ATM
ಅನೇಕ ಜನರು ಹಣವನ್ನು ತೆಗೆದುಕೊಳ್ಳಲು ಬ್ಯಾಂಕಿಗೆ ಹೋಗದೇ ಎಟಿಎಂ(ATM)ಗಳಲ್ಲಿ ಹಣ ಹಿಂಪಡೆಯುವುದು ಸಾಮಾನ್ಯವಾಗಿದೆ. ನೀವು ಎಟಿಎಂ ಕಾರ್ಡ್(ATM card)ನ ಪಿನ್ ಸಂಖ್ಯೆ(PIN number)ಯನ್ನು ಮರೆತರೆ, ನೀವು ಹಣವನ್ನು ಹಿಂಪಡೆಯಲು ಸಾಧ್ಯವಾಗುವುದಿಲ್ಲ. ಹಾಗಾದರೆ, ಈ ಬಗ್ಗೆ ಚಿಂತಿಸುವ ಅಗತ್ಯವೇನಿದೆ? ನೀವು ಈಗ ಎಟಿಎಂ ಯಂತ್ರ ಮತ್ತು ಆನ್ ಲೈನ್ ಮೂಲಕ ನಾವು ಸುರಕ್ಷಿತವಾಗಿ ಹೊಸ ಪಿನ್ ಸಂಖ್ಯೆ(New PIN number)ಯನ್ನು ರಚಿಸಬಹುದು.
ಹೌದು, ಇತ್ತೀಚಿನ ದಿನಗಳಲ್ಲಿ ಪ್ರತಿಯೊರ್ವರು ಎರಡು ಮತ್ತು ಅದಕ್ಕಿಂತ ಹೆಚ್ಚು ಬ್ಯಾಂಕ್ ಅಕೌಂಟ್(Bank account)ಗಳನ್ನು ಹೊಂದಿರುತ್ತಾರೆ. ಒಂದೊಂದು ಅಕೌಂಟ್‌ಗೂ ಒಂದೊಂದು ಎಟಿಎಂ ಕಾರ್ಡ್ ಇದ್ದೇ ಇರುತ್ತದೆ. ಇಂತಹ ಸಂದರ್ಭದಲ್ಲಿ ಎಲ್ಲಾ ಕಾರ್ಡ್‌ಗಳ ಪಿನ್ ಸಂಖ್ಯೆ ನೆನಪಿಟ್ಟುಕೊಳ್ಳುವುದು ಒಂದು ಸಾಹಸವೇ ಸರಿ. ಹಾಗೆಂದು, ಮೊಬೈಲ್‌ನಲ್ಲೋ, ಎಎಟಿಂ ಕಾರ್ಡ್ ಮೇಲೆ ನಿಮ್ಮ ಪಾಸ್‌ವರ್ಡ್ ಅನ್ನು ಬರೆಯುವ ಸಾಹಸ ಮಾಡಿದರೆ, ಬ್ಯಾಂಕ್ ಖಾತೆಯಲ್ಲಿರುವ ಹಣ ಮತ್ತೊಬ್ಬರ ಪಾಲಾಗಬಹುದು. ಹಾಗಾಗಿ, ಮರೆತರೂ ಸರಿ ಎಲ್ಲೂ ಬರೆಯುವಂತಹ ಕೆಲಸ ಮಾಡಬೇಡಿ.
ಒಟ್ಟಾಗಿ ಹೇಳಬೇಕು ಎಂದರೆ, ಪಾಸ್‌ವರ್ಡ್ ಎಂದರೆ ಒಬ್ಬರಿಗೆ ಮಾತ್ರ ತಿಳಿದು ಬೇರೆ ಯಾರಿಗೂ ತಿಳಿಯಬಾರದ ಸಂಖ್ಯೆ. ಹಾಗಾಗಿ, ನಮ್ಮ ಎಲ್ಲಾ ಪಾಸ್‌ವರ್ಡ್‌ಗಳನ್ನು ನೆನಪಿನಲ್ಲಿ ಇಟ್ಟುಕೊಳ್ಳಲೇಬೇಕು. ಆದರೆ, ಮರೆವು ಎಲ್ಲರಲ್ಲಿಯೂ ಸಾಮಾನ್ಯವಾಗಿರುವುದರಿಂದ ಪ್ರಮುಖವಾದ ಎಟಿಎಂ ಪಿನ್‌ಗಳನ್ನು ಸಹ ನಾವು ಮರೆತು ಬಿಡುತ್ತೇವೆ. ಹಾಗಾದರೆ, ನಿಮ್ಮ ಎಟಿಎಂ ಕಾರ್ಡ್ ಪಾಸ್‌ವರ್ಡ್ ಅನ್ನು ಸುಲಭವಾಗಿ ಎಟಿಎಂ ಯಂತ್ರದಲ್ಲಿಯೇ ಬದಲಾಯಿಸಿಕೊಳ್ಳುವುದು ಹೇಗೆ ಎಂಬುದನ್ನು ಇಂದಿನ ಲೇಖನದಲ್ಲಿ ನಾವೆಲ್ಲರೂ ತಿಳಿಯೋಣ ಬನ್ನಿ.
