Bank Loan Surety: ನೀವು ಜಾಮೀನು ನೀಡಿದ್ದ ವ್ಯಕ್ತಿ ಸಾಲ ತೀರಿಸದೇ ಹೋದ್ರೆ ಏನಾಗುತ್ತೆ ಗೊತ್ತ.? ಇಲ್ಲಿದೆ ಬ್ಯಾಂಕ್ ರೂಲ್ಸ್

Bank Loan Surety

ಹಣ(money). ಇಂದು ಈ ಹಣ ಇಲ್ಲದೇ ಯಾವುದೇ ಕೆಲಸಗಳು ಸುಲಭವಾಗಿ ನೆರವೇರುತ್ತದೆ ಎಂಬುದು ಊಹಿಸಲು ಅಸಾಧ್ಯ. ಇಂದು ಈ ಹಣಕ್ಕಾಗಿ ಪ್ರತಿಯೊಬ್ಬರೂ ಶ್ರಮಿಸುತ್ತಿದ್ದಾರೆ. ಬಡವರು ಶ್ರೀಮಂತರಾಗಲು, ಶ್ರೀಮಂತರು ಬೇರೆಯವರಿಗಿಂತ ತಾನು ಇನ್ನೂ ಕುಬೇರನಾಗಬೇಕೆಂದು ದಿನಿನಿತ್ಯ ಹೋರಾಡುತ್ತಿದ್ದಾರೆ. ನಮ್ಮ ಕೈಯ್ಯಲ್ಲಿ ಈ ಹಣ ಇಲ್ಲದೇ ಇರೋ ಕ್ಷಣವನ್ನ ನೀವೊಮ್ಮೆ ಊಹಿಸಿ ನೋಡಿ…

ಯಾವುದೇ ವ್ಯಕ್ತಿಯ ಬದುಕಿನಲ್ಲಿ ಹಣಕಾಸಿನ ಸಂಕಷ್ಟ ಯಾವಾಗ ಬರುತ್ತದೆ ಎಂದು ಹೇಳೋದಕ್ಕೆ ಸಾಧ್ಯವಿಲ್ಲ. ಮನೆಯಲ್ಲಿ ಏನೋ ಸಮಸ್ಯೆ ಬರಬಹುದು, ಆರೋಗ್ಯದ ಸಮಸ್ಯೆ ಎದುರಾಗಬಹುದು. ಹೀಗೆ ನಾವು ಊಹೆ ಕೂಡ ಮಾಡಿರದ ಹಾಗೆ ಹಣಕಸಿಗೆ ಸಂಬಂಧಿಸಿದ ಯಾವುದೇ ಒಂದು ಸಮಸ್ಯೆ ಬಂದು ಎದುರಾಗಬಹುದು.

WhatsApp Group Join Now
Telegram Group Join Now

ಅಂಥ ಸಮಯದಲ್ಲಿ ಸಾಲ ಪಡೆಯುವುದಕ್ಕೆ ಹೆಚ್ಚಿನ ಜನರು ಬ್ಯಾಂಕ್ ಮೊರೆ (Bank Loan) ಹೋಗುತ್ತಾರೆ. ಆದರೆ, ಎಲ್ಲರಿಗೂ ಬ್ಯಾಂಕ್‌ನಲ್ಲಿ ಸಾಲ ಸಿಗುವುದಿಲ್ಲ. ಹೌದು, ಬ್ಯಾಂಕ್ ನಲ್ಲಿ ಅನೇಕ ವಿಚಾರಗಳನ್ನು ಗಮನಿಸಿ Loan ಕೊಡಲಾಗುತ್ತದೆ ಅದೆಲ್ಲದರ ಜೊತೆಗೆ ಸಾಲ ನೀಡಲು ಒಬ್ಬರು ಗ್ಯಾರೆಂಟಿದಾರರು ಬೇಕಾಗುತ್ತಾರೆ.

