Beautician ಉಚಿತ ಬ್ಯೂಟೀಷಿಯನ್ ತರಬೇತಿಗೆ ಅರ್ಜಿ ಆಹ್ವಾನ.!

Beautician Free Course

ಇಂದಿನ ಶತಮಾನ ವಿದ್ಯಾರ್ಹತೆಯ ಶತಮಾನವಾಗಿದೆ. ವಿದ್ಯೆಯ ಮೂಲಕ ನಮ್ಮನ್ನು ಅಳೆಯಲಾಗುತ್ತದೆ. ನಮ್ಮಲ್ಲಿರುವ ಪ್ರತಿಭೆಗಳನ್ನು ಕೌಶಲ್ಯ (Skill)ವಾಗಿ ಪರಿವರ್ತಿಸಿಕೊಂಡು ಉದ್ಯೋಗ (employment) ಸೃಷ್ಟಿಸಿಕೊಳ್ಳುವ ತರಬೇತಿಗಳ ಅವಶ್ಯಕತೆ ಇಂದಿನ ವಿದ್ಯಾರ್ಥಿಗಳಿಗೆ (students) ಇದೆ.

ಸ್ವಂತ ಉದ್ಯೋಗ (Self Employed) ಮಾಡಬೇಕು, ಸ್ವಂತ ಉದ್ಯಮ ಕಟ್ಟಿ ಬೆಳೆಸಬೇಕು ಅನ್ನೋದು ಪ್ರತಿಯೊಬ್ಬ ಯುವಕ & ಯುವತಿಯರ (young men & women) ಕನಸು (dream). ಅದರಲ್ಲೂ ಸ್ವಂತ ಬ್ಯೂಟಿ ಪಾರ್ಲರ್ (Own beauty parlour) ತೆರೆಯುವುದು ಅನೇಕರ ಕನಸು.

WhatsApp Group Join Now
Telegram Group Join Now

ಆದರೆ, ಇದಕ್ಕೆ ತರಬೇತಿ (Training) ಅತ್ಯಗತ್ಯ. ಇದೀಗ ಉಚಿತವಾಗಿ, ಈ ಬಗ್ಗೆ ತರಬೇತಿ ನೀಡಲು ಸರ್ಕಾರವೇ ಯೋಜನೆ ರೂಪಿಸಿದೆ. ಹಾಗಾದರೆ , ಈ ತರಬೇತಿಗೆ ಅರ್ಜಿ ಸಲ್ಲಿಸೋದು ಹೇಗೆ? ಈ ಉಚಿತ ತರಬೇತಿ ಶಿಬಿರಕ್ಕೆ ಯಾರೆಲ್ಲಾ ಅರ್ಜಿ ಸಲ್ಲಿಸಬಹುದು? ಎಂಬುದನ್ನು ಇಂದಿನ ಈ ಲೇಖನದಲ್ಲಿ ನೋಡೋಣ ಬನ್ನಿ…

ಈ ಸುದ್ದಿ ಓದಿ:- Gruhalakshmi: ಮಹಿಳೆಯರಿಗೆ ಗುಡ್​ ನ್ಯೂಸ್​ ಗೃಹಲಕ್ಷ್ಮಿ ಯೋಜನೆ ಹಣ ಈ ದಿನ ಜಮೆ.!

ಬೆಂಗಳೂರು ಸೇರಿದಂತೆ ರಾಮನಗರ ಹಾಗೂ ತುಮಕೂರು ಜಿಲ್ಲೆಯಲ್ಲಿ ನೆಲೆಸಿರುವ ಯುವತಿಯರು (Young women) ಹಾಗೂ ಮಹಿಳೆಯರು (Women) ಬ್ಯೂಟೀಷಿಯನ್ (Beautician) ಆಗಬೇಕು ಎಂಬ ಆಸಕ್ತಿ ಇದೆಯೇ ಇಲ್ಲಿದೆ ನೋಡಿ ನಿಮಗೊಂದು ಭರ್ಜರಿ ಅವಕಾಶ (great opportunity).

ರಾಜ್ಯ ಸರ್ಕಾರ (State Govt)ದ ವತಿಯಿಂದಲೇ ಉಚಿತ ಊಟ (Free lunch) ಮತ್ತು ವಸತಿ (Accommodation)ಯೊಂದಿಗೆ ಒಂದು ತಿಂಗಳ ಅವಧಿಯಲ್ಲಿ ಉಚಿತವಾಗಿ ಬ್ಯೂಟೀಷಿಯನ್ ತರಬೇತಿ (Beautician training for free)ಯನ್ನು ನೀಡಲಾಗುತ್ತಿದೆ. ಅ.18ರೊಳಗೆ ಅರ್ಜಿ ಸಲ್ಲಿಸಿ ತರಬೇತಿ ಪಡೆದುಕೊಂಡು, ಉದ್ಯಮಿಗಳಾಗಿ.

ಇದೊಂದು ಉತ್ತಮ ಅವಕಾಶವಾಗಿದ್ದು, ಆಸಕ್ತರು ಇದರ ಸದುಪಯೋಗ ಪಡೆದುಕೊಳ್ಳಬಹುದು ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಶಿಕ್ಷಣ ಟ್ರಸ್ಟ್ ಮತ್ತು ಕೆನರಾ ಬ್ಯಾಂಕ್‌ ಸಹಯೋಗದಲ್ಲಿ ನಡೆಸುತ್ತಿರುವ ರುಡ್ಸೆಟ್ ಸಂಸ್ಥೆಯ ವತಿಯಿಂದ ಹಮ್ಮಿಕೊಂಡಿರುವ ಬ್ಯೂಟಿ ಪಾರ್ಲರ್ ಕುರಿತ 30 ದಿನಗಳ ಉಚಿತ ತರಬೇತಿಯು ನವೆಂಬರ್ 05 ರಿಂದ ಪ್ರಾರಂಭವಾಗಲಿದೆ.

