Property Rights
ಮಹಿಳೆಯರ ಆಸ್ತಿ ಹಕ್ಕು ಅಧಿನಿಯಮ 1955ರಲ್ಲಿ ಜಾರಿಗೆ ಬಂದಿತು. ಆಗಿನಿಂದಲೂ ಕೂಡ ಹಿಂದೂ ಅವಿಭಕ್ತ ಕುಟುಂಬದಲ್ಲಿ ಹುಟ್ಟಿದ ಹೆಣ್ಣು ಮಗಳಿಗೆ ಪಿತ್ರಾಜಿತ ಆಸ್ತಿಯಲ್ಲಿ ಪಾಲು ಇದೆ. ಕಾಲಕ್ರಮೇಣ ಅನೇಕ ಬಾರಿ ಈ ಕಾನೂನನ್ನು ತಿದ್ದುಪಡಿ ಮಾಡಿ ಇನ್ನಷ್ಟು ಬಲಗೊಳಿಸಲಾಗಿದೆ. ಆ ಪ್ರಕಾರವಾಗಿ 2004ರ ಸೆಕ್ಷನ್6 ಸಬ್ ಕ್ಲಾಸ್ 2 ನ್ನು ಹಿಂದೂ ಉತ್ತರಾದಿತ್ವದ ಕಾಯ್ದೆಗೆ ಇದನ್ನು ಸೇರಿಸಲಾಗಿದೆ.
ಇದು ಹೇಳುವುದು ಏನೆಂದರೆ ಯಾವುದೇ ಹೆಣ್ಣು ಮಗಳು 2004 ರ ನಂತರ ಕೊಟ್ಟಿದ್ದಾರೆ ಆ ಮಕ್ಕಳು ತಂದೆ ಆಸ್ತಿಯಲ್ಲಿ ಸಮಾನ ಪಾಲನ್ನು ಹೊಂದಿದ್ದಾರೆ ಮತ್ತು 2004 ರ ಹಿಂದೆ ಹುಟ್ಟಿರುವ ಹೆಣ್ಣುಮಗಳಿಗೂ ಕೂಡ ತಂದೆಯ ಪಿತ್ರಾರ್ಜಿತ ಆಸ್ತಿಯಲ್ಲಿ ಪಾಲು ಕೊಡಬೇಕು ಎಂದು ಹೇಳಲಾಗಿದೆ ಹಾಗಾದರೆ ಆ ಪ್ರಕಾರವಾಗಿ ಎಷ್ಟು ಭಾಗ ಸಿಗುತ್ತದೆ ಎನ್ನುವ ಹಲವು ಪ್ರಶ್ನೆಗಳ ಕುರಿತಾಗಿ ಈ ಅಂಕಣದಲ್ಲಿ ಮಾಹಿತಿ ತಿಳಿಸುತ್ತಿದ್ದೇವೆ.
ಹಿಂದೂ ಉತ್ತರಾದಿತ್ವದ ಕಾಯಿದೆ ಸೆಕ್ಷನ್ 6ರ ಅಡಿಯಲ್ಲಿ ಸುಪ್ರೀಂಕೋರ್ಟ್ ಹಾಗೂ ಹೈ ಕೋರ್ಟ್ ನಲ್ಲಿ ಅನೇಕ ಆಸ್ತಿ ಸಂಬಂಧಿತ ವ್ಯಾಜ್ಯಗಳು ಇತ್ಯರ್ಥವಾಗಿವೆ. ಪಿತ್ರಾರ್ಜಿತ ಆಸ್ತಿ ಎಂದರೆ ಅಪ್ಪನ ಅಪ್ಪ ಹಾಗೂ ಅಪ್ಪನ ತಾತ ಹೀಗೆ ತಲಾಂತಲಾಂತರದಿಂದ ಬಂದಿರುವ ಆಸ್ತಿ ಆಗಿರುತ್ತದೆ.
ಇಂತಹ ಆಸ್ತಿಯಲ್ಲಿ ತಂದೆಯ ಗಂಡು ಮಕ್ಕಳು ಹೊಂದಿರುವಷ್ಟೇ ಸಮಾನ ಹಕ್ಕನ್ನು ಆ ತಂದೆಯ ಹೆಣ್ಣು ಮಕ್ಕಳು ಕೂಡ ಹೊಂದಿರುತ್ತಾರೆ ಎನ್ನುವುದನ್ನು ಈ ಮೇಲಿನ ಕಾಯ್ದೆಗಳು ತಿಳಿಸುತ್ತವೆ. ಚರಾಸ್ತಿ (movable) ಎಂದು ಹೇಳಲಾಗುವ ಒಡವೆ ಹಣ ಬೆಲೆಬಾಳುವ ವಸ್ತುಗಳು ಇವುಗಳಿಗೆ ಕೂಡ ಇದು ಅನ್ವಯಿಸುತ್ತದೆ.
