Aadhaar: ಆಧಾರ್ ಕಾರ್ಡ್ ಇದ್ದವರಿಗೆ ಸರ್ಕಾರದಿಂದ ಹೊಸ ಅಪ್ಡೇಟ್.!

Aadhaar

ಆಧಾರ್ ಕಾರ್ಡ್ (Aadhar Update) ಸದ್ಯಕ್ಕೆ ದೇಶದಲ್ಲಿ ಪ್ರತಿಯೊಬ್ಬ ವ್ಯಕ್ತಿಗೂ ಕೂಡ ಅತ್ಯಗತ್ಯವಾಗಿ ಬೇಕಾಗಿರುವ ಒಂದು ದಾಖಲೆ ಆಗಿದೆ. ಆಧಾರ್ ಕಾರ್ಡ್ ಇಲ್ಲದೆ ಇದ್ದಲ್ಲಿ ಸರ್ಕಾರಿ ವಲಯದ ಹಾಗೂ ಖಾಸಗಿ ವಲಯದ ಯಾವುದೇ ಕೆಲಸ ಕಾರ್ಯಗಳು ಕೂಡ ಮಾಡಲಾಗುವುದಿಲ್ಲ.

ಮಗುವನ್ನು ಶಾಲೆಗೆ ಸೇರಿಸುವುದರಿಂದ ಹಿಡಿದು ಬ್ಯಾಂಕ್ ಖಾತೆ ತೆರೆಯುವವರಿಗೆ ರೇಷನ್ ಕಾರ್ಡ್ ಪಡೆಯುವುದರಿಂದ ಹಿಡಿದು ಪ್ರಯಾಣಕ್ಕೆ ಟಿಕೆಟ್ ಬುಕ್ ಮಾಡುವವರಿಗೆ ಹೀಗೆ ಪ್ರತಿ ಹಂತದಲ್ಲಿ ದಿನನಿತ್ಯದ ಅನೇಕ ಕೆಲಸ ಕಾರ್ಯಗಳಿಗೆ ಆಧಾರ್ ಕಾರ್ಡ್ ಬೇಕೇ ಬೇಕು.

WhatsApp Group Join Now
Telegram Group Join Now

ಭಾರತೀಯ ವಿಶಿಷ್ಟ ಗುರುತಿನ ಪ್ರಾಧಿಕಾರ (UIDAI) ಎನ್ನುವ ಅಧಿಕೃತ ಸಂಸ್ಥೆಯು ಭಾರತದ ಪ್ರತಿ ನಾಗರಿಕನಿಗೂ ಆಧಾರ್ ಕಾರ್ಡ್ ನೀಡುವ ಜವಾಬ್ದಾರಿ ಹೊತ್ತಿದೆ ಹಾಗೂ ಕಾಲಕಾಲಕ್ಕೆ ನಿಯಮಗಳನ್ನು ಪರಿಷ್ಕರಿಸಿ ದೇಶದ ಕಟ್ಟಕಡೆಯ ವ್ಯಕ್ತಿಯ ಡಾಟಾ ವನ್ನು ಕೂಡ ಸಂಗ್ರಹಿಸಿಡುತ್ತಿದೆ. ಈಗ ಸಂಸ್ಥೆ ವತಿಯಿಂದ ದೇಶದ ಎಲ್ಲಾ ನಾಗರಿಕರಿಗೂ ಒಂದು ಹೊಸ ಅಪ್ಡೇಟ್ ಇದೆ.

ಕಳೆದ ವರ್ಷದಲ್ಲಿಯೇ ಈ ಬಗ್ಗೆ ಸಂಸ್ಥೆಯು ಘೋಷಿಸಿತ್ತು. ಯಾರು ಕಳೆದ ಹತ್ತು ವರ್ಷಗಳಿಂದ ಒಮ್ಮೆಯೂ ಕೂಡ ಆಧಾರ್ ಅಪ್ಡೇಟ್ ಮಾಡಿಸಿಲ್ಲ ಅಂತವರು ಕೂಡಲೇ ಯಾವುದೇ ಬದಲಾವಣೆ ಇದ್ದಲ್ಲಿ ತಿದ್ದುಪಡಿ ಮಾಡಿಸಿಕೊಳ್ಳಬೇಕು (Correction) ಅಥವಾ ಯಾವುದೇ ಬದಲಾವಣೆಗಳು ಇರದೇ ಇದ್ದಲ್ಲಿ ಯಾವುದೇ ವಿಳಾಸದ ಪುರಾವೆ (POA) ಅಥವಾ ಗುರುತಿನ ಪುರಾವೆ (POI) ನೀಡಿ ರಿನೀವಲ್ (Aadhar Renewal) ಮಾಡಿಸಿಕೊಳ್ಳಬೇಕು ಎನ್ನುವ ಸೂಚನೆ ಹೊರಡಿಸಿತ್ತು.

