Bank
ಈಗಿನ ಕಾಲದಲ್ಲಿ ಮೊಬೈಲ್ ಫೋನ್ ಹಾಗೂ ಅದಕ್ಕೊಂದು ಸಂಖ್ಯೆ ಎಲ್ಲರಿಗೂ ಅನಿವಾರ್ಯ. ಪ್ರತಿಯೊಬ್ಬರೂ ಕೂಡ ತಮ್ಮದೇ ಆದ ಮೊಬೈಲ್ ಸಂಖ್ಯೆಯನ್ನು ಹೊಂದಿರುತ್ತಾರೆ. ಈ ಮೊಬೈಲ್ ಸಂಖ್ಯೆ ಆಧಾರ್ ಕಾರ್ಡ್ ಗೆ ಕೂಡ ಲಿಂಕ್ ಆಗಿರುತ್ತದೆ ಮತ್ತು ನಮ್ಮ ಬ್ಯಾಂಕ್ ಖಾತೆ ಹಾಗೂ ಇನ್ನಿತರ ಪ್ರಮುಖ ದಾಖಲೆಗಳಿಗೆ ಲಿಂಕ್ ಆಗಿರುತ್ತದೆ.
ಬ್ಯಾಂಕಿಗ್ ಕ್ಷೇತ್ರದ ವಿಚಾರವನ್ನು ಹೇಳುವುದಾದರೆ ಬ್ಯಾಂಕ್ ಖಾತೆಗಳಿಗೆ ಆಧಾರ್ ಲಿಂಕ್ ಮತ್ತು ಮೊಬೈಲ್ ಲಿಂಕ್ ಆಗಿದ್ದರೆ ಮಾತ್ರ ಆ ಮೊಬೈಲ್ ಸಂಖ್ಯೆ ಬಳಸಿ ನಾವು UPI ಆಧಾರಿತ ಆಪ್ ಗಳಾದ ಫೋನ್ ಪೇ ಗೂಗಲ್ ಪೇ, ಇತ್ಯಾದಿಗಳನ್ನು ಬಳಸಿ ಆನ್ಲೈನ್ ಪೇಮೆಂಟ್ ಮಾಡಲು ಸಾಧ್ಯವಾಗುವುದಿಲ್ಲ.
ಬ್ಯಾಂಕ್ ಖಾತೆಗಳಿಗೆ ನಮ್ಮ ಮೊಬೈಲ್ ಸಂಖ್ಯೆ ಲಿಂಕ್ ಆಗಿರುವುದರಿಂದ ಬ್ಯಾಂಕ್ ನಲ್ಲಿ ನಮ್ಮ ಖಾತೆಗೆ ಸಂಬಂಧಿಸಿದಂತೆ ಯಾವುದೇ ವಹಿವಾಟು ನಡೆದರು ಇದರ ಸಂಬಂಧಿತ ಮಾಹಿತಿಗಳು ನಮಗೆ SMS ಸಂದೇಶದ ಮೂಲಕ ತಲುಪುತ್ತವೆ. ಇದು ಒಂದು ರೀತಿಯಲ್ಲಿ ನಮ್ಮ ಖಾತೆಗೆ ರಕ್ಷಣೆ ಒದಗಿಸುವ ಅನುಕೂಲತೆಯಿಂದ ಎಂತಲೂ ಹೇಳಬಹುದು.
ಈ ಸುದ್ದಿ ಓದಿ:- Sim: ನಿಮ್ಮ ಹೆಸರಿನಲ್ಲಿ ಬೇರೆಯವರು ಸಿಮ್ ಕಾರ್ಡ್ ಬಳಸುತ್ತಿದ್ದಾರ ತಿಳಿಯಲು ಈ ರೀತಿ ಚೆಕ್ ಮಾಡಿ.!
ಯಾಕೆಂದರೆ ಯಾವುದಾದರೂ ಪ್ರಕರಣದಲ್ಲಿ ನಾವು ಖಾತೆಯಿಂದ ಹಣ ತೆಗೆಯದೇ ಇದ್ದರು ಹಣ ಕಡಿತವಾಗಿರುವ SMS ಬಂದರೆ ಆ ಕೂಡಲೇ ನಾವು ಬ್ಯಾಂಕ್ ಗೆ ಕರೆ ಮಾಡಿ ದೂರು ಸಲ್ಲಿಸಬಹುದು, ಈ ಸೌಲಭ್ಯವನ್ನು ಬ್ಯಾಂಕ್ ಗಳು ಕೂಡ ಒದಗಿಸುತ್ತವೆ. ಇದರಿಂದಾಗಿ ಮೊಬೈಲ್ ಸಂಖ್ಯೆ ಹೊಂದುವುದು ಮತ್ತು ಇದನ್ನು ಆಧಾರ್ ಕಾರ್ಡ್ ಹಾಗೂ ಪಾನ್ ಕಾರ್ಡ್ ಗೆ ಲಿಂಕ್ ಮಾಡುವುದು ಎಷ್ಟು ಮುಖ್ಯ ಎನ್ನುವುದು ಅರಿವಾಗುತ್ತದೆ. ಹೀಗಾಗಿ ಇದಕ್ಕೆ ಸಂಬಂಧಿಸಿದಂತೆ RBI ಒಂದು ಹೊಸ ರೂಲ್ಸ್ ತಂದಿದೆ.
