Airport Recruitment
10ನೇ ಕ್ಲಾಸ್ ಪಾಸಾದವ್ರಿಗೆ ಭರ್ಜರಿ ಗುಡ್ ನ್ಯೂಸ್‌ಒಂದು ಸಿಕ್ಕಿದೆ. ಹೌದು, ಭಾರತದ(India) ಪ್ರಮುಖ ವಿಮಾನ ನಿಲ್ದಾಣ(Airport)ಗಳಲ್ಲಿ ಗ್ರೌಂಡ್ ಹ್ಯಾಂಡ್ಲಿ೦ಗ್ ಸೇವೆಗಳನ್ನು ಒದಗಿಸುವ ಸಂಸ್ಥೆಯಾದ ಏರ್ ಇಂಡಿಯಾ ಏರ್‌ಪೋರ್ಟ್ ಸರ್ವೀಸಸ್ ಲಿಮಿಟೆಡ್ (Air India Airport Services Limited – ATATSL) ಪ್ರಸ್ತುತ 82 ವಿಮಾನ ನಿಲ್ದಾಣಗಳಲ್ಲಿ ಗ್ರೌಂಡ್ ಹ್ಯಾಂಡ್ಲಿ೦ಗ್ ಸೇವೆಗಳನ್ನು (Ground Handling Service at Airports) ಒದಗಿಸುತ್ತಿದೆ.
ಇದರ ಉಪಯೋಗವನ್ನು ಪಡೆದುಕೊಂಡು ಆಸಕ್ತ ಅಭ್ಯರ್ಥಿಗಳು(candidates) ಅರ್ಜಿ ಸಲ್ಲಿಸಿ ನಿಮ್ಮ ಕನಸಿನ ಉದ್ಯೋಗವನ್ನು (Job) ಪಡೆಯಬಹುದಾಗಿದೆ. ಈ ಬಗ್ಗೆ ಸಂಪೂರ್ಣ ಮಾಹಿತಿಯನ್ನು ಇಂದಿನ ಈ ಲೇಖನದಲ್ಲಿ ನೋಡೋಣ ಬನ್ನಿ. ಸದರಿ ಸಂಸ್ಥೆಯು ಸದ್ಯ ದೇಶದ ವಿವಿಧ ವಿಮಾನ ನಿಲ್ದಾಣಗಳಲ್ಲಿ ಖಾಲಿ ಇರುವ ರಾಂಪ್ ಸರ್ವೀಸ್ ಎಕ್ಸಿಕ್ಯೂಟಿವ್, ಯುಟಿಲಿಟಿ ಏಜೆಂಟ್, ಲ್ಯಾಂಪ್ ಡ್ರೈವರ್, ಹ್ಯಾಂಡಿಮನ್, ಹ್ಯಾಂಡಿವುಮನ್ ಹುದ್ದೆಗಳನ್ನು ಭರ್ತಿ ಮಾಡಲು ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿದೆ.
ಹುದ್ದೆಗಳ ವಿವರ
– ರಾಂಪ್ ಸರ್ವೀಸ್ ಎಕ್ಸಿಕ್ಯೂಟಿವ್ : 03
– ಯುಟಿಲಿಟಿ ಏಜೆಂಟ್ / ರಾಂಪ್ ಡ್ರೈವರ್ : 04
– ಹ್ಯಾಂಡಿಮನ್/ಹ್ಯಾ೦ಡಿವುಮನ್ : 201
– ಒಟ್ಟು ಹುದ್ದೆಗಳು : 208
ಆಯ್ಕೆ ಪ್ರಕ್ರಿಯೆ, ವಯೋಮಿತಿ ವಿವರ
ವಿಮಾನ ನಿಲ್ದಾಣದ ಹುದ್ದೆಗಳಿಗೆ ಆಯ್ಕೆ ಪ್ರಕ್ರಿಯೆಯು ಟ್ರೇಡ್ ಟೆಸ್ಟ್, ಡೈವಿಂಗ್ ಟೆಸ್ಟ್, ದೈಹಿಕ ಸಹಿಷ್ಣುತೆ ಪರೀಕ್ಷೆ, ವೈಯಕ್ತಿಕ ಅಥವಾ ವರ್ಚುವಲ್ ಸಂದರ್ಶನ ಆಧರಿಸಿರುತ್ತದೆ.
ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿ 28 ವರ್ಷದೊಳಗಿರಬೇಕು. ಎಸ್ಸಿ/ಎಸ್ಟಿ ಅಭ್ಯರ್ಥಿಗಳಗೆ 5 ವರ್ಷ, ಒಬಿಸಿ ಅಭ್ಯರ್ಥಿಗಳಿಗೆ 3 ವರ್ಷ ವಯೋಮಿತಿ ಸಡಿಲಿಕೆ ಅನ್ವಯವಾಗಲಿದೆ.
