Airtel ಸಿಮ್ ಗ್ರಾಹಕರಿಗೆ ದೀಪಾವಳಿ ಹಬ್ಬದ ಪ್ರಯುಕ್ತ ಬಂಪರ್ ಆಫರ್ ಘೋಷಣೆ.!

Airtel

ಹಬ್ಬಗಳ ಸೀಸನ್ ನಲ್ಲಿ ಸಾಮಾನ್ಯವಾಗಿ ಜನರು ತಮ್ಮ ಕಂಪನಿಗಳಿಂದ ಬೋನಸ್ ಹಾಗೂ ಮಾರುಕಟ್ಟೆ ಪ್ರತಿಷ್ಠಿತ ಕಂಪನಿಗಳಿಂದ ಡಿಸ್ಕೌಂಟ್ ಆಫರ್ ಎದುರು ನೋಡುತ್ತಿರುತ್ತಾರೆ. ಅದರಲ್ಲೂ ದೀಪಾವಳಿ ಸೀಸನ್ ಭಾರತದಾದ್ಯಂತ ಆಚರಿಸುವ ಹಬ್ಬವಾಗಿದ್ದರಿಂದ ಖಂಡಿತವಾಗಿ ಬೆಳಕಿನ ಹಬ್ಬಕ್ಕೆ ಬಂಪರ್ ಧಮಾಕ ಸಿಗುತ್ತದೆ ಎನ್ನುವ ನಿರೀಕ್ಷೆ.

ಅಂತೆಯೇ ಪ್ರತಿವರ್ಷ ಈ ಸೀಸನ್ ನಲ್ಲಿ ಸಿಗುವ ಹಲವು ಆಫರ್ ಗಳ ಅನುಕೂಲತೆ ಪಡೆದಿರುತ್ತೇವೆ. ಈ ಬಾರಿ ವಿಶೇಷವಾಗಿ ಮೊಬೈಲ್ ರೀಚಾರ್ಜ್ (Diwali Mobile Recharge offer) ಮೇಲೆ ದೀಪಾವಳಿ ಕೊಡುಗೆಗಳು ಸಿಗುತ್ತವೆ. ಪ್ರತಿ ವರ್ಷದಂತೆ ಈ ಬಾರಿಯೂ ಕೂಡ ಭಾರ್ತಿ ಏರ್ಟೆಲ್ (Bharti Airtel) ತನ್ನ ಗ್ರಾಹಕರಿಗೆ ದೀಪಾವಳಿ ಆಫರ್ ನೀಡಿದೆ.

WhatsApp Group Join Now
Telegram Group Join Now

ಈ ಬಾರಿ ವಾರ್ಷಿಕ ರಿಚಾರ್ಜ್ ಮೊತ್ತ ಕಡಿಮೆ ಗೊಳಿಸುವುದರ ಜೊತೆಗೆ ಇನ್ನಿತರ ಆಡೆಡ್ ಸೇವೆಗಳನ್ನು ಕೂಡ ನೀಡುತ್ತಿದೆ. ಯಾವ ಪ್ಲಾನ್? ಎಷ್ಟು ರಿಚಾರ್ಜ್ ಮಾಡಿಸಬೇಕು? ಏನೆಲ್ಲ ಹೆಚ್ಚುವರಿಯಾಗಿ ಸಿಗಲಿದೆ ಮಾಹಿತಿಗಾಗಿ ಅಂಕಣವನ್ನು ಕೊನೆಯವರೆಗೂ ಓದಿ.

