ಸಿಡಿ ಪಡೆಯುತ್ತಿದ್ದರು.
ಈಗ ಆ ಗ್ಯಾಸ್ ಸಬ್ಸಿಡಿ ಹಣವನ್ನು ಪಡೆಯಬೇಕು ಎಂದರೆ ಗ್ರಾಹಕರು ತಮ್ಮ e-KYC ಅಪ್ಡೇಟ್ ಮಾಡಿರಬೇಕು. ನಿಮ್ಮ ಮೊಬೈಲ್ ಫೋನಿನಲ್ಲಿ ಕೂಡ e-KYC ಅಪ್ಡೇಟ್ ಮಾಡಬಹುದು ಈಗ ನಾವು ಹೇಳುವ ಈ ವಿಧಾನಗಳನ್ನು ಅನುಸರಿಸಿ ಕೂಡಲೇ ನಿಮ್ಮ e-KYC ಅಪ್ಡೇಟ್ ಮಾಡಿ.
* HP Gas ಕನೆಕ್ಷನ್ ಪಡೆದವರ ಉದಾಹರಣೆಯೊಂದಿಗೆ ಇದನ್ನು ತಿಳಿಸುತ್ತಿದ್ದೇವೆ. HP ಗ್ಯಾಸ್ ಕರೆಕ್ಷನ್ ಪಡೆದವರು ಗೂಗಲ್ ನಲ್ಲಿ My HP Gas ಎಂದು ಟೈಪ್ ಮಾಡಿ ಸರ್ಚ್ ಕೊಡಿ
* My HP Gas / Home ಲಿಂಕ್ ಕಾಣುತ್ತದೆ ಕ್ಲಿಕ್ ಮಾಡಿ
* ನೇರವಾಗಿ My HPgas.in ವೆಬ್ಸೈಟ್ ಪುಟ ಓಪನ್ ಆಗುತ್ತದೆ.
ಅದರಲ್ಲಿ ಈಗಾಗಲೇ ನೀವು ಈ ವೆಬ್ ಸೈಟ್ ನಲ್ಲಿ ಅಕೌಂಟ್ ಕ್ರಿಯೇಟ್ ಮಾಡಿದ್ರೆ Sign in ಕೊಟ್ಟು ಮುಂದುವರೆಯಿರಿ, ಇದೇ ಮೊದಲ ಬಾರಿಗೆ ನಿಮ್ಮ ಅಕೌಂಟ್ ನೋಡುತ್ತಿದ್ದರೆ New User ಎನ್ನುವ ಆಪ್ಷನ್ ಮೇಲೆ ಕ್ಲಿಕ್ ಮಾಡಿ.
* ಸ್ಕ್ರೀನ್ ಮೇಲೆ Noramal Search ಎನ್ನುವ ಫಾರ್ಮೆಟ್ ಬರುತ್ತದೆ. ಅದರಲ್ಲಿ ನಿಮ್ಮState, District, Distributor (Agency Name) ಸೆಲೆಕ್ಟ್ ಮಾಡಿ ನಂತರ ನಿಮ್ಮ Consumer Number ಎಂಟ್ರಿ ಮಾಡಿ.
* ಎಡ ಭಾಗದಲ್ಲಿ ಮೊಬೈಲ್ ನಂಬರ್ ಕೇಳಿರುತ್ತದೆ. ನೀವು ಯಾರ ಹೆಸರಿನಲ್ಲಿ ಗ್ಯಾಸ್ ಕನೆಕ್ಷನ್ ಪಡೆದಿದ್ದೀರ ಅವರ ಆಧಾರ್ ಗೆ ಲಿಂಕ್ ಆಗಿರುವ ಮೊಬೈಲ್ ಸಂಖ್ಯೆ ಎಂಟ್ರಿ ಮಾಡಿ ಕೆಳಗೆ ನೀಡುವ ಕ್ಯಾಪ್ಚಾ ಕೋಡ್ ಕೂಡ ನಮೂದಿಸಿ proceed ಮೇಲೆ ಕ್ಲಿಕ್ ಮಾಡಿ.
* ನಿಮ್ಮ ಮೊಬೈಲ್ ನಂಬರ್ ಅಥವಾ ಇ-ಮೇಲ್ ಆಕೌಂಟ್ ಮೂಲಕ Password set ಮಾಡಿಕೊಳ್ಳಿ. 8 ಅಂಕೆಗಳ ಈ Password ನಲ್ಲಿ 1 Capital letter, 1 Numeric, 1 special Character ಇರಬೇಕು. ಆಗ ಮುಖಪುಟದಲ್ಲಿ ನೇರವಾಗಿ sign in ಆಪ್ಷನ್ ಮೇಲೆ ಕ್ಲಿಕ್ ಮಾಡಿದರೆ ನಿಮ್ಮ Mobile No. ಹಾಗೂ Password ಹಾಕಿ ನೇರವಾಗಿ Login ಆಗಬಹುದು.
