Labour Card: ಹೊಸ ಲೇಬರ್ ಕಾರ್ಡ್ & ರಿನಿವಲ್ ಗೆ ಅವಕಾಶ.!

Labour Card :

ಕರ್ನಾಟಕ ಕಟ್ಟದ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿಯ ಯೋಜನೆಗಳ ಪ್ರಯೋಜನವನ್ನು ಪಡೆಯಲು ಕಾರ್ಮಿಕ ಕಾರ್ಡ (Labour Card) ಅನ್ನು ಪಡೆಯಲು ಅಥವಾ ಈಗಾಗಲೇ ಕಾರ್ಡ್ ಹೊಂದಿರುವವರು ನವೀಕರಣ ಮಾಡಿಕೊಳ್ಳಲು ಅರ್ಜಿ ಸಲ್ಲಿಸಲು ಅವಕಾಶವನ್ನು ರಾಜ್ಯ ಸರ್ಕಾರ ನೀಡಿದೆ. ಈ ಕಾರ್ಡ್ ಕಾರ್ಮಿಕರಿಗೆ ಹಲವಾರು ಆರ್ಥಿಕ, ಶೈಕ್ಷಣಿಕ ಮತ್ತು ಸಾಮಾಜಿಕ ಪ್ರಯೋಜನಗಳನ್ನು ನೀಡಲು ನಿಗದಿಯಾಗಿದೆ.

ಕಾರ್ಮಿಕ ಕಾರ್ಡ್ ಪಡೆಯಲು ಅಗತ್ಯ ಮಾಹಿತಿಗಳು

1. ಕಾರ್ಮಿಕ ಕಾರ್ಡ್ ಅರ್ಜಿ ಸಲ್ಲಿಸುವ ಸ್ಥಳ:

ಕಾರ್ಮಿಕ ಕಾರ್ಡ್ ಪಡೆಯಲು ಅರ್ಜಿಯನ್ನು ಸಮೀಪದ ಗ್ರಾಮ ಒನ್/ಕರ್ನಾಟಕ ಒನ್/ಬೆಂಗಳೂರು ಒನ್ ಕೇಂದ್ರಗಳಲ್ಲಿ ಸಲ್ಲಿಸಬಹುದು. ಅಲ್ಲದೆ, ಜಿಲ್ಲಾ ಕಾರ್ಮಿಕ ಕಚೇರಿಯಲ್ಲಿಯೂ ಈ ಸೇವೆ ಲಭ್ಯವಿದೆ.

WhatsApp Group Join Now
Telegram Group Join Now

2. ಅರ್ಹತಾ ಮಾನದಂಡಗಳು:

ಕಾರ್ಮಿಕ ಕಾರ್ಡ್ ಪಡೆಯಲು ಅರ್ಜಿದಾರರು ಈ ಕೆಳಗಿನ ಅರ್ಹತೆಗಳನ್ನು ಹೊಂದಿರಬೇಕು:

  • ಖಾಯಂ ನಿವಾಸಿ: ಅರ್ಜಿದಾರರು ಕರ್ನಾಟಕದ ಖಾಯಂ ನಿವಾಸಿಯಾಗಿರಬೇಕು.
  • ವಯೋಮಿತಿಯ ಹಂತ: ಅರ್ಜಿದಾರರ ವಯಸ್ಸು ಕನಿಷ್ಟ 18 ವರ್ಷ ಮತ್ತು ಗರಿಷ್ಠ 60 ವರ್ಷ ಆಗಿರಬೇಕು.
  • ಉದ್ಯೋಗದ ಸ್ವರೂಪ: ಅರ್ಜಿದಾರರು ಕಟ್ಟಡ ಮತ್ತು ಇತರೆ ನಿರ್ಮಾಣ ಉದ್ಯೋಗದಲ್ಲಿ ಕೆಲಸ ಮಾಡುತ್ತಿರಬೇಕು.
  • ನೋಂದಣಿ: ಅರ್ಜಿದಾರರು ಜಿಲ್ಲಾ ಕಾರ್ಮಿಕ ಕಚೇರಿಯಲ್ಲಿ ತಮ್ಮ ಹೆಸರು ನೋಂದಾಯಿಸಿಕೊಂಡಿರಬೇಕು.

