House
ಮನೆ ಕಟ್ಟುವುದು ಎಲ್ಲರಿಗೂ ಇರುವ ಒಂದು ಸಾಮಾನ್ಯ ಕನಸು ಜೊತೆಗೆ ಇದು ಒಂದು ಮೂಲಭೂತ ಅವಶ್ಯಕತೆ ಕೂಡ. ನಮಗೆ ನಮ್ಮದೇ ಆದ ಒಂದು ಸ್ವಂತ ಮನೆ ಇಲ್ಲದೆ ಹೋದರೆ ನಾವು ಜೀವನ ಪೂರ್ತಿ ದುಡಿದ ಹಣದಲ್ಲಿ ಅತಿಹೆಚ್ಚಿನ ಭಾಗವನ್ನು ಮನೆ ಬಾಡಿಗೆಗಾಗಿಯೇ ಕಟ್ಟಿರುತ್ತೇವೆ ಪ್ರತಿಯೊಬ್ಬರಿಗೂ ಕೂಡ ಸ್ವಂತ ಸೂರು ಆಗಬೇಕು ಎನ್ನುವುದು ಸರ್ಕಾರದ ಕನಸು ಕೂಡ.
ಅದಕ್ಕಾಗಿ ಕೆಲ ಯೋಜನೆಗಳನ್ನು ಜಾರಿಗೆ ತಂದು ಬಡವರಿಗೂ ಮನೆ ಕಟ್ಟಿಕೊಳ್ಳಲು ನೆರವು ನೀಡುತ್ತಿದೆ. ಶ್ರೀಮಂತರಿಗೆ ಇದು ಪ್ರತಿಷ್ಠೆಯ ವಿಷಯವಾದರೆ ಬಡವರಿಗೆ ತಮ್ಮ ಜೀವಮಾನದ ಸಾಧನೆ ಎಂದೇ ಹೇಳಬಹುದು ಮತ್ತು ಆದರು ಆದಷ್ಟು ತಾವು ಉಳಿಸಿರುವ ಉಳಿತಾಯದಲ್ಲಿ ಅಥವಾ ಕಡಿಮೆ ಸಾಲದಲ್ಲಿ ಮನೆ ಕಟ್ಟಿಕೊಳ್ಳಲು ಇಚ್ಚಿಸುತ್ತಾರೆ.
ನೀವು ಕೂಡ ಈ ರೀತಿ ಯೋಚಿಸುತ್ತಿದ್ದರೆ 10 ಲಕ್ಷದಲ್ಲಿ 500 Sq.ft 1BHK ಮನೆ ಕಟ್ಟಿಸುವ ಬಜೆಟ್ ಬಗ್ಗೆ ಈ ಅಂಕಣದಲ್ಲಿ ತಿಳಿಸುತ್ತಿದ್ದೇವೆ. ಇಷ್ಟು ಕಡಿಮೆ ಬಜೆಟ್ ನಲ್ಲಿ ಹೇಗೆ ಮನೆ ನಿರ್ಮಾಣ ಮಾಡಬೇಕು ಎನ್ನುವುದಾದರೆ ಯಾವುದಕ್ಕೆ ಎಷ್ಟು ಖರ್ಚು ಮಾಡಬೇಕು ಎನ್ನುವ ಪ್ಲಾನಿಂಗ್ ಇರಬೇಕು. 500Sq.ft ನಲ್ಲಿ ರೆಡಿಯಾಗಿರುವ ಮನೆ ಉದಾಹರಣೆಯೊಂದಿಗೆ ಈ ಬಜೆಟ್ ವಿವರಿಸುತ್ತಿದ್ದೇವೆ. ಮೊದಲಿಗೆ ಮನೆ ಮುಂದೆ ಗೇಟ್ ಮಾಡಲಾಗಿದೆ.
ಗೇಟ್ ಒಳಗಡೆ ಪಾರ್ಕಿಂಗ್ ಏರಿಯಾ ಕೂಡ ಇದೆ ಆದರೆ ಪಾರ್ಕಿಂಗ್ ಟೈಲ್ಸ್ ಹಾಕಲಾಗಿಲ್ಲ. 8000ltr ಸಂಪ್ ಮಾಡಿ, ಎಂಎಸ್ ಡೋರ್ ನ್ನು ಹಾಕಲಾಗಿದೆ. ಮನೆಯ ಮುಂಭಾಗವು ಆಕರ್ಷಕವಾಗಿ ಕಾಣಲೆಂದು ಗೋಡೆಗೆ ಟೈಲ್ಸ್ ಹಾಕಲಾಗಿದೆ, ಇದು ಒಂದು ಟೈಲ್ಸ್ 70 ರೂಪಾಯಿ ಆಗುತ್ತದೆ. ಮನೆಯ ಡೋರ್ ರೂ.25000 ದ್ದಾಗಿದ್ದು ಸಿಂಪಲ್ ಡಿಸೈನ್ ಇದೆ. ಹೆಚ್ಚಿನ ಡಿಸೈನ್ ಬೇಕೆಂದರೆ ರೂ.50,000 ಆಗುತ್ತದೆ.
