Army
ಈಗಿನ ಕಾಲದಲ್ಲಿ ಸರ್ಕಾರಿ ಹುದ್ದೆ ಪಡೆಯುವುದು ಅಷ್ಟು ಸುಲಭವಲ್ಲ ಸ್ಪರ್ಧಾತ್ಮಕ ಜಗತ್ತಿನಲ್ಲಿ ಪ್ರತಿಕ್ಷೇತ್ರದಲ್ಲೂ ವಿಪರೀತ ಕಾಂಪಿಟೇಶನ್ ಇದೆ ಇಲ್ಲಿ ವಿದ್ಯಾಭ್ಯಾಸಕ್ಕಾಗಿ ಹಣವನ್ನು ಅಥವಾ ಉದ್ಯೋಗ ಮಾಡುವುದಕ್ಕೆ ಬಿಡಬೇಕಾದಂತಹ ಅನಿವಾರ್ಯ ಸಂದರ್ಭದಲ್ಲಿ ಆದರೆ ಕೆಲವರಿಗೆ ಮಾತ್ರ ಕೈತುಂಬ ಸಂಬಳದ ಜೊತೆಗೆ ವಿದ್ಯಾಭ್ಯಾಸವನ್ನು ಮುಂದುವರಿಸಲು ಕೂಡ ಹುಟ್ಟಿಯಲ್ಲಿ ಅವಕಾಶಗಳಿರುತ್ತವೆ.
ಸರ್ಕಾರಿ ಹುದ್ದೆ ಮಾಡಿಕೊಂಡೆ ಇದನ್ನು ಪೂರೈಸಬಹುದಾದಂತಹ ಅವಕಾಶಗಳು ಕೂಡ ಸಿಗುತ್ತವೆ ನೀವು ಈ ಆಸಕ್ತರಾಗಿದ್ದರೆ ಲೇಖನವನ್ನು ಕೊನೆಯವರೆಗೂ ಓದಿ ಯಾಕೆಂದರೆ ಭಾರತೀಯ ಸೇನೆಯು PUC ಪಾಸಾದ ಅಭ್ಯರ್ಥಿಗಳಿಗೆ ರೂ. 56,100 ಮಾಸಿಕ ಸ್ಟೈಫನ್ ಜೊತೆಗೆ ಇಂಜಿನಿಯರಿಂಗ್ ತರಬೇತಿ ನೀಡಿ ನಂತರ ಉನ್ನತ ಹುದ್ದೆಯಲ್ಲಿ ಮುಂದುವರಿಯಲು ಅವಕಾಶ ಮಾಡಿಕೊಡುತ್ತಿದೆ. ಯಾರೆಲ್ಲಾ ಅರ್ಹರು ಏನೆಲ್ಲಾ ಕಂಡಿಷನ್ ಇದೆ ಅಪ್ಲೈ ಮಾಡುವುದು ಹೇಗೆ ಇಲ್ಲಿದೆ ನೋಡಿ ಡೀಟೇಲ್ಸ್.
ನೇಮಕಾತಿ ಸಂಸ್ಥೆ:- ಭಾರತೀಯ ಸೇನೆ
ಹುದ್ದೆ ಹೆಸರು:- ಭಾರತೀಯ ಸೇನೆಯ ಟೆಕ್ನಿಕಲ್ ಎಂಟ್ರಿ ಸ್ಕೀಮ್ ನಲ್ಲಿ ತರಬೇತಿದಾರ (TED)
ವೇತನ ಶ್ರೇಣಿ:-
* ಮೂರು ವರ್ಷಗಳವರೆಗೆ ಮಾಸಿಕವಾಗಿ ರೂ. 56,100 ಸ್ಟೈಫಂಡ್ ಮತ್ತು ಇತರ ಭತ್ಯೆಗಳು ಇರುತ್ತದೆ
* ನಾಲ್ಕು ವರ್ಷಗಳ ತರಬೇತಿ ಬಳಿಕ ಲೆಫ್ಟಿನೆಂಟ್ ಹುದ್ದೆಗೆ ಆಯ್ಕೆ ಮಾಡಲಾಗುತ್ತದೆ.
ಅರ್ಹತೆಗಳು ಮತ್ತು ಕಂಡಿಷನ್ ಗಳು:-
* 10+2 ಪಾಸಾಗಿರುವ ಪುರುಷ ಅಭ್ಯರ್ಥಿಗಳು ಮಾತ್ರ ಅರ್ಜಿ ಸಲ್ಲಿಸಬಹುದು.
* 12ನೇ ತರಗತಿಯಲ್ಲಿ ಭೌತಶಾಸ್ತ್ರ, ರಸಾಯನಶಾಸ್ತ್ರ ಹಾಗೂ ಗಣಿತ ವಿಷಯಗಳನ್ನು ಅಧ್ಯಯನ ಮಾಡಿರಬೇಕು.
