Train ರೈಲು ಪ್ರಯಾಣ ಮಾಡುವವರಿಗೆ ಗುಡ್ ನ್ಯೂಸ್.!

Train

ರೈಲು ಪ್ರಯಾಣ ಯಾರಿಗೆ ಇಷ್ಟ ಇಲ್ಲ ಪ್ರತಿನಿತ್ಯವೂ ಕಾಲೇಜಿಗೆ ಆಫೀಸ್ ಗೆ ಹೋಗಲು ಮಾಡುವ ಕಡಿಮೆ ಡಿಸ್ಟ್ಯಾನ್ಸ್ ಪ್ರಯಾಣಗಳಿಗೆ ಮಾತ್ರವಲ್ಲದೇ ದೂರದ ಊರುಗಳಿಗೆ ವಾರಗಟ್ಟಲೆ ಹೋಗಬೇಕು ಎಂದರೂ, ತೀರ್ಥ ಸ್ಥಳಗಳಿಗೆ ಅಥವಾ ಪ್ರೇಕ್ಷಣೀಯ ಸ್ಥಳಗಳಿಗೆ ಕುಟುಂಬ ಸಮೇತರಾಗಿ ಹೋಗಬೇಕು ಎಂದರೂ ರೈಲು ಪ್ರಯಾಣವೇ ಬೆಸ್ಟ್ ಅನಿಸುತ್ತೆ ಅಲ್ವಾ? ಈ ವಿಚಾರದಲ್ಲಿ ಇದು ಬಜೆಟ್ ಫ್ರೀ ಅನ್ನುವುದನ್ನು ಕೂಡ ಮರೆಯುವಂತಿಲ್ಲ.

WhatsApp Group Join Now
Telegram Group Join Now

ಕಳೆದ ಒಂದು ಶತಮಾನದಿಂದ ನೋಡುವುದಾದರೂ ಪ್ರಪಂಚ ಸಾಕಷ್ಟು ಬದಲಾಗಿದೆ ಸಾರಿಗೆ ವ್ಯವಸ್ಥೆಯಲ್ಲೂ ಸಹ ಬಹಳ ದೊಡ್ಡ ಕ್ರಾಂತಿಯೇ ನಡೆದು ಇಂದು ಮನುಷ್ಯ ನೆಲದಲ್ಲಿ ಮಾತ್ರವಲ್ಲದೇ ಸಮುದ್ರ ಮಾರ್ಗ ಆಕಾಶ ಮಾರ್ಗವಾಗಿ ಬಹಳ ವೇಗವಾಗಿ ಚಲಿಸುವುದನ್ನು ಕಲಿತಿದ್ದಾನೆ, ಟೆಕ್ನಾಲಜಿಯಲ್ಲಿ ಬಹಳ ಮುಂದೆ ಹೋಗಿದ್ದಾನೆ‌.

ಆದರೂ ರೈಲು ಪ್ರಣಯಕ್ಕೆ ಇರುವ ಕ್ರೇಜ್ ಮತ್ತು ಬೇಡಿಕೆ ಸ್ವಲ್ಪವೂ ಕಡಿಮೆಯಾಗಿಲ್ಲ ಇದಕ್ಕೆ ಹತ್ತಾರು ಕಾರಣಗಳಿವೆ ಇದರ ಜೊತೆಗೆ ಈಗ ರೈಲ್ವೆ ಇಲಾಖೆಯು ಕೂಡ ಈ ಕಾಲಮಾನಕ್ಕೆ ತಕ್ಕ ಹಾಗೆ ತನ್ನಲ್ಲಿ ಅನೂಕೂಲಕರ ಮಾರ್ಪಾಡುಗಳನ್ನು ಮಾಡಿಕೊಂಡು ಅಪ್ಡೇಟ್ ಆಗುತ್ತಿರುವುದು ಗ್ರಾಹಕರ ಸಂಖ್ಯೆಯನ್ನು ದ್ವಿಗುಣಗೊಳಿಸುವುದರಲ್ಲಿ ಮತ್ತೊಂದು ಪ್ಲಸ್ ಪಾಯಿಂಟ್ ಆಗುತ್ತಿದೆ.

ರೈಲ್ವೆ ಇಲಾಖೆ ಕೂಡ ಡಿಜಿಟಲೀಕರಣವಾಗುತ್ತಿದ್ದು, ಈ ನಿಟ್ಟಿನಲ್ಲಿ ರೈಲ್ವೆ ಇಲಾಖೆ ತೆಗೆದುಕೊಂಡಿರುವ ನಿರ್ಧಾರವೊಂದರ ಸಿಹಿ ಸುದ್ದಿಯನ್ನು ಈ ಅಂಕಣದಲ್ಲಿ ತಿಳಿಸುತ್ತಿದ್ದೇವೆ. ಆನ್ ಲೈನಲ್ಲಿ ಈಗ ರೈಲ್ವೆ ಟಿಕೆಟ್ ಬುಕ್ ಮಾಡಿಕೊಳ್ಳುವ ವ್ಯವಸ್ಥೆ ಇದೆ, ಆದರೂ ಆನ್ಲೈನ್ ಪೇಮೆಂಟ್ ಗಿಂತ ಸಂಪ್ರದಾಯಿಕ ನಗದು ಪದ್ದತಿಯನ್ನು ಅನುಸರಿಸುವವರೇ ಹೆಚ್ಚಿದ್ದಾರೆ. ಇದಕ್ಕೆ ಅವರದ್ದೇ ಆದ ಕಾರಣಗಳು ಇರುತ್ತವೆ.

