Post office
ಸಾಮಾನ್ಯವಾಗಿ ಆರ್ಥಿಕ ವರ್ಷದ ಅಂತ್ಯದಲ್ಲಿ ಹಣಕಾಸು ಸಂಸ್ಥೆಗಳಲ್ಲಿ ಕೆಲವು ಬದಲಾವಣೆಗಳಾಗುತ್ತವೆ. ಅದೇ ರೀತಿಯಾಗಿ ಅಂಚೆ ಕಚೇರಿಯಲ್ಲಿ (Post Office) ಕೂಡ ಬದಲಾವಣೆ ಆಗುತ್ತದೆ. ಇದನ್ನು ಹೊರತುಪಡಿಸಿ ಸಾಮಾನ್ಯವಾಗಿ ಆಗುವ ಬದಲಾವಣೆಗಳೆಂದರೆ ಪ್ರತಿ ಮೂರು ತಿಂಗಳಿಗೊಮ್ಮೆ ವಿವಿಧ ಯೋಜನೆಗಳ ಬಡ್ಡಿ ದರಗಳು ಪರಿಷ್ಕೃತವಾಗುತ್ತದೆ ಮತ್ತು ವರ್ಷಾಂತವು ಕೂಡ ಹೊಸ ಯೋಜನೆಗಳಿಗೆ ನಾಂದಿ ಆಡುತ್ತದೆ.
ಕಳೆದ ಹಲವು ವರ್ಷಗಳಿಂದ ಈ ರೀತಿ ಬದಲಾವಣೆ ಆಗಿರುವುದು ಈ ವರ್ಷದ ಬಗ್ಗೆಯೂ ಕೂಡ ನಿರೀಕ್ಷೆ ಹುಟ್ಟಿಸುತ್ತದೆ ಕಳೆದ ವರ್ಷವೂ 2023 ರಲ್ಲಿ ಉಳಿತಾಯ ಯೋಜನೆಗೆ ಸಂಬಂಧಿಸಿದ ನಿಯಮಗಳಲ್ಲಿ ಹಲವಾರು ಬದಲಾವಣೆಗಳನ್ನು ಮಾಡಲಾಗಿತ್ತು ಇದರ ಜೊತೆಗೆ ಹಲವಾರು ಹೊಸ ಯೋಜನೆಗಳನ್ನು ಸಹ ಪ್ರಾರಂಭಿಸಲಾಗಿತ್ತು.
ಅದರಲ್ಲಿ ಪ್ರಮುಖವಾಗಿ ಹಿಂದಿನ ನಿಯಮದ ಪ್ರಕಾರ ಜಂಟಿ ಖಾತೆಯಲ್ಲಿ ಇಬ್ಬರಿಗೆ ಮಾತ್ರ ಖಾತೆ ತೆರೆಯಲು ಇದ್ದ ಅವಕಾಶವನ್ನು 2023ರಲ್ಲಿ ಮೂವರ ಸಂಖ್ಯೆಗೆ ಹೆಚ್ಚಿಸಲಾಗಿದೆ. ಈ ಕಾರಣದಿಂದಾಗಿ ಮೂರು ಜನರು ಒಟ್ಟಾಗಿ ಉಳಿತಾಯ ಖಾತೆಯನ್ನು ತೆರೆಯುವ ಅವಕಾಶ ಸಿಕ್ಕಿದೆ.
2023 ರಲ್ಲಿ ಸಣ್ಣ ಉಳಿತಾಯ ಯೋಜನೆಗೆ ಸಂಬಂಧಿಸಿದ ಹಾಗೆ ನಿಯಮಗಳಲ್ಲಿ ಹಲವಾರು ಬದಲಾವಣೆಗಳನ್ನು ಮಾಡಲಾಗಿದೆ, ಅದು 2024ರ ವರ್ಷದಲ್ಲೂ ಮುಂದುವರೆಯುತ್ತಿದೆ. ಈಗಲೂ 2024ರ ಮೊದಲ ತಿಂಗಳಿಂದ ಅನ್ವಯವಾಗುವಂತೆ ಕೆಲ ಬದಲಾವಣೆಗಳು ಆಗಿವೆ.
ನೀವು ಸಹ ಪೋಸ್ಟ್ ಆಫೀಸ್ ಖಾತೆಯನ್ನು ಹೊಂದಿದ್ದರೆ ಅಥವಾ ಖಾತೆಯನ್ನು ತೆರೆಯಲು ಯೋಜಿಸುತ್ತಿದ್ದರೆ, ಅಥವಾ ಈಗಾಗಲೇ ಪೋಸ್ಟ್ ಆಫೀಸ್ನಲ್ಲಿ ಯಾವುದಾದರೂ ಯೋಜನೆಗಳ ಖಾತೆ ತೆರೆದಿದ್ದರೆ ಈ ಪ್ರಮುಖ ನಿಯಮ ಬದಲಾವಣೆಗಳ ಬಗ್ಗೆ ತಿಳಿದುಕೊಳ್ಳಿ.
