Gas
ಬೆಲೆ ಏರಿಕೆ ಬಡ ಹಾಗೂ ಮಧ್ಯಮ ವರ್ಗದ ಜನರ ಬದುಕನ್ನು ಹೈರಾಣಗಿಸಿದೆ. ದಿನನಿತ್ಯದ ಬಳಕೆ ವಸ್ತುಗಳಾದ ಅಡುಗೆ ಎಣ್ಣೆ, ತರಕಾರಿ, ಬೇಳೆ ಕಾಳುಗಳ ದರ ಎಲ್ಲವೂ ಹೆಚ್ಚಿಗೆ ಆಗಿದೆ. ಇದರ ಜೊತೆಗೆ ಪೆಟ್ರೋಲ್ ಡೀಸೆಲ್ ಬೆಲೆ ಏರಿಕೆ ಹೊರೆಯೇ ಎನಿಸಿದೆ ಆದರೆ ಅಡುಗೆ ಅನಿಲದ ವಿಚಾರದಲ್ಲಿ ಈಗ ಸದ್ಯಕ್ಕೆ ನಿಟ್ಟುಸಿರು ಬಿಡಬಹುದು.
ಯಾಕೆಂದರೆ ಕೇಂದ್ರ ಸರ್ಕಾರವು ಗ್ಯಾಸ್ ಸಿಲೆಂಡರ್ ಬಳಕೆದಾರರಿಗೆ ಸಬ್ಸಿಡಿ (Subsidy on Gas Cylinder) ಘೋಷಿಸಿ ಸಿಹಿ ಸುದ್ದಿ ನೀಡಿದೆ. ಆ ಪ್ರಕಾರವಾಗಿ ಪ್ರಧಾನ ಮಂತ್ರಿ ಉಜ್ವಲ ಯೋಜನೆಯಲ್ಲಿ (PMUY) ಗ್ಯಾಸ್ ಕನೆಕ್ಷನ್ ಪಡೆದವರಿಗೆ ಹಿಂದೆ ಸಿಗುತ್ತಿದ್ದ ಸಬ್ಸಿಡಿ ಸೇರಿ ಒಟ್ಟು ರೂ.300 ಮತ್ತು ಇತರೆ ಬಳಕೆ ಜಾರಿಗೆ ರೂ.200 ರುಪಾಯಿಗಳ ಸಬ್ಸಿಡಿ ಸಿಗುತ್ತಿದೆ.
ಈ ಸೌಲಭ್ಯದಿಂದ ಪ್ರಧಾನ ಮಂತ್ರಿ ಉಜ್ವಲ್ ಯೋಜನೆಯಡಿ ಗ್ಯಾಸ್ ಸಂಪರ್ಕ ಪಡೆದವರಿಗೆ ಬಹಳ ದೊಡ್ಡ ಉಳಿತಾಯವಾಗುತ್ತಿದ್ದು ಇನ್ನು ಮುಂದೆ ಅವರು 903 ರೂಗೆ 14.2KG ತೂಕದ ಗ್ರಾಸ್ ಸಿಲೆಂಡರ್ ನ್ನು 503 ರೂಗೆ ಪಡೆಯಬಹುದಾಗಿದೆ.
ಪಾವತಿ ಮಾಡುವ ವೇಳೆ ಅವರು 903ರೂ ಕೊಟ್ಟು ಖರೀದಿ ಮಾಡಿದರೆ ಉಳಿದ 300ರೂ. ಅವರ ಬ್ಯಾಂಕ್ ಖಾತೆಗೆ DBT ಮೂಲಕ ವರ್ಗಾವಣೆ ಆಗುತ್ತದೆ, ವಾರ್ಷಿಕವಾಗಿ 12 ಸಿಲಿಂಡರ್ ಗಳ ಮೇಲೆ ಈ ಸಬ್ಸಿಡಿ ಪಡೆಯಬಹುದು ಮತ್ತು ಸರ್ಕಾರ ಈಗಷ್ಟೇ ಪ್ರಧಾನ ಮಂತ್ರಿ ಉಜ್ವಲ ಯೋಜನೆ ಫಲಾನುಭವಿಗಳು ಸಬ್ಸಿಡಿ ಪಡೆಯಲು E-KYC ಮಾಡಿಸುವುದು ಕಡ್ಡಾಯ ಎಂದು ಸೂಚಿಸಿದೆ.
ಪ್ರಧಾನ ಮಂತ್ರಿ ಉಜ್ವಲ ಯೋಜನೆಯಡಿ ಗ್ಯಾಸ್ ಸಂಪರ್ಕ ಪಡೆದ ಅನೇಕರಲ್ಲಿ ಕೆಲವರು ಅನಧಿಕೃತವಾಗಿ BPL ಕಾರ್ಡ್ ಹೊಂದಿ ಉಚಿತ ಗ್ಯಾಸ್ ಸಂಪರ್ಕ ಪಡೆದಿದ್ದರು ಈಗ ಅಂತಹ ರೇಷನ್ ಕಾರ್ಡ್ ಗಳನ್ನು ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಅಧಿಕಾರಿಗಳು ಪರಿಶೀಲಿಸಿ ರದ್ದುಪಡಿಸಿರುವುದರಿಂದ (Ration card Suspend) ಅವರಿಗೆ ಸಿಗುತ್ತಿದ್ದ ಸಬ್ಸಿಡಿ ಕೂಡ ಸ್ಥಗಿತಗೊಳ್ಳುತ್ತದೆ.
