Fridge ಹೊಸ ಫ್ರಿಜ್ ಖರೀದಿ ಮಾಡುವವರು & ಮನೆಯಲ್ಲಿ ಫ್ರಿಜ್ ಇರುವವರು ಈ ರೀತಿ ತಪ್ಪು ಮಾಡಬೇಡಿ.!

Fridge

ಫ್ರಿಡ್ಜ್, ವಾಷಿಂಗ್ ಮಿಷನ್, ಟಿವಿ ಇದೆಲ್ಲವೂ ಕೂಡ ಒನ್ ಟೈಮ್ ಇನ್ವೆಸ್ಟ್ಮೆಂಟ್ ಆಗಿರುತ್ತದೆ. ಮತ್ತು ಪ್ರತಿ ಮನೆಗೂ ಕೂಡ ಅವಶ್ಯಕತೆ ಇರುವ ವಸ್ತುವಾಗಿದೆ. ಬಾಡಿಗೆ ಮನೆಯೇ ಇರಲಿ ಸ್ವಂತ ಮನೆಯಲ್ಲಿಯೇ ಇರಲಿ ಮನೆ ಬಳಕೆಗೆ ಪ್ರತಿನಿತ್ಯದ ಅವಶ್ಯಕತೆಗೆ ಈ ವಸ್ತುಗಳು ಬೇಕೇ ಬೇಕು ಮತ್ತು ಒಂದು ಬಾರಿ ಖರೀದಿಸಿದ ಮೇಲೆ ಒಂದು ಜನರೇಶನ್ ಕಳೆದು ಮುಂದಿನ ಜನರೇಶನ್ ಗೂ ಕೂಡ ಬಳುವಳಿ ಕೊಡುವ ವಸ್ತುಗಳಾಗಿವೆ.

ಪ್ರತಿ ವರ್ಷವೂ ಮಾಡೆಲ್, ಡಿಸೈನ್, ವರ್ಷನ್, ಟ್ರೆಂಡ್ ಚೇಂಜ್ ಆಗುತ್ತಿರುತ್ತದೆ ಹಾಗೆಂದ ಮಾತ್ರಕ್ಕೆ ಪ್ರತಿ ವರ್ಷವೂ ನಾವು ಇವುಗಳನ್ನು ಬದಲಾಯಿಸಲು ಆಗುವುದಿಲ್ಲ. ಹಾಗಾಗಿ ಮುಂದಾಲೋಚನೆ ಮಾಡಿ ಖರೀದಿಸಬೇಕು. ಈ ರೀತಿ ಖರೀದಿ ಮಾಡುವಾಗ ಫ್ರಿಡ್ಜ್ ಖರೀದಿಗೆ ಸಂಬಂಧಿತವಾಗಿ ಯಾವೆಲ್ಲ ಸಂಗತಿಗಳನ್ನು ನೆನಪಿನಲ್ಲಿ ಇಟ್ಟುಕೊಳ್ಳಬೇಕು ಎನ್ನುವ ಉಪಯುಕ್ತ ಮಾಹಿತಿ ಬಗ್ಗೆ ಈ ಲೇಖನದಲ್ಲಿ ಮಾಹಿತಿ ತಿಳಿಸುತ್ತೇವೆ.

WhatsApp Group Join Now
Telegram Group Join Now

* ಸಿಂಗಲ್ ಡೋರ್ ಫ್ರಿಡ್ಜ್ ರೂ.15,000 ಬೆಲೆಯಿಂದ ಆರಂಭ ಆದರೆ ಡಬಲ್ ಡೋರ್ ರೂ.22,000ದಿಂದ ಆರಂಭವಾಗುತ್ತದೆ. ರೆಫ್ರಿಜರೇಟರ್ ಬೆಲೆಯು ಬ್ರಾಂಡ್ ಹಾಗೂ ಅದರ ಕೆಪಾಸಿಟಿ ಆಧಾರದಲ್ಲಿ ಬದಲಾಗುತ್ತಾ ಹೋಗುತ್ತದೆ. ನಿಮಗೆ ಅನುಕೂಲಕರವಾದ ಬಜೆಟ್ ಗೆ ನೀವು ಖರೀದಿಸಬಹುದು.

