Bhagyalakshmi
ಹೆಣ್ಣು ಮಕ್ಕಳ ಭಾಗ್ಯಲಕ್ಷ್ಮಿ (Bhaagya Lakshmi Scheme) ಯೋಜನೆಯು ಇದೀಗ ಬಡವರ ಕೈ ಹಿಡಿದಿದೆ. ಹೌದು, ಇದೀಗ ಭಾಗ್ಯಲಕ್ಷ್ಮಿ ಬಾಂಡ್ ( bhagyalakshmi bond scheme) ಸ್ಥಗಿತಗೊಳಿಸಿಲ್ಲ. ಇದನ್ನು ನಿಲ್ಲಿಸುವ ಪ್ರಶ್ನೆಯೇ ಉದ್ಭವಿಸುವುದಿಲ್ಲ. ಇದು ನಿರಂತರವಾಗಿ ನಡೆಯಲಿದೆ. ಮಗುವಿಗೆ 21 ವರ್ಷ ಮುಗಿದ ಬಳಿಕ ಬಾಂಡ್ ಮೊತ್ತ(Bond amount) ಫಲಾನುಭವಿ(Beneficiary)ಗಳಿಗೆ ಸೇರುತ್ತದೆ ಎಂದು ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್(Lakshmi Hebbalkar) ಸ್ಪಷ್ಟಪಡಿಸಿದ್ದಾರೆ.
ಭಾಗ್ಯಲಕ್ಷ್ಮೀ ಬಾಂಡ್ ಸ್ಥಗಿತಗೊಂಡಿಲ್ಲ
ಭದ್ರಾವತಿಯಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಭಾನುವಾರ ಮಾತನಾಡಿದ ಸಚಿವರು, ಭಾಗ್ಯಲಕ್ಷ್ಮಿ ಬಾಂಡ್ ಸ್ಥಗಿತಗೊಳಿಸಿಲ್ಲ. ಇದನ್ನು ನಿಲ್ಲಿಸುವ ಪ್ರಶ್ನೆಯೇ ಉದ್ಭವಿಸುವುದಿಲ್ಲ. ಇದು ನಿರಂತರವಾಗಿ ನಡೆಯಲಿದೆ. ಮಗುವಿಗೆ 21 ವರ್ಷ ಮುಗಿದ ಬಳಿಕ ಬಾಂಡ್ ಮೊತ್ತ ಫಲಾನುಭವಿಗಳಿಗೆ ಸೇರುತ್ತದೆ ಎಂದು ಸಚಿವರು ಹೇಳಿದರು.
ಬಡವರ ಕೈ ಹಿಡಿದ ಭಾಗ್ಯಲಕ್ಷ್ಮಿ ಯೋಜನೆ
ಈ ಯೋಜನೆಗೆ ಬಡತನ ರೇಖೆಗಿಂತ (Poverty Line) ಕೆಳಗೆ ಇರುವ ಕುಟುಂಬಗಳಲ್ಲಿ 31.3.2006 ರ ನಂತರ ಜನಿಸಿದ ಹೆಣ್ಣು ಮಕ್ಕಳು ಫಲಾನುಭವಿಗಳಾಗಿ ನೋಂದಾಯಿಸಿಕೊಳ್ಳಲು ಆರ್ಹರಿರುತ್ತಾರೆ. ಮಗು ಜನಿಸಿದ ಒಂದು ವರ್ಷದೊಳಗೆ ಜನನ ಪ್ರಮಾಣ ಪತ್ರವನ್ನು ಒದಗಿಸಿ ನೋಂದಾಯಿಸಲು ಅವಕಾಶವಿದೆ.
ಮುಖ್ಯವಾಗಿ ಈ ಯೋಜನೆಯ ಸೌಲಭ್ಯಗಳನ್ನು ಬಡತನ ರೇಖೆಗಿಂತ ಕೆಳಗೆ ಇರುವ ಕುಟುಂಬದ ಇಬ್ಬರು ಹೆಣ್ಣುಮಕ್ಕಳಿಗೆ ಸೀಮಿತಗೊಳಿಸಲಾಗಿದೆ. ಫಲಾನುಭವಿ ಹೆಣ್ಣುಮಗುವಿನ ತಂದೆ ಅಥವಾ ತಾಯಿ ಶಾಶ್ವತ ಕುಟುಂಬ ಯೋಜನೆಯನ್ನು ಅಳವಡಿಸಿಕೊಂಡಿರಬೇಕಾಗಿರುತ್ತದೆ ಮತ್ತು ಇನ್ನೊಂದು ಮುಖ್ಯ ವಿಚಾರ ಏನೆಂದರೆ ಕುಟುಂಬದಲ್ಲಿ ಮಕ್ಕಳ ಸಂಖ್ಯೆ 3ಕ್ಕಿಂತ ಹೆಚ್ಚಿಗೆ ಇರಬಾರದು ಎಂದು ತಿಳಿದು ಬಂದಿದೆ.
