Aditya Birla: ಆದಿತ್ಯ ಬಿರ್ಲಾ ಸ್ಕಾಲರ್‌ಶಿಪ್‌ ವಿದ್ಯಾರ್ಥಿಗಳಿಗೆ ಸಿಗಲಿದೆ 60,000 ವಿದ್ಯಾರ್ಥಿ ವೇತನ.!

Aditya Birla

ಸ್ಕಾಲರ್‌ಶಿಪ್‌(Scholarship) ಎಂಬುದು ವಿದ್ಯಾರ್ಥಿಗಳಿಗೆ (students) ಬಹಳ ಮುಖ್ಯವಾದ ಅಂಶವಾಗಿದೆ. ಇದೀಗ ಆದಿತ್ಯ ಬಿರ್ಲಾ ಕ್ಯಾಪಿಟಲ್‌ ಫೌಂಡೇಷನ್‌(Aditya Birla Capital Foundation) ನವರು 9-12ನೇ ತರಗತಿ ವಿದ್ಯಾರ್ಥಿಗಳಿಗೆ ಹಾಗೂ ಯಾವುದೇ ಪದವಿ(degree) ಓದುವವರಿಗೆ ನೀಡುವ ಸ್ಕಾಲರ್‌ಶಿಪ್‌ ನೀಡಲಿದೆ.

ಇಂದಿನ ಈ ಲೇಖನದಲ್ಲಿ 60,000 ರೂ.ವರೆಗೆ ಆದಿತ್ಯ ಬಿರ್ಲಾ ಸ್ಕಾಲರ್‌ಶಿಪ್‌ ಅನ್ನು ಯಾರು ಪಡೆಯಬಹುದು ಎಂಬುದರ ಬಗ್ಗೆ ಮಾಹಿತಿ ತಿಳಿಸಲಾಗಿದೆ. ಹೌದು.. ಈ ಕೆಳಗಿನ ಕೋರ್ಸ್‌ ವಿದ್ಯಾರ್ಥಿಗಳು ಅರ್ಜಿ ಹಾಕಿದ್ರೆ ರೂ.60,000 ವರೆಗೆ ಆದಿತ್ಯ ಬಿರ್ಲಾ ಕ್ಯಾಪಿಟಲ್ ಸ್ಕಾಲರ್‌ಶಿಪ್ ಅನ್ನು ಪಡೆಯಬಹುದಾಗಿದೆ. ಆ ವಿದ್ಯಾರ್ಥಿಗಳೆಂದರೆ,

WhatsApp Group Join Now
Telegram Group Join Now

– 3 ವರ್ಷದ ಪ್ರೊಫೇಶನಲ್ ಪದವಿ ಓದುತ್ತಿರುವವರು.
– 4 ವರ್ಷದ ಪ್ರೊಫೇಶನಲ್ ಪದವಿ ಓದುತ್ತಿರುವವರು.

3 ವರ್ಷದ / 4 ವರ್ಷದ ಪ್ರೊಫೇಶನಲ್ ಪದವಿ ಓದುತ್ತಿರುವವರಿಗೆ ನೀಡುವ ಸ್ಕಾಲರ್‌ಶಿಪ್‌ಗೆ ಅರ್ಜಿ ಹಾಕಲು ಅರ್ಹತೆಗಳು

