Pan ಕೇವಲ 10 ನಿಮಿಷದಲ್ಲಿ ಹೊಸ ಪ್ಯಾನ್ ಕಾರ್ಡ್ ಪಡೆಯಿರಿ.! ಮೊಬೈಲ್ ನಲ್ಲಿ ಅರ್ಜಿ ಸಲ್ಲಿಸುವ ವಿಧಾನ ಇಲ್ಲಿದೆ ನೋಡಿ.!

Pan Card

ಹಣಕಾಸಿನ ವಿಚಾರವಾಗಿ ಪ್ಯಾನ್ ಕಾರ್ಡ್ (Pan Card) ನ್ನು ಒಂದು ಪ್ರಮುಖ ದಾಖಲೆಯಾಗಿ ಎಲ್ಲರೂ ಕೇಳುತ್ತಾರೆ. 10 ಅಲ್ಫಾನ್ಯೂಮರಿಕ್ ಸಂಖ್ಯೆಗಳಿಂದ ಮಾಡಲ್ಪಟ್ಟಿರುವ ಈ ಪ್ಯಾನ್ ಕಾರ್ಡ್ ನಲ್ಲಿ ಪ್ರತಿಯೊಬ್ಬರಿಗೂ ಯೂನಿಕ್ ಆದ ನಂಬರ್ ಗಳಿರುತ್ತವೆ. ಆದಾಯ ತೆರಿಗೆ ಇಲಾಖೆಯು ಪ್ರತಿಯೊಬ್ಬ ನಾಗರಿಕನಿಗೂ ಉಚಿತವಾಗಿ ಈ ದಾಖಲೆ ನೀಡುತ್ತದೆ.

ಫಲಾನುಭವಿಗಳು ಉಚಿತವಾಗಿ ನೋಂದಾಯಿಸಿಕೊಂಡು ಉಚಿತವಾಗಿ ಡೌನ್ಲೋಡ್ ಕೂಡ ಮಾಡಿಕೊಳ್ಳಬಹುದು. ನೀವು ಇನ್ನೂ ಸಹ ಪಾನ್ ಕಾರ್ಡ್ ಮಾಡಿಸಿಲ್ಲ ಎಂದರೆ ಹೊಸ ಪ್ಯಾನ್ ಕಾರ್ಡ್ ಗಾಗಿ ಮೊಬೈಲ್ ನಲ್ಲಿಯೇ ಅರ್ಜಿ ಸಲ್ಲಿಸಿ ಕೂಡ ಪಡೆಯಬಹುದು. ಆದಾಯ ತೆರಿಗೆ ಇಲಾಖೆಯ ಇ-ಫೈಲಿಂಗ್ ವೆಬ್‌ಸೈಟ್‌ನಲ್ಲಿ ಇ-ಪ್ಯಾನ್ ಕಾರ್ಡ್ ಗಾಗಿ ಅಪ್ಲೈ ಮಾಡಿ ಶೀಘ್ರವಾಗಿ ಪಾನ್ ಕಾರ್ಡ್ ಪಡೆದುಕೊಳ್ಳುವ ಸೌಲಭ್ಯವಿದೆ.

WhatsApp Group Join Now
Telegram Group Join Now
ಪ್ಯಾನ್ ಕಾರ್ಡಿಗೆ ಅರ್ಜಿಯನ್ನು ಸಲ್ಲಿಸುವ ವಿಧಾನ:-

* ಮೊದಲನೆಯದಾಗಿ ನೀವು ಆದಾಯ ತೆರಿಗೆ ಇಲಾಖೆಯ ಇ-ಫೈಲಿಂಗ್‌ನ ಅಧಿಕೃತ ವೆಬ್‌ಸೈಟ್ ಗೆ ಹೋಗಬೇಕು,
https://eportal.incometax.gov.in/iec/foservices/#/pre-login/instant-e-pan ಈ ಲಿಂಕ್ ಕ್ಲಿಕ್ ಮಾಡಿದರೆ ಇ-ಫೈಲಿಂಗ್ ವೆಬ್ ಸೈಟ್ ತಲುಪುತ್ತೀರಿ.
* ನಂತರ ವೆಬ್ಸೈಟ್ ನ ಮುಖಪುಟ ಓಪನ್ ಆಗುತ್ತದೆ, ಇದರಲ್ಲಿ ಗೆಟ್ ನ್ಯೂ ಇ-ಪ್ಯಾನ್ (Get New e-PAN) ಎಂಬ ಆಯ್ಕೆಯನ್ನು ಸೆಲೆಕ್ಟ್ ಮಾಡಿ ಅದರ ಮೇಲೆ ಕ್ಲಿಕ್ ಮಾಡಿ.

