Nandini
ಹೈನುಗಾರಿಕೆ ಕೂಡ ಹಳ್ಳಿಗಳ ಜನರ ಜೀವನೋಪಾಯದ ಕಸುಬಾಗಿದೆ. ಕೃಷಿ ಮೂಲತಃ ಗ್ರಾಮೀಣ ಭಾಗದ ಬೆನ್ನೆಲುಬಾಗಿದ್ದರೂ ಕೂಡ ಕೃಷಿಗೆ ಹೊಂದಿಕೊಂಡಂತೆ ಪ್ರತಿಯೊಬ್ಬ ರೈತರು ಪಶುಪಾಲನೆ, ಹೈನುಗಾರಿಕೆಯಲ್ಲಿ ಕೂಡ ತೊಡಗಿಕೊಂಡು ತನ್ನ ದಿನನಿತ್ಯದ ಖರ್ಚು ವೆಚ್ಚಕ್ಕಾಗಿ ಸಂಪಾದನೆ ಮಾಡುತ್ತಿರುತ್ತಾರೆ.
ನಮ್ಮ ಕರ್ನಾಟಕ ರಾಜ್ಯದಲ್ಲಿ ಎಲ್ಲಾ ಜಿಲ್ಲೆಗಳ ಪ್ರಾಥಮಿಕ ಸಹಕಾರಿ ಹಾಲಿನ ಡೈರಿ ಗಳಿಂದ ಶೇಖರಣೆಯಾದ ಹಾಲು ರಾಜ್ಯದ ಕರ್ನಾಟಕ ಸಹಕಾರಿ ಹಾಲು ಉತ್ಪಾದಕರ ಫೆಡರೇಶನ್ ಲಿಮಿಟೆಡ್ ಗೆ (KMF) ಹೋಗುತ್ತದೆ ಇದನ್ನು ಜನರು ನಂದಿನಿ ಕೆಎಂಎಫ್ ಎಂದು ಹೆಚ್ಚು ಕರೆಯುತ್ತಾರೆ.
ಲೇಬರ್ ಕಾರ್ಡ್ ಸ್ಕಾಲರ್ ಶಿಪ್ ಹಣ ಬಂತು.! ನಿಮ್ಮ ಖಾತೆಗೆ ಹಣ ಬಂದಿದಿಯೋ ಇಲ್ಲವೋ ನಿಮ್ಮ ಮೊಬೈಲ್ ನಲ್ಲಿಯೇ ಈ ರೀತಿ ಚೆಕ್ ಮಾಡಿ.!
ಈ ಕಂಪನಿಯಿಂದ ತಯಾರಾಗುವ ಹಾಲಿನ ಉತ್ಪನ್ನಗಳ ಬ್ರಾಂಡ್ ನಂದಿನಿ ಆಗಿದೆ. ನಂದಿನಿ ಬ್ರಾಂಡ್ ನ ಹಾಲು, ಮೊಸರ, ಸಿಹಿ ಪದಾರ್ಥಗಳು ಮುಂತಾದ ಹಾಲಿನ ಉತ್ಪನ್ನಗಳು ತಯಾರಾಗುತ್ತವೆ ಈ ಉತ್ಪನ್ನಗಳನ್ನು ದೇಶದಾದ್ಯಂತ ಇರುವ ಜನರಿಗೆ ತಲುಪಿಸುವ ಕೆಲಸವನ್ನು ನಂದಿನಿ ಪಾರ್ಲರ್ ಗಳು ಮಾಡುತ್ತವೆ.
ನಂದಿನಿ ಡೈರಿ ನಂದಿನಿ ಪಾರ್ಲರ್ Booth Franchise ಎಂದು ಕೂಡ ಕರೆಯಲಾಗುತ್ತದೆ. ಇಲ್ಲಿ ನಂದಿನಿ ಬ್ರಾಂಡಿನ ಎಲ್ಲಾ ಉತ್ಪನ್ನಗಳು ಕೂಡ ಸಿಗುತ್ತವೆ ಈಗಂತೂ ನಂದಿನಿ ಹಾಲು, ಮೊಸರು, ಮಜ್ಜಿಗೆ, ತುಪ್ಪ, ಬೆಣ್ಣೆ ಮಾತ್ರವಲ್ಲದೆ ಚೀಸ್, ಚಾಕ್ಲೆಟ್, ಐಸ್ ಕ್ರೀಮ್, ಡೆಸರ್ಟ್ ಶಾವಿಗೆ, ಗುಲಾಬ್ ಜಾಮೂನ್, ರಸಗುಲ್ಲ, ಪೇಡ, ಮೈಸೂರ್ ಪಾಕ್ ಇನ್ನು ಮುಂತಾದ ಅನೇಕ ಹಾಲಿನ ಉತ್ಪನ್ನಗಳು ಕೂಡ ಸಿಗುತ್ತಿವೆ.
ಅದರಲ್ಲೂ ದಕ್ಷಿಣ ಭಾರತದಲ್ಲಿ ಈ ಪದಾರ್ಥಗಳಿಗೆ ಹೆಚ್ಚು ಬೇಡಿಕೆ ಇದೆ ಇವುಗಳನ್ನು ನಂದಿನಿ ಪಾರ್ಲರ್ ಗಳ ಮೂಲಕ KMF ಗ್ರಾಹಕರಿಗೆ ತಲುಪಿಸುತ್ತಿದೆ. ಆದ್ದರಿಂದ ಈ ಪಾರ್ಲರ್ ಗಳನ್ನು ತೆರೆದರೆ ಅದು ಅತ್ಯಂತ ಲಾಭ ಕೊಡುವ ಉದ್ಯಮ ಎಂದು ಪರಿಗಣಿಸಲಾಗಿದೆ.