ವೇತನ ಶ್ರೇಣಿ ವಿವರ
ವಿಮಾನ ನಿಲ್ದಾಣದ ಹುದ್ದೆಗಳಿಗೆ ನೇಮಕವಾಗು ಅಭ್ಯರ್ಥಿಗಳಿಗೆ ಹುದ್ದೆವಾರು ವಿವಿಧ ಶ್ರೇಣಿಯ ಮಾಸಿಕ ವೇತನವನು ನಿಗದಿಪಡಿಸಲಾಗಿದ್ದು; ಈ ಕೆಳಗಿನಂತಿದೆ:
– ರಾ೦ಪ್ ಸರ್ವಿಸ್ ಎಕ್ಸಿಕ್ಯೂಟಿವ್ ಹುದ್ದೆಗೆ 24,960 ರೂ.,
– ಯುಟಿಲಿಟಿ ಏಜೆಂಟ್ / ಕ್ಯಾಂಪ್ ಡ್ರೈವರ್ ಹುದ್ದೆಗೆ 21,270ರೂ.,
– ಹ್ಯಾಂಡಿಮನ್ / ಹ್ಯಾಂಡಿ ವುಮನ್ ಹುದ್ದೆಗೆ 18,840 ರೂ.,
ವಿದ್ಯಾರ್ಹತೆ ಎಷ್ಟಿರಬೇಕು?
ವಿಮಾನ ನಿಲ್ದಾಣದ ಹ್ಯಾಂಡಿಮನ್, ಹ್ಯಾಂಡಿ ವುಮನ್, ಯುಟಿಲಿಟಿ ಏಜೆಂಟ್ ಹಾಗೂ ರಾಂಪ್ ಡ್ರೈವರ್ ಹುದ್ದೆಗಳಿಗೆ ಎಸ್‌ಎಸ್‌ಸಿ ಅಥವಾ 10ನೇ ತರಗತಿ ಪೂರ್ಣಗೊಳಿಸಿರಬೇಕು. ಇನ್ನು ರಾಂಪ್ ಸರ್ವಿಸ್ ಎಕ್ಸಿಕ್ಯೂಟಿವ್ ಹುದ್ದೆಗೆ ಡಿಪ್ಲೊಮಾ, ಐಟಿಐ ವಿದ್ಯಾರ್ಹತೆ ಹೊಂದಿರಬೇಕು.
ಅರ್ಜಿ ಶುಲ್ಕದ ವಿವರ
ವಿಮಾನ ನಿಲ್ದಾಣ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಮಾಜಿ ಸೈನಿಕರು, ಎಸ್ಸಿ, ಎಸ್ಪಿ ಅಭ್ಯರ್ಥಿಗಳಿಗೆ ಯಾವುದೇ ರೀತಿಯ ಅರ್ಜಿ ಶುಲ್ಕ ಇರುವುದಿಲ್ಲ. ಇತರ ಎಲ್ಲ ನಿಭ್ಯರ್ಥಿಗಳಿಗೆ 500 ರೂಪಾಯಿ ಅರ್ಜಿ ಶುಲ್ಕವನ್ನು ನಿಗದಿಪಡಿಸಲಾಗಿದೆ.
ಸಂದರ್ಶನ ದಿನಾಂಕ ಮತ್ತು ವಿಳಾಸ
ರಾಂಪ್ ಸರ್ವಿಸ್ ಎಕ್ಸಿಕ್ಯೂಟಿವ್, ಯುಟಿಲಿಟಿ ಏಜೆಂಟ್, ರಾಂಪ್ ಡ್ರೈವರ್ ಹುದ್ದೆಗೆ ಅಕ್ಟೋಬರ್ 5ರಂದು ಹಾಗೂ ಹ್ಯಾಂಡಿಮನ್ ಮತ್ತು ಹ್ಯಾಂಡಿ ವುಮನ್ ಹುದ್ದೆಗೆ ಅಕ್ಟೋಬರ್ 7ರಂದು ಈ ಕೆಳಗಿನ ಸ್ಥಳದಲ್ಲಿ ಸಂದರ್ಶನ ನಡೆಯಲಿದೆ:
ಸಂದರ್ಶನ ಸ್ಥಳ : Sri Jagannath Auditorium, Near Vengoor Durga Devi Temple, Vengoor, Angamaly, Ernakulam, Kerala, Pin-683572