KPSC Recruitment
ಜೂನಿಯರ್ ಇಂಜಿನಿಯರ್ (Junior Engineer), ಇಂಡಸ್ಟ್ರಿಯಲ್ ಎಕ್ಸ್‌ಟೆನ್ಶನ್ ಆಫೀಸರ್ (Industrial Extension Officer) ಹುದ್ದೆಗಳಿಗೆ ಕೆಪಿಎಸ್‌ಸಿ (KPSC- Karnataka Public Service Commission) ಅರ್ಜಿಯನ್ನು ಮತ್ತೆ ಕರೆದಿದೆ. ಕರ್ನಾಟಕ ಸರ್ಕಾರದಲ್ಲಿ ಉತ್ತಮ ಕೆಲಸ ಹುಡುಕುತ್ತಿರುವರಿಗೆ ಇದು ಉತ್ತಮ ಸಮಯವಾಗಿದೆ. ಹಾಗಿದ್ರೆ ಬನ್ನಿ ಯಾವೆಲ್ಲಾ ಹುದ್ದೆಗಳಿಗೆ ಏನೆಲ್ಲಾ ವಿದ್ಯಾರ್ಹತೆ? ವಯೋಮಿತಿ ವಿವರ, ಸಂಬಳ ವಿವರ ಸೇರಿದಂತೆ ಅಗತ್ಯ ಮಾಹಿತಿಯನ್ನು ಇಂದಿನ ಈ ಲೇಖನದಲ್ಲಿ ತಿಳಿಯೋಣ.
KPSC ಹುದ್ದೆಯ ವಿವರಗಳು
ಅಂತರ್ಜಲ ನಿರ್ದೇಶನಾಲಯ 5, ಪೌರಾಡಳಿತ ನಿರ್ದೇಶನಾಲಯ 84, ಸಾರ್ವಜನಿಕ ಗ್ರಂಥಾಲಯ ಇಲಾಖೆ 34 ಕೈಗಾರಿಕೆಗಳು ಮತ್ತು ವಾಣಿಜ್ಯ ಇಲಾಖೆ 63, ಜಲಸಂಪನ್ಮೂಲ ಇಲಾಖೆ 300 ಹುದ್ದೆಗಳಿಗೆ ಇದೀಗ ಅರ್ಜಿ ಆಹ್ವಾನ ಮಾಡಲಾಗಿದೆ.
ಹುದ್ದೆಯ ಹೆಸರು ಮತ್ತು ಹುದ್ದೆಯ ಸಂಖ್ಯೆ
ಜೂನಿಯರ್ ಇಂಜಿನಿಯರ್ 341, ನೀರು ಸರಬರಾಜುದಾರರು 4, ಅಧೀನ ನೀರು ಸರಬರಾಜುದಾರರು 5, ಕಿರಿಯ ಆರೋಗ್ಯ ನಿರೀಕ್ಷಕರು 39, ಸಹಾಯಕ ಗ್ರಂಥಪಾಲಕರು 21, ಕೈಗಾರಿಕಾ ವಿಸ್ತರಣಾ ಅಧಿಕಾರಿ 63, ಗ್ರಂಥಪಾಲಕ 13.
ಅರ್ಹತಾ ಮಾನದಂಡ
ಜೂನಿಯರ್ ಇಂಜಿನಿಯರ್ ಹುದ್ದೆಗೆ ಡಿಪ್ಲೊಮಾ, ಇಂಜಿನಿಯರಿಂಗ್ ಪದವಿ, ನೀರು ಸರಬರಾಜುದಾರರು, ಸಹಾಯಕ ನೀರು ಸರಬರಾಜುದಾರರು ಹುದ್ದೆಗೆ ಎಸೆಸ್‌ಎಲ್‌ಸಿ, ಐಟಿಐ, ಕಿರಿಯ ಆರೋಗ್ಯ ನಿರೀಕ್ಷಕರು ಹುದ್ದೆಗೆ ಎಸ್‌ಎಸ್‌ಎಲ್‌ಸಿ, ಪಿಯುಸಿ, ಡಿಪ್ಲೊಮಾ, ಸಹಾಯಕ ಗ್ರಂಥಪಾಲಕರು ಹುದ್ದೆಗೆ ಗ್ರಂಥಾಲಯ ವಿಜ್ಞಾನದಲ್ಲಿ ಡಿಪ್ಲೊಮಾ.