ಈ ಸುದ್ದಿ ಓದಿ:- ಸೈನಿಕ ಶಾಲೆಯಲ್ಲಿ ವಿವಿಧ ಹುದ್ದೆಗಳ ನೇಮಕಾತಿ.! ಆಸಕ್ತರು ಅರ್ಜಿ ಸಲ್ಲಿಸಿ.!

* ಮುಂದಿನ ಹಂತದಲ್ಲಿ ನೀವು ನಿಮ್ಮ ಆಧಾರ್ ಕಾರ್ಡ್ (Aadhar No.) ಸಂಖ್ಯೆಯನ್ನು ನಮೂದಿಸಬೇಕು ಜೊತೆಗೆ ನೀಡಲಾಗಿರುವ ಕ್ಯಾಪ್ಚಾ ಕೋಡ್ (Captcha Code) ಅನ್ನು ಭರ್ತಿ ಮಾಡಿ ಕನ್ಫರ್ಮ್ ಬಟನ್ ಕ್ಲಿಕ್ ಮಾಡಿ ಗೆಟ್ ಓಟಿಪಿ (Get OTP) ಎಂಬ ಆಯ್ಕೆಯ ಮೇಲೆ ಕ್ಲಿಕ್ ಮಾಡಬೇಕು.
* ಆಗ ನಿಮ್ಮ ಆಧಾರ್ ಕಾರ್ಡ್‌ನೊಂದಿಗೆ ಲಿಂಕ್ ಆಗಿರುವಂತಹ ಮೊಬೈಲ್ ಸಂಖ್ಯೆಗೆ (Mobile No.) ಒಂದು OTP ಬರುತ್ತದೆ, ಆ OTP ನ್ನು ಎಂಟ್ರಿ ಮಾಡಬೇಕು.

ಈ ಸುದ್ದಿ ಓದಿ:- ಕೇವಲ 2999 ಸಿಗಲಿದೆ ಅಪ್ ಗ್ರೇಡೆಡ್ ವಾಟರ್ ಪಂಪ್, ಮನೆ ತೋಟ ಕೃಷಿಗೆ ಹೇಳಿ ಮಾಡಿಸಿದ ಮೋಟರ್, ಪವರ್ ಫುಲ್ ಕಾಪರ್ 10ವರ್ಷ ವಾರೆಂಟಿ.!

* ಈ ಮೇಲಿನ ಹಂತಗಳನ್ನು ಸರಿಯಾಗಿ ಪೂರೈಸಿದ್ದರೆ ಸ್ಕ್ರೀನ್ ಮೇಲೆ ನಿಮಗೆ ಆಧಾರ್ ಕಾರ್ಡ್ ನ ಸಂಪೂರ್ಣ ಮಾಹಿತಿ ದೊರೆಯುತ್ತದೆ, ಅಲ್ಲಿ ನೀವು ನಿಮ್ಮ ಮಾಹಿತಿಗಳನ್ನು ಪರಿಶೀಲಿಸಿಕೊಂಡ ನಂತರ ದೃಢೀಕರಿಸುವ ಚೆಕ್ ಬಾಕ್ಸ್ ಮೇಲೆ ರೈಟ್ ಕ್ಲಿಕ್ ಮಾಡಿ ಸಬ್ಮಿಟ್ ಕೊಡಬೇಕು.
* ಇಲ್ಲಿಗೆ ನಿಮ್ಮ ಇ -ಪ್ಯಾನ್ (E-Pan) ಕಾರ್ಡ್ ಗೆ ಅರ್ಜಿ ಸಲ್ಲಿಕೆ ಪ್ರಕ್ರಿಯೆ ಕಂಪ್ಲೀಟ್ ಆಗಿರುತ್ತದೆ ನಂತರ 10 ನಿಮಿಷಗಳ ಬಳಿಕ ಅಥವಾ ಗರಿಷ್ಠ 24 ಗಂಟೆಗಳ ನಂತರ ನೀವು ನಿಮ್ಮ ಇ-ಪ್ಯಾನ್ ಕಾರ್ಡ್ ಅನ್ನು ಡೌನ್‌ಲೋಡ್ ಮಾಡಿಕೊಳ್ಳಬಹುದು.