* ಏರ್ಟೆಲ್ ಸಿಮ್ ಹೊಂದಿರುವ ಗ್ರಾಹಕರು ದೀಪಾವಳಿಯ ಈ ವಿಶೇಷ ವಾರ್ಷಿಕ ರಿಚಾರ್ಜ್ ಮಾಡಿಸಿದರೆ ರೂ.1999 ನಲ್ಲಿ ವರ್ಷದ 365 ದಿನವು 24*7 ಉಚಿತ ಅನಿಯಮಿತ ಕರೆಗಳ (Unlimited Calls) ಸೌಲಭ್ಯ ಪಡೆಯಬಹುದು
* 365 ದಿನಗಳಿಗೆ ಪ್ರತಿದಿನವೂ ಕೂಡ 100 ಉಚಿತ SMS ಸೌಲಭ್ಯವು ಇರುತ್ತದೆ.

* ಏರ್ಟೆಲ್ ಸ್ಟ್ರೀಮ್ (Airtel Stream) ಉಚಿತ ಪ್ರವೇಶವನ್ನು ಕೂಡ ಪಡೆಯಲಿದ್ದಾರೆ ಇದರಿಂದ ಅನಿಯಮಿತ ಮನರಂಜನೆ ಕೂಡ ಪಡೆಯಬಹುದು.
* ಸಂಗೀತ ಪ್ರಿಯರಿಗಾಗಿ ರಿಂಕ್ ಮ್ಯೂಸಿಕ್ (Wrink Music) ಸೌಲಭ್ಯವನ್ನು ಕೂಡ ಈ ರೀಚಾರ್ಜ್ ಪ್ಲಾನ್ ಹೊಂದಿದೆ

* ಆರೋಗ್ಯದ ಬಗ್ಗೆ ಹೆಚ್ಚು ಜಾಗ ಇರುವವರಿಗೆ ವೈದ್ಯಕೀಯ ಸಲಹೆಗಳನ್ನು ಪಡೆಯುವುದಕ್ಕೆ Apollo 24*7 health service ಸೇವೆ ಕೂಡ ವರ್ಷದವರೆಗೆ ಈ ವಾರ್ಷಿಕ ರಿಚಾರ್ಜ್ ಪ್ಲಾನ್ ನೊಂದಿಗೆ ಉಚಿತವಾಗಿ ಸಿಗಲಿದೆ.
* ಆದರೆ ಇದರಲ್ಲಿ ಅನೇಕರನ್ನು ನಿರಾಸೆಗೊಳಿಸುವ ಒಂದೇ ಒಂದು ಸಂಗತಿ ಏನೆಂದರೆ ಕಡಿಮೆ ಡಾಟಾ ಪ್ಲಾನ್ ಹೊಂದಿದೆ. ತಿಂಗಳಿಗೆ ಕೇವಲ 2GB, ಆ ಪ್ರಕಾರವಾಗಿ ವಾರ್ಷಿಕವಾಗಿ 24GB ಮಾತ್ರ ಡೇಟಾ ಸೌಲಭ್ಯ ಹೊಂದಿದೆ.

ಆದರೆ ಇಂದು ಜನರು ಇಂದಿನ ಸ್ಪರ್ಧಾತ್ಮಕ ಜಗತ್ತಿನ ಅನುಕೂಲತೆಗೆ ಅನುಗುಣವಾಗಿ ಮನೆಗಳಲ್ಲಿ ಹಾಗೂ ಕಚೇರಿಗಳಲ್ಲಿ ಕೂಡ ವೈಫೈ (Wifi) ಸಂಪರ್ಕ ಹೊಂದಿರುತ್ತಾರೆ. ಹೀಗಾಗಿ ಕಡಿಮೆ ಡೇಟಾ ಪ್ಲಾನ್ ಬಯಸುವವರಿಗೆ ಖಂಡಿತವಾಗಿಯೂ ಇದು ಒಂದೊಳ್ಳೆ ಆಫರ್ ಆಗಲಿದೆ.