ನಿಮ್ಮ ಡೆಬಿಟ್ ಕಾರ್ಡ್ ಪಾಸ್‌ವರ್ಡ್ ಮರೆತರೆ ATMನಲ್ಲಿ ರೀಸೆಟ್ ಮಾಡಿಕೊಳ್ಳಲು, ಮೊದಲು ನೀವು ನಿಮ್ಮ ಹತ್ತಿರದ ಯಾವುದಾದರೂ ಎಟಿಎಂ ಮಷಿನ್ ಅಥವಾ ಬಳಸುತ್ತಿರುವ ಬ್ಯಾಂಕಿನ ಎಟಿಎಂಗೆ ಹೋಗಬೇಕು. ಯಂತ್ರದಲ್ಲಿ ಕಾರ್ಡ್ ಸೇರಿಸಿದ ನಂತರ, ಮರೆತುಹೋದ ಪಿನ್ ಆಯ್ಕೆಯನ್ನು ಆರಿಸಿ. ಬ್ಯಾಂಕ್ ಖಾತೆಗೆ ಲಿಂಕ್ ಮಾಡಲಾದ ಮೊಬೈಲ್ ಸಂಖ್ಯೆಯನ್ನು ಬೆರಳಚ್ಚಿಸುವಂತೆ ಕೇಳುವ ಸಂದೇಶವು ಸ್ಕ್ರೀನ್ ಮೇಲೆ ಕಾಣಿಸಿಕೊಳ್ಳುತ್ತದೆ.
ನಂತರ ಎಟಿಎಂ ಯಂತ್ರದಲ್ಲಿ ಮೊಬೈಲ್ ಸಂಖ್ಯೆಯನ್ನು ಟೈಪ್ ಮಾಡಿ. ಮೊಬೈಲ್ ಸಂಖ್ಯೆಯನ್ನು ನಮೂದಿಸಿದ ನಂತರ, ಸಂಖ್ಯೆಗೆ ಒಟಿಪಿ ಬರುತ್ತದೆ. ಎಟಿಎಂ ಯಂತ್ರದಲ್ಲಿ ಟೈಪ್ ಮಾಡಿದ ನಂತರ, ಹೊಸ ಎಟಿಎಂ ಪಿನ್ ರಚಿಸುವ ಆಯ್ಕೆಯನ್ನು ಇದು ನಿಮಗೆ ತೋರಿಸುತ್ತದೆ. ಎಟಿಎಂ ಪಿನ್ ಅನ್ನು ಆನ್ ಲೈನ್ ನಲ್ಲಿಯೂ ಬದಲಾಯಿಸಬಹುದು. ಎಟಿಎಂ ಪಿನ್ ಅನ್ನು ಬ್ಯಾಂಕಿನ ಅಧಿಕೃತ ನೆಟ್ ಬ್ಯಾಂಕಿಂಗ್ ವೆಬ್ಸೈಟ್ನಲ್ಲಿ ಖಾತೆದಾರರು ಬದಲಾಯಿಸಬಹುದು.
ಈ ವೇಳೆ ನಿಮ್ಮ ಬ್ಯಾಂಕ್ ಅಕೌಂಟ್ ನಂಬರ್ ಮತ್ತು ನಿಮ್ಮ ಅಕೌಂಟ್ ನಂಬರ್‌ಗೆ ರಿಜಿಸ್ಟರ್ ಆಗಿರುವ ನಂಬರ್ ಹೊಂದಿರುವ ಮೊಬೈಲ್ ನಿಮ್ಮ ಬಳಿ ಇರಲಿ. ಏಕೆಂದರೆ, ಎಟಿಎಂನಲ್ಲಿ ನೂತನ ಪಾಸ್‌ವರ್ಡ್ ಜನರೇಟ್ ಮಾಡಿಕೊಳ್ಳುವಾಗ ಈ ಎರಡೂ ದಾಖಲೆಗಳು ಅಗತ್ಯವಾಗಿವೆ ಮತ್ತು ನಿಮ್ಮ ಮೊಬೈಲ್‌ಗೆ ಬರುವ ಒಟಿಪಿ ಸಂಖ್ಯೆ ಅತ್ಯಂತ ಪ್ರಮುಖವಾಗಿದೆ.
ಕೇವಲ ಎಟಿಎಂ ಕೇಂದ್ರಕ್ಕೆ ಮಾತ್ರವಲ್ಲ. ಆನ್ಲೈನ್ ಬ್ಯಾಂಕಿಂಗ್ ಮೂಲಕವೂ ಲಾಗಿನ್ ಆದ ನಂತರ, ಎಟಿಎಂ ಕಾರ್ಡ್ ವಿಭಾಗಕ್ಕೆ ಹೋಗಿ ಮತ್ತು ಪಿನ್ ಬದಲಾವಣೆ ಆಯ್ಕೆಯನ್ನು ಕ್ಲಿಕ್ ಮಾಡಿ. ಅದರ ನಂತರ, ನೀವು ಸಿವಿವಿ, ಕಾರ್ಡ್ ಸಂಖ್ಯೆಯ ಕೊನೆಯ ಕೆಲವು ಅಂಕಿಗಳು ಮತ್ತು ಎಟಿಎಂ ಕಾರ್ಡ್ನಲ್ಲಿ ಸಿಂಧುತ್ವ ದಿನಾಂಕದಂತಹ ವಿವರಗಳನ್ನು ನಮೂದಿಸಬೇಕಾಗುತ್ತದೆ. ಅದರ ನಂತರ, ನೋಂದಾಯಿತ ಮೊಬೈಲ್ ಗೆ ಒಟಿಪಿ ಕಳುಹಿಸಲಾಗುತ್ತದೆ. ನೀವು ಅದನ್ನು ಪರದೆಯ ಮೇಲೆ ಬೆರಳಚ್ಚಿಸಬಹುದು ಮತ್ತು ಹೊಸ PIN ರಚಿಸಬಹುದು.