BCM Hostel
10ನೇ ತರಗತಿ ಮುಗಿಸಿದ ತಕ್ಷಣ ಹೆಚ್ಚಿನ ವಿದ್ಯಾಭ್ಯಾಸ ಮಾಡುವುದಕ್ಕಾಗಿ ವಿದ್ಯಾರ್ಥಿಗಳು ತಮ್ಮ ಗ್ರಾಮವನ್ನು ಬಿಡಬೇಕಾಗುತ್ತದೆ. ಉತ್ತಮ ದರ್ಜೆಯ ಸೌಕರ್ಯದ ಕಾಲೇಜಿಗೆ ಸೇರಬೇಕು, ತಮಗೆ ಬೇಕಾದ ಕೋರ್ಸ್ ಕಲಿಯಬೇಕು ಎಂದರೆ ದೂರದ ಪ್ರದೇಶದ ಕಾಲೇಜುಗಳಿಗೆ ಸೇರಬೇಕಾಗುತ್ತದೆ. ಈ ರೀತಿ PUC ಅಥವಾ ತತ್ಸಮಾನ ವಿದ್ಯಾಭ್ಯಾಸಕ್ಕಾಗಿ ಪಟ್ಟಣ ಅಥವಾ ನಗರ ಪ್ರದೇಶಗಳಲ್ಲಿ ವಿದ್ಯಾಭ್ಯಾಸಕ್ಕಾಗಿ ಸೇರುವ ವಿದ್ಯಾರ್ಥಿಗಳು ವಸತಿ ಮತ್ತು ಊಟಕ್ಕೂ ವ್ಯವಸ್ಥೆ ಮಾಡಿಕೊಳ್ಳಬೇಕಾದ ಪರಿಸ್ಥಿತಿ ಇರುತ್ತದೆ.
ಆದರೆ ಎಲ್ಲಾ ವಿದ್ಯಾರ್ಥಿಗಳ ಪೋಷಕರೂ ಹೀಗೆ ಆರ್ಥಿಕವಾಗಿ ಸದೃಢವಾಗಿರುವುದಿಲ್ಲ. ಕಾಲೇಜು ಶುಲ್ಕ ಪರಿಸವುದೇ ಕಷ್ಟವಾದ ಕುಟುಂಬಗಳು ಇರುತ್ತವೆ ಹೀಗಾಗಿ ಸರ್ಕಾರದ ಕಡೆಯಿಂದ ಕೂಡ ವಸತಿ ನಿಲಯಗಳನ್ನು ಪ್ರಾರಂಭಿಸಿ ಅನುಕೂಲತೆ ಮಾಡಿಕೊಡಲಾಗುತ್ತದೆ. ಅಂತೆಯೇ ರಾಜ್ಯದಲ್ಲಿ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯಿಂದ 2024-25ನೇ ಸಾಲಿನ ಮೆಟ್ರಿಕ್ ನಂತರದ ವಿದ್ಯಾಭ್ಯಾಸಕ್ಕಾಗಿ ವಸತಿ ನಿಲಯಗಳಲ್ಲಿ ಪ್ರವೇಶ ಪಡೆಯಲು ಬಯಸುವ ವಿದ್ಯಾರ್ಥಿಗಳಿಗೆ ಎಲ್ಲಾ ಜಿಲ್ಲೆಗಳ ಹಿಂದುಳಿದ ವರ್ಗಗಳ ವಿದ್ಯಾರ್ಥಿ ನಿಲಯಗಳಲ್ಲಿ ಅರ್ಜಿ ಆಹ್ವಾನ ಮಾಡಲಾಗಿದೆ. ಇದರ ಕುರಿತಾದ ಪೂರ್ತಿ ಮಾಹಿತಿ ಹೀಗಿದೆ ನೋಡಿ.
