Bank: ಬ್ಯಾಂಕ್ ಖಾತೆಯಲ್ಲಿ 1000 ರೂಪಾಯಿಗಿಂತ ಕಡಿಮೆ ಹಣ ಇದ್ದವರಿಗೆ ಬ್ಯಾಂಕ್ ನಿಂದ ಹೊಸ ರೂಲ್ಸ್.!

Bank

ಬ್ಯಾಂಕಿಂಗ್ ಕ್ಷೇತ್ರದಲ್ಲಿ ಕಳೆದ ಒಂದು ದಶಕದಲ್ಲಿ ಒಂದು ಮಹಾ ಬದಲಾವಣೆಯ ಪರ್ವವೇ ನಡೆದು ಹೋಗಿದೆ ಎನ್ನುವುದನ್ನು ಒಪ್ಪಲೇಬೇಕು ಯಾಕೆಂದರೆ ಇಂದು ವಿದ್ಯಾರ್ಥಿಗಳಿಂದ ಹಿಡಿದು ಹಿರಿಯ ನಾಗರಿಕರ ವರೆಗೆ ಗೃಹಿಣಿಯರಿಂದ ಹಿಡಿದು ಉದ್ಯೋಗಸ್ಥನಿಗೂ, ಉದ್ಯಮಿಗೂ ಹೀಗೆ ಪ್ರತಿಯೊಬ್ಬರಿಗೂ ಕೂಡ ಬ್ಯಾಂಕ್ ಖಾತೆ ಎನ್ನುವುದು ಅನಿವಾರ್ಯ.

WhatsApp Group Join Now
Telegram Group Join Now

ಸರ್ಕಾರ ನೀಡುವ ಸ್ಕಾಲರ್ಶಿಪ್, ಸಹಾಯಧನಗಳು, ಪಿಂಚಣಿ ಪಡೆಯುವುದಕ್ಕೆ ಅಥವಾ ಬ್ಯಾಂಕ್ ಯೋಜನೆಗಳಲ್ಲಿ ಹಣ ಹೂಡಿಕೆ ಮಾಡುವ ಕಾರಣದಿಂದ ಅಥವಾ ವ್ಯಾಪಾರ ವ್ಯವಹಾರಗಳಲ್ಲಿ ಹಣಕಾಸಿನ ವಿನಿಮಯ ಸರಾಗವಾಗಲಿ ಎನ್ನುವ ಉದ್ದೇಶದಿಂದ ಅಥವಾ ಬ್ಯಾಂಕ್ ಗಳಿಂದ ಸಾಲ ಪಡೆಯುವುದಕ್ಕೆ ಹೀಗೆ ಒಂದಲ್ಲ ಒಂದು ಕಾರಣದಿಂದ ಪ್ರತಿಯೊಬ್ಬರು ಬ್ಯಾಂಕ್ ಖಾತೆಗಳನ್ನು ತೆರೆಯುತ್ತಾರೆ.

ಆದರೆ ನಂತರವೂ ಆ ಖಾತೆಗಳನ್ನು ನಿರ್ವಹಿಸುವುದು ಕೂಡ ಅಷ್ಟೇ ಜವಾಬ್ದಾರಿ ಕೆಲಸವಾಗಿದೆ ಯಾಕೆಂದರೆ ಹೆಚ್ಚಿನ ಜನರು ತಮ್ಮ ಬ್ಯಾಂಕ್ ಗಳಲ್ಲಿ ಖಾತೆ ತೆರೆದು ಆ ಖಾತೆ ಮೂಲಕ ತಮ್ಮ ಕಾರ್ಯ ಮುಗಿದ ಮೇಲೆ ಅವುಗಳಿಗೆ ಹಣ ಹಾಕದೆ ಅವುಗಳನ್ನು ಸರಿಯಾಗಿ ನಿರ್ವಹಿಸದೇ ಹಾಗೆ ಬಿಡುತ್ತಾರೆ. ಇದರಿಂದ ಖಾತೆ ರದ್ದಾಗುವ ಅಥವಾ ಬ್ಯಾಂಕ್ ರೂಲ್ ಗಳ ಪ್ರಕಾರವಾಗಿ ನಿಗದಿತ‌ ಹಣ ಖಾತೆಯಲ್ಲಿ ಉಳಿಸದ ಕಾರಣ ದಂಡ ಕಡಿತ ವಾಗಿರುವ ಸಾಧ್ಯತೆ ಇರುತ್ತದೆ.