ಮತ್ತು ಸ್ಥಿರಾಸ್ತಿಗಳು (non movable) ಎಂದು ಹೇಳಲಾಗುವ ತಂದೆ ಸ್ವಯಾರ್ಜಿತ ಆಸ್ತಿ ಬಿಟ್ಟು ಉಳಿದೆ ಎಲ್ಲಾ ಆಸ್ತಿಗಳಿಗೂ ಕೂಡ ಈ ಕಾನೂನು ಅನ್ವಯಿಸುತ್ತದೆ. 2004 ರ ನಂತರ ಹುಟ್ಟಿರುವ ಹೆಣ್ಣು ಮಕ್ಕಳು ಈ ರೀತಿಯಾಗಿ ಅವರ ಅವಿಭಕ್ತ ಕುಟುಂಬದ ಆಸ್ತಿಯಲ್ಲಿ ಪಾಲನ್ನು ಪಡೆಯಬಹುದಾಗಿದೆ.
ಹಾಗಾದರೆ 2004ಕ್ಕೂ ಮುಂಚೆ ಹುಟ್ಟಿದ ಹೆಣ್ಣು ಮಕ್ಕಳಿಗೆ ಪಿತ್ರಾರ್ಜಿತ ಆಸ್ತಿಯಲ್ಲಿ ಹಕ್ಕು ಇಲ್ಲವೆಂದರೆ ಖಂಡಿತವಾಗಿಯೂ ಅವರಿಗೂ ಭಾಗಾಂಶ ಇರುತ್ತದೆ. ಆದರೆ ಆ ಪಾಲನ್ನು nocturnal Share ಎನ್ನಲಾಗುತ್ತದೆ. ಇದರ ಅರ್ಥ ಒಬ್ಬ ತಂದೆಗೆ ಮೂರು ಜನ ಮಕ್ಕಳಿದ್ದಾಗ ಆ ತಂದೆಗೆ ಅವರ ತಂದೆಯವರಿಂದ ಬಂದ ಆಸ್ತಿಯನ್ನು ನಾಲ್ಕು ಭಾಗ ಮಾಡಲಾಗುತ್ತದೆ.
ಇದರಲ್ಲಿ ಮೂರು ಮಕ್ಕಳಿಗೆ ಮೂರು ಭಾಗ ತಂದೆಗೂ ಒಂದು ಭಾಗ ಇರುತ್ತದೆ. ಆ ತಂದೆಗೆ ಸೇರಿದ ಒಂದು ಭಾಗದಲ್ಲಿ ಪಾಲನ್ನು ಪಡೆಯುವ ಹಕ್ಕನ್ನು ಮಾತ್ರ ಆ ಹೆಣ್ಣು ಮಕ್ಕಳು ಹೊಂದಿರುತ್ತಾರೆ ಇದು nocturnal share ಎನಿಸಿಕೊಳ್ಳುತ್ತದೆ. ಆದರೆ ತಂದೆಯ ಸ್ವಯಾರ್ಜಿತ ಆಸ್ತಿಯಲ್ಲಿ ಹೆಣ್ಣು ಮಕ್ಕಳೇ ಆಗಲಿ, ಗಂಡು ಮಕ್ಕಳೇ ಆಗಲಿ ಪಾಲು ಕೇಳಲು ಕಾನೂನಿನಲ್ಲಿ ಅವಕಾಶ ಇಲ್ಲ.
ತಂದೆಯು ತನಗೆ ಇಷ್ಟ ಆದ ಯಾವುದೇ ಹೆಣ್ಣು ಮಗು ಅಥವಾ ಗಂಡು ಮಗನಿಗೆ ತನ್ನ ಸಂಪೂರ್ಣ ಆಸ್ತಿ ಬರೆಯಬಹುದು ಅಥವಾ ಮೊಮ್ಮಕ್ಕಳಿಗೆ ಬರೆಯಬಹುದು ಅಥವಾ ಬೇರೆ ಯಾರಿಗೆ ಬೇಕಾದರೂ ಬರೆಯಬಹುದು.
ಒಂದು ವೇಳೆ ತಂದೆಯು ತನ್ನ ಸ್ವಯಾರ್ಜಿತ ಆಸ್ತಿಯನ್ನು ಯಾರ ಹೆಸರಿಗೂ ಬರೆಯದೆ ಮೃ’ತ ಪಟ್ಟಿದ್ದಲ್ಲಿ ಆಗ ಆ ತಂದೆ ಆಸ್ತಿಯಲ್ಲಿ ಅವರ ಎಲ್ಲಾ ಮಕ್ಕಳಿಗೂ ಕೂಡ ಸಮಪಾಲು ಇರುತ್ತದೆ. ಆಗ ತಂದೆಗೆ ಮೂರು ಗಂಡು ಮಕ್ಕಳು ಹಾಗೂ ಒಂದು ಹೆಣ್ಣು ಮಗಳು ಇದ್ದರೆ ಆ ಮಕ್ಕಳಿಗೆ ಕೂಡ ಆಕೆಯ ಸಹೋದರರಿಗೆ ಇರುವಷ್ಟೇ ಹಕ್ಕು ಹಾಗೂ ಅಧಿಕಾರ ಇರುತ್ತದೆ.