Subsidy
ರಾಜ್ಯದ ರೈತರಿಗೆಲ್ಲ ಕರ್ನಾಟಕ ರಾಜ್ಯ ಸರ್ಕಾರದ ಕಡೆಯಿಂದ ಮತ್ತೊಂದು ಸಿಹಿ ಸುದ್ದಿ ಇದೆ. ಇತ್ತೀಚೆಗೆ ನಡೆದ ಸಚಿವ ಸಂಪುಟ ಸಭೆಯಲ್ಲಿ ರಾಜ್ಯದ ರೈತರ ಪಾಲಿಕೆ ವರದಾನದಂತಿರುವ ಕೃಷಿ ಭಾಗ್ಯ ಯೋಜನೆ (KrishiBhagya Scheme) ಮರು ಆರಂಭಿಸುವ ಬಗ್ಗೆ ನಿರ್ಧಾರ ಕೈಗೊಳ್ಳಲಾಗಿದೆ.
ಈ ನಿರ್ಧಾರದಿಂದ ಕೃಷಿ ಕ್ಷೇತ್ರ ಅವಲಂಬಿಸಿರುವ ರೈತರ ಮುಖದಲ್ಲಿ ಸಂತಸ ಮೂಡಿದೆ. 2013ರ ಸಮಯದಲ್ಲಿ ರಾಜ್ಯದಲ್ಲಿ ಆಡಳಿತದಲ್ಲಿದ್ದ ಸಿದ್ದರಾಮಯ್ಯ ನೇತೃತ್ವದ (CM Siddaramaih) ಕಾಂಗ್ರೆಸ್ ಸರ್ಕಾರವು ರಾಜ್ಯದ ರೈತರಿಗೆ ಅನುಕೂಲ ಮಾಡಿಕೊಡುವ ಉದ್ದೇಶದಿಂದ ಈ ಕೃಷಿ ಭಾಗ್ಯ ಯೋಜನೆಯನ್ನು ಜಾರಿಗೆ ತಂದಿತ್ತು.
ರಾಜ್ಯದ ಲಕ್ಷಾಂತರ ರೈತರು ಈ ಯೋಜನೆಯ ಪ್ರಯೋಜನ ಪಡೆದುಕೊಂಡಿದ್ದರು ಮತ್ತು ಇಂದಿಗೂ ಕೂಡ ಸ್ಮರಿಸುತ್ತಿರುವರು. ಆದರೆ ನಂತರದ ವರ್ಷಗಳಲ್ಲಿ ಬಂದ ಸರ್ಕಾರಗಳು ಈ ಬಗ್ಗೆ ಆಸಕ್ತಿ ತೋರಲಿಲ್ಲ. ಈಗ ಮತ್ತೊಮ್ಮೆ ಲಕ್ಷಾಂತರ ರೈತರ ಬೇಡಿಕೆಯಂತೆ ಕೃಷಿ ಭಾಗ್ಯ ಯೋಜನೆ ಮರು ಆರಂಭಿಸುವ ಬಗ್ಗೆ ಇತ್ತೀಚೆಗಷ್ಟೇ ನಡೆದ ಸಚಿವ ಸಂಪುಟ ಸಭೆ ನಿರ್ಧರಿಸಿದೆ.
ಈ ಸುದ್ದಿ ಓದಿ:- ವಾಹನ ಸವಾರರಿಗೆ ಗುಡ್ ನ್ಯೂಸ್.! ಜೂನ್ 1 ರಿಂದ ಡ್ರೈವಿಂಗ್ ಲೈಸನ್ಸ್ ಗೆ ಹೊಸ ನಿಯಮ ಜಾರಿ.!
