Labour ಈ ಲಿಸ್ಟ್ ನಲ್ಲಿ ಹೆಸರು ಇರುವ ಲೇಬರ್ ಕಾರ್ಡ್ ರದ್ದು.! ಸರ್ಕಾರದಿಂದ ಖಡಕ್ ಆದೇಶ ಜಾರಿ.!

Labour Card

ರಾಜ್ಯದಲ್ಲಿ ಕಾರ್ಮಿಕರ ಕಲ್ಯಾಣಕ್ಕಾಗಿ (Labour Empowerment) ರಾಜ್ಯ ಸರ್ಕಾರವು ಹಲವಾರು ಯೋಜನೆಗಳನ್ನು ರೂಪಿಸಿದೆ. ಕರ್ನಾಟಕ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿಯಲ್ಲಿ ನೋಂದಣಿಯಾಗಿ ವರ್ಷ ಪೂರೈಸಿದ್ದರೆ ಆ ಕಾರ್ಮಿಕರುಗಳು ಮಂಡಳಿ ವತಿಯಿಂದ ಲೇಬರ್ ಕಾರ್ಡ್ (Labour Card) ಗುರುತಿನ ಚೀಟಿ ಪಡೆದು ಈ ಯೋಜನೆಗಳ ಪ್ರಯೋಜನವನ್ನು ಪಡೆಯಬಹುದು.

ಕಾರ್ಮಿಕರು ಮಾತ್ರವಲ್ಲದೇ ಲೇಬರ್ ಕಾರ್ಡ್ ಹೊಂದಿದ್ದರೆ ಅವರ ಕುಟುಂಬದವರು ಸಹ ಅನೇಕ ಸೌಲಭ್ಯಗಳನ್ನು ಪಡೆಯಲಿದ್ದಾರೆ. ಉಚಿತ ಪ್ರಯಾಣ, ಆರೋಗ್ಯ ವಿಮೆ, ಮಕ್ಕಳ ವಿವಾಹಕ್ಕೆ ಪ್ರೋತ್ಸಾಹ ಧನ, ಮಕ್ಕಳ ವಿದ್ಯಾಭ್ಯಾಸಕ್ಕೆ ವಿದ್ಯಾರ್ಥಿ ವೇತನ, ಉಚಿತ ಕಿಟ್, ಹೆರಿಗೆ ಸೌಲಭ್ಯ, ಪಿಂಚಣಿ ವ್ಯವಸ್ಥೆ ಸೇರಿದಂತೆ ಹತ್ತಾರು ಯೋಜನೆಗಳ ಪ್ರಯೋಜನವನ್ನು ಪಡೆಯಬಹುದು.

WhatsApp Group Join Now
Telegram Group Join Now

ಸಹಜವಾಗಿ ಇಷ್ಟೆಲ್ಲ ಅನುಕೂಲತೆ ಇರುವಾಗ ಅನರ್ಹರು ಕೂಡ ಕಟ್ಟಡ ಕಾರ್ಮಿಕರು ಎಂದು ಗುರುತಿಸಿಕೊಂಡು ಈ ಪ್ರಯೋಜನಗಳನ್ನು ಪಡೆಯಲು ಪ್ರಯತ್ನಿಸುತ್ತಾರೆ. ಈಗಾಗಲೇ ಅನೇಕರು ಈ ರೀತಿ ವಂಚಿಸಿ ನಕಲಿ ದಾಖಲೆಗಳನ್ನು ಕೊಟ್ಟಿ ಕಾರ್ಮಿಕರಲ್ಲದಿದ್ದರೂ ಲೇಬರ್ ಕಾರ್ಡ್ ಪಡೆದಿದ್ದಾರೆ ಎನ್ನುವುದು ಮಂಡಳಿಯ ಗಮನಕ್ಕೆ ಬಂದಿದೆ, ಆ ಮೂಲಕ ಸರ್ಕಾರಕ್ಕೂ ತಿಳಿದಿದೆ.

ಈ ರೀತಿ ಅನರ್ಹದಿಂದ ಕಾರ್ಡ್ ಗಳನ್ನು ವಶಪಡಿಸಿಕೊಳ್ಳದೆ ಇದ್ದರೆ ಸರ್ಕಾರಕ್ಕೆ ದೊಡ್ಡ ಮೊತ್ತದ ನ’ಷ್ಟವಾಗುವುದು ಮತ್ತು ನಿಜವಾದ ಅರ್ಹರಿಗೂ ವಂಚನೆ ಆಗುವುದು ಖಂಡಿತ. ಅದಕ್ಕಾಗಿ ಸರ್ಕಾರ ಈಗ ಈ ಕುರಿತು ಒಂದು ಮಹತ್ವದ ಆದೇಶವನ್ನು (Notice) ಹೊರಡಿಸಿ ಈ ರೀತಿ ಸರ್ಕಾರಕ್ಕೆ ಮಾಹಿತಿ ಮರೆಮಾಚಿ ಲೇಬರ್ ಕಾರ್ಡ್ ಪಡೆದವರಿಗೆ ಎಚ್ಚರಿಕೆಯ ಸಂದೇಶ ರವಾನಿಸಿದೆ.