* Log in ಆದ ತಕ್ಷಣ ಗ್ರಾಹಕನ ಪೂರ್ತಿ ವಿವರ ಬರುತ್ತದೆ.
* ಮುಂದಿನ ಹಂತದಲ್ಲಿ track your Reffil ಎನ್ನುವ ಆಪ್ಷನ್ ಮೇಲೆ ಕ್ಲಿಕ್ ಮಾಡಿದರೆ ನೀವು ಎಷ್ಟು ವರ್ಷದಿಂದ ಗ್ಯಾಸ್ ಸಂಪರ್ಕ ಪಡೆದಿದ್ದೀರಿ ಮತ್ತು ಯಾವ ಏಜೆನ್ಸಿ ಹಾಗೂ ಎಷ್ಟು ಬುಕಿಂಗ್ ಮಾಡಿದ್ದೀರಿ, ಎಷ್ಟು ಹಣ ಕಟ್ಟಿದ್ದೀರಿ ಸಂಪೂರ್ಣ ವಿವರ ಬರುತ್ತದೆ.
* ನೀವು ಸ್ಕ್ರೀನ್ ನ ಎಡಭಾಗದಲ್ಲಿರುವ ಸರ್ವಿಸ್ ಗಳ ವಿವರದಲ್ಲಿ ಕೊನೆಯಲ್ಲಿರುವ Aadhar Authentication ಎನ್ನುವ ಆಪ್ಷನ್ ಮೇಲೆ ಕ್ಲಿಕ್ ಮಾಡಿ.
* ಸ್ಕ್ರೀನ್ ಮೇಲೆ LPG KYC ಕುರಿತು ವಿವರ ಇರುತ್ತದೆ, ಅದನ್ನು ಓದಿ ಅರ್ಥೈಸಿಕೊಂಡು ಚೆಕ್ ಬಾಕ್ಸ್ ಮೇಲೆ ರೈಟ್ ಕ್ಲಿಕ್ ಮಾಡಿ.
ಅದರ ಕೆಳಗೆ ನಿಮ್ಮ ಆಧಾರ್ ಕಾರ್ಡ್ ನ ಕೊನೆಯ ನಾಲ್ಕು ಸಂಖ್ಯೆಗಳು ಕಾಣುತ್ತೆ ಅದನ್ನು ಧೃಡಪಡಿಸಿಕೊಂಡು ನೀಡಿರುವ ಕ್ಯಾಪ್ಚ ಕೋಡ್ ಎಂಟ್ರಿ ಮಾಡಿ generate OTP ಎನ್ನುವ ಆಪ್ಷನ್ ಮೇಲೆ ಕ್ಲಿಕ್ ಮಾಡಿ.
* ಆಧಾರ್ ಗೆ ಲಿಂಕ್ ಆಗಿರುವ ಮೊಬೈಲ್ ಸಂಖ್ಯೆಗೆ ಬಂದಿರುವ OTP ಎಂಟ್ರಿ ಮಾಡಿ, Authentication ಎನ್ನುವುದನ್ನು ಕ್ಲಿಕ್ ಮಾಡಿ.
* ಈ ಎಲ್ಲಾ ಹಂತಗಳನ್ನು ಸರಿಯಾಗಿ ಪೂರ್ತಿ ಗೊಳಿಸಿದ್ದರೆ Authentication Successfully ಎನ್ನುವ ಪಾಪ್ ಆಫ್ ಮೆಸೇಜ್ ಕಾಣುತ್ತದೆ. ಒಂದು ವೇಳೆ ನೀವು ಈಗಾಗಲೇ ಆಧಾರ್ ಲಿಂಕ್ ಮಾಡಿ ಕೆವೈಸಿ ಅಪ್ಡೇಟ್ ಮಾಡಿದ್ದರೆ your e-KYC already Submitted ಎಂದು ಬರುತ್ತದೆ.
* ನಿಮ್ಮ ಆಧಾರ್ ಕಾರ್ಡಿಗೆ ಲಿಂಕ್ ಆಗಿರುವ ಮೊಬೈಲ್ ಸಂಖ್ಯೆ ನಿಮ್ಮ ಬಳಿ ಇದ್ದರೆ, ನಿಮ್ಮ ಗ್ಯಾಸ್ ಸಂಪರ್ಕಕ್ಕೆ ಅದೇ ನಂಬರ್ ಲಿಂಕ್ ಆಗಿದ್ದರೆ ಈ ಪ್ರಕ್ರಿಯೆ ಮೊಬೈಲ್ ಮೂಲಕ ಅಥವಾ ಕಂಪ್ಯೂಟರ್ ಮೂಲಕ ಸುಲಭವಾಗಿ ಮಾಡಬಹುದು, ಇಲ್ಲವಾದಲ್ಲಿ ನಿಮ್ಮ ಏಜೆನ್ಸಿಗಳಿಗೆ ಭೇಟಿ ಕೊಟ್ಟು ಬಯೋಮೆಟ್ರಿಕ್ (By Biometric) ಮೂಲಕ ಮಾಡಿಸಬೇಕಾಗುತ್ತದೆ.