ದೇಶದಲ್ಲಿ ಚುನಾವಣೆ (Election) ಕಾವು ಕಡಿಮೆ ಆಗುತ್ತಿದ್ದಂತೆ ಎಲ್ಲಾ ಕಡೆಗಳಲ್ಲಿಯೂ ಅಭಿವೃದ್ಧಿ ಕಾರ್ಯಗಳು ಪ್ರಗತಿಯಲ್ಲಿವೆ. ಸಾಮಾನ್ಯವಾಗಿ ಮುಂಗಾರಿನ ಸಂಭ್ರಮ ಆಗಿರುವುದರಿಂದ ರೈತರ ಕೃಷಿ ಚಟುವಟಿಕೆಗಳು (farmera agriculture work ) ಕೂಡ ಗರಿಗೆದರಿವೆ, ಕಳೆದ ವರ್ಷ ರಾಜ್ಯದಲ್ಲಿ ಉಂಟಾದ ಹೀನಾಯ ಬರಗಾಲದ (drought) ಪರಿಸ್ಥಿತಿಯಿಂದ ನೊಂದು ಬೆಂದಿದ್ದ ರೈತ ಈ ವರ್ಷ ಮತ್ತೆ ತನ್ನ ಹೊಸ ಉತ್ಸಾಹದೊಂದಿಗೆ, ಭರವಸೆಯೊಂದಿಗೆ ಭೂಮಿ ತಾಯಿಯನ್ನು ನಂಬಿ ಹೊಲ ಉಳುಮೆ ಮಾಡಿ ಬಿತ್ತನೆ ಕಾಲಕ್ಕೆ ಸಜ್ಜಾಗುತ್ತಿದ್ದಾನೆ.
ಸಹಜವಾಗಿ ಈ ಸೀಸನ್ ನಲ್ಲಿ ರೈತರಿಗೆ ಸಾಕಷ್ಟು ಬಂಡವಾಳದ ಅವಶ್ಯಕತೆ ಇರುತ್ತದೆ ಹಾಗಾಗಿ ಇಂತಹ ಸಂದರ್ಭದಲ್ಲಿ ರೈತನಿಗೆ ಸರ್ಕಾರದ ಕಡೆಯಿಂದ ಸಿಹಿ ಸುದ್ದಿ ಇದೆ. ಇದೇ ತಿಂಗಳಲ್ಲಿ ರೈತನ ಬ್ಯಾಂಕ್ ಖಾತೆಗೆ ಕೇಂದ್ರ ಹಾಗೂ ರಾಜ್ಯ ಸರ್ಕಾರದ ಕಡೆಯಿಂದ ಒಟ್ಟು ರೂ.5000 ಹಣ ನೀಡಲಾಗುತ್ತಿದೆ. ಯಾವ ಯೋಜನೆಯಿಂದ ಈ ಹಣ ಸಿಗುತ್ತಿದೆ, ಯಾವ ರೈತರು ಇದನ್ನು ಪಡೆಯಲು ಅರ್ಹರಾಗಿದ್ದಾರೆ ಎನ್ನುವುದರ ಪೂರ್ತಿ ವಿವರ ತಿಳಿದುಕೊಳ್ಳಲು ಲೇಖನವನ್ನು ಕೊನೆಯವರೆಗೂ ಓದಿ.
ಈ ಮೇಲೆ ತಿಳಿಸಿದಂತೆ ಕಳೆದ ವರ್ಷ ರಾಜ್ಯಕ್ಕೆ ಕಂಡು ಕೇಳರಿಯದ ಬರಗಾಲ ಎದುರಾಗಿತ್ತು. ಮುಂಗಾರು ಮಳೆ ವೈಫಲ್ಯ ದಿಂದಾಗಿ ಸಂಪೂರ್ಣವಾಗಿ ಕೃಷಿ ನೆಲಕಚ್ಚಿತು. ರಾಜ್ಯದ ಬಹುತೇಕ ಎಲ್ಲಾ ಜಿಲ್ಲೆಗಳನ್ನು ಒಳಗೊಂಡ 200ಕ್ಕೂ ಹೆಚ್ಚು ತಾಲ್ಲೂಕುಗಳು ಬರಪೀಡಿತ ತಾಲೂಕುಗಳು ಎಂದು NDRF ಕೈಪಿಡಿ ಅನ್ವಯವಾಗಿ ಸಮೀಕ್ಷೆ ನಡೆದ ಘೋಷಣೆಯಾಗಿತ್ತು. ಈ ರೀತಿ ನಷ್ಟ ಹೊಂದಿದ ರೈತರ ಆರ್ಥಿಕ ಪರಿಸ್ಥಿತಿ ಸುಧಾರಿಸುವ ಸಲುವಾಗಿ ರಾಷ್ಟ್ರೀಯ ವಿಪತ್ತಿನ ನಿಧಿಯಿಂದ ಹಣ ನೀಡಲಾಗುತ್ತದೆ.