2024ರಲ್ಲಿ ಪೋಸ್ಟ್ ಆಫೀಸ್ ಯೋಜನೆಗಳಲ್ಲಿ ಆಗುತ್ತಿರುವಂತಹ ಮಹತ್ವದ ಬದಲಾವಣೆಗಳು ಇವೇ ನೋಡಿ…
1. ಪೋಸ್ಟ್ ಆಫೀಸ್ ಮಾಸಿಕ ಆದಾಯ ಯೋಜನೆ (POMSY) – ಪೋಸ್ಟ್ ಆಫೀಸ್ ಮಾಸಿಕ ಆದಾಯ ಯೋಜನೆ ಕಳೆದ ಕೆಲವು ವರ್ಷಗಳಿಂದಲೂ ಬಹಳ ಜನಪ್ರಿಯವಾದ ಯೋಜನೆಯಾಗಿದೆ. ಈ ಯೋಜನೆಯಲ್ಲಿ ಠೇವಣಿ ಮಿತಿಯನ್ನು ಈ ವರ್ಷ ಹೆಚ್ಚಿಸಲಾಗಿದೆ.
ಒಂದೇ ಖಾತೆಯ ಸಂದರ್ಭದಲ್ಲಿ, ಈಗ ಈ ಯೋಜನೆಯಲ್ಲಿ ಠೇವಣಿ ಮಿತಿಯನ್ನು 4 ಲಕ್ಷದಿಂದ 9 ಲಕ್ಷಕ್ಕೆ ಹೆಚ್ಚಿಸಲಾಗಿದೆ. ಜಂಟಿ ಖಾತೆಯ ಮಿತಿಯನ್ನು 9 ಲಕ್ಷದಿಂದ 15 ಲಕ್ಷಕ್ಕೆ ಹೆಚ್ಚಿಸಲಾಗಿದೆ 2023ರ ಬಜೆಟ್‌ನಲ್ಲಿ ಕೇಂದ್ರ ಸರ್ಕಾರ ಇದನ್ನು ಘೋಷಿಸಿದೆ.
2. ಹಿರಿಯ ನಾಗರಿಕರ ಉಳಿತಾಯ ಯೋಜನೆ ( SCSS) – ಹಿರಿಯ ನಾಗರಿಕರ ಉಳಿತಾಯ ಯೋಜನೆಯ ಮಿತಿಯನ್ನು ಸಹ ಹೆಚ್ಚಿಸಲಾಗಿದೆ. ಹಿಂದೆ ಇದರ ಮಿತಿ 15 ಲಕ್ಷವಾಗಿತ್ತು, ಈಗ ಪ್ರಸ್ತುತವಾಗಿ 30 ಲಕ್ಷಕ್ಕೆ ಹೆಚ್ಚಿಸಲಾಗಿದೆ. ಈ ಕಾರಣದಿಂದಾಗಿ ಹಿರಿಯ ನಾಗರಿಕರಿಗೆ ಹೆಚ್ಚಿನ ಅನುಕೂಲವಾಗಲಿದೆ. ಹಿರಿಯ ನಾಗರಿಕರು ಹೆಚ್ಚು ಠೇವಣಿ ಇಟ್ಟರೆ ಮೊದಲಿಗಿಂತ ಹೆಚ್ಚಿನ ಬಡ್ಡಿಯನ್ನು ಪಡೆಯುತ್ತಾರೆ.
3. ಪೋಸ್ಟ್ ಆಫೀಸ್ ಫಿಕ್ಸೆಡ್ ಡೆಪಾಸಿಟ್ (FD) – 5 ವರ್ಷಗಳ ನಿಶ್ಚಿತ ಠೇವಣಿ 4 ವರ್ಷಗಳ ನಂತರ ಹಿಂತೆಗೆದುಕೊಂಡರೆ, ಅಂಚೆ ಕಚೇರಿಯು ಅದಕ್ಕೆ 4% ಬಡ್ಡಿಯನ್ನು ಪಾವತಿಸುತ್ತದೆ. ಇಲ್ಲಿಯವರೆಗೂ ಇದ್ದ ನಿಯಮದ ಪ್ರಕಾರ, 3 ವರ್ಷಗಳ FD ಯ ಬಡ್ಡಿ ದರದ ಪ್ರಕಾರ ಬಡ್ಡಿಯನ್ನು ಲೆಕ್ಕ ಹಾಕಿಯೇ ನಾಲ್ಕನೇ ವರ್ಷದಲ್ಲಿ ಕೊಡಲಾಗುತ್ತಿತ್ತು.
ಸದ್ಯಕ್ಕೆ ಈ ಬದಲಾವಣೆಯಿಂದ ಕೂಡ ಠೇವಣಿದಾರರಿಗೆ ಅನುಕೂಲವಾಗುತ್ತಿದೆ. ಅಂಚೆ ಕಚೇರಿಯ ಇನ್ನಷ್ಟು ವಿಚಾರಗಳನ್ನು ತಿಳಿದುಕೊಳ್ಳಲು ಅಂಚೆ ಕಚೇರಿ ಅಧಿಕೃತ ಸರ್ಕಾರದ ವೆಬ್ಸೈಟ್ ವಿಳಾಸಕ್ಕೆ ಭೇಟಿ ಕೊಡಿ.