3. Labour Card Application ಗೆ ಅಗತ್ಯ ದಾಖಲೆಗಳು:

ಅರ್ಜಿ ಸಲ್ಲಿಸಲು ಈ ಕೆಳಗಿನ ದಾಖಲೆಗಳು ಅಗತ್ಯ:

  • ಆಧಾರ್ ಕಾರ್ಡ್ (ಅರ್ಜಿದಾರ ಮತ್ತು ಕುಟುಂಬ ಸದಸ್ಯರ ಪ್ರತಿ)
  • ಬ್ಯಾಂಕ್ ಪಾಸ್ ಬುಕ್
  • ರೇಷನ್ ಕಾರ್ಡ್
  • ಪಾಸ್‌ಪೋರ್ಟ್ ಅಳತೆಯ ಫೋಟೋ
  • ಉದ್ಯೋಗ ದೃಢೀಕರಣ ಪ್ರಮಾಣ ಪತ್ರ
  • ವಯಸ್ಸಿನ ದೃಢೀಕರಣ ಪ್ರಮಾಣ ಪತ್ರ
  • ಮತದಾರ ಗುರುತಿನ ಚೀಟಿ

ಕಾರ್ಮಿಕ ಕಾರ್ಡ್‌ನ ಪ್ರಯೋಜನಗಳು

ಈ ಕಾರ್ಡ್ ಹೊಂದಿರುವ ಫಲಾನುಭವಿಗಳು ವಿವಿಧ ಯೋಜನೆಗಳ ಸೌಲಭ್ಯ ಪಡೆಯಬಹುದು. ಪ್ರಮುಖ ಪ್ರಯೋಜನಗಳು ಇಂತಿವೆ:

  1. ಪಿಂಚಣಿ ಸೌಲಭ್ಯ: ವಯೋವೃದ್ಧ ಕಾರ್ಮಿಕರಿಗೆ ಮಾಸಿಕ ಪಿಂಚಣಿ ಲಭ್ಯ.
  2. ಅಪಘಾತ ಪರಿಹಾರ: ಕಾರ್ಮಿಕರು ಕೆಲಸ ಮಾಡುವ ವೇಳೆ ಅಪಘಾತಕ್ಕೀಡಾದಲ್ಲಿ ಪರಿಹಾರ ಲಭ್ಯ.
  3. ವೈದ್ಯಕೀಯ ಸಹಾಯಧನ: ಕಾರ್ಮಿಕರ ಆರೋಗ್ಯ ಭಾಗ್ಯ ಯೋಜನೆಯಡಿಯಲ್ಲಿ ಉಚಿತ ಅಥವಾ ಸಬ್ಸಿಡಿ ದರದಲ್ಲಿ ವೈದ್ಯಕೀಯ ಚಿಕಿತ್ಸೆ ಲಭ್ಯ.
  4. ತಾಯಿ ಮಗು ಸಹಾಯ ಹಸ್ತ: ಗರ್ಭಿಣಿ ಕಾರ್ಮಿಕ ಮಹಿಳೆಯರಿಗೆ ಧನ ಸಹಾಯ.
  5. ಹೆರಿಗೆ ಸೌಲಭ್ಯ: ತಾಯಿ ಲಕ್ಷ್ಮೀ ಬಾಂಡ್ ಮೂಲಕ ಹೆರಿಗೆಗೆ ನೆರವು.
  6. ಮದುವೆ ಸಹಾಯಧನ: ಮನೆ ಲಕ್ಷ್ಮೀ ಬಾಂಡ್ ಯೋಜನೆಯಡಿಯಲ್ಲಿ ಮದುವೆಗೆ ಸಹಾಯಧನ.
  7. ಪ್ರಮುಖ ವೈದ್ಯಕೀಯ ವೆಚ್ಚ ಸಹಾಯಧನ: ಕಾರ್ಮಿಕ ಚಿಕಿತ್ಸಾ ಭಾಗ್ಯ ಯೋಜನೆಯಡಿ ಆರೋಗ್ಯ ಸೇವೆಗೆ ಹಣಕಾಸು ನೆರವು.
  8. ಶೈಕ್ಷಣಿಕ ಧನಸಹಾಯ: ಕಾರ್ಮಿಕರ ಮಕ್ಕಳ ಶಿಕ್ಷಣಕ್ಕೆ ಸಹಾಯಧನ.
  9. ದುರ್ಬಲತೆ ಪಿಂಚಣಿ: ಶಾರದಿಯಾಗಿರುವ ಕಾರ್ಮಿಕರಿಗೆ ಮಾಸಿಕ ಪಿಂಚಣಿ.
  10. ಅಂತ್ಯಕ್ರಿಯೆ ವೆಚ್ಚಕ್ಕೆ ಸಹಾಯಧನ: ಅಂತ್ಯಕ್ರಿಯೆಗೆ ಆರ್ಥಿಕ ನೆರವು.
  11. BMTC ಬಸ್ ಪಾಸ್ ಸೌಲಭ್ಯ: BMTC ಬಸ್ ಪಾಸ್ ದೊರೆಯುವ ಅವಕಾಶ.

