Airport
ನಮ್ಮ ದೇಶದಲ್ಲಿ ವಿಮಾನ ನಿಲ್ದಾಣಗಳಲ್ಲಿ ಕೆಲಸ ಮಾಡುತ್ತಿದ್ದಾರೆ ಎನ್ನುವುದು ಖಂಡಿತವಾಗಿಯೂ ಒಂದು ಹೆಮ್ಮೆಯ ಸಂಗತಿ ಆಗಿದೆ ಮತ್ತು ಈ ಕೆಲಸಗಳಿಗೆ ಉತ್ತಮ ಸಂಬಳದ ಜೊತೆಗೆ ಇನ್ನಿತರ ಸೌಕರ್ಯಗಳು ಕೂಡ ಇದೆ. ಆದರೆ ಹೆಚ್ಚಿನ ವಿದ್ಯಾಭ್ಯಾಸದ ಅರ್ಹತಾ ಮಾನದಂಡವಾಗಿ ಕೇಳಬಹುದು ಎನ್ನುವುದು ಅನೇಕ ಅಭಿಪ್ರಾಯ ಆದರೆ ಅದು ಕೂಡ ತಪ್ಪಾಗಿದೆ.
SSLC ಉತ್ತೀರ್ಣರಾಗಿದ್ದರು ಸಾಕು ವಿಮಾನ ನಿಲ್ದಾಣಗಳಲ್ಲಿ ನೀವು ಕೆಲಸ ಗಿಟ್ಟಿಸಿಕೊಳ್ಳಬಹುದು. ನಿಮಗೂ ಈ ಬಗ್ಗೆ ಕನಸಿದ್ದರೆ ಇದೀಗ ನಿಮಗೆ ಒಂದು ಬಂಪರ್ ಆಫರ್ ಇದೆ. ಅದೇನೆಂದರೆ AI ಏರ್ಪೋರ್ಟ್ ಸರ್ವಿಸಸ್ ಲಿಮಿಟೆಡ್ (AIASL Recruitment) ತನ್ನಲ್ಲಿ ಖಾಲಿ ಇರುವ 1652 ಹುದ್ದೆಗಳಿಗೆ ಅರ್ಜಿ ಆಹ್ವಾನ ಮಾಡಿದೆ. ಈ ನೇಮಕಾತಿ ಕುರಿತ ಹೆಚ್ಚಿನ ಮಾಹಿತಿಗಾಗಿ ಅಂಕಣವನ್ನು ಕೊನೆಯವರೆಗೂ ಓದಿ.
ನೇಮಕಾತಿ ಸಂಸ್ಥೆ:- AI ಏರ್ಪೋರ್ಟ್ ಸರ್ವಿಸಸ್ ಲಿಮಿಟೆಡ್ (AIASL)
ಉದ್ಯೋಗ ಸಂಸ್ಥೆ:- AI ಏರ್ಪೋರ್ಟ್ ಸರ್ವಿಸಸ್ ಲಿಮಿಟೆಡ್ (AIASL)
ಹುದ್ದೆ ಹೆಸರು:- ಗ್ರಾಹಕ ಸೇವಾ ಕಾರ್ಯ ಮತ್ತು ಇನ್ನಿತರೆ ವಿವಿಧ ಬಗೆಯ ಹುದ್ದೆಗಳು
ಹುದ್ದೆಗಳ ವಿವರ:-
* ಸೀನಿಯರ್ ರ್ಯಾಂಪ್ ಸರ್ವಿಸ್ ಕಾರ್ಯನಿರ್ವಾಹಕ
* ರ್ಯಾಂಪ್ ಸರ್ವಿಸ್ ಕಾರ್ಯನಿರ್ವಾಹಕ
* ಯುಟಿಲಿಟಿ ಏಜೆಂಟ್ ಕಮ್ ರ್ಯಾಂಪ್ ಚಾಲಕ
* ಇನ್ನಿತರ ಹುದ್ದೆಗಳು
ಒಟ್ಟು ಹುದ್ದೆಗಳ ಸಂಖ್ಯೆ:- 1652 ಹುದ್ದೆಗಳು
ಉದ್ಯೋಗ ಸ್ಥಳ:-
* ಮುಂಬೈ ವಿಮಾನ ನಿಲ್ದಾಣ – 1067 ಹುದ್ದೆಗಳು
* ಅಹಮದಾಬಾದ್ ವಿಮಾನ ನಿಲ್ದಾಣ – 156 ಹುದ್ದೆಗಳು
* ಡಾಬೋಲಿಮ್ ವಿಮಾನ ನಿಲ್ದಾಣ – 429 ಹುದ್ದೆಗಳು
ವೇತನ ಶ್ರೇಣಿ:-