ಮತ್ತು ಮೂರು ಬಾರಿ ಇದಕ್ಕೆ ಪ್ರತಿ ಸಾರಿಯೂ ಮೂರು ತಿಂಗಳುಗಳ ಕಾಲ ಕಾಲಾವಕಾಶ ನೀಡಿ ವಿಸ್ತರಿಸುತ್ತಾ ಬಂದಿತ್ತು. ಈಗ ಈ ಕುರಿತು ಒಂದು ಬಿಗ್ ಅಪ್ ಡೇಟ್ ಇದೆ. ಅದೇನೆಂದರೆ, ಈ ಕಾಲಾವಕಾಶವನ್ನು ಡಿಸೆಂಬರ್ 14, 2024 ರವರೆಗೆ ಕೂಡ ವಿಸ್ತರಿಸಲಾಗಿದೆ.

ಆದರೆ ಬಯೋಮೆಟ್ರಿಕ್ ತಿದ್ದುಪಡಿ ಮಾಡಲು ಬಯಸುವವರು ಆಧಾರ್ ಕೇಂದ್ರಗಳಿಗೆ ಭೇಟಿ ನೀಡಿ ಕನಿಷ್ಠ ಶುಲ್ಕ ಪಾವತಿ ಮಾಡಿ ಅಪ್ಡೇಟ್ ಮಾಡಿಸಬೇಕಾಗುತ್ತದೆ ಇದರ ಹೊರತಾಗಿ ಬೇರೆ ಬಯೋಮೆಟ್ರಿಕ್ ಅಲ್ಲದೆ ಬೇರೆ ಅಪ್ಡೇಟ್ಗಳಿದ್ದಲ್ಲಿ UIDAI ಅಧಿಕೃತ ವೆಬ್ ಸೈಟ್ ಗೆ (uidai.gov.in) ಭೇಟಿ ನೀಡಿ ಯಾವುದೇ ನಿವಾಸಿಯು ಸ್ವಯಂ ತಾನೇ ನಿಯಮಗಳ ಪ್ರಕಾರವಾಗಿ ದಾಖಲೆಗಳನ್ನು ಒದಗಿಸಿ ಅಪ್ಡೇಟ್ ಮಾಡಿಕೊಳ್ಳಬಹುದು.

ಈ ರೀತಿ ನಿಯಮ ಮಾಡಲು ಕೂಡ ಕಾರಣ ಒಂದಿದೆ. ಯಾಕೆಂದರೆ ಕಳೆದ 10 ವರ್ಷಗಳಿಂದ ವ್ಯಕ್ತಿಗಳ ಬಯೋಮೆಟ್ರಿಕ್ ಮತ್ತು ಡಯಾಮೆಟ್ರಿಕ್ ಮಾಹಿತಿಗಳು ಸಾಕಷ್ಟು ಬದಲಾಗಿರುತ್ತವೆ, ಶಸ್ತ್ರಚಿಕಿತ್ಸೆ, ಅಪಘಾತ ಹಾಗೂ ಇನ್ನಿತರ ಕಾರಣಗಳಿಂದ ಫಿಂಗರ್ ಪ್ರಿಂಟ್, ಐರಿಸ್ ಬದಲಾವಣೆ ಆಗಿರಬಹುದು, ಮುಖ ಚಹರೆಯು ಕೂಡ ಬದಲಾಗಿರುತ್ತದೆ ಮತ್ತು ವ್ಯಕ್ತಿಯು ತನ್ನ ವಿಳಾಸ, ಮೊಬೈಲ್ ಸಂಖ್ಯೆ ಇತ್ಯಾದಿಗಳನ್ನು ಬದಲಾಯಿಸಿರಬಹುದು.

