Ration Card: BPL ಕಾರ್ಡ್ ಇರುವವರಿಗೆ ಸರ್ಕಾರದಿಂದ ಮತ್ತೊಂದು ಗುಡ್ ನ್ಯೂಸ್.!

BPL Ration Card

ನಮ್ಮ ದೇಶದಲ್ಲಿ ಯಾವೊಬ್ಬ ಬಡ ವ್ಯಕ್ತಿಯು ಕೂಡ ಹಸಿವಿನಿಂದ ಇರಬಾರದು ಎನ್ನುವ ಕಾರಣಕ್ಕೆ ಕೇಂದ್ರ ಸರ್ಕಾರವು ಬಿಪಿಎಲ್ ಕಾರ್ಡ್ (BPL Ration Card) ಮೂಲಕ ಬಡತನದ ರೇಖೆಗಿಂತ ಕೆಳಗೆ ಇರುವವರಿಗೆ ಭಾರಿ ಸೌಲಭ್ಯಗಳನ್ನು ನೀಡುತ್ತಾ ಬಂದಿದೆ. ಅವುಗಳ ಪೈಕಿ ಪಿಎಂ ಗರೀಬ್ ಕಲ್ಯಾಣ್ ಯೋಜನೆ(PM Garib Kalyan Yojana)ಯ ಮೂಲಕ ಪ್ರತಿ ತಿಂಗಳು 5 ಕೆಜಿ ಅಕ್ಕಿ(rice) ವಿತರಿಸುವುದು ಒಂದು ಯೋಜನೆ ಆಗಿದೆ.

ಈ ಮೂಲಕ ಬಡವರು ಹಸಿವಿನಿಂದ ಮಲಗಬಾರದು ಎನ್ನುವ ಉದ್ದೇಶ ಸರ್ಕಾರದ್ದು ಹೌದು, ಕೇಂದ್ರ ಸರ್ಕಾರವು ನಮ್ಮ ದೇಶದ ಬಡ ಜನರಿಗೆ, ಬಡತನದ ರೇಖೆಗಿಂತ ಕೆಳಗೆ ಇರುವವರಿಗೆ ಬಿಪಿಎಲ್ ರೇಷನ್ ಕಾರ್ಡ್(BPL Ration Card) ವಿತರಣೆ ಮಾಡಿರುವುದು ಇದೇ ಕಾರಣಕ್ಕಾಗಿ. ಬಡವರಿಗೆ ಆಹಾರದ ವಿಷಯದಲ್ಲಿ, ಆರೋಗ್ಯದ ವಿಷಯದಲ್ಲಿ, ಮೂಲಭೂತ ಹಕ್ಕುಗಳ ವಿಷಯದಲ್ಲಿ ಯಾವುದೇ ಕೊರತೆ ಆಗಬಾರದು ಎಂದು ಕೇಂದ್ರ ಸರ್ಕಾರ ಹಲವು ಸವಲತ್ತುಗಳನ್ನು ಜಾರಿಗೆ ತಂದಿದೆ.

WhatsApp Group Join Now
Telegram Group Join Now

ಅವುಗಳಲ್ಲಿ ಅಕ್ಕಿ ಕೊಡುವ ಯೋಜನೆ ಪ್ರಮುಖವಾದದ್ದು. ಬಿಪಿಎಲ್ ಕಾರ್ಡ್ ನಲ್ಲಿ (BPL Card) ಹೆಸರು ಇರುವ ಪ್ರತಿ ವ್ಯಕ್ತಿಗೆ 5 ಕೆಜಿ ಅಕ್ಕಿಯನ್ನು ಕಡ್ಡಾಯವಾಗಿ ನೀಡಲಾಗುತ್ತಿದೆ. ಈ ವರ್ಷ ಲೋಕಸಭಾ ಚುನಾವಣೆ ನಡೆಯುವುದಕ್ಕಿಂತ ಮೊದಲು ಪಿಎಂ ಮೋದಿ ಅವರು ಗರೀಬ್ ಕಲ್ಯಾಣ್ ಯೋಜನೆಯ ಮೂಲಕ ಪ್ರತಿ ತಿಂಗಳು ಸಿಗುತ್ತಿರುವ 5 ಕೆಜಿ ಅಕ್ಕಿಯ ಸೌಲಭ್ಯ ಇನ್ನು 5 ವರ್ಷಗಳ ಕಾಲ ಇದೇ ರೀತಿ ಮುಂದುವರೆಯುತ್ತದೆ ಎನ್ನುವ ಭರವಸೆ ನೀಡಿದ್ದರು.