ಈ ಸುದ್ದಿ ಓದಿ:- 2024ರಲ್ಲಿ 1000sq.ft ಮನೆ ಕಟ್ಟುವುದಾದರೆ ಎಷ್ಟು ಖರ್ಚು ಆಗುತ್ತೆ.! ಸಂಪೂರ್ಣ ಮಾಹಿತಿ ಇಲ್ಲಿದೆ ನೋಡಿ.!

ಈ ರೀತಿಯಾಗಿ ನೀವು ಈ ಮೇಲೆ ತಿಳಿಸಿದಂತೆ ಬಹಳ ಸರಳವಾದ ವಿಧಾನಗಳಲ್ಲಿ ಉಚಿತವಾಗಿ ಮನೆಯಲ್ಲಿಯೇ ಕುಳಿತುಕೊಂಡು ಇ-ಪ್ಯಾನ್ ಕಾರ್ಡಿಗೆ ಅರ್ಜಿಯನ್ನು ಸಲ್ಲಿಸಬಹುದು ಮತ್ತು ಡೌನ್ಲೋಡ್ ಕೂಡ ಮಾಡಿಕೊಳ್ಳಬಹುದು.

ಈ ಸುದ್ದಿ ಓದಿ:- ಎರಡನೇ ಹೆಂಡತಿಯ ಮಕ್ಕಳಿಗೆ ಪಿತ್ರಾರ್ಜಿತ ಆಸ್ತಿಯಲ್ಲಿ ಸಮಭಾಗ ಸಿಗುತ್ತ.? ಕನೂನನಲ್ಲಿ ಏನಿದೆ ನೋಡಿ.!

ಗುರುತಿನ ಚೀಟಿ ದಾಖಲೆಯಾಗಿ ಪಾನ್ ಕಾರ್ಡ್ ಬಳಕೆ ಆಗುತ್ತದೆ ಮತ್ತು ಬ್ಯಾಂಕಿಂಗ್ ಕ್ಷೇತ್ರದಲ್ಲಿ ಆರ್ಥಿಕ ವಹಿವಾಟಿನ ವಿಚಾರವಾಗಿ ಬ್ಯಾಂಕ್ ಖಾತೆ ತೆರೆಯುವುದರಿಂದ ಹಿಡಿದು ಪ್ರತಿಯೊಂದು ಸನ್ನಿವೇಶದಲ್ಲೂ ಪ್ಯಾನ್ ಕಾರ್ಡ್ ನ್ನು ಕೇಳುತ್ತಾರೆ. ಈ ಮಾಹಿತಿ ಎಲ್ಲರಿಗೂ ಉಪಯೋಗವಾಗಲಿ ಎನ್ನುವ ಉದ್ದೇಶದಿಂದ ತಪ್ಪದೆ ಈ ಉಪಯುಕ್ತ ಮಾಹಿತಿಯನ್ನು ನಿಮ್ಮ ಕುಟುಂಬದವರು ಹಾಗೂ ಸ್ನೇಹಿತರ ಜೊತೆಗೂ ಹಂಚಿಕೊಳ್ಳಿ.

ಸರ್ಕಾರಿ ಯೋಜನೆ, ಸರ್ಕಾರಿ ಉದ್ಯೋಗಗಳು,ಮತ್ತು ಖಾಸಗಿ ಕಂಪನಿ ಉದ್ಯೋಗದ ಬಗ್ಗೆ ದೈನಂದಿನ ಮಾಹಿತಿಯನ್ನು ಪಡೆಯಲು ನಮ್ಮ needs of ಕನ್ನಡ WhatsApp ಗ್ರೂಪ್ ಮತ್ತು ಟೆಲಿಗ್ರಾಮ್ ಚಾನಲ್‌ಗೆ ಜಾಯಿನ್ ಆಗಿರಿ
WhatsApp Group Join Now
Telegram Group Join Now

Leave a Comment