ಗ್ರಂಥಾಲಯ ಮತ್ತು ಮಾಹಿತಿ ವಿಜ್ಞಾನದಲ್ಲಿ ಡಿಪ್ಲೊಮಾ ಹಾಗೂ ಕೈಗಾರಿಕಾ ವಿಸ್ತರಣಾ ಅಧಿಕಾರಿ ಹುದ್ದಗೆ ವಿಜ್ಞಾನ ಅಥವಾ ವಾಣಿಜ್ಯ ಅಥವಾ ವ್ಯವಹಾರ ಆಡಳಿತದಲ್ಲಿ ಪದವಿ, ಎಂಜಿನಿಯರಿಂಗ್ ಪದವಿ, ಬಿಬಿಎಂ, ಬಿ ಟೆಕ್, ಲೈಬ್ರರಿಯನ್‌ಗೆ ಬ್ಯಾಚುಲರ್ ಆಫ್ ಲೈಬ್ರರಿ ಸೈನ್ಸ್, ಬ್ಯಾಚುಲರ್ ಆಫ್ ಲೈಬ್ರರಿ & ಇನ್ಫರ್ಮೇಷನ್ ಸೈನ್ಸ್, BLISc, ಮಾಸ್ಟರ್ ಆಫ್ ಲೈಬ್ರರಿ ಸೈನ್ಸ್, ಮಾಸ್ಟರ್ ಆಫ್ ಲೈಬ್ರರಿ & ಇನ್ಫರ್ಮೇಷನ್ ಸೈನ್ಸ್, MLISc ವಿದ್ಯಾರ್ಹತೆ ಮಾಡಿರಬೇಕು.
ವಯೋಮಿತಿ ವಿವರ
ಕರ್ನಾಟಕ ಲೋಕಸೇವಾ ಆಯೋಗದ ನೇಮಕಾತಿ ಅಧಿಸೂಚನೆಯ ಪ್ರಕಾರ, ಅಭ್ಯರ್ಥಿಯು 28-ಮೇ-2024 ರಂತೆ ಕನಿಷ್ಠ 18 ವರ್ಷಗಳು ಮತ್ತು ಗರಿಷ್ಠ 35 ವರ್ಷಗಳನ್ನು ಹೊಂದಿರಬೇಕು ಎಸ್‌ಸಿ, ಎಸ್‌ಟಿ /ವರ್ಗ-1 ಅಭ್ಯರ್ಥಿಗಳಿಗೆ 05 ವರ್ಷ ಸಡಿಲಿಕೆ, ವರ್ಷ-2ಎ/2ಬಿ/3ಎ/3ಬಿ ಅಭ್ಯರ್ಥಿಗಳಿಗೆ 03 ವರ್ಷಗಳು ಪಿ ಡಬ್ಲ್ಯೂ ಡಿ /ವಿಧವೆ ಅಭ್ಯರ್ಥಿಗಳಿಗೆ 10 ವರ್ಷ ವಯೋಮಿತಿ ಸಡಿಲಿಕೆ ಇದೆ.
ಅರ್ಜಿ ಶುಲ್ಕ ಎಷ್ಟು ಪಾವತಿ ಮಾಡಬೇಕು?
– ಎಸ್‌ಸಿ, ಎಸ್‌ಟಿ /ವರ್ಗ-1 ಹಾಗೂ ಪಿ ಡಬ್ಲ್ಯೂ ಡಿ ಅಭ್ಯರ್ಥಿಗಳಿಗೆ ಯಾವುದೇ ಅರ್ಜಿ ಶುಲ್ಕ ಇಲ್ಲ. ಮಾಜಿ ಸೈನಿಕ ಅಭ್ಯರ್ಥಿಗಳು 50 ರೂ.ಗಳು,
– ವರ್ಗ -2ಎ/2ಬಿ/3ಎ/3ಬಿ ಅಭ್ಯರ್ಥಿಗಳು 300 ರೂ.ಗಳನ್ನು ಪಾವತಿ ಮಾಡಬೇಕು. ಜೊತೆಗೆ ಸಾಮಾನ್ಯ ಅಭ್ಯರ್ಥಿಗಳು 600 ರೂ.ಗಳನ್ನು ಪಾವತಿ ಮಾಡಬೇಕಿದೆ.
ವೇತನ ವಿವರಗಳು:-
ಜೂನಿಯರ್ ಇಂಜಿನಿಯರ್ ಹುದ್ದೆಗೆ 33450-62600 ರೂ.ಗಳು, ನೀರು ಸರಬರಾಜುದಾರರು ಹುದ್ದೆಗೆ 27650-52650 ರೂ.ಗಳು, ಸಹಾಯಕ ನೀರು ಸರಬರಾಜುದಾರರು ಹುದ್ದೆಗೆ 21400-42000 ರೂ.ಗಳು, ಕಿರಿಯ ಆರೋಗ್ಯ ನಿರೀಕ್ಷಕರು ಹುದ್ದೆಗೆ 23500-47650 ರೂ.ಗಳು ಮತ್ತು ಸಹಾಯಕ ಗ್ರಂಥಪಾಲಕ ಹುದ್ದಗೆ 30350-58250 ರೂ.ಗಳು, ಕೈಗಾರಿಕಾ ವಿಸ್ತರಣಾಧಿಕಾರಿ ಹುದ್ದೆಗೆ 33450-62600 ರೂ.ಗಳು, ಗ್ರಂಥಪಾಲಕ ಹುದ್ದೆಗೆ ಆಯ್ಕೆ ಆದರೆ 37900-70850 ರೂ.ಗಳ ಸಂಬಳ ನೀಡಲಾಗುತ್ತದೆ.