ಪ್ರತಿಯೊಬ್ಬ ವ್ಯಕ್ತಿಯು ವಿದ್ಯಾರ್ಥಿಯಾಗಿದ್ದರು ಅಥವಾ ಹಿರಿಯ ನಾಗರಿಕರಾಗಿದ್ದರು ಅಥವಾ ಉದ್ಯೋಗಸ್ಥನಾಗಿದ್ದರೂ ಅಥವಾ ಆಕೆ ಗೃಹಿಣಿಯೇ ಆಗಿದ್ದರೂ ಒಂದು ಬ್ಯಾಂಕ್ ಖಾತೆ ಹೊಂದುವುದು ಬಹಳ ಅಗತ್ಯತೆ. ಇನ್ನು ಕೆಲವರು ಒಂದಕ್ಕಿಂತ ಹೆಚ್ಚು ಬ್ಯಾಂಕ್ ಖಾತೆಗಳನ್ನು ಹೊಂದಿರುತ್ತಾರೆ.
ಇಂತಹ ಸಂದರ್ಭದಲ್ಲಿ ತಮ್ಮ ಎಲ್ಲಾ ಬ್ಯಾಂಕ್ ಖಾತೆಗಳಿಗೂ ಕೂಡ ಒಂದೇ ಮೊಬೈಲ್ ಸಂಖ್ಯೆಯನ್ನು ಲಿಂಕ್ ಮಾಡಿಸಿರುತ್ತಾರೆ, ಕೆಲವೊಮ್ಮೆ ಪೋಷಕರು ಮೊಬೈಲ್ ಹೊಂದಿರದ ಕಾರಣ ಅಥವಾ ಮಕ್ಕಳ ಖಾತೆಗೆ ಪೋಷಕರ ಮೊಬೈಲ್ ಸಂಖ್ಯೆಯಲ್ಲಿ ನೀಡಿರಬಹುದು. ಈ ವಿಚಾರವಾಗಿ ಈಗ ಒಂದು ಹೊಸ ನಿಯಮವನ್ನು RBI ಜಾರಿಗೆ ತಂದಿದೆ. ಬ್ಯಾಂಕ್ ಗ್ರಾಹಕರ ಬ್ಯಾಂಕ್ ಖಾತೆಗಳ ರಕ್ಷಣೆ ಸದ್ದುದೇಶದಿಂದ ಈ ನಿಯಮವನ್ನು ಜಾರಿಗೆ ತಂದಿರುವುದಾಗಿ ಹೇಳಿಕೊಂಡಿದೆ.
ಈ ಸುದ್ದಿ ಓದಿ:- Mudra Yojana : ನಿಮ್ಮ ಬಳಿ ಈ ದಾಖಲೆಗಳು ಇದ್ದರೆ ಸರ್ಕಾರದಿಂದ ಸಿಗಲಿದೆ 20 ಲಕ್ಷ ಸಾಲ.!
ಅಷ್ಟಕ್ಕೂ RBI ವಿಧಿಸಿರುವ ಈ ಹೊಸ ನಿಯಮ ಏನೆಂದರೆ, ಒಂದಕ್ಕಿಂತ ಹೆಚ್ಚು ಬ್ಯಾಂಕ್ ಖಾತೆಗಳಿಗೆ ಒಂದೇ ಮೊಬೈಲ್ ಸಂಖ್ಯೆಯನ್ನು ಲಿಂಕ್ ಮಾಡಿದರೆ ಇದು ಭವಿಷ್ಯದಲ್ಲಿ ಸಮಸ್ಯೆ ತರಬಹುದು ಎಂದು RBI ಭಾವಿಸಿದೆ. ಅದರಲ್ಲೂ ವ್ಯಕ್ತಿ ಜಂಟಿ ಖಾತೆ ಹೊಂದಿದ್ದರೆ ಎನ್ನುವ ವಿಷಯ ಇಟ್ಟುಕೊಂಡು ಈ ನಿಯಮ ಜಾರಿಗೆ ತರಲಾಗಿದೆ.
ಅದರ ಪ್ರಕಾರವಾಗಿ ಬ್ಯಾಂಕ್ ಖಾತೆ ತೆರೆಯುವಾಗ ಕೆವೈಸಿ ಸಿಮ್ (KYC Sim ) ಪ್ರಕ್ರಿಯೆ ಪೂರ್ತಿಗೊಳಿಸಬೇಕು ಎಂದು RBI ತನ್ನ KYC ನಿಯಮ ಹಾಗೂ ಮಾನದಂಡಗಳನ್ನು ಬದಲಾಯಿಸಿದೆ. ಒಂದಕ್ಕಿಂತ ಹೆಚ್ಚು ಬ್ಯಾಂಕ್ ಖಾತೆಗಳನ್ನು ಹೊಂದಿರುವ ಅಥವಾ ಒಂದೇ ಸಂಖ್ಯೆಗೆ ಲಿಂಕ್ ಮಾಡಿಲಾಗಿರುವ ಗ್ರಾಹಕರು KYC ಮಾಡಲು ನವೀಕರಿಸಬಹುದು ಆದರೆ ಜಂಟಿ ಖಾತೆ ತೆರೆಯುವ ಸಂದರ್ಭದಲ್ಲಿ ಮೊಬೈಲ್ ಸಂಖ್ಯೆಯನ್ನು ನವೀಕರಿಸಿ ಎಂದು RBI ಸೂಚನೆ ನೀಡಿದೆ