ಈ ಸುದ್ದಿ ಓದಿ:- Car: ಕಾರಿನೊಳಗೆ ಈ ವಸ್ತುಗಳನ್ನು ಸಾಗಿಸಿದ್ರೆ ಜೈಲು ಫಿಕ್ಸ್.! ಹೊಸ ರೂಲ್ಸ್ ಜಾರಿ ಕಾರಿನಲ್ಲಿ ಪ್ರಯಾಣ ಮಾಡುವವರು ನೋಡಿ.!

ಹೌದು, ಶೂರಿಟಿ ಕೊಡುವ ವ್ಯಕ್ತಿ ಕೂಡ ಆರ್ಥಿಕವಾಗಿ ಸಬಲರಾಗಿದ್ದು, ಆತ ಗ್ಯಾರೆಂಟಿ ಕೊಟ್ಟರೆ ಆಗ ಲೋನ್ ಗೆ ಅಪ್ಲೈ ಮಾಡಿರುವ ವ್ಯಕ್ತಿಗೆ ಸುಲಭವಾಗಿ ಸಾಲ ಸಿಗುತ್ತದೆ. ಹೀಗೆ ಬ್ಯಾಂಕ್ ನಿಯಮಗಳು ಸಾಕಷ್ಟಿದೆ. ಒಂದು ವೇಳೆ ನೀವು ಶೂರಿಟಿ ಕೊಟ್ಟಿದ್ದು, ಸಾಲ ಪಡೆದ ವ್ಯಕ್ತಿ ಸಾಲ ತೀರಿಸದೇ (Loan Re Payment) ಹೋದರೆ ಏನಾಗುತ್ತದೆ? ಎಂಬುದರ ಬಗ್ಗೆ ಇಲ್ಲಿ ನೋಡೋಣ ಬನ್ನಿ…

ಒಂದು ವೇಳೆ ಆ ವ್ಯಕ್ತಿ ಸಾಲ ತೀರಿಸುವಲ್ಲಿ ವಿಫಲವಾದರೆ, ಅದರ ಪೂರ್ತಿ ಜವಾಬ್ದಾರಿ ಶೂರಿಟಿ ಕೊಟ್ಟ ವ್ಯಕ್ತಿಯ ಮೇಲೆ ಬೀಳುತ್ತದೆ. ಹೌದು, ಶೂರಿಟಿ (Loan surety) ಕೊಡುವವರು ಸಹಸಾಲಗಾರನಾಗಿ ಇರುತ್ತಾರೆ. ಹಾಗಾಗಿ, ಒಂದು ವೇಳೆ ಸಾಲ ಪಡೆದ ವ್ಯಕ್ತಿ ಅದನ್ನು ಹಿಂದಿರುಗಿಸಲು ಸಾಧ್ಯವಾಗದೆ ಹೋದರೆ, ಸಾಲದ ಹೊರೆ ಗ್ಯಾರೆಂಟಿದಾರರ ಮೇಲೆ ಬೀಳುತ್ತದೆ. ಹಾಗಾಗಿ ಯಾರಿಗೇ ಆದರೂ ಶುರಿಟಿ ಕೊಡುವುದಕ್ಕಿಂತ ಮೊದಲು, ಬ್ಯಾಂಕ್ ನ ಎಲ್ಲಾ ನಿಯಮಗಳ ಬಗ್ಗೆ ಕೂಡ ತಿಳಿದುಕೊಳ್ಳುವುದು ಒಳ್ಳೆಯದು.