* 12ನೇ ತರಗತಿಯಲ್ಲಿ, ಮೇಲೆ ಕೆಲಸದ ಎಲ್ಲಾ ವಿಷಯಗಳನ್ನು ಕನಿಷ್ಠ ಶೇ.60 ಅಂಕ ಗಳಿಗೆ ಕಡಿಮೆ ಇಲ್ಲದೆ ಉತ್ತೀರ್ಣರಾಗಿರಬೇಕು.
* 2024ರ JEE ಮೇನ್ಸ್ ಪರೀಕ್ಷೆಗೆ ಹಾಜರಾಗಿರಬೇಕು
* ಕನಿಷ್ಠ 16.5 ವರ್ಷ ವಯಸ್ಸಾಗಿರಬೇಕು
* ಗರಿಷ್ಠ 19.5 ವರ್ಷ ವಯೋಮಿತಿ ಮೀರಿರಬಾರದು. (02-01-2006ರ ಮುಂಚೆ ಹಾಗೂ 01-01-2009ರ ನಂತರ ಜನಿಸಿದ ಅಭ್ಯರ್ಥಿಗಳು ಅರ್ಜಿ ಸಲ್ಲಿಸಲು ಅರ್ಹರಲ್ಲ).
ತರಬೇತಿ ಕುರಿತ ಪ್ರಮುಖ ಮಾಹಿತಿಗಳು:-
* ಆಯ್ಕೆಯಾದ ಅಭ್ಯರ್ಥಿಗಳಿಗೆ ಎರಡು ಹಂತಗಳಲ್ಲಿ ತರಬೇತಿ ನೀಡಲಾಗುತ್ತದೆ.
* ಮೊದಲ ಮೂರು ವರ್ಷಗಳಲ್ಲಿ ಸೇನಾ ಹಾಗೂ ಇಂಜನಿಯರಿಂಗ್ ತರಬೇತಿಯು ಕಾಲೇಜ್ ಆಫ್ ಮಿಲಿಟರಿ ಟ್ರೇನಿಂಗ್ (CME), ಪುಣೆ ಅಥವಾ ಮಿಲಿಟರಿ ಕಾಲೇಜ್ ಆಫ್ ಟೆಲಿಕಮ್ಯೂನಿಕೇಷನ್ ಇಂಜನಿಯರಿಂಗ್ (MCTE) ಅಥವಾ ಮಿಲಿಟರಿ ಕಾಲೇಜ್ ಆಫ್ ಎಲೆಕ್ಟ್ರಾನಿಕ್ಸ್ ಆ್ಯಂಡ್ ಮೆಕಾನಿಕಲ್ ಇಂಜಿನಿಯರಿಂಗ್ (MCEME) ಅಥವಾ ಮಿಲಿಟರಿ ಹೆಡ್‌ಕ್ವಾರ್ಟರ್ ಆಫ್ ವಾರ್‌ಫೇರ್, ಸಿಕಂದರಾಬಾದ್‌ನಲ್ಲಿ ನಡೆಯುತ್ತದೆ.
* ಕೊನೆಯ ವರ್ಷದ ತರಬೇತಿಯು ಡೆಹ್ರಾಡೂನ್ IME ಅಥವಾ ಪ್ರಿ ಕಮಿಷನ್ ಟ್ರೇನಿಂಗ್ ಅಕಾಡೆಮಿಯಲ್ಲಿ ನಡೆಯಲಿದೆ.
ಅರ್ಜಿ ಸಲ್ಲಿಸುವ ವಿಧಾನ:-
* www.joinindianarmy.nic.in ವೆಬ್ಸೈಟ್ಗೆ ಭೇಟಿ ನೀಡಿ
* ಮೊದಲು ರಿಜಿಸ್ಟರ್ ಆಗಿ ನೋಂದಣಿ ಸಂಖ್ಯೆ ಪಡೆದು , ನಂತರ ಅರ್ಜಿ ಸಲ್ಲಿಸಿ ಅರ್ಜಿ ಸಲ್ಲಿಕೆ ಯಶಸ್ವಿ ಆದಮೇಲೆ ಎರಡು ಪ್ರತಿ ಪ್ರಿಂಟ್ ಪಡೆದುಕೊಳ್ಳಿ
ಆಯ್ಕೆ ವಿಧಾನ:-
* ಸರ್ವಿಸ್ ಸೆಲೆಕ್ಷನ್ ಬೋರ್ಡ್ ನಿಂದ ಮೆರಿಟ್ ಆಧಾರದ ಮೇಲೆ ಶಾರ್ಟ್ ಲಿಸ್ಟ್ ತಯಾರಿಸಲಾಗುತ್ತದೆ
* ನಂತರ ವೈದ್ಯಕೀಯ ಪರೀಕ್ಷೆ ನಡೆಸಿ ಅರ್ಹರಿಗೆ ಜಾಯ್ಂಗ್ ಲೇಟರ್ ನೀಡಲಾಗುತ್ತದೆ
ಪ್ರಮುಖ ದಿನಾಂಕಗಳು:-
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ:- 05 ನವೆಂಬರ, 2024.