Home ಮನೆ ಕಟ್ಟಲು ಸರ್ಕಾರದಿಂದ 6.5 ಲಕ್ಷ ಸಹಾಯಧನ ಆಸಕ್ತರು ಅರ್ಜಿ ಸಲ್ಲಿಸಿ.!

Home

ಮನೆ ಎನ್ನುವುದು ಒಂದು ಮೂಲಭೂತ ಅವಶ್ಯಕತೆ. ಪ್ರತಿಯೊಂದು ಕುಟುಂಬಕ್ಕೂ ಕೂಡ ಸ್ವಂತ ಸೂರಿನ ಭದ್ರತೆ ಇರಬೇಕು ಎನ್ನುವುದು ಸರ್ಕಾರಗಳ ಧ್ಯೇಯ ಕೂಡ ಆಗಿದೆ. ಹೀಗಾಗಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ವತಿಯಿಂದ ಅನೇಕ ವಸತಿ ನಿಗಮ ಯೋಜನೆಗಳನ್ನು (Housing Schemes) ಜಾರಿಗೊಳಿಸಲಾಗಿದೆ. ಈ ನಿಟ್ಟಿನಲ್ಲಿ ಪ್ರಧಾನಮಂತ್ರಿ ಆವಾಸ್ ಯೋಜನೆಯನ್ನು (Pradhan Mantri Avas Scheme) ಪ್ರಮುಖವಾಗಿ ಹೆಸರಿಸಬಹುದಾಗಿದೆ.

WhatsApp Group Join Now
Telegram Group Join Now

ದೇಶದಾದ್ಯಂತ ಸುಮಾರು 2.5 ಕೋಟಿಗಿಂತ ಹೆಚ್ಚು ಕುಟುಂಬಗಳು ಪ್ರಧಾನಮಂತ್ರಿ ಆವಾಸ್ ಯೋಜನೆಯಡಿ ಅನುದಾನ ಪಡೆದು ಸ್ವಂತ ಮನೆ ಕಟ್ಟಿಕೊಂಡು ನೆಮ್ಮದಿಯಾಗಿದ್ದಾರೆ. ಈಗ ಮತ್ತೊಮ್ಮೆ ಪ್ರಧಾನ ಮಂತ್ರಿ ಆವಾಸ್ ಯೋಜನೆಯಡಿ ಸಾಲ ಸೌಲಭ್ಯಕ್ಕಾಗಿ ಹಾಗೂ ಸಹಾಯಧನಕ್ಕಾಗಿ ಅರ್ಜಿ ಆಹ್ವಾನ ಮಾಡಲಾಗಿದೆ. ನೀವು ಕೂಡ ಈ ಬಗ್ಗೆ ಆಸಕ್ತಿ ಹೊಂದಿದ್ದರೆ ಯೋಜನೆ ಕುರಿತಾದ ಪ್ರಮುಖ ಮಾಹಿತಿಗಳು ಹೀಗಿವೆ ನೋಡಿ.

ಈ ಸುದ್ದಿ ಓದಿ:- ಮಹಿಳೆಯರಿಗೆ ಸರ್ಕಾರದಿಂದ ಉಚಿತ ಹೊಲಿಗೆ ಯಂತ್ರ ವಿತರಣೆ, ಅರ್ಜಿ ಸಲ್ಲಿಸುವುದು ಹೇಗೆ.? ಏನೆಲ್ಲಾ ದಾಖಲೆಗಳು ಬೇಕು ನೋಡಿ.!

ಯೋಜನೆ ಹೆಸರು:- ಪ್ರಧಾನಮಂತ್ರಿ ಆವಾಸ್ ಯೋಜನೆ
ಯೋಜನೆಯ ಉದ್ದೇಶ:- ದೇಶದಲ್ಲಿರುವ ಬಡವರಿಗೆ ಕಡಿಮೆ ಬಡ್ಡಿ ದರದಲ್ಲಿ ಮನೆ ಕಟ್ಟಿಸಿಕೊಳ್ಳಲು ಸೌಲಭ್ಯ ಒದಗಿಸಿಕೊಟ್ಟು ಪ್ರತಿಯೊಂದು ಕುಟುಂಬಕ್ಕೂ ಸ್ವಂತ ಸೂರಿನ ಆಸರೆ ದೊರಕಿಸಿಕೊಡುವುದು.