ಈ ಬಾರಿ ಕೃಷಿಭಾಗ್ಯ ಯೋಜನೆ ವ್ಯಾಪ್ತಿಗೆ 24 ಜಿಲ್ಲೆಗಳ 106 ತಾಲೂಕುಗಳನ್ನು ಸೇರಿಸಲಾಗಿದೆ. ಹೊಸ ರೂಪದಲ್ಲಿ ಮತ್ತೆ ಜಾರಿಗೆ ಬರಲಿರುವ ಕೃಷಿ ಭಾಗ್ಯ ಯೋಜನೆಯು ಮಳೆಯಾಶ್ರಿತ ಕೃಷಿಯಲ್ಲಿ ಕ್ರಾಂತಿಯನ್ನುಂಟು ಮಾಡುವ ಗುರಿಯನ್ನು ಹೊಂದಿದೆ ಎನ್ನುವ ಅಭಿಪ್ರಾಯ ಪಡೆಯಲಾಗಿದೆ.
ಕೃಷಿ ಭಾಗ್ಯ ಯೋಜನೆಯ ಉದ್ದೇಶವೇ ರೈತರಿಗೆ ಕೃಷಿ ಆದಾಯವನ್ನು ಹೆಚ್ಚಿಸಿ ಕೊಡುವುದು ಮತ್ತು ಕೃಷಿ ಹೊಂಡಗಳ ನಿರ್ಮಾಣದ ಮೂಲಕ ಸುಸ್ಥಿರ ಕೃಷಿಯನ್ನು ಖಚಿತಪಡಿಸಿಕೊಳ್ಳುವುದು. ಪರೋಕ್ಷವಾಗಿ ಈ ಯೋಜನೆ ಮೂಲಕ ಮಳೆನೀರಿನ ಗರಿಷ್ಠ ಸದ್ಬಳಕೆ ಮತ್ತು ರಕ್ಷಣಾತ್ಮಕ ನೀರಾವರಿ ಸಾಧ್ಯವಾಗಿಸುವುದು ಎನ್ನುವುದು ಕೂಡ ಸೇರಿದೆ.
ನವೆಂಬರ್ ತಿಂಗಳಲ್ಲಿ ನಡೆದ ಸಚಿವ ಸಂಪುಟ ತೀರ್ಮಾನದೊಂದಿಗೆ ಒಪ್ಪಿಗೆ ಪಡೆಯರಾದ ಕೃಷಿ ಭಾಗ್ಯ ಯೋಜನೆ ಮರು ಆರಂಭಕ್ಕೆ 200 ಕೋಟಿ ರೂ.ಗಳ ಬಜೆಟ್ ಅನ್ನು ನಿಗದಿಪಡಿಸಲಾಗಿದೆ. ಈ ಅಂದಾಜಿನಲ್ಲಿ ಈಗಾಗಲೇ 100 ಕೋಟಿ ರೂ.ಗಳನ್ನು ಮಂಜೂರು ಮಾಡಲಾಗಿದೆ.
ಈ ಸುದ್ದಿ ಓದಿ:- ಗೃಹಲಕ್ಷ್ಮಿ 11ನೇ ಕಂತಿನ ಹಣ ಪಡೆಯಲು ಹೊಸ ರೂಲ್ಸ್.! ಈ ಕೆಲಸ ಮಾಡದಿದ್ರೆ ಹಣ ಬರಲ್ಲ.!
ಉಳಿದ ಮೊತ್ತವನ್ನು ಕಂದಾಯ ಇಲಾಖೆಯ ವಿಪತ್ತು ನಿರ್ವಹಣಾ ನಿಧಿಯಿಂದ ನಿರೀಕ್ಷಿಸಲಾಗಿದೆ. ಈ ಯೋಜನೆಯು ವಿಶೇಷವಾಗಿ ಮಳೆ-ಆಧಾರಿತ ಮತ್ತು ಶುಷ್ಕ ಹವಾಮಾನ ಜಿಲ್ಲೆಗಳನ್ನು ಗುರಿಯಾಗಿಟ್ಟುಕೊಂಡು ಅಂತಹ ಮಧ್ಯಸ್ಥಿಕೆಗಳ ಅಗತ್ಯವಿರುವ ಪ್ರದೇಶಗಳಿಗೆ ಒತ್ತು ನೀಡಲಾಗುತ್ತಿದೆ.