ಈ ನಗದು ಪಾವತಿಗಳನ್ನು ಬದಲಿಸಿ UPI ಪಾವತಿ ವ್ಯವಸ್ಥೆಯನ್ನು ಪರಿಚಯಿಸುವ ಮೂಲಕ ಸಾಮಾನ್ಯ ಟಿಕೆಟ್ ಬುಕಿಂಗ್ ನ್ನು ಇನ್ನಷ್ಟು ಸರಳಗೊಳಿಸಲು ನಮ್ಮ ಭಾರತೀಯ ರೈಲ್ವೆ ಇಲಾಖೆಯು ನಿರ್ಧರಿಸಿದೆ. ಈ ಕ್ರಮವು ಪ್ರಯಾಣಿಕರಿಗೆ ಟಿಕೆಟ್ ಬುಕಿಂಗ್ ರಿಸ್ಕ್ ಕಡಿಮೆ ಮಾಡುವ ಅನುಕೂಲತೆ ಮತ್ತು ದಕ್ಷತೆಯನ್ನು ಹೆಚ್ಚಿಸುವ ಗುರಿಯನ್ನು ಹೊಂದಿದೆ.

ಏಪ್ರಿಲ್ 1, 2024 ರಿಂದಲೇ ಪ್ರಯಾಣಿಕರು ತಮ್ಮ ಮೊಬೈಲ್ ನಲ್ಲಿರುವ UPI ಆಧಾರಿತ ಅಪ್ಲಿಕೇಶನ್‌ಗಳಾದ ಫೋನ್ ಪೇ, ಗೂಗಲ್ ಪೇ ಮತ್ತು ಪೇಟಿಎಂ ಮೂಲಕ ಸಾಮಾನ್ಯ ದರ್ಜೆಯ ರೈಲು ಟಿಕೆಟ್‌ಗಳನ್ನು ಖರೀದಿಸಲು ಏಕೀಕೃತ ಪಾವತಿಗಳ ಇಂಟರ್ಫೇಸ್ (UPI) ಅನ್ನು ಬಳಸಿಕೊಳ್ಳಬಹುದು. ಡಿಜಿಟಲ್ ಪಾವತಿಗಳಿಗೆ ಈ ಪರಿವರ್ತನೆಯು ರೈಲ್ವೆ ವಹಿವಾಟುಗಳನ್ನು ಆಧುನೀಕರಿಸುವ ಮತ್ತು ಡಿಜಿಟಲ್ ಇಂಡಿಯಾ ಬೆಂಬಲಿಸುವತ್ತ ಮಹತ್ವದ ಹೆಜ್ಜೆಯನ್ನು ಸೂಚಿಸುತ್ತದೆ.

UPI ಪಾವತಿಯ ಸರಳ ಹಂತಗಳಲ್ಲಿ ಟಿಕೆಟ್ ಬುಕಿಂಗ್ ಮಾಡುವ ವ್ಯವಸ್ಥೆಯನ್ನು ಪರಿಚಯಿಸುವುದರಿಂದ ಟಿಕೆಟ್ ಬುಕಿಂಗ್ ಗಾಗಿ ಪ್ರಯಾಣಿಕರು ಸಾಮಾನ್ಯವಾಗಿ ಪಡುತ್ತಿದ್ದ ಕ’ಷ್ಟಗಳು ಕೂಡ ಕಡಿಮೆ ಆಗಲಿದೆ ಎಂದು ಭಾವಿಸಲಾಗಿದೆ.

ಈ ಡಿಜಿಟಲ್ ಬುಕಿಂಗ್ ಹಾಗೂ ಪಾವತಿಯ ವಿಧಾನದಿಂದ ರೈಲ್ವೆ ಸಿಬ್ಬಂದಿಗಳ ಕೆಲಸದ ಹೊರೆಯು ಕೂಡ ಸ್ವಲ್ಪ ಮಟ್ಟದಲ್ಲಿ ಇಳಿದು ಅವರ ಒತ್ತಡ ಕಡಿಮೆ ಆಗುವಂತಾಗಲಿದೆ ಎಂದು ಸಹ ಹೇಳಬಹುದು. ನೀವು ಕೂಡ ರೈಲು ಪ್ರಯಾಣ ಬಯಸುವವರಾದರೆ ಸರ್ಕಾರದ ಗುಡ್ ನ್ಯೂಸ್ ನಿಮಗೆ ಎಷ್ಟು ಸಮಾಧಾನ ತಂದಿದೆ ಎನ್ನುವುದನ್ನು ಕಮೆಂಟ್ ಮಾಡಿ ತಿಳಿಸಿ ಮತ್ತು ಈ ಉಪಯುಕ್ತ ಮಾಹಿತಿಯನ್ನು ನಿಮ್ಮ ಕುಟುಂಬದವರು ಹಾಗೂ ಸ್ನೇಹಿತರ ಜೊತೆಗೂ ಕೂಡ ಶೇರ್ ಮಾಡಿಕೊಳ್ಳಿ.

ಸರ್ಕಾರಿ ಯೋಜನೆ, ಸರ್ಕಾರಿ ಉದ್ಯೋಗಗಳು,ಮತ್ತು ಖಾಸಗಿ ಕಂಪನಿ ಉದ್ಯೋಗದ ಬಗ್ಗೆ ದೈನಂದಿನ ಮಾಹಿತಿಯನ್ನು ಪಡೆಯಲು ನಮ್ಮ needs of ಕನ್ನಡ WhatsApp ಗ್ರೂಪ್ ಮತ್ತು ಟೆಲಿಗ್ರಾಮ್ ಚಾನಲ್‌ಗೆ ಜಾಯಿನ್ ಆಗಿರಿ
WhatsApp Group Join Now
Telegram Group Join Now

Leave a Comment