Home
ದೇಶದ ಎಲ್ಲಾ ಕುಟುಂಬಗಳ ಕೂಡ ಸ್ವಂತ ಸೂರಿನಡಿ ಜೀವಿಸಬೇಕು ಎಂದು ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು ಕನಸು ಕಂಡಿದ್ದರು. ಪ್ರಧಾನ ಮಂತ್ರಿ ಆವಾಸ್ ಯೋಜನೆಯ (Pradana Mantri Avas Scheme) ಮೂಲಕ ಈ ಇಚ್ಛೆ ಸಾಧಿಸಲು ಗುರಿ ಹೊಂದಿದ್ದರು.
ಆದರೆ ಕೊರೋನ ಹಾಗೂ ಮುತ್ತಿತರ ಆರ್ಥಿಕ, ಸಾಮಾಜಿಕ, ರಾಜಕೀಯ ಹೊಡೆತಗಳಿಂದ 2024 ಆದರೂ ಕೂಡ ಇದನ್ನು ಸಂಪೂರ್ಣವಾಗಿ ಸಾಧಿಸಲು ಸಾಧ್ಯವಾಗಿಲ್ಲ ಆದರೂ ಪ್ರಧಾನ ಮಂತ್ರಿ ಆವಾಸ್ ಯೋಜನೆ ಮೂಲಕ ಪ್ರತಿ ವರ್ಷವೂ ಬಡ ಕುಟುಂಬಗಳಿಗೆ ಮನೆ ಹಂಚುವ ಹಾಗೂ ಮನೆ ಕಟ್ಟಿಕೊಳ್ಳಲು ಅನುಕೂಲತೆ ಮಾಡಿಕೊಡುವ ಕಾರ್ಯ ನಡೆಯುತ್ತದೆ.
ನಮ್ಮ ರಾಜ್ಯದಲ್ಲಿ ರಾಜ್ಯ ಸರ್ಕಾರದ ವತಿಯಿಂದ ಕೂಡ ರಾಜೀವ್ ಗಾಂಧಿ ವಸತಿ ನಿಗಮ ವತಿಯಿಂದ (RGRHCL) ಮುಖ್ಯಮಂತ್ರಿ ಗಳ ನಮ್ಮ ಮನೆ ವಸತಿ ಯೋಜನೆ ಮತ್ತು ಬಸವ ವಸತಿ (Basava Vasathi Scheme) ಯೋಜನೆ ಮುಂತಾದ ವಸತಿ ಯೋಜನೆಗಳು ಜಾರಿಯಲ್ಲಿದ್ದು ರಾಜ್ಯ ಸರ್ಕಾರವು ಕೂಡ ಈ ರೀತಿ ಸ್ವಂತ ಮನೆ ಆಸೆ ಹೊಂದಿರುವವರ ಕನಸಿಗೆ ಹಣ ಸಹಾಯ ನೀಡುತ್ತಿದೆ.
ಆ ಪ್ರಕಾರ ಈಗ ಒಂದು ಲಕ್ಷ ಪಾವತಿ ಮಾಡುವ ಮೂಲಕ ಸ್ವಂತ ಮನೆ ಕನಸನ್ನು ಫಲಾನುಭವಿಗಳು ನನಸು ಮಾಡಿಕೊಳ್ಳಬಹುದು. ಈ ಬಾರಿ ಅಂದಾಜು 7.5 ಲಕ್ಷ ಘಟಕ ವೆಚ್ಚದಲ್ಲಿ ರಾಜೀವ್ ಗಾಂಧಿ ಗ್ರಾಮೀಣ ವಸತಿ ನಿಗಮ ವತಿಯಿಂದ ಪ್ರಧಾನ ಮಂತ್ರಿ ಆವಾಸ್ (ನಗರ) ವಸತಿ ಯೋಜನೆಯಡಿ 52,189 ಮನೆಗಳು ನಿರ್ಮಾಣಗೊಳ್ಳುತ್ತಿವೆ.
ರಾಜೀವ್ ಗಾಂಧಿ ವಸತಿ ನಿಗಮ ಯೋಜನೆಗೆ ಅರ್ಜಿ ಸಲ್ಲಿಸಿದವರಿಗೆ ಕೇಂದ್ರ ಸರ್ಕಾರ ಹಾಗೂ ರಾಜ್ಯ ಸರ್ಕಾರದಿಂದ ಒಟ್ಟಾರೆಯಾಗಿ ತಲಾ 3.5 + 3ಲಕ್ಷ ಧನಸಹಾಯದ ನೆರವು ಸಿಗುತ್ತಿದೆ. ಅತಿ ಕಡಿಮೆ ಬೆಲೆಗೆ ಸ್ವಂತ ಮನೆ ಕನಸು ನನಸಾಗಿಸಿಕೊಳ್ಳುವ ಅವಕಾಶ ಸಿಗುತ್ತಿದ್ದು ಇದಕ್ಕೆ ಯಾರು ಅರ್ಹರು ಅರ್ಜಿ ಹೇಗೆ ಸಲ್ಲಿಸಬೇಕು? ಬೇಕಾಗುವ ದಾಖಲೆಗಳೇನು? ಇದರ ವಿವರ ಹೀಗಿದೆ ನೋಡಿ.
