Army School Recruitment:
ಆರ್ಮಿ ವೆಲ್‌ಫೇರ್ ಎಜುಕೇಶನ್ ಸೊಸೈಟಿಯ (Army Welfare Education Society- AWES) ವ್ಯಾಪ್ತಿಯಲ್ಲಿ ಕಾರ್ಯನಿರ್ವಹಿಸುವ ಆರ್ಮಿ ಸ್ಕೂಲ್ (Army School) ಟೀಚರ್ ಹುದ್ದೆಗಳಿಗೆ ಅರ್ಜಿ (Application) ಆಹ್ವಾನಿಸಲಾಗಿದೆ. ಭಾರತೀಯ ಸೇನಾ ಸಿಬ್ಬಂದಿಗಳ (Indian Army Staff) ಮಕ್ಕಳಿಗೆ ಶಿಕ್ಷಣ ನೀಡುವ ನಿಟ್ಟಿನಲ್ಲಿ ದೇಶಾದ್ಯಂತ ಸ್ಥಾಪಿಸಲಾಗಿರುವ ಸದರಿ ಆರ್ಮಿ ಸ್ಕೂಲ್‌ಗಳಲ್ಲಿ ಒಟ್ಟು 8,000ಕ್ಕೂ ಹೆಚ್ಚು ಬೋಧಕರ ಹುದ್ದೆ(Instructor post)ಗಳ ಭರ್ತಿ ನಡೆಯುತ್ತಿದೆ.
ಸಾಮಾನ್ಯವಾಗಿ ಪ್ರತಿ ವರ್ಷ ಸಾವಿರ ಹುದ್ದೆಗಳಿಗೆ ನೇಮಕ ನಡೆಯುತ್ತಿದ್ದು, 2024-25ರ ಶೈಕ್ಷಣಿಕ ವರ್ಷಕ್ಕೆ ಇದೀಗ ನೇಮಕ ಪ್ರಕ್ರಿಯೆ ಆರಂಭವಾಗಿದೆ. ಅರ್ಜಿ ಸಲ್ಲಿಸಲು ಅಕ್ಟೋಬರ್ 25 ಕೊನೆಯ ದಿನವಾಗಿದೆ. ಈ ನೇಮಕಕ್ಕೆ ನವೆಂಬರ್ 23ರಿಂದ 25ರ ತನಕ ಪರೀಕ್ಷೆ ನಡೆಯಲಿದ್ದು; ರಾಜ್ಯದಲ್ಲಿ ಬೆಂಗಳೂರಿನಲ್ಲಿ ಪರೀಕ್ಷಾ ಕೇಂದ್ರಗಳಿರಲಿದೆ.
ಹುದ್ದೆಗಳ ವಿವರ
– ಪೋಸ್ಟ್ ಗ್ರಾಜುಯೇಟ್ ಟೀಚರ್ (Post Graduate Teacher (PGT)
– ಟ್ರೈನ್‌ಡ್ ಗ್ರಾಜುಯೇಟ್ ಟೇಚರ್ (Trained Graduate Teacher (TGT)
– ಪೈಮರಿ ಟೀಚರ್ (Primary Teacher (PRT)
ವಿದ್ಯಾರ್ಹತೆಗಳೇನು?
ಪಿಜಿಟಿ ಹುದ್ದೆಗಳಿಗೆ ಕಂಪ್ಯೂಟರ್ ಸೈನ್ಸ್, ಫಿಸಿಕಲ್ ಎಜುಕೇಶನ್, ಇಂಗ್ಲಿಷ್, ಹಿಂದಿ, ಸಂಸ್ಕೃತ, ಹಿಸ್ಟರಿ, ಜಿಯಾಗ್ರಫಿ, ಎಕನಾಮಿಕ್ಸ್, ಪೊಲಿಟಿಕಲ್ ಸೈನ್ಸ್, ಮ್ಯಾಕ್ಸ್, ಫಿಸಿಕ್ಸ್, ಕೆಮಿಸ್ಟ್ರಿ, ಬಯಾಲಜಿ, ಬಯೋಟೆಕ್ನಾಲಜಿ, ಸೈಕಾಲಜಿ, ಕಾಮರ್ಸ್, ಹೋಂ ಸೈನ್ಸ್ ವಿಭಾಗಗಳಲ್ಲಿ ನೇಮಕಾತಿ ನಡೆಯಲಿದೆ. ಈ ಪಿಜಿಟಿ ಹುದ್ದೆಗಳಿಗೆ ಅರ್ಜಿ ಸಲ್ಲಿಸುವವರು ಬಿಎಡ್ ಜೊತೆಗೆ ಆಯಾ ವಿಭಾಗಗಳಿಗೆ ಸಂಬAಧಪಟ್ಟ ವಿಷಯಗಳಲ್ಲಿ ಸ್ನಾತಕೋತ್ತರ ಪದವಿ ಪೂರ್ಣಗೊಳಿಸಿರಬೇಕು.
ಹಾಗೆಯೇ ಟಿಜಿಟಿ ಹುದ್ದೆಗಳಿಗೆ ಸಂಸ್ಕೃತ ಹಿಂದಿ, ಇಂಗ್ಲಿಷ್, ಸೋಷಿಯಲ್ ಸ್ಟಡೀಸ್, ಗಣಿತ ವಿಜ್ಞಾನ ಮತ್ತು ಕಂಪ್ಯೂಟರ್ ಸೈನ್ಸ್ ವಿಭಾಗದಲ್ಲಿ ನೇಮಕಾತಿ ನಡೆಯಿದೆ. ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಪದವಿ ಜೊತೆಗೆ ಬಿಎಡ್ ಪೂರ್ಣಗೊಳಿಸಿರಬೇಕು.