ಈ ಯೋಜನೆಯಲ್ಲಿ ಇರುವ ಠೇವಣಿ ಹಾಗೂ ಬಡ್ಡಿಯ ವಿವರ ಹೀಗಿದೆ
ನೋಂದಣಿ ನಂತರ ಹಾಗೂ ಪೂರ್ಣ ಪರಿಶೀಲನೆ ನಂತರ ಪ್ರತಿ ಫಲಾನುಭವಿಗೆ ರೂ.10,000/-ಗಳನ್ನು ಆಯ್ಕೆಯಾದ ಪಾಲುದಾರ ಹಣಕಾಸು ಸಂಸ್ಥೆಯಲ್ಲಿ ನಿಶ್ಚಿತ ಠೇವಣಿಯನ್ನು ಇಡಲಾಗುತ್ತದೆ. ಹಾಗೂ ಪಾಲುದಾರ ಹಣಕಾಸು ಸಂಸ್ಥೆಯು ಹೆಣ್ಣುಮಗುವಿನ ಹೆಸರಿನಲ್ಲಿ ಇಟ್ಟ ರೂ.10,000/-ಗಳ ಠೇವಣಿಯ ಮೇಲಿನ ಆದಾಯವನ್ನು ಗರಿಷ್ಠಗೊಳಿಸಿ, ಠೇವಣಿ(deposit) ಹಣವನ್ನು ಬಡ್ಡಿ ಸಮೇತವಾಗಿ ಫಲಾನುಭವಿಗಳಿಗೆ 18 ವರ್ಷಗಳು ಪೂರ್ಣಗೊಂಡ ನಂತರ ದೊರಕಿಸಿ ಕೊಡಲಾಗುತ್ತದೆ.
ಹಾಗೂ ಮೊದಲ ಮಗುವಿಗೆ ಮತ್ತು ರೂ.40,918/- ನ್ನು ಎರಡನೇ ಮಗುವಿಗೆ ನೀಡಲಾಗುತ್ತದೆ. 2008 ರ ಆಗಸ್ಟ್ ನಂತರ ಜನಿಸಿದ ಮಗುವಿಗೆ ಠೇವಣಿ ಮೊತ್ತವನ್ನು 19,300 ಹೆಚ್ಚಳ ಮಾಡಲಾಗಿದ್ದು, ಈ ಮೂಲಕ ಮೊದಲ ಹೆಣ್ಣು ಮಗುವಿಗೆ 1,00,052 ರೂ. ಎರಡನೇ ಮಗುವಿಗೆ 18,350 ರೂ. ಹೆಚ್ಚಳ ಮಾಡಲಾಗಿದ್ದು, ಒಟ್ಟು 1,00,097 ರೂಪಾಯಿ ಸಿಗಲಿದೆ ಎಂದು ತಿಳಿದು ಬಂದಿದೆ.
ಆರೋಗ್ಯ ವಿಮೆ ಸೌಲಭ್ಯವು ಕೂಡ ದೊರೆಯುತ್ತದೆ!
ಇನ್ನೊಂದು ಮುಖ್ಯ ವಿಚಾರ ಏನೆಂದರೆ ಹೆಣ್ಣು ಮಗು ಖಾಯಿಲೆ ಬಿದ್ದಲ್ಲಿ, ಆರೋಗ್ಯ ವಿಮೆ ಸೌಲಭ್ಯವನ್ನು ಗರಿಷ್ಠ 25,000 ರವರೆಗೆ ನೀಡಲಾಗುವುದು. ವಿಮಾದಾರರು ಸ್ವಾಭಾವಿಕ ಸಾವು ಹೊಂದಿದಲ್ಲಿ 42500/- ವಿಮೆ ಹಣ ಒದಗಿಸಲಾಗುವುದು ಎಂದು ತಿಳಿಸಿದ್ದಾರೆ. ಮತ್ತು ವಿಮಾದಾರರು ಅಪಘಾತದಿಂದ ಸತ್ತರೆ ರೂ.1,00,000/- ವಿಮೆ ಹಣವನ್ನು ಕುಟುಂಬಕ್ಕೆ ನೀಡಲಾಗುತ್ತದೆ.
ಈ ಯೋಜನೆಗೆ ಬೇಕಾದ ಮುಖ್ಯ ಆರ್ಹತೆ ಅಂಶಗಳು
– ಮಗುವಿನ ಜನನವನ್ನು ಕಡ್ಡಾಯವಾಗಿ ನೋಂದಣಿ ಮಾಡಬೇಕು.
– ಮಗುವಿಗೆ ಆರೋಗ್ಯ ಇಲಾಖೆಯ ಕಾರ್ಯಕ್ರಮದಂತೆ ರೋಗನಿರೋಧಕ ಹಾಕಿಸಿರಬೇಕು.
– ಅಂಗನವಾಡಿ ಕೇಂದ್ರಕ್ಕೆ ನೋಂದಣಿಯಾಗಿರಬೇಕು.
– ಶಿಕ್ಷಣ ಇಲಾಖೆಯ ನೋಂದಾಯಿತ ಶಾಲೆಗಳಲ್ಲಿ ಮಗುವನ್ನು ಶಾಲೆಗೆ ದಾಖಲಿಸಿರಬೇಕು.
– ಮಗು ಬಾಲಕಾರ್ಮಿಕರಾಗಿರಬಾರದು.
– 18 ವರ್ಷ ಪೂರ್ಣಗೊಳ್ಳುವವರೆಗೆ ವಿವಾಹ ಆಗಿರಬಾರದು.