* ಸಿಂಗಲ್ ಡೋರ್ ಮತ್ತು ಡಬಲ್ ಡೋರ್ ಡಿಫರೆನ್ಸ್ ನೋಡುವಾಗ ಬಜೆಟ್ ಮಾತ್ರವಲ್ಲದೇ ಸ್ಪೇಸ್ ಮತ್ತು ಮೇಂಟೆನೆನ್ಸ್ ವಿಚಾರ ಕೂಡ ಮುಖ್ಯವಾಗುತ್ತದೆ. ಯಾಕೆಂದರೆ ಸಿಂಗಲ್ ಡೋರ್ ನಲ್ಲಿ ಫ್ರೀಝರ್ ಮರ್ಜ್ ಆಗಿರುತ್ತದೆ ಮತ್ತು deforest ಆಪ್ಷನ್ ಪ್ರೆಸ್ ಮಾಡಿದರೆ ಮಾತ್ರ ಐಸ್ ಕರಗುತ್ತದೆ ಹಾಗೂ ಅದು ಹಿಂದೆ ನೀಡಿರುವ ವಾಟರ್ ಟ್ಯಾಂಕ್ ನಲ್ಲಿ ಸ್ಟೋರ್ ಆಗಿರುತ್ತದೆ.

ನೀವು ವಾರಕ್ಕೆ ಎರಡು ಬಾರಿಯಾದರೂ ಅದನ್ನು ಕ್ಲೀನ್ ಮಾಡಬೇಕು. ಒಂದು ವೇಳೆ ಕರೆಂಟ್ ಹೋಗಿದೆ ಎಂದರೆ ಆ ಹೀಟ್ ಗೂ ಕೂಡ ಎಲ್ಲ ಕರಗಿ ನೀರು ಜಾಸ್ತಿಯಾಗಿ ಆಚೆ ಬಂದರೂ ಬರಬಹುದು ಅಥವಾ ನೀವು ತುಂಬಾ ದಿನದವರೆಗೆ ಮನೆಯಿಂದ ಹೊರಗೆ ಇದ್ದಾಗ ಮೆಂಟೇನ್ ಮಾಡಲು ಯಾರು ಇರದೆ ಸಮಸ್ಯೆ ಆಗಬಹುದು.

ಆದರೆ ಡಬಲ್ ಡೋರ್ ನಲ್ಲಿ ಸಪರೇಟ್ ಫೀಚರ್ ಇರುತ್ತದೆ ಮತ್ತು ಅದೇ ಆಟೋ deforest ಆಗುವ ಆಪ್ಷನ್ ನೀಡಲಾಗಿರುತ್ತದೆ ಹೀಗಾಗಿ ಮೆಂಟೇನೆನ್ಸ್ ಬಗ್ಗೆ ತಲೆಕೆಡಿಸಿಕೊಳ್ಳುವಂತಿಲ್ಲ. ಹಾಗೆಯೇ ಸ್ಪೇಸ್ ವಿಚಾರದಲ್ಲಿ ಕೂಡ ಡಬಲ್ ಡೋರ್ ಸಿಂಗಲ್ ಡೋರ್ ಗಿಂತ ಹೆಚ್ಚು ಸ್ಪೇಸ್ ಹೊಂದಿರುತ್ತದೆ.