ಈ ಸುದ್ದಿ ಓದಿ:- BSNL: Jio, Airtel ಗೆ ಸೆಡ್ಡು ಹೊಡೆಯಲು ಮುಂದಾದ BSNL.! ಭರ್ಜರಿ ಆಫರ್ ಘೋಷಣೆ.!

ಈ ಯೋಜನೆಯ ಮೂಲಕ ಈಗಾಗಲೇ ದೇಶದ 80 ಕೋಟಿ ಜನರು ಉಚಿತವಾಗಿ 5 ಕೆಜಿ ಅಕ್ಕಿಯನ್ನು ಪ್ರತಿ ತಿಂಗಳು ಪಡೆಯುತ್ತಿದ್ದಾರೆ. ಸರ್ಕಾರದ ಈ ಜವಾಬ್ದಾರಿ ಭರಿಸುತ್ತಿದ್ದು, ಅರ್ಹತೆ ಇರುವ ಇನ್ನಷ್ಟು ಜನರಿಗೆ ಈ ಸೌಲಭ್ಯ ಸಿಗಬೇಕು ಎನ್ನುವುದು ಸರ್ಕಾರದ ಉದ್ದೇಶ ಆಗಿದೆ. ಇನ್ನು 5 ವರ್ಷಗಳ ಕಾಲ ಈ ಯೋಜನೆ ಮುಂದುವರೆಯುತ್ತದೆ ಎಂದು ಸರ್ಕಾರ ತಿಳಿಸಿತ್ತು, ಅದರ ಬಗ್ಗೆ ಈಗ ಕೇಂದ್ರ ಸಚಿವರಾದ ಪ್ರಹ್ಲಾದ್ ಜೋಷಿ ಅವರು ಮಾತನಾಡಿ, ಅಧಿಕೃತವಾಗಿ ಮಾಹಿತಿ ನೀಡಿದ್ದಾರೆ.

ಪ್ರಹ್ಲಾದ್ ಜೋಷಿ ಅವರ ಮಾತಿನ ಅನುಸಾರ ಇನ್ನು 5 ವರ್ಷಗಳ ಕಾಲ ಅಂದರೆ 2029ರವರೆಗೂ ಗರೀಬ್ ಕಲ್ಯಾಣ್ ಯೋಜನೆಯ ಮೂಲಕ ಜನರಿಗೆ ಪ್ರತಿ ತಿಂಗಳು 5ಕೆಜಿ ಉಚಿತ ಅಕ್ಕಿ ಸಿಗುತ್ತದೆ. ಅದರಲ್ಲಿ ಯಾವುದೇ ಬದಲಾವಣೆ ಇಲ್ಲ ಎಂದು ತಿಳಿಸಿದ್ದಾರೆ. ಈ ಮೂಲಕ ಜನರ ಆತಂಕ ಕಡಿಮೆ ಆಗಿದೆ. ಇನ್ನು 5 ವರ್ಷಗಳ ಕಾಲ ಅನ್ನಕ್ಕೆ, ಹಸಿವಿಗೆ ಯಾವುದೇ ಕೊರತೆ ಇರುವುದಿಲ್ಲ. ಸರ್ಕಾರದಿಂದ ಸಿಗುವ ಈ ಒಂದು ಸೌಲಭ್ಯವನ್ನು ಜನರು ಸಹ ಉಪಯೋಗಿಸಿಕೊಳ್ಳಬಹುದು.