ನಂತರ ಜನರು ಈ ಬಗ್ಗೆ ಬ್ಯಾಂಕ್ ಗಳನ್ನೇ ದೂರುತ್ತಾರೆ. ಇದರ ಬದಲು ಬ್ಯಾಂಕ್ ನಿಯಮಗಳಂತೆ ಆ ಬ್ಯಾಂಕ್ ನಲ್ಲಿ ಮಿನಿಮಮ್ ಬ್ಯಾಲೆನ್ಸ್ ಎಷ್ಟಿದೆ ಎನ್ನುವುದನ್ನು ತಿಳಿದುಕೊಂಡು ಯಾವಾಗಲೂ ಅಷ್ಟು ಹಣವು ಖಾತೆಯಲ್ಲಿ ಇರುವಂತೆ ನೋಡಿಕೊಳ್ಳುವುದು ಉತ್ತಮ. ಇದರಿಂದ ಈ ಮೇಲೆ ತಿಳಿಸಿದಂತಹ ಅನಾನುಕೂಲತೆಗಳಾಗುವುದನ್ನು ತಪ್ಪಿಸಬಹುದು

ಮತ್ತೊಂದು ವಿಚಾರವೇನೆಂದರೆ, ಈಗ ಬ್ಯಾಂಕ್ ಖಾತೆಗಳಲ್ಲಿ ಹಣ ಹೂಡಿಕೆ ಮಾಡುವುದು ಅಥವಾ ಬ್ಯಾಂಕ್ ನಿಂದ ಸಾಲ ಪಡೆದುಕೊಳ್ಳುವುದಕ್ಕಾಗಿ ಖಾತೆ ತೆರೆಯುವುದು ಮಾತ್ರವಲ್ಲ ಇನ್ನು ಅನೇಕ ವಿಚಾರಗಳಿಗಾಗಿ ಒಂದು ಅಗತ್ಯ ದಾಖಲೆಯಾಗಿ ಬ್ಯಾಂಕ್ ಖಾತೆ ನಮ್ಮ ಜೊತೆ ಇರುತ್ತದೆ.

ನಾವು ಯಾವುದೋ ವೆಹಿಕಲ್ ಲೋನ್ ಅಥವಾ ಗೃಹ ಸಾಲ ಅಥವಾ ಇನ್ಯಾವುದೇ ಸಾಲ ಮಾಡಿದ್ದರೆ ಮತ್ತು ಪ್ರತಿ ತಿಂಗಳು EMI ಬ್ಯಾಂಕ್ ಖಾತೆಯಿಂದ ಕಡಿತಗೊಳ್ಳುವಂತೆ ಒಪ್ಪಂದ ಮಾಡಿಕೊಂಡಿದ್ದರೆ ನಮ್ಮ ಬ್ಯಾಂಕ್ ಖಾತೆಗಳಲ್ಲಿ ಆ ತಿಂಗಳಿನ EMI ಹಣ ಆಟೋ ಡಿಡೆಕ್ಟ್ ಆಗಲು ಬೇಕಾದಷ್ಟು ಹಣ ಉಳಿಸಿಕೊಂಡಿರಲೇಬೇಕು ಖಾತೆಯಲ್ಲಿ ಹಣ ಇಲ್ಲದಿದ್ದರೆ ಇಂಥ ಪ್ರಕರಣಗಳಾದ ಸಂದರ್ಭದಲ್ಲಿ ಸಿಬಿಲ್ ಸ್ಕೋರ್ ಕೂಡ ಕುಸಿಯುತ್ತದೆ ಮತ್ತು ಇದರೊಂದಿಗೆ ಇನ್ನಷ್ಟು ದಂಡ ಹೆಚ್ಚಾಗಬಹುದಾದ ಸಾಧ್ಯತೆಯೂ ಕೂಡ ಇರುತ್ತದೆ.