ಸರಿಯಾದ ಮಾಹಿತಿ ಪಡೆದು ಶೂರಿಟಿ ಕೊಡಿ

ಸಮಯ ಸಂದರ್ಭ ಒಂದೇ ರೀತಿ ಇರುತ್ತದೆ ಎಂದು ಹೇಳೋಕೆ ಸಾಧ್ಯವಿಲ್ಲ. ಒಂದು ವೇಳೆ ನಿಮ್ಮ ಫ್ರೆಂಡ್ಸ್, ರಿಲೇಟಿವ್, ಯಾರಿಗೆ ಆದರೂ ಸಾಲಕ್ಕೆ ಶೂರಿಟಿ ಕೊಡುವ ಪರಿಸ್ಥಿತಿ ಬಂದು, ನೀವು ಶೂರಿಟಿ ಕೊಡುವುದಾದರೆ, ಅವರು ಪ್ರತಿ ತಿಂಗಳು ಸರಿಯಾಗಿ ಸಾಲ ಪಾವತಿ ಮಾಡುತ್ತಿದ್ದಾರಾ ಎನ್ನುವುದನ್ನು ಚೆಕ್ ಮಾಡಿ, ಒಂದು ವೇಳೆ ಇಎಂಐ ಕಟ್ಟುತ್ತಿಲ್ಲ ಎಂದರೆ, ಸಮಯಕ್ಕೆ ಸರಿಯಾಗಿ ಇಎಂಐ (Loan EMI) ಕಟ್ಟಬೇಕು ಎಂದು ಅವರಿಗೆ ಬುದ್ಧಿವಾದ ಹೇಳಿ. ಈ ಕೆಲಸವನ್ನು ಕೂಡ ನೀವು ಮಾಡುತ್ತಿರಬೇಕು.

ಸಾಲ ಪಡೆದ ವ್ಯಕ್ತಿ ಮಾರುಪಾವತಿಯನ್ನು ಸರಿಯಾಗಿ ಮಾಡಲಿಲ್ಲ ಎಂದರೆ, ಅದರಿಂದ ಆತ ಮಾತ್ರ ತೊಂದರೆ ಅನುಭವಿಸುವುದಿಲ್ಲ ಶುರಿಟಿ ಕೊಟ್ಟ ವ್ಯಕ್ತಿಯ ಸಿಬಿಲ್ ಸ್ಕೋರ್ ಕೂಡ ಕಡಿಮೆ ಆಗುತ್ತದೆ. ಹಾಗಾಗಿ ಶುರಿಟಿ ಕೊಡುವವರು ಹುಷಾರಾಗಿರಬೇಕು. ಸಿಬಿಲ್ ಸ್ಕೋರ್ ಕಡಿಮೆ ಆಗಿಬಿಟ್ಟರೆ, ಮುಂದೊಂದು ದಿನ ಅವರು ಬ್ಯಾಂಕ್ ಇಂದ ಸಾಲ (Bank Loan) ಪಡೆಯಬೇಕು ಎಂದರೆ, ಆಗ ಸಮಸ್ಯೆ ಆಗುತ್ತದೆ.

ಒಂದು ವೇಳೆ ಸಾಲ ಪಡೆದ ವ್ಯಕ್ತಿ ಮರುಪಾವತಿ ಮಾಡುತ್ತಿಲ್ಲ ಎಂದರೆ, ಆತನ ವಿರುದ್ಧ ಪೊಲೀಸರಲ್ಲಿ ಕಂಪ್ಲೇಂಟ್ ಕೊಡಬಹುದು. ಜಾಮೀನುದಾರ ಗುತ್ತಿಗೆ ಕಾಯ್ದೆಯಲ್ಲಿ ಶುರಿಟಿ ಕೊಡುವವರಿಗೆ ಹಕ್ಕು ಇರುತ್ತದೆ, ಅದರ ಸದುಪಯೋಗ ಪಡಿಸಿಕೊಳ್ಳಬಹುದು.

ಸರ್ಕಾರಿ ಯೋಜನೆ, ಸರ್ಕಾರಿ ಉದ್ಯೋಗಗಳು,ಮತ್ತು ಖಾಸಗಿ ಕಂಪನಿ ಉದ್ಯೋಗದ ಬಗ್ಗೆ ದೈನಂದಿನ ಮಾಹಿತಿಯನ್ನು ಪಡೆಯಲು ನಮ್ಮ Kannada Trend News WhatsApp ಗ್ರೂಪ್ ಮತ್ತು ಟೆಲಿಗ್ರಾಮ್ ಚಾನಲ್‌ಗೆ ಜಾಯಿನ್ ಆಗಿರಿ
WhatsApp Group Join Now
Telegram Group Join Now

Leave a Comment