ಅರ್ಜಿ ಸಲ್ಲಿಸಲು ಯಾರು ಅರ್ಹರು.?
* ಈ ಯೋಜನೆಗೆ ಮಹಿಳೆಯರು ಮಾತ್ರ ಅರ್ಜಿ ಸಲ್ಲಿಸಬೇಕು, ನಿಮ್ಮ ಕುಟುಂಬದ ಮಹಿಳೆಯರ ಹೆಸರಿನಲ್ಲಿ ಅರ್ಜಿ ಸಲ್ಲಿಸಿ.
* ಮಾಜಿ ಯೋಧರು, ವಿಶೇಷ ಚೇತನರು ಮತ್ತು ಹಿರಿಯ ನಾಗರಿಕರಾಗಿರುವ ಪುರುಷರು ಕೂಡ ಅರ್ಜಿ ಸಲ್ಲಿಸಬಹುದು ಆದರೆ ಈ ರೀತಿ ಮೀಸಲಾತಿಯಲ್ಲಿ ಅರ್ಜಿ ಸಲ್ಲಿಸುವವರು ಸಂಬಂಧ ಪಟ್ಟ ಪೂರಕ ದಾಖಲೆಯನ್ನು ಕೂಡ ಅರ್ಜಿ ಸಲ್ಲಿಸುವ ವೇಳೆ ಸಲ್ಲಿಸಬೇಕಾಗುತ್ತದೆಸಲ್ಲಿಸಬೇಕಾಗುತ್ತದೆ.
* ಕೇಂದ್ರ ಸರ್ಕಾರದ 2011ರ ಸಾಮಾಜಿಕ ಮತ್ತು ಆರ್ಥಿಕ ಜನಗಣತಿ ಪಟ್ಟಿಯಲ್ಲಿ ಹೆಸರು ಇರಬೇಕು
* ಅರ್ಜಿ ಸಲ್ಲಿಸುವ ಕುಟುಂಬವು ಇದಕ್ಕೂ ಹಿಂದೆ ಯಾವುದೇ ವಸತಿ ನಿಗಮ ಯೋಜನೆಗಳ ಪ್ರಯೋಜನ ಪಡೆದಿರಬಾರದು
* ಕುಟುಂಬದ ವಾರ್ಷಿಕ ಆದಾಯವು 3 ಲಕ್ಷದ ಒಳಗಿರಬೇಕು
* ಅರ್ಜಿದಾರರ ಹೆಸರಿನಲ್ಲಿ ಸ್ವಂತ ಜಾಗ ಇರಬೇಕು
ಅರ್ಜಿ ಸಲ್ಲಿಸಲು ಬೇಕಾಗುವ ದಾಖಲೆಗಳು:-
* ಆಧಾರ್ ಕಾರ್ಡ್
* ರೇಷನ್ ಕಾರ್ಡ್
* ಜಾತಿ ಮತ್ತು ಆದಾಯ ಪ್ರಮಾಣ ಪತ್ರ
* ಆಧಾರ್ ಲಿಂಕ್ ಆಗಿರುವ ಮೊಬೈಲ್ ಸಂಖ್ಯೆ
* ಬ್ಯಾಂಕ್ ಪಾಸ್ ಬುಕ್ ವಿವರಗಳು
* ಇತ್ಯಾದಿ ಪ್ರಮುಖ ದಾಖಲೆಗಳು
ಅರ್ಜಿ ಸಲ್ಲಿಸುವ ವಿಧಾನ:-
* ಆಸಕ್ತರು ಆನ್ಲೈನ್ ನಲ್ಲಿ
https://ashraya.karnataka.gov.in ಅರ್ಜಿ ಸಲ್ಲಿಸಿ ಪೂರಕ ದಾಖಲೆಗಳನ್ನು ಕೊಟ್ಟು ನೋಂದಾಯಿಸಿಕೊಳ್ಳಬೇಕು
* ಇದೆ ವೆಬ್ಸೈಟ್ ನಲ್ಲಿ ಈ ಯೋಜನೆ ಕುರಿತಾದ ಹೆಚ್ಚಿನ ಮಾಹಿತಿ ಇದೆ ಓದಿಕೊಂಡು ಮುಂದುವರೆಯಿರಿ
* ಅರ್ಜಿ ಫಾರಂ ಭರ್ತಿ ಮಾಡಿ ಮುಂಗಡ ಪಾವತಿ ಮೊತ್ತವನ್ನು ಆನ್ಲೈನ್ ಮೂಲಕವೇ ಪಾವತಿ ಮಾಡಬೇಕು. ಅರ್ಜಿ ಸಲ್ಲಿಕೆ ಮತ್ತು ಹಣ ಪಾವತಿ ಮಾಡಿರುವುದಕ್ಕೆ ತಪ್ಪದೇ ಪ್ರಿಂಟ್ ಬರೆಯಿರಿ
ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ:-
ರಾಜೀವ್ ಗಾಂಧಿ ವಸತಿ ನಿಗಮ ನಿಯಮಿತ,
ಕಾವೇರಿ ಭವನ,
9ನೇ ಮಹಡಿ C & F ಬ್ಲಾಕ್,
KG ರೋಡ್,
ಬೆಂಗಳೂರು 56009
ಸಹಾಯವಾಣಿ ಸಂಖ್ಯೆ:- 91-080-22106888, 91-080-22247317