ಮನೆ ಒಳಗಡೆ ಸೆರಾಮಿಕ್ ಟೈಲ್ಸ್ ಬಳಸಲಾಗಿದ್ದು 50 ರಿಂದ 60 ರೂಪಾಯಿಗೆ ಸಿಗುತ್ತದೆ. 10*10 ಅಳತೆಯ ಬೆಡ್ರೂಮ್ ಮಾಡಲಾಗಿದೆ. ಕ್ರಾಸ್ ವೆಂಟಿಲೇಶನ್ ಗಾಗಿ 4/3 ಎರಡು ವಿಂಡೋಗಳನ್ನು ಫಿಕ್ಸ್ ಮಾಡಲಾಗಿದೆ. ರೂಮಿನಲ್ಲಿ ಒಂದು ಸ್ಟ್ರೇಟ್ ಸರ್ಜಾ ಹಾಕಲಾಗಿದ್ದು ಈ ಸಜ್ಜಾದ ಕೆಳಗಡೆ ವಾರ್ಡ್ರೋಬ್ ಮಾಡಲು ಸ್ಪೇಸ್ ಬಿಡಲಾಗಿದೆ.
ದೇವರ ಕೋಣೆಯನ್ನು 3/3 ಮಾಡಲಾಗಿದ್ದು ದೇವರ ಕೋಣೆಯ ಬಾಗಿಲಿಗೆ ರೂ.22,000 ಆಗುತ್ತದೆ. ಒಳಗಡೆ ಒನ್ ಆಂಡ್ ಒನ್ ಹಾಫ್ ಟೈಲ್ಸ್ ಅನ್ನು ಹಾಕಲಾಗಿದ್ದು ಪಕ್ಕದಲ್ಲಿ ಓಪನ್ ಕಿಚನ್ ಎಲ್ ಶೇಪ್ ನಲ್ಲಿದೆ. ಕಿಚನ್ ಗೂ 4/3 UPVC ವಿಂಡೋ ಹಾಕಲಾಗಿದೆ. ಒಂದು ಕಾರ್ನರ್ ಗೆ ಒಂದು ಕಾಮನ್ ವಾಷ್ ಬೇಸಿನ್ ಅನ್ನು ಕೊಟ್ಟಿದ್ದಾರೆ, ಗೋಡೆ ಗಲೀಜ್ ಆಗಬಾರದು ಎಂದು ವಾಶ್ ಬೇಸಿನ್ ಮೇಲೆ ಟೈಲ್ಸ್ ಅಪ್ಲೈ ಮಾಡಲಾಗಿದೆ.
ಒಂದು ವೆಸ್ಟರ್ನ್ ಟಾಯ್ಲೆಟ್ ಮಾಡಲಾಗಿತ್ತು 7 ಅಡಿ ಹೈಟ್ ಮಾಡಲಾಗಿದೆ ಅಲ್ಲಿಯವರೆಗೂ ಟೈಲ್ಸ್ ಹಾಕಿ ಮೇಲೆ ಸ್ಟೋರೇಜ್ ಗೆ ಜಾಗ ಬಿಡಲಾಗಿದೆ. ಬಾತ್ರೂಮ್ ಮೇಲೆ ಕೂಡ ಸ್ಟೋರೇಜ್ ಗೆ ಜಾಗ ಮಾಡಲಾಗಿದೆ. ಬಾತ್ರೂಮ್ 4/3 ಇದ್ದು 7 ಫೀಟ್ ವರೆಗೆ ಟೈಲ್ಸ್ ಹಾಕಲಾಗಿದೆ, ಕೆಳಗೂ ಟೈಲ್ಸ್ ಹಾಕಲಾಗಿದೆ, ಫಿಟ್ಟಿಂಗ್ಸ್ ಸೆರಾ ಫಿಟ್ಟಿಂಗ್ಸ್ ಬಳಸಲಾಗಿದೆ.
ಬಾತ್ರೂಮ್ ಗೆ PVC ಡೋರ್ ಬಳಸಲಾಗಿದೆ, ಹಿಂದಗಡೆ ಒಂದು ಫ್ಲಶ್ ಡೋರ್ ಇಡಲಾಗಿದೆ ಹಾಗೂ ಹಿಂದೆ ಒಂದು ಡೋರ್ ಇಟ್ಟು ಮನೆ ಹಿಂದೆಯೂ ಒಂದು ಇಂಡಿಯನ್ ಟಾಯ್ಲೆಟ್ ಮಾಡಲಾಗಿದ. ಇದು ಸಹ 3/4 ರೂಮ್ ಆಗಿದ್ದು 7 ಫೀಟ್ ವರೆಗೆ ಟೈಲ್ಸ್ ಹಾಕಲಾಗಿದೆ, ಮೇಲಿನ ಏರಿಯಾ ಸ್ಟೋರೇಜ್ ಆಗಿ ಬಳಕೆಯಾಗುತ್ತದೆ, ಪಿವಿಸಿ ಡೋರ್ ಬಳಸಲಾಗಿದೆ. ಹೊರಗಡೆ 2 ಫೀಟ್ ಜಾಗ ಬಿಟ್ಟು ಕಾಂಪೌಂಡ್ ಮಾಡಲಾಗಿದೆ ಮತ್ತು ಮನೆ ಟೆರೇಸ್ ಗೆ ಹೋಗಲು MS ಸ್ಟ್ರಕ್ಚರ್ ಲ್ಯಾಡರ್ ಮಾಡಲಾಗಿದೆ.