ತಡವಾಗಿ ಆದರೂ ಈಗ ಕೇಂದ್ರ ಸರ್ಕಾರದಿಂದ ರಾಜ್ಯದ ರೈತರ ಪಾಲಿನ ಬರ ಪರಿಹಾರದ ಹಣವು ವರ್ಗಾವಣೆ ಆಗಿದೆ. ಈ ವಿಚಾರವಾಗಿ ಸಾಕಷ್ಟು ವಿಳಂಬವಾಗಿ ರಾಜ್ಯ ಮತ್ತು ಕೇಂದ್ರ ಸರ್ಕಾರ ನಡೆದ ಜಟಾಪಟಿಯೇ ನಡೆದಿತ್ತು, ಅಂತಿಮವಾಗಿ ಸುಪ್ರೀಂ ಕೋರ್ಟ್ ಮಧ್ಯಸ್ಥಿಕೆಯಲ್ಲಿ ರಾಜ್ಯದ ಪಾಲಿನ ರೈತರ ಬರ ಪರಿಹಾರದ ಹಣವನ್ನು ಕೇಂದ್ರ ಸರ್ಕಾರವು ಲೋಕಸಭಾ ಚುನಾವಣೆ ಬಿಸಿ ಶೆಡ್ಯೂಲ್ ನಡುವೆಯೂ ಕೂಡ ಬಿಡುಗಡೆಗೊಳಿಸಿತ್ತು.
ಇತ್ತ ಕೇಂದ್ರ ಸರ್ಕಾರವು ಈ ವಿಚಾರವಾಗಿ ಬಹಳ ತಡ ಮಾಡುತ್ತಿದೆ ಎನ್ನುವುದನ್ನು ಮನಗಂಡ ಸಿದ್ದರಾಮಯ್ಯ ನೇತೃತ್ವದ ರಾಜ್ಯ ಸರ್ಕಾರವು ಮುಂಚಿತವಾಗಿಯೇ ಮೊದಲನೇ ಕಂತಿನ ಪರಿಹಾರ ಎಂದು ಪ್ರತಿ ರೈತನಿಗೆ ತಲಾ ರೂ.2000 ಹಣವನ್ನು ಜನವರಿ ತಿಂಗಳ ಅಂತ್ಯದಲ್ಲಿಯೇ ಬಿಡುಗಡೆ ಮಾಡಿತ್ತು. ಇದಾದ ಬಳಿಕ ಈಗ ಕಳೆದ ತಿಂಗಳಿನಿಂದ ಕೇಂದ್ರ ಸರ್ಕಾರದಿಂದ ಮಂಜೂರಾಗಿದ್ದ ಉಳಿಕೆ ಹಣ ಕೂಡ ರೈತರ ಖಾತೆಗೆ ಜಮೆ ಆಗುತ್ತಿದೆ.
ಇದೆಲ್ಲದ ನಡುವೆ ಲಕ್ಷಾಂತರ ರೈತರು ತಮಗೆ ಇನ್ನು ಹಣ ತಲುಪಿಲ್ಲ ಎನ್ನುವ ದೂರು ಹೊಂದಿದ್ದಾರೆ. ಪ್ರತಿ ಬಾರಿಯಂತೆ ಈ ಬಾರಿಯೂ ಕೂಡ ಬ್ಯಾಂಕ್ ಖಾತೆಗಳ ಸಮಸ್ಯೆಗಳು, ಸರ್ಕಾರದ ನಿಯಮ ಪಾಲಿಸದೆ ಇರುವುದು, ಇ-ಕೆವೈಸಿ ಮಾಡಿಸದೇ ಇರುವುದು, ಇನ್ನಿತರ ತಾಂತ್ರಿಕ ಕಾರಣಗಳಿಂದಾಗಿ ಅನೇಕ ಅರ್ಹ ಫಲಾನುಭವಿಗಳು ಹಣ ಪಡೆಯಲಾಗದೆ ವಂಚಿತರಾಗಿದ್ದಾರೆ.
