Insurance
ಕುಟುಂಬದ ಬಗ್ಗೆ ಕಾಳಜಿ ಇರುವ ಪ್ರತಿಯೊಬ್ಬ ವ್ಯಕ್ತಿಯೂ ಕೂಡ ಟರ್ಮ್ ಇನ್ಸೂರೆನ್ಸ್ ಮಾಡಿಸುತ್ತಾನೆ. ಈಗ ಮಾರುಕಟ್ಟೆಯಲ್ಲಿ ಹತ್ತಾರು ಕಂಪನಿಗಳು ವಿಭಿನ್ನವಾದ ರೀತಿಯ ಫೀಚರ್ಸ್ ಗಳನ್ನು ಕೊಟ್ಟು ಇನ್ಸೂರೆನ್ಸ್ ಆಫರ್ ಮಾಡುತ್ತಿವೆ. ಆದರೆ ಇದರಲ್ಲಿ ನೀವು ಆರಿಸಿಕೊಳ್ಳುವ ವಿಮೆ ಮೊತ್ತಕ್ಕೆ ತಕ್ಕ ಬಜೆಟ್ ನ್ನು ಪ್ರೀಮಿಯಂ ಗಳಾಗಿ ಪಾವತಿಸಬೇಕು ಮತ್ತು ಅದರಲ್ಲಿರುವ ಕಂಡೀಶನ್ ಗಳನ್ನು ಪೂರೈಸಬೇಕು ಎನ್ನುವ ನಿಯಮ ಇರುತ್ತದೆ.
ಇದಕ್ಕಿಂತ ಅನುಕೂಲಕರ ದರದಲ್ಲಿ ಅತ್ಯಂತ ಸರಳವಾಗಿ ಬಡ ಕುಟುಂಬದ ವ್ಯಕ್ತಿಗೂ ಅನುಕೂಲವಾಗುವ ರೀತಿ ಭಾರತೀಯ ಅಂಚೆ ಇಲಾಖೆಯು (post office) ಕೂಡ ಇದೇ ಮಾದರಿ ಟರ್ಮ್ ಇನ್ಸೂರೆನ್ಸ್ (Term Insurance) ಅಭಿವೃದ್ಧಿಪಡಿಸಿದೆ. ಅಂಚೆ ಕಚೇರಿಯಲ್ಲಿ ಸಿಗುತ್ತಿರುವ ಈ ಗ್ರೂಪ್ ಆಕ್ಸಿಡೆಂಟ್ ಗಾರ್ಡ್ ಪಾಲಿಸಿ (group accident guard policy) ಖರೀದಿಸಿದರೆ ಟರ್ಮ್ ಇನ್ಸೂರೆನ್ಸ್ ರೀತಿ ವ್ಯಕ್ತಿ ಮರಣ ಹೊಂದಿದ ಸಂದರ್ಭದಲ್ಲಿ ಆತನ ಕುಟುಂಬಕ್ಕೆ ಇದು ಆಸರೆ ಆಗುತ್ತದೆ.
ಈ ಸುದ್ದಿ ಓದಿ:- ಈ ತಳಿ ಹಸು ಸಾಕಿದರೆ ದಿನಕ್ಕೆ 10 ಲೀಟರ್ ಹಾಲು ಪಕ್ಕಾ, ನಿಮ್ಮ ಆದಾಯ ಡಬಲ್ ಆಗುವುದು ಗ್ಯಾರಂಟಿ.!
ಟಾಟಾ ಎಐಜಿ (TATA AIG) ಸಹಯೋಗದೊಂದಿಗೆ ಅಂಚೆ ಕಚೇರಿ ಇಂತಹದೊಂದು ಯೋಜನೆ ಜಾರಿಗೆ ತಂದಿದೆ. ನೀವು ವಾರ್ಷಿಕವಾಗಿ ರೂ.399 ಅಂದರೆ ತಿಂಗಳಿಗೆ 34 ರೂಪಾಯಿ ಪಾವತಿಸಿ ರೂ.10 ಲಕ್ಷಕ್ಕೆ ವಿಮೆ ಖರೀದಿಸಬಹುದು. ಇಷ್ಟೂ ಸಾಧ್ಯವಿಲ್ಲ ಎಂದವರಿಗೆ ವಾರ್ಷಿಕವಾಗಿ ರೂ.299 ಕ್ಕೆ ಕೂಡ ಇನ್ಸೂರೆನ್ಸ್ ಮಾಡಿಸುವ ಅವಕಾಶ ಇದೆ.
ಒಮ್ಮೆ ನೀವು ಅಂಚೆ ಕಚೇರಿಗೆ ಹೋಗಿ ಯೋಜನೆಗೆ ನೋಂದಣಿ ಆದರೆ ಆಟೋ ಡೆಬಿಟ್ ಮೂಲಕ ಪ್ರತಿ ವರ್ಷ ನಿಮ್ಮ ಖಾತೆಯಿಂದ ಹಣ ಡೆಬಿಟ್ ಆಗುತ್ತದೆ ಮತ್ತು ನೀವು ಮ’ರ’ಣ ಹೊಂದಿದ ಸಮಯದಲ್ಲಿ ಕುಟುಂಬಕ್ಕೆ ಆಸರೆಯಾಗಿ ಅಥವಾ ಅ’ಪ’ಘಾ’ತಗಳಿಗೆ ತುತ್ತಾದಾಗ ನಷ್ಟಕ್ಕೆ ಅನುಸಾರವಾಗಿ ಚಿಕಿತ್ಸೆಗೆ ಹಾಗೂ ಪರಿಹಾರವಾಗಿ ವಿಮೆ ಕ್ಲೇಮ್ ಮಾಡಬಹುದು ಇದರ ಕುರಿತು ಹೆಚ್ಚಿನ ವಿವರ ಹೇಗಿದೆ ನೋಡಿ.