ನಿಮಗೇನಾದರೂ ಈ ತಿಂಗಳು ಸಬ್ಸಿಡಿ ವರ್ಗಾವಣೆ ಆಗಿದೆಯೋ ಇಲ್ಲವೋ ಎನ್ನುವ ಅನುಮಾನ ಇದ್ದರೆ ಈಗ ನಾವು ಹೇಳುವ ಈ ವಿಧಾನವನ್ನು ಅನುಸರಿಸಿ ಪರಿಶೀಲಿಸಿಕೊಳ್ಳಿ.
* ಮೊದಲಿಗೆ ನೇರವಾಗಿ https://www.mylpg.in/ ವೆಬ್ಸೈಟ್ ಗೆ ಭೇಟಿ ಕೊಡಿ
* bharat, HP, Indian ಈ ಮೂರು ಆಯ್ಕೆಗಳು ಕಾಣಿಸುತ್ತವೆ, ನೀವು ಯಾವ ಗ್ಯಾಸ್ ಸಿಲಿಂಡರ್ ಅಡಿಯಲ್ಲಿ ಗ್ಯಾಸ್ ಪಡೆದುಕೊಂಡಿದ್ದೀರಿ ಅದನ್ನು ಆಯ್ಕೆ ಮಾಡಿ.
* Ujjwala beneficiaries ಆಯ್ಕೆ ಕಾಣಿಸುತ್ತೆ ಅದರ ಮೇಲೆ ಕ್ಲಿಕ್ ಮಾಡಿ.
* ನಿಮ್ಮ ರಾಜ್ಯ, ಜಿಲ್ಲೆ ಮೊದಲಾದ ಮಾಹಿತಿಗಳನ್ನು ನೀಡಿ submit ಬಟನ್ ಮೇಲೆ ಕ್ಲಿಕ್ ಮಾಡಿದರೆ ಈ ತಿಂಗಳಿನಲ್ಲಿ ಬಿಡುಗಡೆ ಆದ ಉಚಿತ ಗ್ಯಾಸ್ ಸಿಲಿಂಡರ್ ಸಬ್ಸಿಡಿ ಫಲಾನುಭವಿಗಳ ಲಿಸ್ಟ್ ತೋರಿಸುತ್ತದೆ. ಈ ಲಿಸ್ಟ್ ನಲ್ಲಿ ನಿಮ್ಮ ಹೆಸರು ಇದ್ದರೆ ಮಾತ್ರ ನಿಮಗೂ ಕೂಡ ಸಬ್ಸಿಡಿ ಹಣ ನಿಮ್ಮ ಖಾತೆಗೆ ಜಮೆ ಆಗುತ್ತದೆ.
ಪ್ರಧಾನ ಮಂತ್ರಿ ಉಜ್ವಲ ಯೋಜನೆ 2.0 ಸೌಲಭ್ಯ ಪಡೆಯಲು ಅರ್ಹರಿಂದ ಅರ್ಜಿ ಆಹ್ವಾನಿಸಲಾಗಿತ್ತು. ಇನ್ನು ಸಹ ಯಾರು, ತಮ್ಮ ಗೃಹಗಳಿಗೆ ಗ್ಯಾಸ್ ಸಂಪರ್ಕ ಪಡೆದಿಲ್ಲ ಅಂತಹ ಕುಟುಂಬಗಳು ಈ ಕೂಡಲೇ BPL ರೇಷನ್ ಕಾರ್ಡ್, ಆಧಾರ್ ಕಾರ್ಡ್ ಮತ್ತು ಇನ್ನಿತರ ದಾಖಲೆ ಪತ್ರಗಳ ಜೊತೆ ಹೋಗಿ ಹತ್ತಿರದಲ್ಲಿರುವ ಏಜೆನ್ಸಿ ಗಳಲ್ಲಿ ಉಚಿತ ಗ್ಯಾಸ್ ಸಂಪರ್ಕ ಪಡೆದುಕೊಳ್ಳಲು ನೋಂದಾಯಿಸಿಕೊಳ್ಳಿ ಅಥವಾ ಈ ಮೇಲೆ ತಿಳಿಸಿದ ವೆಬ್ಸೈಟ್ ನಲ್ಲಿ ಕೂಡ ಆನ್ಲೈನ್ ನಲ್ಲಿ ನೋಂದಾಯಿಸಿಕೊಳ್ಳಬಹುದು.