ಜಾರಿಯಾದ ವರ್ಷ:- ಜೂನ್ 25, 2015 (ಇದಕ್ಕೂ ಹಿಂದೆ ಈ ವಸತಿ ಯೋಜನೆಯನ್ನು ಇಂದಿರಾಗಾಂಧಿ ವಸತಿ ಯೋಜನೆ ಎನ್ನುವ ಹೆಸರಿನಲ್ಲಿ ಕರೆಯಲಾಗುತ್ತಿತ್ತು).

ಅಧಿಕೃತ ವೆಬ್ ಸೈಟ್ – https://pmaymis.gov.in/

ಸಲಹೆ ಮತ್ತು ದೂರು ನೀಡಲು:-
* ಟೋಲ್ ಫ್ರೀ ಸಂಖ್ಯೆಗಳು – 1800-11-6163, 1800-11-3377, 1800-11-3388
* ವೆಬ್ಸೈಟ್ ವಿಳಾಸ – grievance-pmay@gov.in

ಈ ಸುದ್ದಿ ಓದಿ:- LIC ಸಂಸ್ಥೆಯಲ್ಲಿ ಉದ್ಯೋಗವಕಾಶ ಆಸಕ್ತರು ಅರ್ಜಿ ಸಲ್ಲಿಸಿ.! ವೇತನ 88,667/-

ಕಚೇರಿ ವಿಳಾಸ:-
* ವಸತಿ ಮತ್ತು ನಗರ ವ್ಯವಹಾರಗಳ ಸಚಿವಾಲಯ, ನಿರ್ಮಾಣ್ ಭವನ್, ನವದೆಹಲಿ – 110011.
* ಕಛೇರಿ ಸಂಪರ್ಕ ಸಂಖ್ಯೆ – 011 2306 3285
* ಕಚೇರಿ ಇ-ಮೇಲ್ ವಿಳಾಸ – pmaymis-mhupa@gov.in

ಯೋಚನೆ ಕುರಿತ ಪ್ರಮುಖ ಸಂಗತಿಗಳು:-
* ಪ್ರಧಾನಮಂತ್ರಿ ಆವಾಸ್ ಯೋಜನೆಯಲ್ಲಿ 2 ವಿಧ
1. ಪ್ರಧಾನಮಂತ್ರಿ ಅವಾಸ್ ಯೋಜನೆ ನಗರ
2. ಪ್ರಧಾನ ಮಂತ್ರಿ ಆವಾಸ್ ಯೋಜನೆ ಗ್ರಾಮೀಣ

* ಪ್ರಧಾನಮಂತ್ರಿ ಆವಾಸ್ ಯೋಜನೆಯಡಿ ಗ್ರಾಮೀಣ ಪ್ರದೇಶದಲ್ಲಿ ಮನೆ ಕಟ್ಟಿಕೊಳ್ಳುವವರಿಗೆ 1.2 ಲಕ್ಷ ಸಹಾಯಧನ ನೀಡಲಾಗುತ್ತದೆ
* ಗುಡ್ಡಗಾಡು ಪ್ರದೇಶದಲ್ಲಿ ಮನೆ ಕಟ್ಟಿಕೊಳ್ಳುವವರಿಗೆ 1.3 ಲಕ್ಷ ಸಹಾಯಧನ ನೀಡಲಾಗುತ್ತದೆ
* ರಾಜ್ಯ ಮತ್ತು ಕೇಂದ್ರಾಡಳಿತ ಪ್ರದೇಶಗಳನ್ನು ಒಂದು ಘಟಕವಾಗಿ ಪರಿಗಣಿಸಿ ಈ ಭಾಗಗಳಲ್ಲಿ ಕೂಡ ಮನೆ ನಿರ್ಮಾಣ ಮಾಡಲು ಸರ್ಕಾರ ನಿರ್ಧರಿಸಿದೆ.