ಈ ಸುದ್ದಿ ಓದಿ:- SBI ಬ್ಯಾಂಕ್ ಹೊಸ ಯೋಜನೆ ಕೇವಲ 1 ಲಕ್ಷ ಕಟ್ಟಿದರೆ ಸಾಕು ಪ್ರತಿ ತಿಂಗಳು 3259 ರೂಪಾಯಿ ಸಿಗುತ್ತೆ.!
ಯೋಜನೆ ಹೆಸರು:- ಗ್ರೂಪ್ ಆಕ್ಸಿ.ಡೆಂಟ್ ಗಾರ್ಡ್ ಪಾಲಿಸಿ
ಯೋಜನೆಯ ವೈಶಿಷ್ಟಗಳು:-
* 18 ವರ್ಷ ಮೇಲ್ಪಟ್ಟ 65 ವರ್ಷ ವಯಸ್ಸಿನ ಒಳಗಿನ ಯಾವುದೇ ಭಾರತೀಯ ನಾಗರಿಕ ಈ ಯೋಜನೆ ಖರೀದಿಸಬಹುದು
* ಈ ಪಾಲಿಸಿಯಲ್ಲಿ ಕೇವಲ ರೂ.299 ಮತ್ತು ರೂ.399 ರ ಪ್ರೀಮಿಯಂ ಪಾವತಿಸುವ ಮೂಲಕ 10 ಲಕ್ಷ ರೂಪಾಯಿ ಮೊತ್ತದ ವಿಮಾ ರಕ್ಷಣೆ ಪಡೆಯಬಹುದು.
* ಪ್ರತಿ ವರ್ಷ ವಿಮಾ ಪಾಲಿಸಿಯನ್ನು ನವೀಕರಿಸಬೇಕು (ನಿಮ್ಮ ಅಂಚೆ ಉಳಿತಾಯ ಖಾತೆಯಿಂದ ಆಟೋ ಡೆಬಿಟ್ ಆಗುವ ಆಯ್ಕೆ ಆರಿಸಬಹುದು) ಹಾಗಾಗಿ ವಿಮೆ ಸೌಲಭ್ಯ ಪಡೆಯಲು ಇಂಡಿಯಾ ಪೋಸ್ಟ್ ಪೇಮೆಂಟ್ಸ್ ಬ್ಯಾಂಕ್‌ನಲ್ಲಿ (india post payment bank) ಖಾತೆ ತೆರೆಯಬೇಕು.
ಈ ಸುದ್ದಿ ಓದಿ:- ತಿಂಗಳಿಗೆ 1000 ಕಟ್ಟಿ ಸಾಕು ಒಟ್ಟಿಗೆ 42 ಲಕ್ಷ ಸಿಗಲಿದೆ.!
* ಪಾಲಿಸಿ ಖರೀದಿಸಿದಾತ ಆಕಸ್ಮಿಕವಾಗಿ ಅ’ಪ’ಘಾ’ತವಾಗಿ ಗಾಯಗೊಂಡರೆ IPD ವೆಚ್ಚಕ್ಕೆ ರೂ.60,000 ಮತ್ತು OPD ಗೆ ರೂ.30,000 ಕ್ಲೈಂ ಮಾಡಬಹುದು. ರೂ.299 ರೂಪಾಯಿ ಪ್ರೀಮಿಯಂ ಮೊತ್ತದ ಯೋಜನೆ ಪಾಲಿಸಿದಾರನಿಗೂ ಅನ್ವಯವಾಗುತ್ತದೆ.
* ಆಕಸ್ಮಿಕ ಸಾ’ವಿಗೀಡಾದರೆ ಆತನ ಕುಟುಂಬದ ಅವಲಂಬಿತರಿಗೆ ರೂ.10 ಲಕ್ಷ ವಿಮೆ ಸಿಗಲಿದೆ, ಅಂತಿಮ ವಿಧಿಗಳಿಗಾಗಿ 5,000 ರೂ. ನೀಡಲಾಗುತ್ತದೆ. ವಿಮಾದಾರರು ಸಂಪೂರ್ಣ ಅಂಗವಿಕಲರಾದರೆ, ಭಾಗಶಃ ಅಂಗವೈಕಲ್ಯಕ್ಕೆ ಒಳಗಾದರೂ ಆಯಾ ತೊಂದರಿಗೆ ಸಂಬಂಧಪಟ್ಟ ಹಾಗೆ ವಿಮೆ ಕ್ಲೈಮ್ ಮಾಡಬಹುದು.
* 399 ರೂ. ಪ್ರೀಮಿಯಂ ಮೊತ್ತದ ಯೋಜನೆಯಲ್ಲಿ, ಮೇಲಿನ ಎಲ್ಲಾ ಕ್ಲೈಮ್‌ಗಳು ಮತ್ತು ಅವರ 2 ಮಕ್ಕಳ ಶಿಕ್ಷಣಕ್ಕಾಗಿ 1 ಲಕ್ಷ ರೂಪಾಯಿವರೆಗಿನ ವೆಚ್ಚವನ್ನು ನೀಡಲಾಗುತ್ತದೆ.
* ಯೋಜನೆ ಕುರಿತ ಹೆಚ್ಚಿನ ಮಾಹಿತಿಗಾಗಿ ಹತ್ತಿರದ ಅಂಚೆ ಕಛೇರಿಗೆ ಭೇಟಿ ನೀಡಿ.