Sandya Suraksha ಸಂಧ್ಯಾ ಸುರಕ್ಷಾ ಯೋಜನೆಗೆ ಅರ್ಜಿ ಸಲ್ಲಿಸಿ.! ಪ್ರತಿ ತಿಂಗಳು ಸರ್ಕಾರದಿಂದ 1200 ಹಣ ಪಡೆಯಿರಿ.!

Sandya Suraksha

65 ವರ್ಷ ಮೇಲ್ಪಟ್ಟ ಅಥವಾ ಅದಕ್ಕಿಂತ ಹೆಚ್ಚಿನ ವಯಸ್ಸಿನ ಹಿರಿಯ ಜೀವಗಳನ್ನು ಆರ್ಥಿಕ ಸಂಕಷ್ಟದಿಂದ ಪಾರು ಮಾಡುವ ದೆಸೆಯಲ್ಲಿ ಸಂಧ್ಯಾ ಸುರಕ್ಷಾ ಯೋಜನೆಯನ್ನು ದಿನಾಂಕ 02.07.2007ರಿಂದ ಜಾರಿ ಮಾಡಲಾಗಿದೆ.

ಈ ಯೋಜನೆಯ ಮೂಲಕ ಈ ಮೇಲೆ ತಿಳಿಸಿದಂತೆ ಮನದಂಡಗಳನ್ನು ಪೂರೈಸುವ ಹಿರಿಯ ಜೀವಕ್ಕೆ ಸರ್ಕಾರದ ಕಡೆಯಿಂದ ಪ್ರತಿ ತಿಂಗಳು ರೂ.1,200 ಮಾಸಾಶನ ನೀಡುವ ಉದ್ದೇಶವನ್ನು ಸರ್ಕಾರ ಹೊಂದಿದೆ. ಯಾರು ಈ ಯೋಜನೆಯ ನೆರವು ಪಡೆಯಲು ಅರ್ಹರಾಗಿದ್ದಾರೆ? ಏನೆಲ್ಲ ದಾಖಲೆಗಳನ್ನು ನೀಡಬೇಕು? ಎಲ್ಲಿ ಅರ್ಜಿ ಸಲ್ಲಿಸಬೇಕು? ಇನ್ನಿತರ ಕಂಡಿಷನ್ ಗಳು ಏನು? ಎನ್ನುವ ಪೂರ್ತಿ ಮಾಹಿತಿ ತಿಳಿದುಕೊಳ್ಳಲು ಈ ಲೇಖನವನ್ನು ಕೊನೆಯವರೆಗೂ ಓದಿ.

WhatsApp Group Join Now
Telegram Group Join Now

ಯಾರು ಈ ಮಾಸಾಶನ ಪಡೆದುಕೊಳ್ಳಲು ಅರ್ಜಿ ಸಲ್ಲಿಸಬಹುದು:-

* ಸಣ್ಣ ರೈತರು
* ಅತಿ ಸಣ್ಣ ರೈತರು
* ಕೃಷಿ ಕಾರ್ಮಿಕರು
* ನೇಕಾರರು
* ಮೀನುಗಾರರು
* ಅಸಂಘಟಿತ ವಲಯದಲ್ಲಿ ದುಡಿಯುವ ಎಲ್ಲಾ ಕಾರ್ಮಿಕರು (ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಕಾರ್ಡ್ ಹೊಂದಿದ್ದು ಈಗಾಗಲೇ ಪಿಂಚಣಿ ಪಡೆಯುತ್ತಿದ್ದರೆ 1996ರ ಆಕ್ಟ್ ಪ್ರಕಾರ ಇವರನ್ನು ಹೊರತುಪಡಿಸಿ)

ಅರ್ಹತಾ ಮಾನದಂಡ:-

* ಪತಿ ಮತ್ತು ಪತ್ನಿ ಇಬ್ಬರ ಸಂಯೋಜಿತ ವಾರ್ಷಿಕ ಆದಾಯವು ರೂ.32,000 ಮೀರಿರಬಾರದು
* ಪತಿ ಹಾಗೂ ಪತ್ನಿಯ ಸಂಯೋಜಿತ ಠೇವಣಿ ಮೊತ್ತ ರೂ.10,000 ಮೀರಿರಬಾರದು (ಯಾವುದೇ ಬ್ಯಾಂಕ್ ಅಥವಾ ಇನ್ನಿತರ ಹಣಕಾಸು ಸಂಸ್ಥೆಗಳಲ್ಲಿ ಇಡುವ FD)
* ಯಾವುದೇ ಖಾಸಗಿ ಅಥವಾ ಸರ್ಕಾರಿ ಕಛೇರಿಗಳಿಂದ / ಕಂಪನಿಗಳಿಂದ ಮಾಸಿಕ ಪಿಂಚಣಿ ಪಡೆಯುತ್ತಿರಬಾರದು
* ಫಲಾನುಭವಿಗಳಿಗೆ ಗಂಡು ಮಕ್ಕಳಿದ್ದು ಒಂದು ವೇಳೆ ಅವರು ಪೋಷಕರನ್ನು ನೋಡಿಕೊಳ್ಳದೆ ಇದ್ದರೆ ಅಂತಹ ಪೋಷಕರು ಕೂಡ ಈ ಯೋಜನೆಗೆ ಅರ್ಹರಾಗಿರುತ್ತಾರೆ.