ಈ ಬಗ್ಗೆ ಹಿಂದೊಮ್ಮೆ ಚರ್ಚಿಸಿದ್ದ ವಿವರಿಸಿದ್ದ ಮಾನ್ಯ ಕಂದಾಯ ಸಚಿವರು ಈಗ ಈ ಕುರಿತಾಗಿ ಒಂದು ಗುಡ್ ನ್ಯೂಸ್ ಕೂಡ ಕೊಟ್ಟಿದ್ದಾರೆ. ಯಾವ ರೈತರು ಕಳೆದೆರಡು ಕಂತುಗಳಲ್ಲಿ ಹಣ ಪಡೆಯಲಾಗಿಲ್ಲ ಅಂತಹ ರೈತರ ಬ್ಯಾಂಕ್ ಖಾತೆಗಳಿಗೆ ಮೂರನೇ ಕಂತಿನ ಹಣವಾಗಿ ಜಮೆ ಮಾಡಲು ನಿರ್ಧಾರ ಕೈಗೊಂಡಿರುವುದಾಗಿ ಮಾಧ್ಯಮ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಈ ತಿಂಗಳಿನ ಅಂತ್ಯದೊಳಗೆ ಬರ ಪರಿಹಾರದ ಎರಡು ಕಂತುಗಳನ್ನು ಹಣ ವಂಚಿತರಾದ ರೈತರಿಗೆ ರೂ.3000 ಹಣ ಸಿಗಲಿದೆ ಆದರೆ ಯಾವ ಕಾರಣಗಳಿಂದ ಹಣ ತಲುಪಿಲ್ಲ ಈ ಸಮಸ್ಯೆಗಳನ್ನು ಬಗೆ ಹರಿಸಿಕೊಂಡಿರಬೇಕು. ಜೊತೆಗೆ ಕೇಂದ್ರ ಸರ್ಕಾರದಿಂದ ರೈತರಿಗೆ ಸಹಾಯಧನವಾಗಿ ನೀಡಲಾಗುವ ಪ್ರಧಾನಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆ (Pradhan Mantri Kisan Samman Nidhi) ಹಣ ಕೂಡ ಇದೇ ತಿಂಗಳು ವರ್ಗಾವಣೆ ಆಗುತ್ತಿದೆ.
2023-24ನೇ ಸಾಲಿನ ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆಯ ರೂ.2,000 ಹಣವು ಇದೇ ಜೂನ್ 17ನೇ ತಾರೀಖಿನಂದು ಎಲ್ಲಾ ಅರ್ಹರ ರೈತರ ಬ್ಯಾಂಕ್ ಖಾತೆಗಳಿಗೆ ಎಂದಿನಂತೆ DBT ಮೂಲಕ ವರ್ಗಾವಣೆ ಆಗಲಿದೆ. ಆದರೆ ಈ ಬಾರಿಯೂ ಕೂಡ ಇ-ಕೆವೈಸಿ (ಇ-ಕೆವೈಸಿ) ಪೂರ್ತಿಗೊಳಿಸಿದ ರೈತರ ಪಾಲಿನ ಹಣ ತಡೆಹಿಡಿಯಲಾಗುತ್ತಿದೆ.
ಕಳೆದ 16ನೇ ಕಂತಿನ ಹಣವನ್ನು ಇ-ಕೆವೈಸಿ ಆಗಿರದ ಕಾರಣದಿಂದ ಪಡೆಯಲಾಗದ ರೈತರಿಗೆ 2 ಕಂತಿನ ಹಣ ಒಟ್ಟು ರೂ.4000 ಹಣ ಸಿಗುತ್ತಿದೆ. ಹೀಗಾಗಿ ರೈತರು ತಪ್ಪದೆ ಈ ಕೂಡಲೇ ಇ-ಕೆವೈಸಿ ಪೂರ್ತಿಗೊಳಿಸಿ ಸರ್ಕಾರದ ನೆರವನ್ನು ಪಡೆಯಿರಿ ಮತ್ತು ಈ ಉಪಯುಕ್ತ ಮಾಹಿತಿಯನ್ನು ತಪ್ಪದೇ ಹೆಚ್ಚಿನ ರೈತರಿಗೆ ಶೇರ್ ಮಾಡಿ.