Agree Culture Recruitment
ರಾಜ್ಯದಾದ್ಯಂತ ಇರುವ ಎಲ್ಲ ಉದ್ಯೋಗಾಕಾಂಕ್ಷಿಗಳಿಗೆ ಕರ್ನಾಟಕ ಕೃಷಿ ಇಲಾಖೆ ಕಡೆಯಿಂದ ಬೃಹತ್ ನೇಮಕಾತಿಯ ಸಿಹಿ ಸುದ್ದಿ ಇದೆ. ಬಹುದಿನಗಳ ಬೇಡಿಕೆಯಾಗಿದ್ದ ಕೃಷಿ ಇಲಾಖೆಯಲ್ಲಿನ ಹುದ್ದೆಗಳ ಭರ್ತಿ ಪ್ರಸ್ತಾವನೆಗೆ ಈಗ ಮಂಜೂರಾತಿ ಸಿಕ್ಕಿದೆ ಎನ್ನುವ ಅಧಿಕೃತ ಮಾಹಿತಿ ಮಾನ್ಯ ಕೃಷಿ ಸಚಿವರಾದ ಚೆಲುವರಾಯಸ್ವಾಮಿ ರವರಿಂರಿಂದಲೇ ಹೊರ ಬಿದ್ದಿದೆ.
ಇತ್ತೀಚೆಗೆ ಮಾಧ್ಯಮ ಮಿತ್ರರೊಡನೆ ಈ ಬಗ್ಗೆ ಮಾತನಾಡಿದ ಸಚಿವ ಚೆಲುವರಾಯ ಸ್ವಾಮಿಯವರು ಮಾಧ್ಯಮದವರ ಇಲಾಖೆ ಸಂಬಂಧಿತ ಪ್ರಶ್ನೆಗಳೊಂದಿಗೆ ನೇಮಕಾತಿ ಕುರಿತಂತೆ ಕೂಡ ಕೆಲ ಹೇಳಿಕೆಗಳನ್ನು ನೀಡಿ ಸಾವಿರಾರು ನಿರುದ್ಯೋಗಿಗಳ ಮನಸ್ಸಿನಲ್ಲಿ ಭರವಸೆ ಮೂಡಿಸಿದ್ದಾರೆ. ಕೃಷಿ ಇಲಾಖೆಯಲ್ಲಿ ಅಧಿಕಾರಿಗಳ ಹಾಗೂ ಸಿಬ್ಬಂದಿಗಳ ಕೊರತೆಯು ರೈತನಿಗೆ ಸಮಸ್ಯೆ ತರುತ್ತದೆ ಹಾಗಾಗಿ ಕೃಷಿ ಇಲಾಖೆಗಳಲ್ಲಿ ತೆರವಾಗುವಂತಹ ಹುದ್ದೆಗಳಿಗೆ ಕೂಡಲೆ ಸೂಕ್ತ ನೇಮಕಾತಿ ಕ್ರಮ ಕೈಗೊಳ್ಳಬೇಕು ಎನ್ನುವುದು ನಾಡಿನ ಎಲ್ಲ ರೈತರ ಕೋರಿಕೆ.
ಮುಂಬಡ್ತಿ, ವಯೋ ನಿವೃತ್ತಿ, ಸ್ವಯಂ ನಿವೃತ್ತಿ ಅಥವಾ ಮರಣ ಹೊಂದಿದ ಕಾರಣದಿಂದ ಹೀಗೆ ಹತ್ತಾರು ಕಾರಣಗಳಿಂದ ಕೃಷಿ ಇಲಾಖೆಯಲ್ಲಿನ ವಿವಿಧ ಪೋಸ್ಟ್ ಗಳು ಖಾಲಿ ಉಳಿದಿರುತ್ತವೆ. ಸದ್ಯಕ್ಕಿರುವ ಮಾಹಿತಿಯ ಪ್ರಕಾರ ಕೃಷಿ ಇಲಾಖೆಯಲ್ಲಿಯೇ 57% ಹುದ್ದೆಗಳು ಖಾಲಿ ಇತ್ತು ಇವುಗಳ ಭರ್ತಿಗಾಗಿ KPSC ಗೆ ಕೋರಿಕೆ ಸಲ್ಲಿಸಲಾಗಿತ್ತು.