ಕಾರ್ಮಿಕ ಕಾರ್ಡ್ ನವೀಕರಣ ಪ್ರಕ್ರಿಯೆ

ಒಮ್ಮೆ ಕಾರ್ಮಿಕ ಕಾರ್ಡ್ ಪಡೆದ ಬಳಿಕ, ನಿಗದಿತ ಅವಧಿ ಕಳೆದ ನಂತರ ಅದನ್ನು ನವೀಕರಿಸಿಕೊಳ್ಳಬೇಕು. ಇದನ್ನು ಗ್ರಾಮ ಒನ್/ಕರ್ನಾಟಕ ಒನ್/ಬೆಂಗಳೂರು ಒನ್ ಕೇಂದ್ರಗಳಲ್ಲಿ ನೇರವಾಗಿ ತೆರಳಿ ಅರ್ಜಿ ಸಲ್ಲಿಸುವ ಮೂಲಕ ನವೀಕರಿಸಬಹುದಾಗಿದೆ.

ಈ ಕಾರ್ಡ್ ಕಾರ್ಮಿಕರಿಗೆ ಹಾಗೂ ಅವರ ಕುಟುಂಬಗಳಿಗೆ ಒದಗಿಸುವ ಹಲವು ಸೌಲಭ್ಯಗಳ ಕಾರಣದಿಂದಾಗಿ, ಅರ್ಹ ಕಾರ್ಮಿಕರು ಕಾರ್ಡ್ ಪಡೆಯಲು ಅಥವಾ ನವೀಕರಣ ಮಾಡಿಕೊಳ್ಳಲು ತಕ್ಷಣವೇ ಕ್ರಮ ತೆಗೆದುಕೊಳ್ಳಬೇಕು.

ಸರ್ಕಾರಿ ಯೋಜನೆ, ಸರ್ಕಾರಿ ಉದ್ಯೋಗಗಳು,ಮತ್ತು ಖಾಸಗಿ ಕಂಪನಿ ಉದ್ಯೋಗದ ಬಗ್ಗೆ ದೈನಂದಿನ ಮಾಹಿತಿಯನ್ನು ಪಡೆಯಲು ನಮ್ಮ Kannada Trend News WhatsApp ಗ್ರೂಪ್ ಮತ್ತು ಟೆಲಿಗ್ರಾಮ್ ಚಾನಲ್‌ಗೆ ಜಾಯಿನ್ ಆಗಿರಿ
WhatsApp Group Join Now
Telegram Group Join Now

Leave a Comment