ಕೃಷಿಭಾಗ್ಯ ಯೋಜನೆಯ ಮೂಲಕ ರೈತರಿಗೆ ಸಬ್ಸಿಡಿಗಳು ಮತ್ತು ಪ್ರಯೋಜನಗಳು :-
* ಕೃಷಿ ಭಾಗ್ಯ ಯೋಜನೆಯಲ್ಲಿ ಕೃಷಿ ಹೊಂಡಗಳನ್ನು ನಿರ್ಮಿಸಲು, ಪಾಲಿಥಿನ್ ಕವರ್‌ಗಳು, ಪಂಪ್ ಸೆಟ್‌ಗಳು ಮತ್ತು ಲಘು ನೀರಾವರಿ ಘಟಕಗಳನ್ನು ಖರೀದಿಸಲು ಮತ್ತು ಕೃಷಿ ಹೊಂಡಗಳ ಸುತ್ತಲೂ ನೆರಳು ಪರದೆಯ ಘಟಕಗಳನ್ನು ಸ್ಥಾಪಿಸಲು ಪ್ರೋತ್ಸಾಹ ಧನ ನೀಡಲಾಗುತ್ತದೆ. ಇದರಿಂದ ಇಳುವರಿಯಲ್ಲೂ ಕೂಡ ಪರಿಣಾತ್ಮಕ ಬದಲಾವಣೆ ಮತ್ತು ಮಳೆ ನೀರಿನ ಸದ್ಬಳಕೆ ಆಗಲಿದೆ.
* ಕೃಷಿ ಹೊಂಡಗಳ ನಿರ್ಮಾಣಕ್ಕೆ ಸಾಮಾನ್ಯ ರೈತರಿಗೆ 100% ಸಹಾಯಧನ, ಮತ್ತು SC/ST ಸಮುದಾಯಗಳಿಗೆ 80–90%.
* ಪಾಲಿಥಿನ್ ಹೊಡುಕೆ/ಪರಾಯ ಮಾದರಿಗೆ ನೀರು ಸೋರಿಕೆಯನ್ನು ತಡೆಗಟ್ಟಲು ಗರಿಷ್ಠ ರೂ.50,000 ಸಹಾಯಧನ.
* ಡೀಸೆಲ್ ಪಂಪ್ ಸೆಟ್‌ಗಳನ್ನು ಅಪ್‌ಗ್ರೇಡ್ ಮಾಡಲು ಸಬ್ಸಿಡಿ, ವಿವಿಧ ವರ್ಗಗಳಿಗೆ 50-90% ಸಹಾಯಧನ.
* ಲಘು ನೀರಾವರಿ ಮತ್ತು ನೆರಳು ಪರದೆ ಅಳವಡಿಸಿಕೊಳ್ಳಲು ಸ್ಪ್ರಿಂಕ್ಲರ್‌ಗಳು ಅಥವಾ ಹನಿ ನೀರಾವರಿಯಂತಹ ವ್ಯವಸ್ಥೆಗಳಿಗೆ 90% ವರೆಗೆ ಸಹಾಯಧನ ಮತ್ತು ನೆರಳು ಪರದೆಗಳನ್ನು ನಿರ್ಮಿಸಲು 50% ಸಹಾಯಧನ ಸಿಗಲಿದೆ. ಈ ಯೋಜನೆಗಳ ಪ್ರಯೋಜನ ಪಡೆಯಲು ರೈತರು ಹತ್ತಿರದಲ್ಲಿರುವ ರೈತ ಸಂಪರ್ಕ ಕೇಂದ್ರಕ್ಕೆ ಹೋಗಿ ಹೆಚ್ಚಿನ ಮಾಹಿತಿ ಪಡೆಯಬಹುದು