* ಒಂದು ಫ್ರಿಜ್ ಕನಿಷ್ಠ 10 ವರ್ಷಗಳವರೆಗೆ ಯಾವುದೇ ಸಮಸ್ಯೆ ಇಲ್ಲದೆ ಬಾಳಿಕೆ ಬರುತ್ತದೆ ಆದರೆ ಗ್ರಾಹಕರು ಮಾಡುವ ಕೆಲ ತಪ್ಪುಗಳಿಂದ ಇದು ರಿಪೇರಿಗೆ ಬರುವುದು. ಉದಾಹರಣೆಗೆ ಶಿಫ್ಟ್ ಮಾಡಬೇಕಾದ ಸಂದರ್ಭದಲ್ಲಿ ಒಂದು ದಿನ ಮುಂಚೆಯೇ ಅಥವಾ ಕನಿಷ್ಠ 8 ಗಂಟೆಗಳ ಮೊದಲೇ ಇದರ ಪ್ಲಗ್ ಬಿಚ್ಚಿ ಒಂದು ಕಡೆ ರೆಸ್ಟ್ ಮಾಡಬೇಕು ಮತ್ತು ಎಂದೂ ಕೂಡ ಫ್ರಿಡ್ಜ್ ಪೂರ್ತಿ ಮಲಗಿಸಬಾರದು.

ಯಾಕೆಂದರೆ ಕಂಪ್ರೆಸರ್ ನಲ್ಲಿ ಇರುವ ಗ್ಯಾಸ್ ಲೀಕ್ ಆಗುತ್ತದೆ ಶಿಫ್ಟ್ ಆದ ಮೇಲೆ ಕೂಡ ಒಂದು ಜಾಗದಲ್ಲಿ ಇಟ್ಟು ಐದಾರು ಗಂಟೆ ಆದ ನಂತರ ಮಾತ್ರ ಆನ್ ಮಾಡಬೇಕು ಕಂಪ್ರೆಸರ್ ಸೆಟ್ ಆಗೋದಕ್ಕೆ ಅಷ್ಟು ಸಮಯ ಬೇಕಾಗುತ್ತದೆ. ನೀಟಾಗಿ ತಿಂಗಳಿಗೆ ಒಮ್ಮೆ ಆದರೂ ಕ್ಲೀನ್ ಮಾಡಬೇಕು ಮತ್ತು ಸಿಕ್ಕ ಸಿಕ್ಕ ವಸ್ತುವನ್ನೆಲ್ಲ ಫ್ರಿಡ್ಜ್ ನಲ್ಲಿ ತುಂಬುವ ಬದಲು ವ್ಯವಸ್ಥಿತವಾಗಿ ಜೋಡಿಸಿಕೊಂಡು ಚೆನ್ನಾಗಿ ನೋಡಿಕೊಳ್ಳಬೇಕು.

* ಯಾವುದೇ ಶಾರ್ಪ್ ಆಬ್ಜೆಕ್ಟಿಂದ ಫ್ರೀಝರ್ ನಿಂದ ಐಸ್ ಬ್ರೇಕ್ ಮಾಡಲು ಹೋಗುವುದು ಇಂತಹ ತಪ್ಪುಗಳನ್ನು ಮಾಡಬಾರದು. ಜೋರಾಗಿ ಫ್ರಿಡ್ಜ್ ಡೋರ್ ಹಾಕುವುದು ಈ ರೀತಿ ಮಾಡಿದರೂ ಕೂಡ ಫ್ರಿಡ್ಜ್ ಬೇಗ ಹಾಳಾಗುತ್ತದೆ.

ಸರ್ಕಾರಿ ಯೋಜನೆ, ಸರ್ಕಾರಿ ಉದ್ಯೋಗಗಳು,ಮತ್ತು ಖಾಸಗಿ ಕಂಪನಿ ಉದ್ಯೋಗದ ಬಗ್ಗೆ ದೈನಂದಿನ ಮಾಹಿತಿಯನ್ನು ಪಡೆಯಲು ನಮ್ಮ needs of ಕನ್ನಡ WhatsApp ಗ್ರೂಪ್ ಮತ್ತು ಟೆಲಿಗ್ರಾಮ್ ಚಾನಲ್‌ಗೆ ಜಾಯಿನ್ ಆಗಿರಿ
WhatsApp Group Join Now
Telegram Group Join Now

Leave a Comment