ಈ ಮೂಲಕ ಸರ್ಕಾರ ಪ್ರಕಟಣೆಯಲ್ಲಿ ತಿಳಿಸಿರುವುದೇನೆಂದರೆ ಕಟ್ಟಡ ನಿರ್ಮಾಣ ಕಾರ್ಮಿಕರಲ್ಲದವರು ಕರ್ನಾಟಕ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಕಲ್ಯಾಣ ಮ೦ಡಳಿಯಲ್ಲಿ ನಕಲಿ ದಾಖಲೆಗಳನ್ನು ಸಲ್ಲಿಸಿ ನೋಂದಣಿಯಾಗಿದ್ದಾರೆ. ಈ ರೀತಿ ಮಂಡಳಿಗೆ ನಕಲಿ ದಾಖಲೆ ನೀಡಿ ಕಾರ್ಮಿಕರೆಂದು ನೋಂದಣಿ ಮಾಡಿಸಿಕೊಂಡು ಮಂಡಳಿಯ ಸೌಲಭ್ಯಗಳನ್ನು ಪಡೆಯುವುದು ಶಿಕ್ಷಾರ್ಹ ಅಪರಾಧ.

ಅಂತಹವರು ತಾವೇ ಖುದ್ದಾಗಿ ಹಿರಿಯ ಕಾರ್ಮಿಕ ನಿರೀಕ್ಷಕರು ಅಥವಾ ಕಾರ್ಮಿಕ ನಿರೀಕ್ಷಕರ ಕಚೇರಿಗೆ ಭೇಟಿ ನೀಡಿ ಕಾರ್ಮಿಕ ಕಾರ್ಡ್ ರ’ದ್ದುಪಡಿಸಿಕೊಳ್ಳತಕ್ಕದ್ದು ಎಂದು ಸೂಚನೆ ನೀಡಿದೆ. ಮೂಲ ಗುರುತಿನ ಚೀಟಿಯನ್ನು ಹಿಂದಿರುಗಿಸುವ ಮೂಲಕ ತಮ್ಮ ನೋಂದಣಿಯನ್ನು ರ’ದ್ದುಪಡಿಸಿಕೊಳ್ಳಬೇಕೆಂದು ಮನವಿ ಮಾಡಿರುವ ಸರ್ಕಾರವು ಒಂದು ವೇಳೆ ಮಂಡಳಿಗೆ ನಕಲಿ ಫಲಾನುಭವಿಗಳನ್ನು ಪತ್ತೆಹಚ್ಚಲು ಕ್ರಮ ಕೈಗೊಂಡ ವೇಳ ಸಿಕ್ಕಿ ಬಿದ್ದರೆ ಕಠಿಣ ಕ್ರಮ ಜರುಗಿಸಲಾಗುವುದು ಎಂದು ತಿಳಿಸಿ ಶಾ’ಕ್ ನೀಡಿದೆ

ಈಗಾಗಲೇ ಕಟ್ಟಡ ಕಾರ್ಮಿಕ ಮತ್ತು ಇತರ ನಿರ್ಮಾಣ ಮಂಡಳಿ ವತಿಯಿಂದ ನಕಲಿ ಅನರ್ಹ ಕಾರ್ಮಿಕರನ್ನು ಪತ್ತೆಹಚ್ಚಲು ರಾಜ್ಯಾದ್ಯಂತ ಪರಿಶೀಲನೆ ಕಾರ್ಯ ನಡೆಯುತ್ತಿದೆ. ಈ ಸಂದರ್ಭದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಅನರ್ಹರು ಇದ್ದಾರೆ ಎಂದು ತಿಳಿದು ಬಂದಿರುವುದರಿಂದ ಸರ್ಕಾರವೇ ಮುನ್ನೆಚ್ಚರಿಕೆಯಾಗಿ ಈ ವಿಷಯ ತಿಳಿಸಿದೆ.

ಒಂದು ವೇಳೆ ಈ ಸಮಯದಲ್ಲಿ ಸರ್ಕಾರ ಸೂಚನೆಯಂತೆ ಅರ್ಹರು ಕಾರ್ಡ್ ರ’ದ್ದು ಪಡಿಸಿಕೊಳ್ಳದೆ ಹೋದರೆ ಪರಿಶೀಲನೆಯ ಸಮಯದಲ್ಲಿ ಸಿಕ್ಕಿ ಬಿದ್ದರೆ ಅವರ ನೋಂದಣಿಯನ್ನು ರದ್ದುಪಡಿಸುವುದರ ಜೊತೆಗೆ ಅವರು ಮಂಡಳಿಯಿಂದ ಇಲ್ಲಿಯವರೆಗೂ ಪಡೆದ ಎಲ್ಲಾ ಸೌಲಭ್ಯಗಳನ್ನು ದಂಡಸಹಿತ ಹಿಂಪಡೆಯಲು ಕ್ರಮ ವಹಿಸಲಾಗುವುದು ಹಾಗೂ ಅವರ ವಿರುದ್ಧ ಕಾನೂನು ರೀತಿಯ ಕಠಿಣ ಕ್ರಮ ಜರುಗಿಸಲಾಗುವುದು ಎಂದು ಎಚ್ಚರಿಕೆ ನೀಡಲಾಗಿದೆ.

 

ಸರ್ಕಾರಿ ಯೋಜನೆ, ಸರ್ಕಾರಿ ಉದ್ಯೋಗಗಳು,ಮತ್ತು ಖಾಸಗಿ ಕಂಪನಿ ಉದ್ಯೋಗದ ಬಗ್ಗೆ ದೈನಂದಿನ ಮಾಹಿತಿಯನ್ನು ಪಡೆಯಲು ನಮ್ಮ needs of ಕನ್ನಡ WhatsApp ಗ್ರೂಪ್ ಮತ್ತು ಟೆಲಿಗ್ರಾಮ್ ಚಾನಲ್‌ಗೆ ಜಾಯಿನ್ ಆಗಿರಿ
WhatsApp Group Join Now
Telegram Group Join Now

Leave a Comment