ಈ ಹುದ್ದೆಗಳಿಗೆ ಆಯ್ಕೆ ಆಗುವ ಅಭ್ಯರ್ಥಿಗಳಿಗೆ ಅವರ ಹುದ್ದೆಗಳಿಗೆ ಅನುಸಾರವಾಗಿ ರೂ.17,000 ರಿಂದ ರೂ.75,000 ದವರೆಗೆ ವೇತನ ನಿಗದಿ ಮಾಡಲಾಗಿದೆ
ಶೈಕ್ಷಣಿಕ ವಿದ್ಯಾರ್ಹತೆ:-
* SSLC / PUC / ಪದವಿ ಹಾಗೂ ಹೆಚ್ಚುವರಿ ವಿದ್ಯಾಭ್ಯಾಸ ಮಾಡಿದ ಅಭ್ಯರ್ಥಿಗಳು ಕೂಡ ತಮ್ಮ ಆಸಕ್ತಿ ಹಾಗೂ ಅರ್ಹತೆಗನುಗುಣವಾಗಿ ಸೂಕ್ತ ಪೋಸ್ಟ್ ಗಳಿಗೆ ಅಪ್ಲೈ ಮಾಡಬಹುದು
ವಯೋಮಿತಿ:-
* ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಕನಿಷ್ಠ ವಯೋಮಿತಿ 28 ವರ್ಷಗಳು
* ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಗರಿಷ್ಠ ವಯೋಮಿತಿ 55 ವರ್ಷಗಳು
ಅರ್ಜಿ ಸಲ್ಲಿಸುವ ವಿಧಾನ:-
* ಆನ್ಲೈನ್ ವಿಧಾನದಲ್ಲಿ ಅರ್ಜಿ ಸಲ್ಲಿಸಬೇಕು
* AIASL ಅಧಿಕೃತ ವೆಬ್ ಸೈಟ್ ಗೆ ಭೇಟಿ ನೀಡಿ ನೋಟಿಫಿಕೇಶನ್ ಡೌನ್ಲೋಡ್ ಮಾಡಿಕೊಂಡು ಓದಿ ಅರ್ಥೈಸಿಕೊಳ್ಳಿ
* ನಂತರ ನೀಡಿರುವ ಸೂಚನೆಯ ಪ್ರಕಾರವಾಗಿ ಅರ್ಜಿ ಪಳಭರ್ತಿಗೊಳಿಸಿ.
* ಭರ್ತಿ ಮಾಡಿದ ಅರ್ಜಿ ನಮೂನೆ ಪ್ರಿಂಟ್ ಪಡೆಯಿರಿ, ಈ ಅಜ್ಜಿ ಫಾರಂ ಜೊತೆಯಲ್ಲಿ ಇತರೆ ಪ್ರಮುಖ ದಾಖಲೆ ಪತ್ರಗಳ ಪ್ರತಿ ಜೊತೆ ರೂ.500 ಡಿಮ್ಯಾಂಡ್ ಡ್ರಾಫ್ಟ್ ತೆಗೆದುಕೊಳ್ಳಬೇಕು AI AIRPORT SERVICES LIMITED ಹೆಸರಿನಲ್ಲಿ ಡಿಮ್ಯಾಂಡ್ ಡ್ರಾಫ್ಟ್ ತೆಗೆದುಕೊಳ್ಳಬೇಕು
* ಮತ್ತು ಕಡೆ ದಿನಾಂಕದೊಳಗೆ ಈ ಅರ್ಜಿ ಫಾರಂ ಅಂಚೆ ಮೂಲಕ ಅಥವಾ ನೇರವಾಗಿ ಈ ಮೇಲೆ ತಿಳಿಸಿದ ವಿಮಾನ ನಿಲ್ದಾಣದ ಆಡಳಿತ ವಿಭಾಗಕ್ಕೆ ಸಲ್ಲಿಸಬೇಕು. ಹೆಚ್ಚಿನ ಮಾಹಿತಿಗಾಗಿ ಅಧಿಕೃತ ವೆಬ್ಸೈಟ್ ಗೆ ಭೇಟಿ ನೀಡಿ.
ಆಯ್ಕೆ ವಿಧಾನ:-
* ಆನ್ಲೈನ್ ಪರೀಕ್ಷೆ
* ನೇರ ಸಂದರ್ಶನ
* ಮೆಡಿಕಲ್ ಫಿಟ್ನೆಸ್ ಪರೀಕ್ಷೆ
* ವೃತ್ತಿಪರ ಜ್ಞಾನ ಮತ್ತು ಚಾಲನ ಪರೀಕ್ಷೆ
* ದಾಖಲೆಗಳ ಸಂದರ್ಶನ