ನಂದಿನಿ ಡೈರಿ ತೆರೆಯುವ ಕುರಿತಾದ ಕೆಲವು ಪ್ರಮುಖ ಮಾಹಿತಿಗಳು:-
* ನೀವು ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಬೇಕು.
* 21 ವರ್ಷ ಮೇಲ್ಪಟ್ಟ ಯಾರು ಬೇಕಾದರೂ ನಂದಿನಿ ಪಾರ್ಲರ್ ತೆರೆಯಲು ಅರ್ಜಿ ಸಲ್ಲಿಸಬಹುದು
* ಆಂದಾಜು 10 ಲಕ್ಷದಿಂದ 20 ಲಕ್ಷ ರೂಪಾಯಿಗಳವರೆಗೆ ಹೂಡಿಕೆ ಮಾಡಬೇಕಾಗುತ್ತದೆ.
* ಪಾರ್ಲರ್ ತೆರೆಯಲು 150 ರಿಂದ 250 ಚದರ ಅಡಿ ಪ್ರದೇಶದ ಅಗತ್ಯವಿದೆ, ಸಹಾಯಕ್ಕೆ ನೀವು ಉದ್ಯೋಗಿಗಳನ್ನು ನೇಮಿಸಿಕೊಳ್ಳಬೇಕು.
* ಉತ್ಪನ್ನಗಳ ಪ್ರದರ್ಶನಕ್ಕೆ ಪ್ರದೇಶವನ್ನು ಹೊಂದಿರಬೇಕು. ದೊಡ್ಡ ರೆಫ್ರಿಜರೇಟರ್‌ಗಳು ಮತ್ತು ಹವಾನಿಯಂತ್ರಣಗಳ ಅವಶ್ಯಕತೆಯಿದೆ.
* CCTV ಅಳವಡಿಕೆ ಕೂಡ ಮಾಡಬೇಕಾಗುತ್ತದೆ.
* ಕಂಪ್ಯೂಟರ್ ಅವಶ್ಯಕತೆ ಇದ್ದರೆ ಇಟ್ಟುಕೊಳ್ಳಬಹುದು ಮತ್ತು ಉತ್ಪನ್ನ ವಿತರಣೆಯು ಹೇಗೆ? ಯಾವುದನ್ನು ಎಷ್ಟು ಮಾರಾಟ ಮಾಡುತ್ತೀರಿ ಎನ್ನುವುದು ನಿಮ್ಮ ಪ್ರದೇಶದ ಬೇಡಿಕೆಗೆ ಮೇಲೆ ನಿರ್ಧಾರ ಮಾಡಬೇಕಾಗುತ್ತದೆ.
* ನೀವು KMF ಅಧಿಕೃತ ವೆಬ್‌ಸೈಟ್ www.kmfnandini.coop ಗೆ ಭೇಟಿ ನೀಡಿ ಅರ್ಜಿ ಸಲ್ಲಿಸುವುದು ಹಾಗೂ ಹೆಚ್ಚಿನ ಮಾಹಿತಿ ಪಡೆಯುವುದನ್ನು ಮಾಡಬಹುದು.
* ಮುಖಪುಟದಲ್ಲಿ, ನೀವು ನಮ್ಮನ್ನು ಸಂಪರ್ಕಿಸಿ ಎನ್ನುವ ಆಪ್ಷನ್ ಇರುತ್ತದೆ, ಕ್ಲಿಕ್ ಮಾಡಿ. ನಮ್ಮನ್ನು ಸಂಪರ್ಕಿಸಿ ವರ್ಗವು ನಿಮಗೆ ತೆರೆಯುತ್ತದೆ. ಹೆಸರು, ಸಂಸ್ಥೆ, ವೃತ್ತಿ, ವಿಳಾಸ, ದೇಶ, ದೂರವಾಣಿ ಸಂಖ್ಯೆ ಮತ್ತು ಇಮೇಲ್ ಐಡಿಯಂತಹ ಮೂಲ ವಿವರಗಳೊಂದಿಗೆ ಇ-ಫಾರ್ಮ್ ಅನ್ನು ಭರ್ತಿ ಮಾಡಿ ಸಬ್ಮಿಟ್ ಮಾಡಿ.
ನೀವು ಕಚೇರಿಗೆ ಭೇಟಿ ಕೊಡುವುದಾದರೆ ವಿಳಾಸ
ಕರ್ನಾಟಕ ಸಹಕಾರಿ ಹಾಲು ಉತ್ಪಾದಕರ ಒಕ್ಕೂಟ ಲಿಮಿಟೆಡ್.
#2915, KMF ಸಂಕೀರ್ಣ,
ಡಿಆರ್ ಕಾಲೇಜು ರಸ್ತೆ,
ಡಾ. ಎಂ.ಎಚ್.ಮರಿಗೌಡ ರಸ್ತೆ,
ಬೆಂಗಳೂರು – 560029,
ಕರ್ನಾಟಕ.