Aadhaar link with RTC
ದೇಶದಲ್ಲಿ ಆಧಾರ್ ಕಾರ್ಡ್ (Aadhaar card) ಒಂದು ಪ್ರಮುಖ ದಾಖಲೆ(important document)ಯಾಗಿದೆ. ಸದ್ಯ ರಾಜ್ಯದಲ್ಲಿ ಅಕ್ರಮ ಹೆಚ್ಚುತ್ತಿದೆ. ವಂಚಕರು ವಿವಿಧ ರೀತಿಯಲ್ಲಿ ಜನಸಾಮಾನ್ಯರನ್ನು ವಂಚಿಸಲು ಮುಂದಾಗುತ್ತಿದ್ದಾರೆ. ಅದರಲ್ಲೂ ಹೆಚ್ಚಾಗಿ ಅಕ್ರಮ ಜಮೀನು ಮಾರಾಟ ಹೆಚ್ಚಾಗುತ್ತಿದೆ. ಆಸ್ತಿ ಮಾರಾಟದಲ್ಲಿ ವಿವಿಧ ರೀತಿಯ ವಂಚನೆ ಈಗಾಗಲೇ ನಡೆದಿದೆ. ಸದ್ಯ ರಾಜ್ಯ ಸರ್ಕಾರ(State Govt) ಅಕ್ರಮ ಜಮೀನು ಮಾರಾಟಕ್ಕೆ ಬ್ರೇಕ್ ಹಾಕಲು ಮಹತ್ವದ ಕ್ರಮ ಕೈಗೊಂಡಿದೆ.
ಹೌದು, ರಾಜ್ಯದಲ್ಲಿ ಹೆಚ್ಚುತ್ತಿರುವ ಅಕ್ರಮ ಜಮೀನು ಮಾರಾಟ ತಡೆಗಾಗಿ ರಾಜ್ಯ ಸರ್ಕಾರ ಆರ್‌ಟಿಸಿ (RTC)ಗಳನ್ನೂ ಆಧಾರ್ ಗೆ ಲಿಂಕ್ ಮಾಡುವಂತೆ ಹೊಸ ನಿಯಮವನ್ನು ರೂಪಿಸಿತ್ತು. ಈ ಮೂಲಕ ವಂಚನೆಯ ತಡೆಗಾಗಿ ಸರ್ಕಾರ ಮುಂದಾಗಿತ್ತು. ಸದ್ಯ ಈ ನಿಯಮಕ್ಕೆ ಸಂಬಂಧಿಸಿದಂತೆ ಸರ್ಕಾರದಿಂದ ರೈತರಿಗೆ ಮಹತ್ವದ ಮಾಹಿತಿ ಹೊರಬಿದ್ದಿದೆ.
ರಾಜ್ಯ ಸರಕಾರದಿಂದ ರೈತರಿಗೆ ಕೊನೆಯ ಎಚ್ಚರಿಕೆ
ರಾಜ್ಯ ಸರ್ಕಾರ ರೈತರ ಜಮೀನಿಗೆ ಆಧಾರ್ ಲಿಂಕ್ ಮಾಡುವುದನ್ನು ಕಡ್ಡಾಯಗೊಳಿಸಿದೆ. ಆರ್‌ಟಿಸಿಗೆ ಆಧಾರ್ ಲಿಂಕ್(Aadhaar Link) ಮಾಡಲು ಸರ್ಕಾರ ಹೊಸ ಸಾಫ್ಟ್ ವೇರ್(New software) ಸಿದ್ಧಪಡಿಸಿದೆ. ಈ ಕುರಿತು ಗ್ರಾ.ಪಂ.ಅಧಿಕಾರಿಗಳು ಪ್ರಕಟಣೆ ಮೂಲಕ ಮಾಹಿತಿ ನೀಡಿದ್ದಾರೆ. ಈ ಕಡ್ಡಾಯ ಕಾರ್ಯ ನಿರ್ವಹಿಸಲು ಗ್ರಾಮಾಡಳಿತ ಅಧಿಕಾರಿಗಳಿಗೆ ಸರ್ಕಾರ ಜವಾಬ್ದಾರಿ ನೀಡಿದೆ. ಸರ್ಕಾರದ ಸೌಲಭ್ಯಗಳನ್ನು ನೇರವಾಗಿ ಪಡೆಯಲು, ಬ್ಯಾಂಕ್ ಸೌಲಭ್ಯಗಳು ಮತ್ತು ಕೃಷಿ ಇಲಾಖೆ ಸೌಲಭ್ಯಗಳು ಮತ್ತು ಬೆಳೆ ಪರಿಹಾರವನ್ನು ನೇರವಾಗಿ ಪಡೆಯಲು ಕೃಷಿ ದಾಖಲೆಗಳಿಗೆ ಆಧಾರ್ ಕಾರ್ಡ್ ಅನ್ನು ಲಿಂಕ್ ಮಾಡುವುದು ಕಡ್ಡಾಯವಾಗಿದೆ.