ಹಾಗಾಗಿ ಪ್ರಧಾನಮಂತ್ರಿ ಜನ ಧನ್ ಖಾತೆ ಅಂದರೆ ಜೀರೋ ಬ್ಯಾಲೆನ್ಸ್ ಅಕೌಂಟ್ ಹೊರತುಪಡಿಸಿ ಇನ್ಯಾವುದೇ ರೀತಿಯ ಬ್ಯಾಂಕ್ ಖಾತೆಗಳನ್ನು ನೀವು ಹೊಂದಿದ್ದರೆ ನಿಮ್ಮ ಬ್ಯಾಂಕ್ ನಿಯಮದ ಪ್ರಕಾರವಾಗಿ ಮಿನಿಮಮ್ ಬ್ಯಾಲೆನ್ಸ್ ಎಷ್ಟು ಎಂದು ತಿಳಿದುಕೊಂಡು ಮತ್ತು ನಿಮ್ಮ ಮಾಸಿಕ ಅಥವಾ ವಾರ್ಷಿಕ ವಹಿವಾಟು ಹೇಗಿದೆ ಎನ್ನುವುದರ ಅನುಸಾರವಾಗಿ.

ನೀವು ನಿಮ್ಮ ಖಾತೆಗಳಲ್ಲಿ ಮಿನಿಮಮ್ ಬ್ಯಾಲೆನ್ಸ್ ಮೇಂಟೇನ್ ಮಾಡಲೇಬೇಕು ಮತ್ತು ಬ್ಯಾಂಕ್ ಉಳಿತಾಯ ಖಾತೆಯಲ್ಲಿ ಅಗತ್ಯಕ್ಕಿಂತ ಹೆಚ್ಚು ಹಣವನ್ನು ಅನೇಕರು ಇಡುತ್ತಾರೆ ಇದರಿಂದ ಕಡಿಮೆ ಬಡ್ಡಿದರ ಸಿಗುತ್ತದೆ ಅದರ ಬದಲು ಬ್ಯಾಂಕ್ ಗಳಲ್ಲಿಯೇ ಇರುವ ಸುರಕ್ಷಿತ ಇನ್ನಿತರ ಯೋಜನೆಗಳಲ್ಲಿ ಹೂಡಿಕೆ ಮಾಡಿದರೆ ಉಳಿದ ಖಾತೆ ಮೇಲಿನ ಬಡ್ಡಿದರಕ್ಕಿಂತ ಹೆಚ್ಚಿನ ಬಡ್ಡಿ ದರವನ್ನು ಪಡೆದು ಲಾಭ ಹೊಂದುತ್ತೀರಿ. ಈ ಬಗ್ಗೆ ಯಾವುದೇ ಹೆಚ್ಚಿನ ಗೈಡೆನ್ಸ್ ಬೇಕಿದ್ದರೂ ಹತ್ತಿರದ ಬ್ಯಾಂಕ್ ಶಾಖೆ ನೀಡಿ ಮಾಹಿತಿ ಪಡೆಯಿರಿ.

ಸರ್ಕಾರಿ ಯೋಜನೆ, ಸರ್ಕಾರಿ ಉದ್ಯೋಗಗಳು,ಮತ್ತು ಖಾಸಗಿ ಕಂಪನಿ ಉದ್ಯೋಗದ ಬಗ್ಗೆ ದೈನಂದಿನ ಮಾಹಿತಿಯನ್ನು ಪಡೆಯಲು ನಮ್ಮ Kannada Trend News WhatsApp ಗ್ರೂಪ್ ಮತ್ತು ಟೆಲಿಗ್ರಾಮ್ ಚಾನಲ್‌ಗೆ ಜಾಯಿನ್ ಆಗಿರಿ
WhatsApp Group Join Now
Telegram Group Join Now

Leave a Comment