ಬೇಕಾಗುವ ದಾಖಲೆಗಳು:-

* ವಾಸಸ್ಥಳ ದೃಢೀಕರಣ ಪತ್ರ (ಹತ್ತಿರದಲ್ಲಿರುವ ಗ್ರಾಮ ಒನ್ / ಕರ್ನಾಟಕ ಒನ್ / ಬೆಂಗಳೂರು ಒನ್ ಅಥವಾ ಅಟಲ್ ಜಿ ಜನಸ್ನೇಹಿ ಕೇಂದ್ರದಲ್ಲಿ ಅರ್ಜಿ ಸಲ್ಲಿಸಿ ಪಡೆದುಕೊಳ್ಳಬಹುದು)
* ವಯಸ್ಸಿನ ದೃಢೀಕರಣ ದಾಖಲೆ (ಶಾಲಾ ಅಂಕಪಟ್ಟಿ / ವರ್ಗಾವಣೆ ಪ್ರಮಾಣ ಪತ್ರ / ಆಧಾರ್ ಕಾರ್ಡ್ / ವೋಟರ್ ಐಡಿ / ಡ್ರೈವಿಂಗ್ ಲೈಸೆನ್ಸ್ ಇತ್ಯಾದಿಗಳಲ್ಲಿ ಯಾವುದಾದರು ಒಂದು)
* ಅಂಚೆ ಕಚೇರಿ ಅಥವಾ ಉಳಿತಾಯ ಖಾತೆಯ ವಿವರಗಳು
* ಆಧಾರ್ ಕಾರ್ಡ್
* ಪಡಿತರ ಚೀಟಿ ಸಂಖ್ಯೆ

ಸಿಗುವ ಸಹಾಯಧನ:-

ಪ್ರತಿ ತಿಂಗಳು ನೀವು ನೀಡುವ ಬ್ಯಾಂಕ್ ಅಥವಾ ಅಂಚೆ ಕಚೇರಿ ಖಾತೆಗೆ ಸರ್ಕಾರದ ಕಡೆಯಿಂದ ರೂ.1200 ಪಿಂಚಣಿಯಾಗಿ DBT ಮೂಲಕ ಜಮೆ ಆಗುತ್ತದೆ.

ಎಲ್ಲಿ ಅರ್ಜಿ ಸಲ್ಲಿಸಬೇಕು:-

* ಈ ಮೇಲೆ ತಿಳಿಸಿದಂತಹ ಮಾನದಂಡಗಳನ್ನು ಪೂರೈಸುವವರು ಸೂಚಿಸಿರುವ ಎಲ್ಲಾ ದಾಖಲೆಗಳನ್ನು ತೆಗೆದುಕೊಂಡು ಹತ್ತಿರದಲ್ಲಿರುವ ಅಟಲ್ ಜಿ ಜನಸ್ನೇಹಿ ಕೇಂದ್ರಕ್ಕೆ ಹೋಗಿ ಸಂಧ್ಯಾ ಸುರಕ್ಷಾ ಯೋಜನೆಗೆ ಅರ್ಜಿ ಸಲ್ಲಿಸಬಹುದು. ಇದು ಆನ್ಲೈನ್ನಲ್ಲಿ ಅರ್ಜಿ ಸಲ್ಲಿಸುವ ಸುಲಭ ವಿಧಾನವಾಗಿದೆ. ಅರ್ಜಿ ಸಲ್ಲಿಸಿದಾಗ ನೀಡುವ ರೆಫರೆನ್ಸ್ ನಂಬರ್ ಮೂಲಕ ನಿಮ್ಮ ಅರ್ಜಿಯ ಸ್ಟೇಟಸ್ ಟ್ರ್ಯಾಕ್ ಮಾಡಬಹುದು.

* ನಾಡಕಚೇರಿ ಅಥವಾ ತಹಶೀಲ್ದಾರ್ ಕಚೇರಿಯಲ್ಲಿ ಆಫ್ಲೈನ್ ನಲ್ಲಿ ಅರ್ಜಿ ಸಲ್ಲಿಸಬಹುದು
* ಆಯಾ ಗ್ರಾಮ ಪಂಚಾಯತಿಯಲ್ಲಿ ಈ ಬಗ್ಗೆ ವಿಚಾರಿಸಿದರೆ ಹೆಚ್ಚಿನ ಮಾಹಿತಿ ಸಿಗುತ್ತದೆ. ಗ್ರಾಮ ಒನ್, ಕರ್ನಾಟಕ ಒನ್ ಅಥವಾ ಬೆಂಗಳೂರು ಒನ್ ಕೇಂದ್ರಗಳಲ್ಲಿ ಕೂಡ ಅರ್ಜಿ ಸಲ್ಲಿಸುವುದಕ್ಕೆ ಅವಕಾಶ ಇರುತ್ತದೆ

ಸರ್ಕಾರಿ ಯೋಜನೆ, ಸರ್ಕಾರಿ ಉದ್ಯೋಗಗಳು,ಮತ್ತು ಖಾಸಗಿ ಕಂಪನಿ ಉದ್ಯೋಗದ ಬಗ್ಗೆ ದೈನಂದಿನ ಮಾಹಿತಿಯನ್ನು ಪಡೆಯಲು ನಮ್ಮ needs of ಕನ್ನಡ WhatsApp ಗ್ರೂಪ್ ಮತ್ತು ಟೆಲಿಗ್ರಾಮ್ ಚಾನಲ್‌ಗೆ ಜಾಯಿನ್ ಆಗಿರಿ
WhatsApp Group Join Now
Telegram Group Join Now

Leave a Comment