– ಸೋಷಿಯಲ್ ವರ್ಕ್‌ / ಸಂಮೂಹ ಸಂವಹನ / ಬಿಬಿಎ / ಬಿಬಿಎಂ / ಬಿಬಿಎಸ್ / ಬಿಸಿಎ/ ಬಿಹೆಚ್‌ಎಂ / ಬಿಎಸ್ಸಿ ಐಟಿ / ಬಿ.ಫಾರ್ಮಾ / ಹಣಕಾಸು ಮತ್ತು ಹೂಡಿಕೆ ಅನಾಲಿಸಿಸ್ ಪದವಿ / ಮ್ಯಾನೇಜ್ಮೆಂಟ್‌ ಸ್ಟಡೀಸ್‌ ಡಿಗ್ರಿ / ಬಿ.ಆರ್ಚ್‌ / ಡಿಸೈನಿಂಗ್ ಪದವಿ/ ಬಿಎಫ್‌ಎ / ಬ್ಯುಸಿನೆಸ್ ಸ್ಟಡೀಸ್ / ಅಕೌಂಟಿಂಗ್ ಅಂಡ್ ಫೈನಾನ್ಸ್‌ ಡಿಗ್ರಿ / ಬಿ.ಟೆಕ್ / ಬಿ.ಇ / ಎಲ್‌ಎಲ್‌ಬಿ / ಬಿವಿಎಸ್ಸಿ ಅಂಡ್ ಎ.ಹೆಚ್‌ / ಬ್ಯಾಚುಲರ್ ಇನ್ ಇಂಟೇರಿಯರ್ ಡಿಸೈನ್ / ಬ್ಯಾಚುಲರ್ ಆಫ್‌ ಡಿಸೈನ್ / ಬಿಡಿಎಸ್ ಡೆಂಟಲ್ / ಬಿಎಫ್ಎ ಫೈನ್ ಆರ್ಟ್ಸ್‌ / ಬಿಎಫ್‌ಡಿ ಫ್ಯಾಷನ್ ಡಿಸೈನ್ / ಬಿಎಫ್‌ಟಿ / ಬಿಪಿಟಿ ಫಿಸಿಯೋಥೆರಪಿ / ಎಂಬಿಬಿಎಸ್ / ಬಿಎಸ್ಸಿ ನರ್ಸಿಂಗ್ / ಬಿಹೆಚ್‌ಎಂಎಸ್‌ / ಬಿ.ಟೆಕ್- ಎಂ.ಟೆಕ್‌ ಇಂಟಿಗ್ರೇಟೆಡ್‌ / ಆಡಿಯೋಲಜಿ ಅಂಡ್ ಸ್ಪೀಚ್ ಲಾಂಗ್ವೇಜ್ ಪೆಥಾಲಜಿ / ಬ್ಯಾಚುಲರ್ ಆಫ್‌ ಆಕ್ಯುಪೇಷನಲ್ ಥೆರಪಿ / ಬ್ಯಾಚುಲರ್ ಆಫ್ ಆಪ್ಟೋಮೆಟ್ರಿ / ಇಂಟಿಗ್ರೇಟೆಡ್ ಪ್ರೋಗ್ರಾಮ್ ಇನ್ ಮ್ಯಾನೇಜ್ಮೆಂಟ್ – ಈ ಎಲ್ಲ ಕೋರ್ಸ್‌ಗಳ ಪೈಕಿ 3 ವರ್ಷದ ಹಾಗೂ 4 ವರ್ಷದ ಕೋರ್ಸ್‌ ಓದುತ್ತಿರುವವರು ಅರ್ಜಿ ಸಲ್ಲಿಸಬಹುದು.

– ವಿದ್ಯಾರ್ಥಿಗಳು ತಮ್ಮ ಹಿಂದಿನ ಶಿಕ್ಷಣದಲ್ಲಿ ಶೇಕಡ.60 ರಷ್ಟು ಅಂಕಗಳನ್ನು ಗಳಿಸಿ ತೇರ್ಗಡೆ ಆಗಿರಬೇಕು.
– ವಿದ್ಯಾರ್ಥಿ ಕುಟುಂಬದ ವಾರ್ಷಿಕ ಆದಾಯವು ರೂ.6,00,000 ಮೀರಿರಬಾರದು.
– ಭಾರತದ ಯಾವುದೇ ರಾಜ್ಯದ ಪ್ರಜೆಗಳು ಅರ್ಜಿ ಸಲ್ಲಿಸಬಹುದು.
– ವಿದ್ಯಾರ್ಥಿನಿಯರಿಗೆ ಹೆಚ್ಚಿನ ಆಧ್ಯತೆ ನೀಡಲಾಗುತ್ತದೆ.
– ಆದಿತ್ಯ ಬಿರ್ಲಾ ಕ್ಯಾಪಿಟಲ್ ಲಿಮಿಟೆಡ್‌, Buddy4Study ಸಿಬ್ಬಂದಿಗಳ ಮಕ್ಕಳು ಈ ಸ್ಕಾಲರ್‌ಶಿಪ್‌ಗೆ ಅರ್ಹರಲ್ಲ.

– ಸ್ಕಾಲರ್‌ಶಿಪ್‌ ಹೆಸರು ಆದಿತ್ಯ ಬಿರ್ಲಾ ಕ್ಯಾಪಿಟಲ್ ಸ್ಕಾಲರ್‌ಶಿಪ್ – 3, 4 ವರ್ಷದ ಪ್ರೊಫೇಶನಲ್‌ ಕೋರ್ಸ್‌ ವಿದ್ಯಾರ್ಥಿಗಳಿಗೆ.
– ಅರ್ಜಿ ಸಲ್ಲಿಸಬಹುದಾದ ವಿದ್ಯಾರ್ಥಿಗಳು 3 / 4ವರ್ಷದ ಪ್ರೊಫೇಶನಲ್‌ ಪದವಿ ವಿದ್ಯಾರ್ಥಿಗಳು.
– ವಿದ್ಯಾರ್ಥಿವೇತನ ಆರ್ಥಿಕ ನೆರವು 3 ವರ್ಷದ ಪ್ರೊಫೇಶನಲ್‌ ಕೋರ್ಸ್‌ ಓದುತ್ತಿರುವವರಿಗೆ ರೂ.48,000, 4 ವರ್ಷದ ಪ್ರೊಫೇಶನಲ್‌ ಕೋರ್ಸ್‌ ಓದುತ್ತಿರುವವರಿಗೆ ರೂ.60,000.
– ಅರ್ಜಿ ಸಲ್ಲಿಸಲು ಕೊನೆ ದಿನಾಂಕ 15-10-2024