ಈ ಸುದ್ದಿ ಓದಿ:- Infosys Scholarship : ಇನ್ಫೋಸಿಸ್‌ನಿಂದ ವಿದ್ಯಾರ್ಥಿಗಳಿಗೆ ಸಿಗಲಿದೆ 1 ಲಕ್ಷ ಸ್ಕಾಲರ್ಶಿಪ್.!

ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ರಾಮನಗರ ಹಾಗೂ ತುಮಕೂರು ಜಿಲ್ಲಾ ವ್ಯಾಪ್ತಿಯ ಗ್ರಾಮೀಣ ನಿರುದ್ಯೋಗಿ ಯುವತಿಯರಿಂದ ಅರ್ಜಿ ಆಹ್ವಾನಿಸಲಾಗಿದೆ. ಈ ಜಿಲ್ಲೆಯ ನಿವಾಸಿಗಳು ಮಾತ್ರ ಉಚಿತ ತರಬೇತಿ ಪಡೆದುಕೊಳ್ಳಲು ಅರ್ಹರಾಗಿದ್ದಾರೆ.

ಮೇಲ್ಕಂಡ ನಾಲ್ಕು ಜಿಲ್ಲೆಗಳ ಆಸಕ್ತರು 18 ರಿಂದ 45 ವರ್ಷ ವಯೋಮಾನದವರಾಗಿದ್ದು, ಕನ್ನಡ ಭಾಷೆ ಓದಲು ಮತ್ತು ಬರೆಯಲು ಬಲ್ಲವರಾಗಿರಬೇಕು. ಬಿಪಿಎಲ್ ಕಾರ್ಡ್ ಅಥವಾ ಜಾಬ್ ಕಾರ್ಡ್ ಹಾಗೂ ಆಧಾರ್ ಕಾರ್ಡ್‌ಗಳನ್ನು ಹೊಂದಿರುವ ಗ್ರಾಮೀಣ ಅಭ್ಯರ್ಥಿಗಳಿಗೆ ಆದ್ಯತೆ ನೀಡಲಾಗುವುದು.

ಅರ್ಜಿ ಸಲ್ಲಿಸಲು ಅಕ್ಟೋಬರ್ 18 ಕೊನೆಯ ದಿನವಾಗಿದೆ. ತರಬೇತಿಯು ಕಡ್ಡಾಯವಾಗಿ ವಸತಿಯುತವಾಗಿದ್ದು, ತರಬೇತಿಯ ಅವಧಿಯಲ್ಲಿ ಉಚಿತವಾಗಿ ಊಟ ಮತ್ತು ವಸತಿ ಸೌಲಭ್ಯ ನೀಡಲಾಗುವುದು ಹಾಗೂ ತರಬೇತಿ ಪೂರ್ಣಗೊಂಡ ನಂತರ ಕೇಂದ್ರ ಸರ್ಕಾರದ ಗ್ರಾಮೀಣಾಭಿವೃದ್ಧಿ ಸಚಿವಾಲಯದಿಂದ ಪ್ರಮಾಣಪತ್ರ ವಿತರಿಸಲಾಗುವುದು.

ಅಗತ್ಯ ದಾಖಲಾತಿಗಳು

– ಅರ್ಜಿದಾರರ ಅಧಾರ್ ಕಾರ್ಡ ಪ್ರತಿ
– ಪೋಟೋ
– ಶೈಕ್ಷಣಿಕ ದಾಖಲಾತಿಗಳು
– ಮೊಬೈಲ್ ಸಂಖ್ಯೆ

ಆಸಕ್ತರು ಅರ್ಜಿ ಸಲ್ಲಿಸಲು ಹಾಗೂ ಹೆಚ್ಚಿನ ಮಾಹಿತಿಗಾಗಿ ರುಡ್ಸೆಟ್ ಸಂಸ್ಥೆ, ಅರಿಶಿನಕುಂಟೆ, ನೆಲಮಂಗಲ ತಾಲ್ಲೂಕು, ಬೆಂಗಳೂರು ಗ್ರಾಮಾಂತರ ಜಿಲ್ಲೆ, ಮೊಬೈಲ್ ಸಂಖ್ಯೆ: 9380162042, 9740982585, 9113880324 ಅನ್ನು ಸಂಪರ್ಕಿಸಬಹುದಾಗಿದೆ ಎಂದು ರುಡ್ಸೆಟ್ ಸಂಸ್ಥೆಯ ಬೆಂಗಳೂರು ಶಾಖೆಯ ನಿರ್ದೇಶಕರಾದ ರವಿಕುಮಾರ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಸರ್ಕಾರಿ ಯೋಜನೆ, ಸರ್ಕಾರಿ ಉದ್ಯೋಗಗಳು,ಮತ್ತು ಖಾಸಗಿ ಕಂಪನಿ ಉದ್ಯೋಗದ ಬಗ್ಗೆ ದೈನಂದಿನ ಮಾಹಿತಿಯನ್ನು ಪಡೆಯಲು ನಮ್ಮ Kannada Trend News WhatsApp ಗ್ರೂಪ್ ಮತ್ತು ಟೆಲಿಗ್ರಾಮ್ ಚಾನಲ್‌ಗೆ ಜಾಯಿನ್ ಆಗಿರಿ
WhatsApp Group Join Now
Telegram Group Join Now

Leave a Comment