ಒಂದು ವೇಳೆ ಈ ಬದಲಾವಣೆಗಳು ಆಗಿದ್ದು ಆತ ತನ್ನ ಆಧಾರ್ ಅಪ್ಡೇಟ್ ಮಾಡಿಸದೆ ಹೋದಲ್ಲಿ ಈತನ ಡಾಟಾ ಸಂಗ್ರಹಣೆ ವಿಫಲವಾಗುತ್ತದೆ ಮತ್ತು ಮುಂದಿನ ದಿನಗಳಲ್ಲಿ ಇದರಿಂದ ನಿವಾಸಿಗೂ ಕೂಡ ಸಮಸ್ಯೆ ಆಗಬಹುದು. ಇದು ಹೊಂದಾಣಿಕೆ ಆಗದೆ ಇದ್ದಲ್ಲಿ ಈ ಮೇಲೆ ತಿಳಿಸಿದಂತೆ ಸರ್ಕಾರಿ ಯೋಜನೆಗಳ ಪ್ರಯೋಜನ ಹಾಗೂ ಖಾಸಗಿ ಕೆಲಸ ಕಾರ್ಯಗಳು ಕೂಡ ಸ್ಥಗಿತಗೊಳ್ಳಬಹುದು.

ಇದಲ್ಲದೆ 5 ವರ್ಷ ಹಾಗೂ 15 ವರ್ಷ ತುಂಬಿದ ಬಳಿಕ ಮಕ್ಕಳಿಗೂ ಕೂಡ ಆಧಾರ್ ಅಪ್ಡೇಟ್ ಮಾಡಲು ಸೂಚಿಸಲಾಗುತ್ತದೆ. ಆ ವಯಸ್ಸಿನ ಬಳಿಕ ಬಯೋಮೆಟ್ರಿಕ್ ಮಾಹಿತಿ ಬದಲಾಗುವುದರಿಂದ ಈ ನಿಯಮ ಜಾರಿಗೆ ತರಲಾಗಿದೆ. ಆದ್ದರಿಂದ ತಪ್ಪದೇ ಈ ನಿಯಮದ ಪ್ರಕಾರವಾಗಿ ಕೂಡಲೇ ಅಪ್ಡೇಟ್ ಮಾಡಿಸಿಕೊಳ್ಳಿ.

ಇಲ್ಲವಾದಲ್ಲಿ ಆಧಾರ್ ಲಿಂಕ್ ಆಗಿರುವ ಎಲ್ಲಾ ಚಟುವಟಿಕೆಗಳಿಗೂ ಅಡ್ಡಿಯಾಗುತ್ತದೆ. ಮುಂದಿನ ದಿನಗಳಲ್ಲಿ ಹೆಚ್ಚಿನ ದಂಡ ತೆತ್ತು ಆಧಾರ್ ಅಪ್ಡೇಟ್ ಮಾಡಿಸಬೇಕಾದ ಪರಿಸ್ಥಿತಿ ಬರಬಹುದು. ಹಾಗಾಗಿ ನಿರ್ಲಕ್ಷ ಮಾಡದೆ ನಿಯಮ ಪಾಲಿಸಿ ಮತ್ತು ಈ ಉಪಯುಕ್ತ ಮಾಹಿತಿಯನ್ನು ಹೆಚ್ಚಿನ ಜನರೊಡನೆ ಶೇರ್ ಮಾಡಿ.

ಸರ್ಕಾರಿ ಯೋಜನೆ, ಸರ್ಕಾರಿ ಉದ್ಯೋಗಗಳು,ಮತ್ತು ಖಾಸಗಿ ಕಂಪನಿ ಉದ್ಯೋಗದ ಬಗ್ಗೆ ದೈನಂದಿನ ಮಾಹಿತಿಯನ್ನು ಪಡೆಯಲು ನಮ್ಮ Kannada Trend News WhatsApp ಗ್ರೂಪ್ ಮತ್ತು ಟೆಲಿಗ್ರಾಮ್ ಚಾನಲ್‌ಗೆ ಜಾಯಿನ್ ಆಗಿರಿ
WhatsApp Group Join Now
Telegram Group Join Now

Leave a Comment