ಇನ್ನು ಪಿಆರ್‌ಟಿ ಹುದ್ದೆಗಳಿಗೆ ಆಕಾಂಕ್ಷಿಗಳು ಪದವಿ ಜೊತೆಗೆ ಡಿ.ಇಐ.ಎಡ್, ಬಿಎಡ್ ಅರ್ಹತೆ ಹೊಂದಿರಬೇಕು. ನಿಗದಿತ ವಿದ್ಯಾರ್ಹತೆ (ಪದವಿ/ಸ್ನಾತಕೋತ್ತರ) ಮತ್ತು ಬಿಎಡ್‌ನಲ್ಲಿ ಅಭ್ಯರ್ಥಿಗಳು ಶೇಕಡಾ 50 ಅಂಕಗಳನ್ನು ಪಡೆದರೆ ಮಾತ್ರ ಅರ್ಜಿ ಸಲ್ಲಿಸುವ ಅರ್ಹರಾಗಿರುತ್ತಾರೆ.
ಇದರೊಂದಿಗೆ ಸಿಟಿಇಟಿ/ಟಿಇಟಿ ಅರ್ಹತೆ ಕಡ್ಡಾಯ. ಇಂಗ್ಲಿಷ್ ಮಾಧ್ಯಮದಲ್ಲಿ ಬೋಧನಾನುಭವ ಹಾಗೂ ಕಂಪ್ಯೂಟರ್ ಜ್ಞಾನ ಇರುವವರಿಗೆ ಮೊದಲ ಆದ್ಯತೆ ಇದೆ. ಟಿಜಿಟಿ (ಕಂಪ್ಯೂಟರ್ ಸೈನ್ಸ್) ಹುದ್ದೆಗೆ ಮಾತ್ರ ಬಿಎಡ್ ಅರ್ಹತೆಯಿಂದ ವಿನಾಯ್ತಿ ಇದೆ.
ವಯೋಮಿತಿ ವಿವರ
ಈಗಾಗಲೇ ಬೋಧಕರಾಗಿ ಕೆಲಸ ಮಾಡಿದ ಅನುಭವ ಇದ್ದ ಅಭ್ಯರ್ಥಿಗಳಾಗಿದ್ದಲ್ಲಿ ಗರಿಷ್ಠ 57 ವರ್ಷ (ಐದು ವರ್ಷ ಬೋಧನಾನುಭವ ಇರಬೇಕು) ಮೀರಿರಬಾರದು. ಹೊಸದಾಗಿ ಅರ್ಜಿ ಸಲ್ಲಿಸುವ (ಪ್ರೆಷರ್ಸ್) ಅಭ್ಯರ್ಥಿಗಳಾಗಿದ್ದಲ್ಲಿ ಗರಿಷ್ಠ 40 ವರ್ಷ ನಿಗದಿಪಡಿಸಲಾಗಿದೆ.
ನೇಮಕಾತಿ ಹೇಗೆ ನಡೆಯಲಿದೆ?
ಮೊದಲಿಗೆ ಆನ್‌ಲೈನ್‌ನಲ್ಲಿ ಸ್ಕ್ರೀನಿಂಗ್ ಟೆಸ್ಟ್ / ಆನ್‌ಲೈನ್ ಪರೀಕ್ಷೆ ನಡೆಸಲಾಗುತ್ತದೆ. ರಾಜ್ಯದಲ್ಲಿ ಇದರಲ್ಲಿ ಅರ್ಹತೆ ಪಡೆದ ಅಭ್ಯರ್ಥಿಗಳಿಗೆ ಸಂದರ್ಶನ ನಡೆಸಲಾಗುತ್ತದೆ. ಸಂದರ್ಶನದ ನಂತರ ಬೋಧನಾ ಪರೀಕ್ಷೆ ನಡೆಯಲಿದೆ. ಈ ಸಂದರ್ಭದಲ್ಲಿ ಅವಶ್ಯಕತೆ ಇದ್ದಲ್ಲಿ ಕಂಪ್ಯೂಟರ್‌ನಲ್ಲಿ ಕಾರ್ಯನಿರ್ವಹಿಸುವ ಜ್ಞಾನವನ್ನೂ ಪರೀಕ್ಷಿಸಲಾಗುತ್ತದೆ.
ಸಂದರ್ಶನ ಮತ್ತು ಬೋಧನಾ ಪರೀಕ್ಷೆಯನ್ನು ಶಾಲೆಗಳ ಆಡಳಿತ ಮಂಡಳಿಗಳು ನಡೆಸಲಿವೆ. ಸಿಬಿಎಸ್, /ಅರ್ಮಿಪಬ್ಲಿಕ್ ಸ್ಕೂಲ್ ಗಳ ನಿಯಮಾವಳಿಗಳ ಪ್ರಕಾರ ನೇಮಕ ಪ್ರಕ್ರಿಯೆಗಳು ನಡೆಯುತ್ತವೆ.
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ : 25-10-2024
ಸಹಾಯವಾಣಿ : 91-7969049941
ಹೆಚ್ಚಿನ ಮಾಹಿತಿಗೆ : https://awesindia.com/ ಚೆಕ್ ಮಾಡಿ.