ಅನೇಕ ಕಡೆಗಳಲ್ಲಿ ಈಗ ಉಚಿತ ವೈಫೈ ಸೌಲಭ್ಯ ಕೂಡ ಇರುವುದರಿಂದ ಈ ಕಡಿಮೆ ಡಾಟಾ ಪ್ಯಾಕ್ ಎನ್ನುವುದು ಅನೇಕರಿಗೆ ಹೆಚ್ಚು ಕಾಡುವ ವಿಷಯವಾಗಲಾರದು. ಅಲ್ಲದೆ ಇಂಟರ್ನೆಟ್ ಡಾಟಾ ಪ್ಯಾಕ್ ಗಾಗಿಯೇ ಇನ್ನು ಅತ್ಯುತ್ತಮ ಆಫರ್ ಗಳು ಕೂಡ ಇರುವುದರಿಂದ ಅಂತಹ ಅಗತ್ಯ ಪರಿಸ್ಥಿತಿ ಎದುರಾದಲ್ಲಿ ಆ ಆಫರ್ ಗಳನ್ನು ಕೂಡ ಅರಿಸಬಹುದು.

ಒಟ್ಟಾರೆಯಾಗಿ ಏರ್ಟೆಲ್ ಕೂಡ ಇಂದಿನ ಮಾರುಕಟ್ಟೆಗೆ ಅನುಗುಣವಾಗಿ ಇತರ ಟೆಲಿಕಾಂ ಕಂಪನಿಗಳಿಗೆ ತನ್ನ ರಿಚಾರ್ಜ್ ಪ್ಲಾನ್ ಮೂಲಕ ಟಕ್ಕರ್ ಕೊಳ್ಳುತ್ತಿದೆ ಎನ್ನುವುದು ಸುಳ್ಳಲ್ಲ. ಇಂದು ಜನರು ಹೆಚ್ಚಾಗಿ ಜಿಯೋ ಆಫರ್ ಗಳು ಬಗ್ಗೆ (Jio) ಮಾತನಾಡುತ್ತಿರುವ ಸಂದರ್ಭದಲ್ಲಿ ಏರ್ಟೆಲ್ ಕೂಡ ಪ್ರಬಲ ಸ್ಪರ್ಧಿಯಾಗಿ ಎದುರು ನಿಲ್ಲುತ್ತಿದೆ.

ಇದಕ್ಕೆ ವಿಶೇಷ ಆಫರ್ಗಳ ಕೊಡುಗೆ ನೀಡುವ ಮೂಲಕ ಗ್ರಾಹಕರನ್ನು ಉಳಿಸಿಕೊಳ್ಳುವ ಮತ್ತು ಹೆಚ್ಚಿನ ಗ್ರಹಗಳನ್ನು ಸೆಳೆವ ಮೂಲಕ ಸ್ಪರ್ಧೆ ಹುಟ್ಟು ಹಾಕುತ್ತಿದೆ ಎನ್ನುವುದು ಅನೇಕರ ಅಭಿಪ್ರಾಯ. ಒಟ್ಟಾರೆಯಾಗಿ ಈ ಏರ್ಟೆಲ್ ಆಫರ್ ನಿಮಗೆಷ್ಟು ಅನುಕೂಲಕರವಾಗಿದೆ ಎಂದು ತಪ್ಪದೆ ಕಾಮೆಂಟ್ ಮಾಡಿ ತಿಳಿಸಿ.

ಸರ್ಕಾರಿ ಯೋಜನೆ, ಸರ್ಕಾರಿ ಉದ್ಯೋಗಗಳು,ಮತ್ತು ಖಾಸಗಿ ಕಂಪನಿ ಉದ್ಯೋಗದ ಬಗ್ಗೆ ದೈನಂದಿನ ಮಾಹಿತಿಯನ್ನು ಪಡೆಯಲು ನಮ್ಮ needs of ಕನ್ನಡ WhatsApp ಗ್ರೂಪ್ ಮತ್ತು ಟೆಲಿಗ್ರಾಮ್ ಚಾನಲ್‌ಗೆ ಜಾಯಿನ್ ಆಗಿರಿ
WhatsApp Group Join Now
Telegram Group Join Now

Leave a Comment