ಕಳೆದ ಮೇ ತಿಂಗಳ ಅವಧಿಯಲ್ಲಿ ಕೃಷಿ ಇಲಾಖೆಯಲ್ಲಿ ಖಾಲಿ ಇರುವ ಟೈಪಿಸ್ಟ್, ಎಸ್ ಡಿ ಎ, ಎಫ್ ಡಿ ಎ ಹುದ್ದೆಗಳಿಗೆ ನೇಮಕಾತಿ ನಡೆಸುವಂತೆ ಮನವಿ ಸಲ್ಲಿಸಲಾಗಿತ್ತು. ಇದರಲ್ಲಿ ಶೀಘ್ರಗಳಿಗೆ ಹೈದರಾಬಾದ್ ವೃಂದ ಹಾಗೂ ಉಳಿಕೆ ಮೂಲ ವೃಂದದ ಈ ಮೇಲೆ ತಿಳಿಸಿದಂತಹ ಸುಮಾರು 57 ಹುದ್ದೆಗಳ ಭರ್ತಿಗೆ ಕರ್ನಾಟಕ ಲೋಕಸೇವಾ ಆಯೋಗದಿಂದ ಪರೀಕ್ಷೆ ನಡೆದು ನೇಮಕಾತಿ ನಡೆಯಲಿದೆ ಎನ್ನುವ ಮಾತುಗಳನ್ನು ಸಚಿವರು ಪುನರುಚ್ಚಿರಿಸಿದ್ದಾರೆ.
ಇದರೊಂದಿಗೆ ಬಹು ಮುಖ್ಯವಾಗಿ ಕೃಷಿ ಅಧಿಕಾರಿ ಹಾಗೂ ಸಹಾಯಕ ಕೃಷಿ ಅಧಿಕಾರಿ ಹುದ್ದೆಗಳ ನೇಮಕಾತಿ ಬಗ್ಗೆ ಕೂಡ ಸ್ಪಷ್ಟ ಮಾಹಿತಿ ನೀಡಿದ್ದಾರೆ. ಈ ಪ್ರಕಾರವಾಗಿ 600 ಹುದ್ದೆಗಳಿಗೆ ನೇಮಕಾತಿ ಮಾಡಿಕೊಳ್ಳಲು ಮಂಜುರಾತಿ ನೀಡಿರುವುದಾಗಿ ಮುಂದಿನ ಹಂತದ ಪ್ರಕ್ರಿಯೆಗಾಗಿ ಕರ್ನಾಟಕ ಲೋಕಸೇವಾ ಆಯೋಗಕ್ಕೆ ಕಳುಹಿಸಲಾಗಿದೆ ಎಂಬುದಾಗಿ ಸಚಿವರು ಮಾಹಿತಿ ನೀಡಿದ್ದಾರೆ.
ಈ ಹುದ್ದೆಗಳ ನೇಮಕಾತಿ ಕುರಿತಂತೆ ಕೆಲ ಪ್ರಮುಖ ಸಂಗತಿಗಳ ಬಗ್ಗೆ ಈ ಲೇಖನದಲ್ಲಿ ವಿವರಣೆ ನೀಡಲು ಬಯಸುತ್ತಿದ್ದೇವೆ. ತಪ್ಪದೇ ಈ ಉಪಯುಕ್ತ ಮಾಹಿತಿಯನ್ನು ನಿಮ್ಮ ಕುಟುಂಬದವರು ಹಾಗೂ ಸ್ನೇಹಿತರ ಜೊತೆಗೂ ಹಂಚಿಕೊಂಡು ಹೆಚ್ಚಿನ ಜನರಿಗೆ ಉದ್ಯೋಗ ಮಾಹಿತಿಯು ತಲುಪುವಂತೆ ಮಾಡಿ.
ನೇಮಕಾತಿ ಸಂಸ್ಥೆ:- ಕರ್ನಾಟಕ ಲೋಕಸೇವಾ ಆಯೋಗ (KPSC)
ಉದ್ಯೋಗ ಸಂಸ್ಥೆ:- ಕರ್ನಾಟಕ ರಾಜ್ಯ ಕೃಷಿ ಇಲಾಖೆ (KSDA)
ಖಾಲಿ ಇರುವ ಒಟ್ಟು ಹುದ್ದೆಗಳ ಸಂಖ್ಯೆ:-600
ಹುದ್ದೆಗಳ ವಿವರ:-
* ಕೃಷಿ ಅಧಿಕಾರಿಗಳು
* ಸಹಾಯಕ ಕೃಷಿ ಅಧಿಕಾರಿಗಳು
ಉದ್ಯೋಗ ಸ್ಥಳ:- ಕರ್ನಾಟಕದಂತೆ ವಿವಿಧ ಜಿಲ್ಲಾ ಕೇಂದ್ರಗಳಲ್ಲಿ
ವೇತನ ಶ್ರೇಣಿ:-
* ಈ ಹುದ್ದೆಗಳಿಗೆ ಆಯ್ಕೆ ಆಗುವ ಅಭ್ಯರ್ಥಿಗಳಿಗೆ ಮಾಸಿಕವಾಗಿ ರೂ.40,900 ರಿಂದ ರೂ.78,200 ವೇತನ ಸಿಗಲಿದೆ.