ಸರ್ಕಾರಕ್ಕೆ ಬಡಜನರ ಬಗ್ಗೆ ಇರುವ ಕಾಳಜಿ ಇದರಿಂದ ಗೊತ್ತಾಗುತ್ತದೆ. ಜನರು ಕೂಡ ಇದೇ ಕಾರಣಕ್ಕೆ ಮೋದಿ ಅವರ ಸರ್ಕಾರವನ್ನೇ ಆರಿಸಿಕೊಂಡಿದ್ದಾರೆ. ಒಟ್ಟಿನಲ್ಲಿ ಇನ್ನು 5 ವರ್ಷಗಳ ಕಾಲ ಜನರಿಗೆ ಹಸಿವಿನ ಸಮಸ್ಯೆ ಅಂತೂ ಎದುರಾಗುವುದಿಲ್ಲ ಎನ್ನುವುದು ಸಂತೋಷದ ವಿಚಾರ ಆಗಿದೆ.

ಈ ಸುದ್ದಿ ಓದಿ:- IT Employees: ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುವ ಉದ್ಯೋಗಿಗಳಿಗೆ ಬೇಸರದ ಸುದ್ದಿ.!

1 ಜನವರಿ 2024 ರಿಂದ 5 ವರ್ಷಗಳವರೆಗೆ PMGKAY ಅಡಿಯಲ್ಲಿ ಉಚಿತ ಆಹಾರ ಧಾನ್ಯಗಳು (ಅಕ್ಕಿ, ಗೋಧಿ ಮತ್ತು ಒರಟಾದ ಧಾನ್ಯಗಳು/ರಾಗಿ) ಆಹಾರ ಭದ್ರತೆಯನ್ನು ಬಲಪಡಿಸುತ್ತದೆ ಮತ್ತು ಜನಸಂಖ್ಯೆಯ ಬಡ ಮತ್ತು ದುರ್ಬಲ ವರ್ಗಗಳ ಯಾವುದೇ ಆರ್ಥಿಕ ಸಂಕಷ್ಟಗಳನ್ನು ತಗ್ಗಿಸುತ್ತದೆ. ಇದು ಸಾಮಾನ್ಯ ಲಾಂಛನದ ಅಡಿಯಲ್ಲಿ 5 ಲಕ್ಷಕ್ಕೂ ಹೆಚ್ಚು ನ್ಯಾಯಬೆಲೆ ಅಂಗಡಿಗಳ ನೆಟ್‌ವರ್ಕ್ ಮೂಲಕ ಎಲ್ಲಾ ರಾಜ್ಯಗಳು/ಯುಟಿಗಳಲ್ಲಿ ಉಚಿತವಾಗಿ ಆಹಾರ ಧಾನ್ಯಗಳ ವಿತರಣೆಯಲ್ಲಿ ರಾಷ್ಟ್ರವ್ಯಾಪಿ ಏಕರೂಪತೆಯನ್ನು ಒದಗಿಸುತ್ತದೆ.

ಸರ್ಕಾರಿ ಯೋಜನೆ, ಸರ್ಕಾರಿ ಉದ್ಯೋಗಗಳು,ಮತ್ತು ಖಾಸಗಿ ಕಂಪನಿ ಉದ್ಯೋಗದ ಬಗ್ಗೆ ದೈನಂದಿನ ಮಾಹಿತಿಯನ್ನು ಪಡೆಯಲು ನಮ್ಮ Kannada Trend News WhatsApp ಗ್ರೂಪ್ ಮತ್ತು ಟೆಲಿಗ್ರಾಮ್ ಚಾನಲ್‌ಗೆ ಜಾಯಿನ್ ಆಗಿರಿ
WhatsApp Group Join Now
Telegram Group Join Now

Leave a Comment