ಅರ್ಜಿ ಸಲ್ಲಿಸುವ ವಿಧಾನ

– ಅಧಿಕೃತ ವೆಬ್‌ಸೈಟ್‌ https://www.buddy4study.com/page/aditya-birla-capital-scholarship ಗೆ ಭೇಟಿ ನೀಡಿ.
– Buddy4Study ವೆಬ್‌ಪೇಜ್‌ ಮುಖಪುಟ ತೆರೆಯುತ್ತದೆ.
– ಇಲ್ಲಿ ‘Aditya Birla Capital Scholarship for Professional Graduation (3 Year / 4 Year) 2024-25’ ಆಯ್ಕೆ ಮಾಡಿ.
– ‘View Details’ ಎಂದಿರುವಲ್ಲಿ ಕ್ಲಿಕ್ ಮಾಡಿದರೆ ಸ್ಕಾಲರ್‌ಶಿಪ್‌ ಮಾಹಿತಿ ತಿಳಿಯಬಹುದು.

– ಅರ್ಹತೆ, ಸೌಲಭ್ಯದ ಕುರಿತು ಮಾಹಿತಿ ಪ್ರದರ್ಶಿತವಾಗುತ್ತದೆ. ಓದಿಕೊಳ್ಳಿ.
– ನಂತರ ಮತ್ತೆ ‘Apply Now’ ಎಂದಿರುವಲ್ಲಿ ಕ್ಲಿಕ್ ಮಾಡಿ. ಮತ್ತೊಂದು ವೆಬ್‌ಪುಟ ತೆರೆಯುತ್ತದೆ.
– ಇಲ್ಲಿಯೂ ಸಹ ‘Apply Now’ ಎಂದಿರುವಲ್ಲಿ ಕ್ಲಿಕ್ ಮಾಡಿ.
– ಜಿಮೇಲ್‌, ಮೊಬೈಲ್‌ ನಂಬರ್ ಮೂಲಕ ಲಾಗಿನ್‌ ಆಗಿ ಅರ್ಜಿ ಸಲ್ಲಿಸಿ.
– ಕೇಳಲಾದ ಮಾಹಿತಿ / ದಾಖಲೆಗಳನ್ನು ನೀಡಿ ಅರ್ಜಿ ಸಲ್ಲಿಸಬೇಕಾಗುತ್ತದೆ.

ಅರ್ಜಿ ಸಲ್ಲಿಸಲು ಬೇಕಾದ ದಾಖಲೆಗಳು

– ಆಧಾರ್ ಕಾರ್ಡ್‌
– ಹಿಂದಿನ ತರಗತಿಯ ಅಂಕಪಟ್ಟಿ
– ಪ್ರಸ್ತುತ ತರಗತಿಯ ಪ್ರವೇಶಾತಿ ದಾಖಲೆ
– ಬ್ಯಾಂಕ್‌ ಪಾಸ್‌ ಬುಕ್‌ ಜೆರಾಕ್ಸ್‌ ಕಾಪಿ.
– ಜಾತಿ ಮತ್ತು ಆದಾಯ ಪ್ರಮಾಣ ಪತ್ರ.
– ವಿದ್ಯಾರ್ಥಿಯ ಪಾಸ್‌ಪೋರ್ಟ್‌ ಅಳತೆಯ ಭಾವಚಿತ್ರ.
– ಸಹಿ ಸ್ಕ್ಯಾನ್‌ ಕಾಪಿ.
– ಜಿಮೇಲ್‌ ವಿಳಾಸ.
– ಮೊಬೈಲ್ ನಂಬರ್.
– ಇತರೆ ವೈಯಕ್ತಿಕ ಬೇಸಿಕ್‌ ವಿವರಗಳು.

ಸರ್ಕಾರಿ ಯೋಜನೆ, ಸರ್ಕಾರಿ ಉದ್ಯೋಗಗಳು,ಮತ್ತು ಖಾಸಗಿ ಕಂಪನಿ ಉದ್ಯೋಗದ ಬಗ್ಗೆ ದೈನಂದಿನ ಮಾಹಿತಿಯನ್ನು ಪಡೆಯಲು ನಮ್ಮ Kannada Trend News WhatsApp ಗ್ರೂಪ್ ಮತ್ತು ಟೆಲಿಗ್ರಾಮ್ ಚಾನಲ್‌ಗೆ ಜಾಯಿನ್ ಆಗಿರಿ
WhatsApp Group Join Now
Telegram Group Join Now

Leave a Comment