ಈ ಸುದ್ದಿ ಓದಿ:- ರೈತರಿಗೆ ಉಚಿತ ಮೇವಿನ ಬಿತ್ತನೆ ಬೀಜ ಕಿಟ್ ವಿತರಣೆ.!

* ಆಯಾ ರಾಜ್ಯ ಸರ್ಕಾರ ಮತ್ತು ಕೇಂದ್ರಾಡಳಿತ ಪ್ರದೇಶಗಳಿಂದ ಈ ಯೋಜನೆಗೆ ಹಣ ವರ್ಗಾವಣೆ ಮಾಡಲಾಗುತ್ತಿದ್ದು, ಹಂತ ಹಂತವಾಗಿ ಇದು ಪೂರ್ತಿ ಗೊಳ್ಳುತ್ತದೆ ಅಂತಿಮವಾಗಿ ಗ್ರಾಮ ಪಂಚಾಯಿತಿ ಕಡೆಯಿಂದ ಫಲಾನುಭವಿ ಖಾತೆಗೆ ಹಣ ತಲುಪುತ್ತದೆ.
* ಯೋಜನೆಯ ಮೂಲಕ ಬಡವರಿಗೆ ಸಹಾಯಧನ ಮಾತ್ರವಲ್ಲದೆ ನಗರ ಪ್ರದೇಶಗಳಲ್ಲಿ ವಾಸಿಸುವವರಿಗೆ ಮನೆ ಖರೀದಿಗೆ / ನಿರ್ಮಾಣಕ್ಕೆ ಸಾಲ ಸೌಲಭ್ಯ ಕೂಡ ಸಿಗುತ್ತದೆ.

* ಈ ಯೋಜನೆಯಡಿ ಇದುವರೆಗೂ 2.6 ಕೋಟಿ ಗೃಹಗಳನ್ನು ನಿರ್ಮಿಸಲು ಅನುಮತಿ ಕೊಡಲಾಗುತ್ತದೆ ಇದರಲ್ಲಿ 2.5 ಕೋಟಿ ಮನೆಗಳು ಪೂರ್ತಿಗೊಂಡಿವೆ. ಮಾರ್ಚ್ ಅಂತ್ಯದ ಒಳಗೆ ಉಳಿದ ಮನೆಗಳು ಸ್ಯಾಂಕ್ಷನ್ ಆಗಲಿದೆ ಎಂದು ಭರವಸೆ ನೀಡಲಾಗಿದೆ
* ಈ ಯೋಜನೆಯ ಸಹಾಯಧನ ಬಯಸುವವರು ನೇರವಾಗಿhttps://pmay-urban.gov.in ಭೇಟಿ ಕೊಡಿ.

ಈ ಸುದ್ದಿ ಓದಿ:- SBI ಬ್ಯಾಂಕ್ ನಲ್ಲಿ ಅಕೌಂಟ್ ಇದ್ದವರಿಗೆ ಗುಡ್ ನ್ಯೂಸ್.!
ಸರ್ಕಾರಿ ಯೋಜನೆ, ಸರ್ಕಾರಿ ಉದ್ಯೋಗಗಳು,ಮತ್ತು ಖಾಸಗಿ ಕಂಪನಿ ಉದ್ಯೋಗದ ಬಗ್ಗೆ ದೈನಂದಿನ ಮಾಹಿತಿಯನ್ನು ಪಡೆಯಲು ನಮ್ಮ needs of ಕನ್ನಡ WhatsApp ಗ್ರೂಪ್ ಮತ್ತು ಟೆಲಿಗ್ರಾಮ್ ಚಾನಲ್‌ಗೆ ಜಾಯಿನ್ ಆಗಿರಿ
WhatsApp Group Join Now
Telegram Group Join Now

Leave a Comment