ಜುಲೈ ಅಂತ್ಯದೊಳಗೆ ಈ ಕೆಲಸ ಮಾಡಿ
ಜಮೀನಿನ ದಾಖಲೆ ಮತ್ತು ಆಧಾರ್ ಕಾರ್ಡ್ ತೆಗೆದುಕೊಂಡು ಗ್ರಾಮ ಒನ್ ಕೇಂದ್ರ, ಆನ್ ಲೈನ್ ಕೇಂದ್ರ ಮತ್ತು ಗ್ರಾಮ ಆಡಳಿತಾಧಿಕಾರಿಗಳ ಕಚೇರಿಗಳಲ್ಲಿ ಆಧಾರ್ ಲಿಂಕ್ ಪ್ರಕ್ರಿಯನ್ನು ಮಾಡಿಕೊಳ್ಳಬಹುದು. ರೈತರು ತಮ್ಮ ಆಸ್ತಿ, ಜಮೀನಿಗೆ ಆಧಾರ್ ಲಿಂಕ್ ಮಾಡಿಕೊಂಡರೆ ಸರ್ಕಾದ ಯಾವುದೇ ಯೋಜನೆಗಳಿಂದ ವಂಚಿತರಾಗಲು ಸಾಧ್ಯವಿಲ್ಲ. RTC ಜೊತೆ ಆಧಾರ್ ಲಿಂಕ್ ಮಾಡಿಸಿಕೊಂಡರೆ ವಂಚನೆಯಿಂದಲೂ ಕೂಡ ತಪ್ಪಿಸಿಕೊಳ್ಳಬಹುದಾಗಿದೆ. ಸದ್ಯ ಸರ್ಕಾರ RTC ಜೊತೆ ಆಧಾರ್ ಲಿಂಕ್ ಮಾಡಿಸಲು July ಕೊನೆಯ ದಿನಕವಾಗಿಸಿದೆ. ಜುಲೈ ಅಂತ್ಯದೊಳಗೆ ರೈತರು ತಮ್ಮ RTC ಜೊತೆಗೆ ಆಧಾರ್ ಲಿಂಕ್ ಮಾಡಿಸುವುದು ಅಗತ್ಯವಾಗಿದೆ.
ಆಸ್ತಿ ಪಹಣಿಗೆ ಆಧಾರ್ ಲಿಂಕ್ ಮಾಡುವುದು ಹೇಗೆ…?
• RTC ಜೊತೆಗೆ ಆಧಾರ್ ಲಿಂಕ್ ಮಾಡಲು ಮೊದಲು http://landrecords.karnataka.gov.in/service4 ನ ಅಧಿಕೃತ ವೆಬ್ ಸೈಟ್ ಗೆ ಭೇಟಿ ನೀಡಬೇಕು.
• ಭೂಮಿ ನಾಗರೀಕ ಸೇವಾ Website ಗೆ Login ಆಗಿ ಅಲ್ಲಿ ಕೇಳದಾದಾಗ ಮಾಹಿತಿಯನ್ನು ಭರ್ತಿ ಮಾಡಬೇಕು.
• OTP ಯೊಂದಿಗೆ Website Login ಆದ ಬಳಿಕ ಅಲ್ಲಿ RTC ಜೊತೆಗೆ Aadhar Link ಆಯ್ಕೆ ಕಾಣುತ್ತದೆ. ಅಲ್ಲಿ ಪಹಣಿ ಪತ್ರ ಯಾರ ಹೆಸರಿನಲ್ಲಿದೆ ಎನ್ನುವುದನ್ನು ನಮೂದಿಸಬೇಕು.
• ನಂತರ ಆಧಾರ್ ನಲ್ಲಿರುವ ಸರಿಯಾದ ಮಾಹಿತಿಯನ್ನು ನಮೂದಿಸಿ ರೈಟ್ ಸೆಡ್ ನಲ್ಲಿ ಕಾಣಸಿಗುವು Verify ಆಯ್ಕೆಯನ್ನು ಕ್ಲಿಕ್ ಮಾಡಬೇಕು.
• ನಂತರ E -KYC ಓಪನ್ ಆಗುತ್ತದೆ. ಆಧಾರ್ ಮಾಹಿತಿ ನೀಡಿ, ಮೊಬೈಲ್ ಗೆ ಬರುವ OTP ಯನ್ನು ನಮೂದಿಸಿ Submit ಮಾಡಬೇಕು.
• ಈ ಎಲ್ಲ ಪ್ರಕ್ರಿಯೆ ಪೂರ್ಣಗೊಂಡ ಬಳಿಕ ನಿಮ್ಮ Profile ಓಪನ್ ಆಗುತ್ತದೆ.
• ನಿಮ್ಮ Profile ನಲ್ಲಿ 3 ಡಾಟ್ ನ ಕ್ಲಿಕ್ ಮಾಡಿದಾಗ Link Aadhaar ಆಯ್ಕೆ ಕಾಣಿಸುತ್ತದೆ. ಅದನ್ನು ಕ್ಲಿಕ್ ಮಾಡಬೇಕು.
• ಇದಾದ ಬಳಿಕ ನಿಮ್ಮ ಜಮೀನಿನ ಪೂರ್ಣ ಮಾಹಿತಿ ಕೇಳಲಾಗುತ್ತದೆ. ಎಲ್ಲ ಮಾಹಿತಿಯನ್ನು ನಮೂದಿಸಿದರೆ ನಿಮ್ಮ Aadhar Link ಪ್ರಕ್ರಿಯೆ ಪೂರ್ಣಗೊಳ್ಳಲಿದೆ.