ಅರ್ಜಿ ಸಲ್ಲಿಸಲು ಅರ್ಹತೆಗಳು:-
* ಹಿಂದುಳಿದ ವರ್ಗಗಳಾದ ಪ್ರವರ್ಗ-1, 2A, 2B, 3A, 3B, SC/ST ಮತ್ತು ಇತರೆ ಜನನಾಂಗಗಳಿಗೆ ಸೇರಿದ ವಿದ್ಯಾರ್ಥಿಗಳು ಅರ್ಜಿ ಸಲ್ಲಿಸಬಹುದಾಗಿದೆ
* ರಾಜ್ಯದ ಎಲ್ಲಾ ಜಿಲ್ಲೆಗಳನ್ನು ಕೂಡ ಇರುವ BCM ಹಾಸ್ಟೆಲ್ ಗಳಲ್ಲಿ ಪ್ರವೇಶಕ್ಕಾಗಿ ಬಾಲಕ ಬಾಲಕಿಯರು ಅರ್ಜಿ ಸಲ್ಲಿಸಬಹುದು
* 2024-25ನೇ ಸಾಲಿನಲ್ಲಿ PUC ಅಥವಾ ತತ್ಸಮಾನ ವಿದ್ಯಾರ್ಹತೆಗಾಗಿ ದಾಖಲಾಗಿರುವ ಬಾಲಕ ಬಾಲಕಿಯರು ಅರ್ಜಿ ಸಲ್ಲಿಸಬಹುದು
* ಅರ್ಜಿ ಸಲ್ಲಿಸುವ ವಿದ್ಯಾರ್ಥಿಗಳ ಪೋಷಕರ ಕುಟುಂಬದ ಆದಾಯವು ಪ್ರವರ್ಗ -1, SC/ST ಗೆ 2.5 ಲಕ್ಷದ ಒಳಗೆ ಮತ್ತು ಇತರೆ ವರ್ಗಕ್ಕೆ ಆದಾಯ ಮಿತಿ ರೂ.1 ಲಕ್ಷದ ಒಳಗಿರಬೇಕು
ಅರ್ಜಿ ಸಲ್ಲಿಸಲು ನೀಡಬೇಕಾದ ದಾಖಲೆಗಳು:-
* ವಿದ್ಯಾರ್ಥಿಯ SSP ID
* ಜಾತಿ ಪ್ರಮಾಣ ಪತ್ರ
* ಆದಾಯ ಪ್ರಮಾಣ ಪತ್ರ
* SSLC ಅಂಕಪಟ್ಟಿ
* PUC ಗೆ ದಾಖಲಾಗಿರುವ ಬಗ್ಗೆ ದಾಖಲೆಗಳು
* ಕಾಲೇಜು ಶುಲ್ಕ ಪಾವತಿಸಿರುವ ರಸೀದಿ ಮತ್ತು ಗುರುತಿನ ಚೀಟಿ
* ವಿದ್ಯಾರ್ಥಿಯ ನಿವಾಸ ಪ್ರಮಾಣ ಪತ್ರ
* ಯೂನಿವರ್ಸಿಟಿ ರಿಜಿಸ್ಟ್ರೇಷನ್ ನಂಬರ್
* ಚಾಲ್ತಿಯಲ್ಲಿರುವ ಮೊಬೈಲ್ ಸಂಖ್ಯೆ ಮತ್ತು ಇ-ಮೇಲ್ ಐಡಿ
* ಇನ್ನಿತರೆ ಪ್ರಮುಖ ದಾಖಲೆಗಳು
ಅರ್ಜಿ ಸಲ್ಲಿಸುವ ವಿಧಾನ:-
* ವಿದ್ಯಾರ್ಥಿಗಳು ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಬೇಕು
* ಹತ್ತಿರದಲ್ಲಿರುವ ಯಾವುದೇ ಸೇವಾ ಸಿಂಧು ಕೇಂದ್ರ ಅಥವಾ ಕರ್ನಾಟಕ ಒನ್ ಅಥವಾ ಬೆಂಗಳೂರು ಒನ್ ಕೇಂದ್ರಗಳಲ್ಲಿ ಅರ್ಜಿ ಸಲ್ಲಿಸಬಹುದು
* ಅರ್ಜಿ ಸಲ್ಲಿಸಲು ವೆಬ್ಸೈಟ್ ವಿಳಾಸ – BCWD hostel portal shp.karnataka.gov.in
ಪ್ರಮುಖ ದಿನಾಂಕಗಳು:-
* ಅರ್ಜಿ ಸಲ್ಲಿಸಲು ಪ್ರಾರಂಭ ದಿನಾಂಕ – ಈಗಾಗಲೇ ಆರಂಭವಾಗಿದೆ
* ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ – 20 ಜುಲೈ, 2024.
ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ:-
* ಸಹಾಯವಾಣಿ ವೆಬ್ಸೈಟ್ – bcddhelpline@gmail.com
* ಸಹಾಯವಾಣಿ ದೂರವಾಣಿ ಸಂಖ್ಯೆ – 8050770004 / 8050770005
* ಅರ್ಜಿ ಸಲ್ಲಿಸುವ ಸಮಯದಲ್ಲಿ ಅಥವಾ ನಂತರದಲ್ಲಿ ಯಾವುದೇ ರೀತಿಯ ಅಡಚಣೆಗಳಾದಲ್ಲಿ ಮೇಲೆ ತಿಳಿಸಿದ ಎಲ್ಲ ದಾಖಲೆಗಳೊಂದಿಗೆ ಜಿಲ್ಲಾ ಅಥವಾ ತಾಲೂಕು ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಕಚೇರಿಗೆ ಭೇಟಿ ನೀಡಿ ನೆರವು ಪಡೆಯಬಹುದು.