* ಇದರೊಂದಿಗೆ ಇತರೆ ಸರ್ಕಾರಿ ಸೌಲಭ್ಯಗಳು ಕೂಡ ಲಭ್ಯವಿರುತ್ತದೆ
ಶೈಕ್ಷಣಿಕ ವಿದ್ಯಾರ್ಹತೆ:-
* ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಪದವಿಯಲ್ಲಿ ಅಗ್ರಿಕಲ್ಚರ್ ಅಥವಾ ಇಂಜಿನಿಯರಿಂಗ್ ನಲ್ಲಿ ಅಗ್ರಿಕಲ್ಚರ್ ಬಿ ಟೆಕ್ ಮಾಡಿದವರು ಅರ್ಹರಿರುತ್ತಾರೆ
* ಒಟ್ಟು ಹುದ್ದೆಗಳಲ್ಲಿ 85% B.Sc ಅಗ್ರಿಕಲ್ಚರ್ 15% ಅಗ್ರಿಕಲ್ಚರ್ B.Tech ಮಾಡಿದವರಿಗೆ ವಿಭಾಗಿಸಲಾಗಿದೆ.
ವಯೋಮಿತಿ:-
* ಅರ್ಜಿ ಸಲ್ಲಿಸಲು ಕನಿಷ್ಠ ವಯೋಮಿತಿ 18 ವರ್ಷಗಳು
* ಅರ್ಜಿ ಸಲ್ಲಿಸಲು ಗರಿಷ್ಠ ವಯೋಮಿತಿ 35 ವರ್ಷಗಳು
ವಯೋಮಿತಿ ಸಡಿಲಿಕೆ:-
* SC/ST ಅಭ್ಯರ್ಥಿಗಳಿಗೆ 5 ವರ್ಷಗಳು
* OBC ಅಭ್ಯರ್ಥಿಗಳಿಗೆ 3 ವರ್ಷಗಳು
* ಅಂಗವಿಕಲ ಅಭ್ಯರ್ಥಿಗಳಿಗೆ 10 ವರ್ಷಗಳು
ಅರ್ಜಿ ಸಲ್ಲಿಸುವ ವಿಧಾನ:-
* ಶೀಘ್ರದಲ್ಲಿಯೇ ಇಲಾಖೆ ಕಡೆಯಿಂದ ಈ ಕುರಿತಾದ ಮಾರ್ಗಸೂಚಿ ಬಿಡುಗಡೆ ಆಗಲಿದೆ.
* ಎಲ್ಲಾ ಹುದ್ದೆಗಳಂತೆ ಸಾಮಾನ್ಯವಾಗಿ ಆನ್ಲೈನ್ ಮೂಲಕವೇ ಅರ್ಜಿ ಆಹ್ವಾನ ಮಾಡಿ ಅರ್ಜಿ ಸಲ್ಲಿಸಿದವರಿಗೆ ಸ್ಪರ್ಧಾತ್ಮಕ ಪರೀಕ್ಷೆಗಳನ್ನು ನಡೆಸಿ ಆಯ್ಕೆಯಾದ ಅಭ್ಯರ್ಥಿಗಳ ದಾಖಲೆ ಪರಿಶೀಲನೆ ಮತ್ತು ನೇರ ಸಂದರ್ಶನ ಮಾಡುವ ಮೂಲಕ ಆಹಾರ ಆಯ್ಕೆ ಮಾಡಿಕೊಳ್ಳಲಾಗುತ್ತದೆ
* ಅರ್ಜಿ ಸ್ಪೀಕಾರ ದಿನಾಂಕವು ಇಲಾಖೆಯಿಂದ ಶೀಘ್ರದಲ್ಲೇ ಪ್ರಕಟಣೆ ಆಗಲಿದೆ, ಈ ಕುರಿತಾದ ಯಾವುದೇ ಹೆಚ್ಚಿನ ಮಾಹಿತಿಗಾಗಿ ಇಲಾಖೆ ಅಧಿಕೃತ ವೆಬ್ಸೈಟ್ಗೆ ಭೇಟಿ ನೀಡಿ.